AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Bird Day 2026: ಪಕ್ಷಿಗಳಿಗೆ ಜೀವಿಸಲು ಸ್ವಚ್ಛಂದ ಪರಿಸರ ನಿರ್ಮಿಸೋಣ

ಪಕ್ಷಿಗಳು ಸೃಷ್ಟಿಯ ಅದ್ಭುತ ಮಾತ್ರವಲ್ಲದೆ, ಪರಿಸರ ವ್ಯವಸ್ಥೆಯ ಪ್ರಮುಖ ಭಾಗವೂ ಹೌದು. ಈ ಭೂಮಿಯ ಮೇಲೆ ಅದೆಷ್ಟೋ ಜಾತಿಯ ಪಕ್ಷಿಗಳಿವೆ. ಆದರೆ ಇಂದು ಮೊಬೈಲ್‌ ಟವರ್‌ಗಳು, ಕಾಡಿನ ನಾಶ, ನಗರೀಕರಣ ಇವೆಲ್ಲದರ ಕಾರಣದಿಂದಾಗಿ ಗುಬ್ಬಚ್ಚಿಯಂತಹ ಅದೆಷ್ಟೋ ಬಗೆಯ ಪಕ್ಷಿಗಳು ಅಳಿವಿನಂಚಿಗೆ ತಲುಪಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ಪಕ್ಷಿ ಸಂಕುಲವನ್ನು ರಕ್ಷಿಸಬೇಕು ಎನ್ನುವ ಉದ್ದೇಶದಿಂದ ಜನವರಿ 05 ರಂದು ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಿಸಲಾಗುತ್ತದೆ.

National Bird Day 2026: ಪಕ್ಷಿಗಳಿಗೆ ಜೀವಿಸಲು ಸ್ವಚ್ಛಂದ ಪರಿಸರ ನಿರ್ಮಿಸೋಣ
ರಾಷ್ಟ್ರೀಯ ಪಕ್ಷಿ ದಿನImage Credit source: Unsplash
ಮಾಲಾಶ್ರೀ ಅಂಚನ್​
|

Updated on: Jan 05, 2026 | 10:16 AM

Share

ಪಕ್ಷಿಗಳು (birds) ಸೃಷ್ಠಿಯ ಅದ್ಭುತಗಳಲ್ಲಿ ಒಂದು. ಪ್ರಕೃತಿಯ ಮಡಿಲಲ್ಲಿ ರೆಕ್ಕೆ ಬಿಚ್ಚಿ ಸ್ವಚ್ಛಂದವಾಗಿ ಹಾರಾಡುವ ಇವು ತಮ್ಮ ಚಿಲಿಪಿಲಿಯ ನಾದದಿಂದ ನಮ್ಮ ದಿನವನ್ನು ಬೆಳಗುತ್ತವೆ. ಮೊದಲೆಲ್ಲಾ ಮುಂಜಾನೆ ಎದ್ದ ತಕ್ಷಣವೇ ಪಕ್ಷಿಗಳ ಚಿಲಿಪಿಲಿಯ ನಾದ ಕಿವಿಗೆ ಕೇಳಸಿಗುತ್ತಿತ್ತು. ಆದರೆ ಇಂದು ಪಕ್ಷಿಗಳು ಕಾಣಸಿಗುವುದೇ ಅಪರೂಪವಾಗಿಬಿಟ್ಟಿದೆ. ಹೌದು ಕಾಡುಗಳ ನಾಶ, ನಗರೀಕರಣ, ಮೊಬೈಲ್‌ ಟವರ್‌ಗಳು ಇವೆಲ್ಲದರ ಕಾರಣದಿಂದ ಅದೆಷ್ಟೋ ಬಗೆಯ ಪಕ್ಷಿ ಪ್ರಬೇಧಗಳು ಅಳಿವಿನಂಚಿಗೆ ತಲುಪಿವೆ. ಬಾರ್ನ್ ಫ್ರೀ USA ವರದಿಯ ಪ್ರಕಾರ, ವಿಶ್ವದ ಸರಿಸುಮಾರು 10,000 ಪಕ್ಷಿ ಪ್ರಭೇದಗಳಲ್ಲಿ 12 ಪ್ರತಿಶತ ಪಕ್ಷಿ ಪ್ರಬೇಧಗಳು ಅಳಿವಿನ ಅಂಚಿನಲ್ಲಿವೆ. ಹಾಗಾಗಿ ಈ ಪರಿಸರ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರಪಂಚದಾದ್ಯಂತ ಪಕ್ಷಿಗಳ ಸಂರಕ್ಷಣೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಪ್ರತಿವರ್ಷ ಜನವರಿ 5 ರಂದು ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ರಾಷ್ಟ್ರೀಯ ಪಕ್ಷಿ ದಿನದ ಇತಿಹಾಸವೇನು?

ಬಾರ್ನ್ ಫ್ರೀ ಯುಎಸ್ಎ ಮತ್ತು ಏವಿಯನ್ ವೆಲ್ಫೇರ್ ಒಕ್ಕೂಟವು ಮೊದಲು 2002 ರಲ್ಲಿ ರಾಷ್ಟ್ರೀಯ ಪಕ್ಷಿ ದಿನವನ್ನು ಪ್ರಾರಂಭಿಸಿತು. ಇಂದು ರಾಷ್ಟ್ರೀಯ ಪಕ್ಷಿ ದಿನವನ್ನು ಅಮೆರಿಕ ಮಾತ್ರವಲ್ಲದೆ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಪ್ರಕೃತಿ ಪ್ರಿಯರು, ಪರಿಸರವಾದಿಗಳು, ಪಕ್ಷಿ ಪ್ರಿಯರು ಪಕ್ಷಿಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಬಹಳ ಉತ್ಸಾದಿಂದ ಆಚರಿಸುತ್ತಾರೆ.

ರಾಷ್ಟ್ರೀಯ ಪಕ್ಷಿ ದಿನದ ಮಹತ್ವವೇನು?

  • ಪಕ್ಷಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ.
  • ಪಕ್ಷಿಗಳು ನಮ್ಮ ಪರಿಸರದ ಒಂದು ಭಾಗ ಮಾತ್ರವಲ್ಲ, ಪರಿಸರ ವ್ಯವಸ್ಥೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ. ಅವು ಪರಾಗಸ್ಪರ್ಶ ಮತ್ತು ಬೀಜ ಪ್ರಸರಣದಲ್ಲಿ ಸಹಾಯ ಮಾಡುತ್ತವೆ, ನಮ್ಮ ಭೂಮಿಯನ್ನು ಹಸಿರಾಗಿರಿಸುತ್ತವೆ. ಈ ಬಗ್ಗೆ ಜನರಿಗೆ ಶಿಕ್ಷಣವನ್ನು ಕೂಡ ನೀಡಲಾಗುತ್ತದೆ.

ಇದನ್ನೂ ಓದಿ: ದೃಷ್ಟಿ ವಿಶೇಷ ಚೇತನರ ಬಾಳಿಗೆ ಬೆಳಕಾದ ಬ್ರೈಲ್‌ ಲಿಪಿ

ಪಕ್ಷಿಗಳು ಎದುರಿಸುವ ಸವಾಲುಗಳೇನು?

ಇತ್ತೀಚಿನ ದಿನಗಳಲ್ಲಿ ಪಕ್ಷಿಗಳ ಸಂಖ್ಯೆ ಹಲವಾರು ಕಾರಣಗಳಿಂದ ಕ್ಷೀಣಿಸುತ್ತಿದೆ:

  1. ಆವಾಸಸ್ಥಾನ ನಾಶ:  ನಗರೀಕರಣ ಮತ್ತು ಅರಣ್ಯನಾಶದಿಂದಾಗಿ ಪಕ್ಷಿಗಳ ಆವಾಸಸ್ಥಾನ ನಾಶವಾಗುತ್ತಿದೆ.
  2. ಹವಾಮಾನ ಬದಲಾವಣೆ:  ಹವಾಮಾನ ಬದಲಾವಣೆಗಳು ವಲಸೆ ಹಕ್ಕಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ.
  3. ಬೇಟೆ ಮತ್ತು ಅಕ್ರಮ ವ್ಯಾಪಾರ:  ಅಕ್ರಮ ಬೇಟೆಯಿಂದಲೂ ಅದೆಷ್ಟೋ ಜಾತಿಯ ಪಕ್ಷಿಗಳು ಅಳಿವಿನಂಚಿಗೆ ತಲುಪಿವೆ.
  4. ಮಾಲಿನ್ಯ:  ಪ್ಲಾಸ್ಟಿಕ್ ತ್ಯಾಜ್ಯ ಮತ್ತು ರಾಸಾಯನಿಕಗಳು ಅವುಗಳ ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ.

ಪಕ್ಷಿಗಳ ರಕ್ಷಣೆಗೆ ನಾವು ತೆಗೆದುಕೊಳ್ಳಬಹುದಾದ ಕ್ರಮಗಳು:

  1. ಪಕ್ಷಿಗಳಿಗೆ ನೈಸರ್ಗಿಕ ಆವಾಸಸ್ಥಾನವನ್ನು ಒದಗಿಸುವಂತೆ ಹೆಚ್ಚು ಹೆಚ್ಚು ಮರಗಿಡಗಳನ್ನು ನೆಡಬೇಕು.
  2. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಏಕೆಂದರೆ ಅದು ಪಕ್ಷಿಗಳ ಆರೋಗ್ಯಕ್ಕೆ ಅಪಾಯಕಾರಿ.
  3. ಸ್ಥಳೀಯ ವನ್ಯಜೀವಿ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿ ಪಕ್ಷಿಗಳನ್ನು ದತ್ತು ತೆಗೆದುಕೊಂಡು ಸಹಾಯ ಹಸ್ತ ನೀಡಬಹುದು.
  4. ಹಕ್ಕಿಗಳಿಗಾಗಿ ಮನೆ ಬಳಿ ನೀರು, ಕಾಳುಗಳನ್ನು ಇಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ