ಹಾಲುಣಿಸುವ ತಾಯಂದಿರೇ ನಿಮ್ಮ ಮಗುವಿಗೆ ಎದೆ ಹಾಲು ಸಾಕಾಗುತ್ತಿಲ್ಲವೇ, ಇಲ್ಲಿದೆ ಸಿಂಪಲ್ ಮನೆ ಮದ್ದುಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 17, 2024 | 12:39 PM

ಎದೆ ಹಾಲು ಅಮೃತಕ್ಕೆ ಸಮ ಎನ್ನುವ ಮಾತಿದೆ. ಹುಟ್ಟಿದ ಮಗುವು ಆರೋಗ್ಯಯುತವಾಗಿ ಬೆಳೆಯಲು ತಾಯಿಯ ಎದೆ ಹಾಲು ಅತ್ಯವಶ್ಯಕ. ಹೀಗಾಗಿ ಮಗು ಜನಿಸಿದಾಗಿನಿಂದ ಒಂದೆರಡು ವರ್ಷದವರೆಗೆ ಮಕ್ಕಳಿಗೆ ತಾಯಂದಿರು ಎದೆಹಾಲು ಉಣಿಸಬೇಕಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಜೀವನ ಶೈಲಿ ಹಾಗೂ ಆಹಾರ ಕ್ರಮದಲ್ಲಿನ ಬದಲಾವಣೆಗಳಿಂದ ತಾಯಂದಿರಲ್ಲಿ ಎದೆ ಹಾಲಿನ ಸಮಸ್ಯೆಯು ಕಾಣಿಸುತ್ತಿದೆ. ಮಕ್ಕಳಿಗೆ ಎದೆಹಾಲು ಸಾಕಾಗುತ್ತಿಲ್ಲ ಎನ್ನುವ ಕಾರಣಕ್ಕೆ ಕಂದಮ್ಮಗಳಿಗೆ ತಾಯಂದಿರು ಇನ್ನಿತ್ತರ ಆಹಾರಗಳನ್ನು ನೀಡುತ್ತಿದ್ದಾರೆ. ಎದೆಹಾಲಿನ ಸಮಸ್ಯೆಯು ಕಾಣಿಸಿಕೊಂಡರೆ ಮನೆಯಲ್ಲಿಯೇ ಕೆಲವು ಮನೆಮದ್ದನ್ನು ಮಾಡಿ ಸೇವಿಸುವುದು ಉತ್ತಮ.

ಹಾಲುಣಿಸುವ ತಾಯಂದಿರೇ ನಿಮ್ಮ ಮಗುವಿಗೆ ಎದೆ ಹಾಲು ಸಾಕಾಗುತ್ತಿಲ್ಲವೇ, ಇಲ್ಲಿದೆ ಸಿಂಪಲ್ ಮನೆ ಮದ್ದುಗಳು
ಸಾಂದರ್ಭಿಕ ಚಿತ್ರ
Follow us on

ಹೆಣ್ಣು ಒಂದು ಮಗುವಿಗೆ ಜನ್ಮ ನೀಡುವುದು, ಆ ಮಗುವನ್ನು ಹೆತ್ತು ಹೊತ್ತು ಫೋಷಿಸುವುದು ಸುಲಭವಲ್ಲ. ಇದೆಲ್ಲವು ಪ್ರಕೃತಿದತ್ತವಾಗಿ ಹೆಣ್ಣಿಗೆ ನೀಡಿರುವ ವರವಾಗಿದೆ. ಹುಟ್ಟಿದ ಮಗುವಿಗೆ ಎದೆ ಹಾಲು ಕುಡಿಸುವುದು ಕೂಡ ಸ್ವಾಭಾವಿಕ ಕ್ರಿಯೆಯಾಗಿದ್ದು, ತಾಯಿ ಹಾಗೂ ಮಗುವಿನ ಬಂಧವು ಹೆಚ್ಚಾಗುವುದು ಇಲ್ಲಿಂದಲೇ ಎನ್ನಬಹುದು. ಆದರೆ ಹೆಣ್ಣು ಮಕ್ಕಳು ತನ್ನ ಸೌಂದರ್ಯವು ಮಾಸಿ ಹೋಗುತ್ತದೆ ಎಂದು ಹಾಲು ಉಣಿಸುವುದನ್ನು ನಿಲ್ಲಿಸುತ್ತಾರೆ. ಇನ್ನು ತಾಯಂದಿರಲ್ಲಿ ಮಕ್ಕಳಿಗೆ ಬೇಕಾದಷ್ಟು ಎದೆಹಾಲು ಇರುವುದಿಲ್ಲ. ಆದರೆ ಮಗುವಿನ ಬಹುಮುಖ್ಯವಾದ ಆಹಾರವಾಗಿರುವ ಎದೆಹಾಲು ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅಗತ್ಯವಾಗಿಬೇಕು.

* ಎಳೆಯ ಮುಸುಕಿನ ಜೋಳದ ಕಾಳುಗಳನ್ನು ಹಸಿದಾಗಿಯೇ ತಿನ್ನುತ್ತಿದ್ದರೆ ಎದೆಹಾಲು ಹೆಚ್ಚುವುದು.

* ಹಸಿರಾಗಿರುವ ಜೋಳದ ತೆನೆಗಳನ್ನು ಸುಟ್ಟು, ಆ ಕಾಳಿಗೆ ಕೊಬ್ಬರಿ, ಬೆಲ್ಲ ಸೇರಿಸಿ ತಿನ್ನುವುದು ಉತ್ತಮ.

* ಹೆರಿಗೆಯ ನಂತರ ಸಬ್ಬಕ್ಕಿ ಸೊಪ್ಪಿನ ಸಾರನ್ನು ಉಪಯೋಗಿಸುತ್ತಿದ್ದರೆ ಹೆಚ್ಚು ಎದೆ ಹಾಲು ಉತ್ಪತ್ನಿಯಾಗುತ್ತದೆ.

* ಹಸಿ ಅಲಸಂಡೆ ಕಾಳುಗಳನ್ನು ತಿನ್ನುವುದರಿಂದ ಎದೆಹಾಲು ಉತ್ಪತ್ನಿಗೆ ಪರಿಣಾಮಕಾರಿಯಾದ ಔಷಧಿಯಾಗಿದೆ.

* ಎದೆ ಹಾಲು ಹೆಚ್ಚಾಗಬೇಕಾದರೆ ಬಾಣಂತಿಯರು ನಿಯಮಿತವಾಗಿ ವೀಳ್ಯದೆಲೆಯನ್ನು ಸೇವಿಸಿ.

* ಒಂದು ಚಮಚದಷ್ಟು ಜೀರಿಗೆ ಪುಡಿಗೆ ತುಪ್ಪ ಸೇರಿಸಿ ಸೇವಿಸಿದರೆ ಎದೆಹಾಲು ಹೆಚ್ಚಾಗುತ್ತದೆ.

* ಎದೆ ಹಾಲಿನ ಉತ್ಪತ್ನಿಗೆ ಜೀರಿಗೆ ಕಷಾಯಕ್ಕೆ ಹಾಲು, ಜೇನುತುಪ್ಪ ಬೆರೆಸಿ ಗರ್ಭಧಾರಣೆಯ ಸಮಯ- ದಲ್ಲಿ ದಿನವೂ ಸೇವಿಸುವುದರಿಂದ ಪರಿಣಾಮಕಾರಿಯಾದ ಔಷಧಿ.

* ಹುರಿದ ಮೆಂತ್ಯದಿಂದ ಗಂಜಿ ತಯಾರಿಸಿ, ಅದಕ್ಕೆ ಹಾಲು-ಸಕ್ಕರೆ ಬೆರೆಸಿ ಸೇವಿಸುವುದು ಎದೆ ಹಾಲು ಹೆಚ್ಚಾಗಲು ಸಹಕಾರಿ.

ಇದನ್ನೂ ಓದಿ: ಗರ್ಭಧರಿಸಿದ ಮೊದಲ ಮೂರು ತಿಂಗಳು ಈ ತಪ್ಪುಗಳನ್ನು ಮಾಡಬೇಡಿ

* ಒಂದು ಚಮಚದಷ್ಟು ಒಣಶುಂಠಿ ಪುಡಿ ಹಾಗೂ ಬೆಲ್ಲ ಸೇರಿಸಿ, ದಿನಕ್ಕೆ ಎರಡು ಬಾರಿ ತಿನ್ನುವುದರಿಂದ ಹಾಲಿನ ಉತ್ಪತ್ನಿಯಾಗುತ್ತದೆ.

* ಮೆಂತೆ ಕಾಳನ್ನು ಗಂಜಿಗೆ ಹಾಕಿ ಸೇವಿಸಿದರೆ ಎದೆ ಹಾಲಿನ ಉತ್ಪತ್ನಿಗೆ ಪರಿಣಾಮಕಾರಿಯಾದ ಮನೆ ಮದ್ದು.

* ತಾಯಂದಿರು ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನಷ್ಟು ನೀರು ಕುಡಿಯುವುದರಿಂದ ಎದೆ ಹಾಲಿನ ಉತ್ಪತ್ನಿಯಾಗುತ್ತದೆ.

* ಒಣಶುಂಠಿಯನ್ನು ಆಹಾರದಲ್ಲಿ ಉಪಯೋಗಿಸುವುದರಿಂದ ಎದೆ ಹಾಲಿನ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

* ಒಂದು ಚಮಚದಷ್ಟು ಸೋಂಪು ಕಾಳನ್ನು ಎರಡು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಸೇರಿಸಿ, ದಿನಕ್ಕೆ ಮೂರು ಬಾರಿ ಊಟದ ನಂತರ ಸೇವಿಸುವುದು ಉತ್ತಮ.

* ರಾತ್ರಿ ನೆನೆಸಿಟ್ಟ ಒಂದೆರಡು ಚಮಚದಷ್ಟು ಮೆಂತೆ ಕಾಳುಗಳನ್ನು ಬೆಳಗ್ಗೆ ಎದ್ದ ಕೂಡಲೇ ಸೇವಿಸುತ್ತಿದ್ದರಿಂದ ಎದೆ ಹಾಲು ಉತ್ಪತ್ನಿಯಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ