Apartment Gardening: ಕಡಿಮೆ ನಿರ್ವಹಣೆಯಲ್ಲಿ ಮನೆಗೆ ಹಸಿರು ಸ್ಪರ್ಶ ನೀಡುವ ಸಸ್ಯಗಳಿವು

ನಿಮ್ಮ ಮನೆಯಲ್ಲಿ ಗಾರ್ಡನ್ ಮಾಡಲು ಸ್ಥಳಾವಕಾಶವಿಲ್ಲ ಎನ್ನುವವರಿಗೆ ಅಪಾರ್ಟ್ಮೆಂಟ್ ಗಳಲ್ಲಿ ಈ ಸಸ್ಯಗಳನ್ನು ಬೆಳೆಸುವ ಮೂಲಕ ಹಚ್ಚ ಹಸಿರಿನ ವಾತಾವರಣವನ್ನು ಸೃಷ್ಟಿಸಿಕೊಳ್ಳಬಹುದಾಗಿದೆ. ಈ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಸಸ್ಯಗಳು ಒಣಗಿ ಹೋಗುವ ಸಾಧ್ಯತೆಯೇ ಹೆಚ್ಚು. ಆದರೆ ಈ ರೀತಿಯ ಸಸ್ಯಗಳಲ್ಲಿ ಈ ರೀತಿಯ ಸಸ್ಯಗಳಿಗೆ ಹೆಚ್ಚು ಮುತುವರ್ಜಿ ವಹಿಸುವ ಅಗತ್ಯವಿರುವುದಿಲ್ಲ.

Apartment Gardening: ಕಡಿಮೆ ನಿರ್ವಹಣೆಯಲ್ಲಿ ಮನೆಗೆ ಹಸಿರು ಸ್ಪರ್ಶ ನೀಡುವ ಸಸ್ಯಗಳಿವು
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 20, 2024 | 2:28 PM

ಮನೆಯ ಮುಂದೆ ಗಾರ್ಡನ್ ವೊಂದು ಇದ್ದು ಬಿಟ್ಟರೆ ಮನಸ್ಸಿಗೆ ಹಾಗೂ ಕಣ್ಣಿಗೆ ಹಿತವೆನಿಸುತ್ತದೆ. ಆದರೆ ಗಾರ್ಡನ್ ಎಂದ ಮೇಲೆ ಸಸ್ಯಗಳಿಗೆ ನೀರು ಹಾಕಿ ಆರೈಕೆ ಮಾಡಬೇಕಾಗುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಮಯವಿಲ್ಲ, ಗಾರ್ಡನ್ ಮಾಡಲು ಸ್ಥಳವು ಮೊದಲೇ ಇಲ್ಲ. ಅಂತಹವರಿಗೆ ಈ ಟೆರೇಸ್ ಗಾರ್ಡನಿಂಗ್ ಉತ್ತಮ ಆಯ್ಕೆಯಾಗಿದೆ. ಅದಲ್ಲದೇ ಹೆಚ್ಚು ಆರೈಕೆಯಿಲ್ಲದ ಈ ಸಸ್ಯಗಳನ್ನು ಬೆಳೆದರೆ ಮನೆಯ ವಾತಾವರಣಕ್ಕೆ ಹಸಿರು ಸ್ಪರ್ಶವನ್ನು ನೀಡಿದಂತೆ ಆಗುತ್ತದೆ. ಈ ಸಸ್ಯಗಳು ಅಪಾರ್ಟ್ಮೆಂಟ್ ಗಳಲ್ಲಿ ಇರುವವರಿಗೆ ಅಥವಾ ಮಣ್ಣಿನ ಫಲವತ್ತತೆ ಇಲ್ಲದ ಜಗದಲ್ಲಿರುವವರಿಗೆ ಸೂಕ್ತವಾಗಿದೆ.

ಹಾವಿನ ಗಿಡ: ಈ ಸಸ್ಯವು ಒಳಾಂಗಣ ಅಥವಾ ಹೊರಾಂಗಣ ಪರಿಸರಕ್ಕೆ ಹೊಂದಿಕೆಯಾಗುವ ಸಸ್ಯವಾಗಿದೆ. ದೀರ್ಘಕಾಲದವರೆಗೆ ಸಂಪೂರ್ಣ ಶುಷ್ಕತೆಯನ್ನು ಹೊಂದಿಕೊಳ್ಳುವ ಈ ಹಾವಿನ ಗಿಡಕ್ಕೆ ಹೆಚ್ಚು ಆರೈಕೆಯ ಅಗತ್ಯವಿಲ್ಲ. ಆದರೆ ಸ್ವಲ್ಪ ನೀರು ಹಾಕಿದರೆ ಹಚ್ಚ ಹಸಿರಿನ ನೋಟವನ್ನು ಬೀರುವ ಈ ಗಿಡವು ಗಾಳಿಯನ್ನು ಫಿಲ್ಟರ್ ಮಾಡಲು ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಲೋವೆರಾ : ಅಪಾರ್ಟ್ಮೆಂಟ್ ನಲ್ಲಿ ವಾಸಿಸುವ ಜನರಿಗೆ ಗಾರ್ಡನಿಂಗ್ ನಲ್ಲಿ ಆಸಕ್ತಿಯಿದ್ದರೆ ಈ ಸಸ್ಯವನ್ನು ಸುಲಭವಾಗಿ ಫೋಷಿಸಬಹುದು. ಕಡಿಮೆ ನಿರ್ವಹಣೆ ಹಾಗೂ ಶುಷ್ಕ ವಾತಾವರಣದಲ್ಲಿ ಬೆಳೆಯುವ ಈ ಸಸ್ಯವು ಔಷಧೀಯ ಗುಣವನ್ನು ಹೊಂದಿದೆ. ಹಚ್ಚ ಹಸಿರಿನ ವಾತಾವರಣವನ್ನು ಸೃಷ್ಟಿಸುವ ಈ ಅಲೋವೆರಾ ಗಿಡವು ಭಾರತೀಯ ಅಪಾರ್ಟ್ಮೆಂಟ್ ಗಳಿಗೆ ಹೇಳಿ ಮಾಡಿಸಿದ್ದಾಗಿದೆ.

ಸ್ಪೈಡರ್ ಸಸ್ಯ : ಕಣ್ಣಿಗೆ ಆಹ್ಲಾದಕರವಾಗಿರುವ ಈ ಸಸ್ಯಗಳು ಉದ್ದವಾದ ಹಸಿರು ಎಲೆಗಳನ್ನು ಹೊಂದಿರುತ್ತವೆ. ಸುಂದರವಾದ ಬಿಳಿ ಹೂವುಗಳನ್ನು ಹೊಂದಿದ್ದು, ಜೇಡಗಳಂತೆ ಕಾಣುತ್ತವೆ. ಇದು ಅಮರಿಲ್ಲಿಸ್ ಕುಟುಂಬಕ್ಕೆ ಸೇರಿದ್ದಾಗಿದೆ. ಗಾಳಿಯನ್ನು ಶುದ್ಧವಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ನೀರು ಹಾಕದೇ ಇದ್ದರೂ ಬದುಕಬಲ್ಲದು.

ಮನಿ ಪ್ಲಾಂಟ್ : ಈ ಸಸ್ಯವನ್ನು ಹೆಚ್ಚಿನವರ ಮನೆಯಲ್ಲಿ ನೋಡಿರಬಹುದು. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಗಾಳಿಯಿಂದ ರಾಸಾಯನಿಕ ವಿಷವನ್ನು ಹೀರಿಕೊಳ್ಳುತ್ತವೆ ಹಾಗೂ ಉಸಿರಾಡಲು ತಾಜಾ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಹೆಚ್ಚು ನೀರು ಬೇಕಾದ, ಸೂರ್ಯನ ಬೆಳಕು ಹಾಗೂ ಕಡಿಮೆ ನಿರ್ವಹಣೆಯಲ್ಲಿ ಬೆಳೆಯುವ ಸಸ್ಯವಾಗಿದೆ.

 ZZ ಸಸ್ಯ : ಈ ಸಸ್ಯವು ಗಾಢವಾದ ಹಸಿರು ಎಲೆಗಳಿಂದ ಕೂಡಿದ್ದು, ನೀರು ಹಾಕದೇ ಇದ್ದರೂ ಬಾಡುವುದಿಲ್ಲ. ಇದು ಒಳಾಂಗಣದಲ್ಲಿ ಅಥವಾ ಹೊರಾಂಗಣದಲ್ಲಿ ಇಡಬಹುದು. ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಕಡಿಮೆ ನಿರ್ವಹಣೆಯಲ್ಲಿ ಹೆಚ್ಚು ಆರೈಕೆಯಿಲ್ಲದ ಸಸ್ಯವಾಗಿದೆ.

ಇದನ್ನೂ ಓದಿ: ವಯಸ್ಸು 30 ದಾಟುವ ಮುನ್ನ ಈ ವಿಚಾರಗಳು ನಿಮಗೆ ತಿಳಿದಿರಲಿ

ರಬ್ಬರ್ ಸಸ್ಯ : ಆಕರ್ಷಕವಾದ ಮತ್ತು ಹೆಚ್ಚು ದಿನ ಬದುಕುವ ರಬ್ಬರ್‌ ಗಿಡ ಕಮರ್ಷಿಯಲ್‌ ಗಿಡವಾಗಿದ್ದರೂ ಇದನ್ನು ಮನೆಯ ಒಳಗೆ ಅಲಂಕಾರದ ಉದ್ದೇಶದಿಂದ ಬೆಳೆಯಬಹುದು. ಫಲವತ್ತಾದ ಮಣ್ಣು ತುಂಬಿ ಈ ಗಿಡ ನೆಡುವುದರಿಂದ ಬೇರು ಆಳದವರೆಗೂ ಬೆಳೆದು ಭದ್ರವಾಗಿ ನಿಲ್ಲುತ್ತದೆ. ಗಿಡಕ್ಕೆ ಬೆಳಕು ಮತ್ತು ನೀರು ಹೆಚ್ಚು ಬೇಕಾದ ಕಾರಣ ಕಿಟಕಿಯಲ್ಲಿ ಇಡಬಹುದಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ