
ಪ್ರಸ್ತುತ ಕಾಲದಲ್ಲಿ ಬೊಜ್ಜಿನ (fat) ಸಮಸ್ಯೆ ಅಧಿಕ ಜನರನ್ನು ಕಾಡುತ್ತಿರುವ ಬಹು ದೊಡ್ಡ ಸಮಸ್ಯೆಯಾಗಿದೆ. ಅನಾರೋಗ್ಯಕರ ಆಹಾರ ಪದ್ಧತಿ, ಕೆಟ್ಟ ಜೀವನಶೈಲಿ ಇವೆಲ್ಲವೂ ಬೊಜ್ಜಿಗೆ ಪ್ರಮುಖ ಕಾರಣ. ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ದೀರ್ಘಕಾಲದ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದಲ್ಲದೆ ಹೊಟ್ಟೆಯ ಬೊಜ್ಜು ದೇಹ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಹೀಗಿರುವಾಗ ಆರೋಗ್ಯಕರ ಆಹಾರ ಸೇವನೆ ಮಾಡುವ ಮೂಲಕ, ವ್ಯಾಯಾಮ ಮಾಡುವ ಮೂಲಕ ಬೊಜ್ಜು, ತೂಕ ಇಳಿಕೆಯನ್ನು ಮಾಡಬಹುದು. ಇದಲ್ಲದೆ ಸೋರೆಕಾಯಿ ಜ್ಯೂಸ್ ಸೇವನೆ ಮಾಡುವ ಮೂಲಕವೂ ಹೊಟ್ಟೆಯ ಸುತ್ತಲಿನ ಬೊಜ್ಜನ್ನು ಕರಗಿಸಬಹುದು.
ಸೋರೆಕಾಯಿ ಅತ್ಯಂತ ಪೌಷ್ಟಿಕ ತರಕಾರಿಯಾಗಿದ್ದು, ಇದರಲ್ಲಿ ನೀರು, ನಾರು ಮತ್ತು ವಿಟಮಿನ್ ಸಿ, ಬಿ6, ಫೋಲೇಟ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಈ ಪೋಷಕಾಂಶಗಳು ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದಲ್ಲದೆ, ಸೋರೆಕಾಯಿಯು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಸೋರೆಕಾಯಿ ರಸವು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ ಮತ್ತು ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ಬೊಜ್ಜನ್ನು ಕರಗಿಸಲು, ತೂಕ ಇಳಿಕೆಗೂ ಕೂಡ ಇದು ಸಹಕಾರಿ. ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿನಿತ್ಯ ಸೋರೆಕಾಯಿ ಜ್ಯೂಸ್ ಸೇವನೆ ಮಾಡಬಹುದು.
ಇದನ್ನೂ ಓದಿ: ಆಲಸ್ಯವನ್ನು ಹೋಗಲಾಡಿಸಿ ದಿನವಿಡೀ ಆಕ್ಟಿವ್ ಆಗಿರಲು ಈ ಅಹಾರಗಳನ್ನು ಸೇವನೆ ಮಾಡಿ
ಈ ಜ್ಯೂಸ್ ತಯಾರಿಸಲು, ಮೊದಲು ಸೋರೆಕಾಯಿಯನ್ನು ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಇದನ್ನು ಒಂದು ಬ್ಲೆಂಡರ್‌ಗೆ ಹಾಕಿ ಅದಕ್ಕೆ ಪುದೀನ ಎಲೆ, ಜೀರಿಗೆ ಮತ್ತು ಬ್ಲ್ಯಾಕ್ ಸಾಲ್ಟ್ ಸೇರಿಸಿ ನುಣ್ಣಗೆ ರುಬ್ಬಿ, ಬಳಿಕ ಸೋಸಿ, ಕುಡಿಯಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ