AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Microplastics : ಈ ಆಹಾರಗಳ ಮೂಲಕ ನಮ್ಮ ದೇಹ ಸೇರಿಕೊಳ್ಳುತ್ತಿದೆ ಮೈಕ್ರೋಪ್ಲಾಸ್ಟಿಕ್‌, ಅಪಾಯದಿಂದ ಪಾರಾಗುವುದು ಹೇಗೆ?

ಇತ್ತೀಚೆಗಿನ ದಿನಗಳಲ್ಲಿ ಉತ್ತಮ ಆರೋಗ್ಯವನ್ನು ಹೊಂದುವುದೇ ಕಷ್ಟಕರ. ಎಷ್ಟೇ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುತ್ತೇವೆಯಂತಾದರೂ ಎಲ್ಲಾ ವಸ್ತುಗಳು ಕಲಬೆರಕೆಯಿಂದಲೇ ಕೂಡಿದೆ. ಅಕ್ಕಿಯಲ್ಲಿ ಕಲ್ಲು, ಮಣ್ಣು, ಪ್ಲಾಸ್ಟಿಕ್ ಅಕ್ಕಿ ಹೀಗೆ ಒಂದಲ್ಲಾ ಒಂದು ಅಂಶ ಬೆರೆತಿರುತ್ತದೆ. ಈ ಕೆಲವು ಆಹಾರಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳು ದೇಹವನ್ನು ಸೇರುತ್ತಿದೆ ಎನ್ನುವುದು ಅಧ್ಯಯನದಿಂದ ಬಹಿರಂಗವಾಗಿದೆ. ಈ ಮೈಕ್ರೋಪ್ಲಾಸ್ಟಿಕ್ ಕಣಗಳು ಸೇವಿಸುವ ಆಹಾರವನ್ನು ಕಲುಷಿತಗೊಳಿಸುತ್ತಿದ್ದು, ಇದರಿಂದ ನಾನಾ ರೀತಿಯ ಸಮಸ್ಯೆಗಳು ಬರುತ್ತಿದೆ. ಹಾಗಾದ್ರೆ ಈ ಅಪಾಯದಿಂದ ಪಾರಾಗಲು ಏನು ಮಾಡಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Microplastics : ಈ ಆಹಾರಗಳ ಮೂಲಕ ನಮ್ಮ ದೇಹ ಸೇರಿಕೊಳ್ಳುತ್ತಿದೆ ಮೈಕ್ರೋಪ್ಲಾಸ್ಟಿಕ್‌, ಅಪಾಯದಿಂದ ಪಾರಾಗುವುದು ಹೇಗೆ?
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 19, 2024 | 4:25 PM

Share

ಪ್ಲಾಸ್ಟಿಕ್ ಇಲ್ಲದ ಆಧುನಿಕ ಜಗತ್ತನ್ನು ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೆ ನಾವು ಸೇವಿಸುವ ಆಹಾರದಲ್ಲಿಯು ಮೈಕ್ರೋ ಪ್ಲಾಸ್ಟಿಕ್ ಕಣಗಳು ಇವೆ ಎಂದರೆ ನಂಬುತ್ತೀರಾ. ಈ ಪ್ಲಾಸ್ಟಿಕ್ ಕಣಗಳು ದೇಹವನ್ನು ಸೇರಲು ನೂರೆಂಟು ಮಾರ್ಗಗಳಿದ್ದು, ಬರಿಗಣ್ಣಿಗೆ ಕಾಣಿಸದ ಈ ಪ್ಲಾಸ್ಟಿಕ್ ಕಣಗಳು ಈ ಆಹಾರಗಳ ಮೂಲಕ ದೇಹವನ್ನು ಸೇರುತ್ತವೆ. ಹೀಗಾಗಿ ಈ ಏಳು ಆಹಾರಗಳನ್ನು ಸೇವಿಸುವ ಮುನ್ನ ಎಚ್ಚರ ವಹಿಸುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.

  • ಸಮುದ್ರಾಹಾರಗಳು : ಸಿಗಡಿ ಮತ್ತು ಟೇಸ್ಟಿ ಮೀನುಗಳನ್ನು ಹೆಚ್ಚಾಗಿ ಸಮುದ್ರದಲ್ಲಿ ಬೆಳೆಯಲಾಗುತ್ತದೆ. ಆದರೆ, ಸೂಕ್ಷ್ಮ ಪ್ಲಾಸ್ಟಿಕ್‌ಗಳು ಕೊಳಚೆ ನೀರಿನ ಮೂಲಕ ಸಾಗರ ಸೇರುವುದರ ಪರಿಣಾಮವಾಗಿ ಮೀನು ಮತ್ತು ಸಿಗಡಿಗಳ ಅವುಗಳನ್ನು ತಿನ್ನುವ ಮೂಲಕ ಅವು ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಹೀಗಾಗಿ ಶುದ್ಧವಾದ ನೀರು ಅಥವಾ ಸುಸ್ಥಿರ ಜಲಕೃಷಿಯಿಂದ ಪಡೆದ ಸಮುದ್ರಹಾರವನ್ನು ಸೇವಿಸುವುದು. ಚಿಪ್ಪು ಮೀನುಗಳನ್ನು ಸಂಪೂರ್ಣವಾಗಿ ಸ್ವಚ್ಛ ಗೊಳಿಸುವ ಮೂಲಕ ಮೈಕ್ರೋ ಪ್ಲಾಸ್ಟಿಕ್ ಗಳು ದೇಹಕ್ಕೆ ಸೇರದಂತೆ ತಡೆಗಟ್ಟಬಹುದು.
  • ಪ್ಲಾಸ್ಟಿಕ್ ನೀರಿನ ಬಾಟಲ್ ಗಳು : ಕುಡಿಯುವುದಕ್ಕೆ ಬಳಸುವ ಪ್ಲಾಸ್ಟಿಕ್ ನೀರಿನ ಬಾಟಲಿಯು ವಿವಿಧ ರೀತಿಯ ಪ್ಲಾಸ್ಟಿಕ್ ಕಣಗಳನ್ನು ಹೊಂದಿದೆ. ಶೇಕಡಾ 99 ರಷ್ಟು ಈ ನೀರಿನ ಬಾಟಲ್ ಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಣಗಳಿದ್ದು, ಇದು ಮಾನವ ಜೀವಕೋಶಗಳನ್ನು ಸುಲಭವಾಗಿ ಪ್ರವೇಶಿಸುತ್ತದೆ ಎಂದು ಸಂಶೋಧನೆದಿಂದ ಬಹಿರಂಗವಾಗಿದೆ. ಬಾಟಲಿನ ನೀರಿನ ಬದಲಿಗೆ ಟ್ಯಾಪ್ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಸುರಕ್ಷಿತ. ಗಾಜಿನಿಂದ ಮಾಡಿದ ಮರುಬಳಕೆ ಮಾಡಬಹುದಾದ ಬಾಟಲಿಯನ್ನು ಬಳಸುವುದು ಸೂಕ್ತವಾಗಿದೆ.
  • ಉಪ್ಪು : ಉಪ್ಪಿಲ್ಲದ ಆಹಾರವನ್ನು ತಿನ್ನುವುದಕ್ಕೂ ಸಾಧ್ಯವಿಲ್ಲ. ಆದರೆ ಈ ಉಪ್ಪನ್ನು ಹೆಚ್ಚಾಗಿ ಸಮುದ್ರದ ನೀರಿನಿಂದ ತಯಾರಿಸಲಾಗುತ್ತದೆ. ಸಾಗರದಲ್ಲಿ ಮೈಕ್ರೊಪ್ಲಾಸ್ಟಿಕ್‌ ಗಳಿಂದ ಕಲುಷಿತಗೊಳ್ಳುತ್ತಿದ್ದಂತೆ ಅವು ಉಪ್ಪಿನಲ್ಲಿಯು ಈ ಪ್ಲಾಸ್ಟಿಕ್ ಕಣಗಳು ಕಂಡುಬರುತ್ತವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಹಿಮಾಲಯದಲ್ಲಿನ ಕಲ್ಲು ಉಪ್ಪು ಕಲುಷಿತಗೊಳ್ಳುವ ಸಾಧ್ಯತೆಯೇ ಕಡಿಮೆ. ಈ ಉಪ್ಪಿನ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ.
  • ಚಹಾ ಚೀಲಗಳು : ಇಂದಿನ ಆಧುನಿಕ ಕಾಲದಲ್ಲಿ ಟೀ ಬ್ಯಾಗ್ ಗಳ ಬಳಕೆಯು ಹೆಚ್ಚಾಗುತ್ತಿದೆ. ಚಹಾ ಚೀಲಗಳನ್ನು ನೀರಿನಲ್ಲಿ ಮುಳುಗಿಸಿದಾಗ, ಹೆಚ್ಚಿನ ತಾಪಮಾನದಲ್ಲಿ ಹಾನಿಕಾರಕ ವಸ್ತುಗಳನ್ನು ಬಿಡುಗಡೆ ಮಾಡುತ್ತವೆ. ಈ ಟೀ ಬ್ಯಾಗ್‌ಗಳು ಮೈಕ್ರೋಪ್ಲಾಸ್ಟಿಕ್ ಅನ್ನು ಮಾನವ ದೇಹಕ್ಕೆ ಸೇರುತ್ತಿದೆ. ಪ್ಲಾಸ್ಟಿಕ್ ಟೀ ಬ್ಯಾಗ್ ಬದಲಿಗೆ ನೈಸರ್ಗಿಕ ಫೈಬರ್ ಟೀ ಬ್ಯಾಗ್ ಗಳನ್ನು ಬಳಸುವುದರಿಂದ ಮೈಕ್ರೋಪ್ಲಾಸ್ಟಿಕ್ ಕಣಗಳು ದೇಹ ಸೇರುವುದನ್ನು ತಪ್ಪಿಸಬಹುದು.
  • ಅಕ್ಕಿ : ದಿನನಿತ್ಯ ಬಳಸುವ ಅಕ್ಕಿಯಲ್ಲಿ ಹೆಚ್ಚು ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಹೊಂದಿದೆ. ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಪ್ರತಿ ಅರ್ಧ ಕಪ್ ಅಕ್ಕಿಯಲ್ಲಿ ಮೂರರಿಂದ ನಾಲ್ಕು ಮಿಲಿಗ್ರಾಂ ಮೈಕ್ರೋಪ್ಲಾಸ್ಟಿಕ್ ಇದ್ದು, ಈ ಕಣಗಳು ದೇಹವನ್ನು ಸೇರುತ್ತವೆ. ಆದರೆ ಈ ಅಕ್ಕಿಯನ್ನು ಅಡುಗೆ ಮಾಡುವ ಮೊದಲು ಅನೇಕ ಬಾರಿ ತೊಳೆಯುವ ಮೂಲಕ ಪ್ಲಾಸ್ಟಿಕ್ ಅಕ್ಕಿಯು ದೇಹ ಸೇರುವುದನ್ನು ತಡೆಯಬಹುದು.
  • ಸಕ್ಕರೆ : ಸಿಹಿ ತಿಂಡಿ ತಿನಿಸುಗಳಲ್ಲಿ ಸಕ್ಕರೆ ಅಂಶವು ಅಧಿಕವಾಗಿದೆ. ದಿನ ನಿತ್ಯ ಬಳಸುವ ಈ ಸಕ್ಕರೆಯಲ್ಲಿ ಮೈಕ್ರೋಪ್ಲಾಸ್ಟಿಕ್ ಗಳು ಇರುವುದು ಪತ್ತೆಯಾಗಿದೆ. ಇದರ ಸೇವನೆಯಿಂದ ದೇಹಕ್ಕೆ ಪ್ಲಾಸ್ಟಿಕ್ ಕಣಗಳು ಸೇರುತ್ತದೆ. ಕಚ್ಚಾ ಸಕ್ಕರೆಯ ಬಳಕೆಯನ್ನು ಹೆಚ್ಚಿಸುವುದು ಒಳಿತು.
  • ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಲಾದ ಆಹಾರಗಳು : ಬೇಕರಿಯ ತಿಂಡಿ ತಿನಿಸುಗಳು, ಹಣ್ಣಿನ ರಸ ಸೇರಿದಂತೆ ಅನೇಕ ಸಂಸ್ಕರಿಸಿದ ಆಹಾರಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಪ್ಯಾಕ್ ಮಾಡಲಾಗುತ್ತದೆ, ಇದರಲ್ಲಿರುವ ಮೈಕ್ರೋಪ್ಲಾಸ್ಟಿಕ್‌ ಕಣಗಳು ಆಹಾರಕ್ಕೆ ಸೇರಬಹುದು. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಪ್ಯಾಕ್ ಮಾಡಲಾದ ಸಂಸ್ಕರಿಸಿದ ಆಹಾರಗಳ ಬಳಕೆಯನ್ನು ಕಡಿಮೆ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ