ಮನೆಯ ಹಿತ್ತಲಿನಲ್ಲಿ ಸಿಗುವ ಬಹುತೇಕ ಸಸ್ಯಗಳನ್ನು ಔಷಧಿಗಳ ಬಳಕೆಯೊಂದಿಗೆ ಆಹಾರದಲ್ಲಿ ಪದಾರ್ಥಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳ ಸಾಲಿನಲ್ಲಿ ಮೊದಲಿಗೆ ಇರುವುದೇ ಈ ಬ್ರಾಹ್ಮಿ ಅಥವಾ ಒಂದೆಲಗ. ಒಂದೆಲಗದಿಂದ ಪಲ್ಯ, ತಂಬುಳಿ, ಚಟ್ನಿ, ಸಲಾಡ್ ಹೀಗೆ ವಿಧ ವಿಧವಾದ ರುಚಿಕರವಾದ ಆಹಾರವನ್ನು ತಯಾರಿಸಲಾಗುತ್ತದೆ. ಅಷ್ಟೇ ಅಲ್ಲದೇ ಆರೋಗ್ಯದಿಂದ ಹಿಡಿದು ತ್ವಚೆ ಹಾಗೂ ಕೂದಲಿನ ಆರೈಕೆಯವರೆಗೂ ಇದರ ಪ್ರಯೋಜನವು ಬಹುದೊಡ್ಡದಾಗಿದೆ.
- ಮೂರು ನಾಲ್ಕು ಚಮಚದಷ್ಟು ಒಂದೆಲಗ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ನಿಯಮಿತವಾಗಿ ಸೇವಿಸುತ್ತ ಬಂದರೆ ಸ್ವರದ ಸಮಸ್ಯೆಯೂ ದೂರವಾಗುತ್ತದೆ.
- ಒಂದೆಲಗ ಸೊಪ್ಪುನ್ನು ಅರೆದು ಅದರ ರಸವನ್ನು ಒಂದು ಲೋಟ ಬಿಸಿ ಹಾಲಿಗೆ ಸೇರಿಸಿ ದಿನಕ್ಕೆರಡು ಬಾರಿಕುಡಿಯುವುದರಿಂದ ಮಹಿಳೆಯರ ಬಿಳಿ ಮುಟ್ಟಿನ ಸಮಸ್ಯೆಯೂ ನಿವಾರಣೆಯಾಗುತ್ತದೆ.
- ಆನೆಕಾಲು ರೋಗದಿಂದ ಬಳಲುತ್ತಿರುವವರು ಈ ಒಂದೆಲಗದ ರಸವನ್ನು ಪ್ರತಿನಿತ್ಯ ಸೇವಿಸುತ್ತ ಬಂದರೆ ಆರೋಗ್ಯದಲ್ಲಿ ನಾನಾ ರೀತಿಯ ಬದಲಾವಣೆಗಳನ್ನು ಕಾಣುತ್ತೀರಿ.
- ಒಂದೆಲಗದ ರಸವನ್ನು ಹಿಂಡಿ ಗಾಯ ಹಾಗೂ ಚರ್ಮದ ಸಮಸ್ಯೆಯಿದ್ದ ಜಾಗಕ್ಕೆ ಹಚ್ಚುತ್ತಿದ್ದರೆ ಬೇಗನೆ ಗುಣಮುಖ ಕಾಣುತ್ತದೆ.
- ಕೆಮ್ಮಿನಂತಹ ಸಮಸ್ಯೆಗೆ ಒಂದೆಲಗ ಸೊಪ್ಪನ್ನು ಜಜ್ಜಿ ರಸ ತೆಗೆದು, ಇದಕ್ಕೆ ಶುಂಠಿ, ಕಾಳುಮೆಣಸು ಹಾಗೂ ಬೆಲ್ಲ ಸೇರಿಸಿ ಕಷಾಯ ಮಾಡಿ ಕುಡಿಯುವುದು ಪರಿಣಾಮಕಾರಿಯಾದ ಮನೆ ಮದ್ದಾಗಿದೆ.
- ಎಳ್ಳೆಣ್ಣೆಯನ್ನು ಒಂದೆಲಗದ ರಸದೊಂದಿಗೆ ಬೆರಸಿ ಕುದಿಸಿ, ಈ ಎಣ್ಣೆಯನ್ನು ತಲೆಗೆ ಹಚ್ಚುತ್ತಿದ್ದರೆ ಕಣ್ಣಿನ ದೃಷ್ಟಿಯೂ ಸುಧಾರಿಸುತ್ತದೆ.
- ವಿಪರೀತ ತಲೆನೋವು ಕಾಡುತ್ತಿದ್ದರೆ ಈ ಒಂದೆಲಗ ಸೊಪ್ಪುನ್ನು ಅರೆದು ರಸವನ್ನು ತೆಗೆದು ಹಣೆಗೆ ಲೇಪಿಸಿಕೊಂಡರೆ ತಕ್ಷಣವೇ ಈ ಸಮಸ್ಯೆಯೂ ನಿವಾರಣೆಯಾಗುತ್ತದೆ.
- ತೆಂಗಿನೆಣ್ಣೆಗೆ ಒಂದೆಲಗದ ರಸವನ್ನು ಸೇರಿಸಿ ಕುದಿಸಿ, ಈ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆ ಕೂದಲಿನ ಆರೋಗ್ಯವು ಉತ್ತಮವಾಗಿರುತ್ತದೆ.
- ಅರ್ಧ ಚಮಚ ಒಂದೆಲಗದ ರಸಕ್ಕೆ ಒಂದು ಚಮಚದಷ್ಟು ಜೇನುತುಪ್ಪ ಸೇರಿಸಿ ಸೇವಿಸಿದರೆ ರಕ್ತಹೀನತೆ ಸಮಸ್ಯೆಯಿಂದ ಮುಕ್ತಿ ಹೊಂದುವಿರಿವಿರಿ.
- ಹತ್ತು ಒಂದೆಲಗದ ಎಲೆ ಮತ್ತು ಐದು ಕಾಳುಮೆಣಸನ್ನು ಅರೆದು ಮಜ್ಜಿಗೆಯಲ್ಲಿ ಸೇರಿಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಹೃದಯದ ಆರೋಗ್ಯವು ಸುಧಾರಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ