Kitchen Tips in Kannada : ಅಕ್ಕಿಯಲ್ಲಿ ಕೀಟಗಳ ಬಾಧೆಯೇ? ಇದನ್ನು ದೂರ ಮಾಡಲು ಹೀಗೆ ಮಾಡಿ
ಅಕ್ಕಿ, ಹೆಚ್ಚಿನವರ ಆಹಾರ ಪದಾರ್ಥಗಳಲ್ಲಿ ಪ್ರಮುಖವಾಗಿದೆ. ಹೀಗಾಗಿ ಅಕ್ಕಿಯಿಂದ ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿ ಸೇವಿಸುತ್ತಾರೆ. ಆದರೆ ಈ ಅಕ್ಕಿಯನ್ನು ಹೆಚ್ಚು ದಿನಗಳವರೆಗೆ ಸಂಗ್ರಹಿಸಿಡುವುದು ಸ್ವಲ್ಪ ಕಷ್ಟವೇ. ಕೆಲವೊಮ್ಮೆ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಅಕ್ಕಿಯಲ್ಲಿ ಹುಳಗಳು ಹಾಗೂ ಕೀಟಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಮನೆಯಲ್ಲೇ ಸುಲಭವಾದ ವಿಧಾನವನ್ನು ಬಳಸಿ ಹುಳಗಳು ಹಾಗೂ ಕೀಟಗಳಿಂದ ಅಕ್ಕಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದಾಗಿದೆ.

ಅಕ್ಕಿಯಲ್ಲಿ ವಿವಿಧ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿದ್ದು, ವಿಟಮಿನ್ ಡಿ, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಥಯಾಮಿನ್ ಮತ್ತು ರಿಬೋಫ್ಲಾವಿನ್ ಗಳಿವೆ. ಕೆಲವರು ಮನೆಯಲ್ಲಿ ಅಕ್ಕಯನ್ನ ಶೇಖರಿಸಿ ಇಟ್ಟರೂ ಕೀಟಗಳು ಹಾಗೂ ಹುಳಗಳ ಬಾಧೆ ತಪ್ಪಿದ್ದಲ್ಲ. ಅಕ್ಕಿಗೆ ಕೀಟಬಾಧೆ ಬಾರದಂತೆ ರಾಸಾಯನಿಕ ಮಿಶ್ರಿತ ಪೌಡರ್ ಬಳಸಿದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
- ಅಕ್ಕಿಯನ್ನು ಸಂಗ್ರಹಿಸುವ ಪ್ರದೇಶವು ಶುಷ್ಕವಾಗಿಟ್ಟುಕೊಳ್ಳಿ. ಅಕ್ಕಿಯ ಚೀಲದಲ್ಲಿ ಮಸಾಲೆ ಪದಾರ್ಥಗಳನ್ನು ಇಟ್ಟರೆ ಕೀಟಗಳು ಬರುವುದಿಲ್ಲ. ಕರ್ಪೂರ, ಇಂಗು, ಲವಂಗ, ದಾಲ್ಚಿನ್ನಿ, ಬಿರಿಯಾನಿ ಎಲೆಗಳು ಮತ್ತು ನಕ್ಷತ್ರದ ಹೂವುಗಳನ್ನು ಕವರ್‌ನಲ್ಲಿ ಹಾಕಿ ಅಕ್ಕಿ ಚೀಲಗಳಲ್ಲಿ ಹಾಕಿಟ್ಟರೆ ದೀರ್ಘಕಾಲದವರೆಗೆ ಯಾವುದೇ ಕೀಟಗಳು ಬಾರದಂತೆ ಸಂರಕ್ಷಿಸಿಡಬಹುದು.
- ಅಕ್ಕಿಯನ್ನು ಕೀಟಗಳಿಂದ ಮುಕ್ತವಾಗಿಡುವಲ್ಲಿ ಬೇವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಬಹಳಷ್ಟು ಪರಿಣಾಮಕಾರಿಯಾಗಿದೆ.
- ಅಕ್ಕಿ ಚೀಲಗಳಲ್ಲಿ ಬೆಳ್ಳುಳ್ಳಿ ಮತ್ತು ಉಪ್ಪನ್ನು ಹಾಕಿಟ್ಟರೆ ಅಕ್ಕಿಗೆ ಕೀಟಗಳು ಬರದಂತೆ ನೋಡಿಕೊಳ್ಳಬಹುದು. ಸಿಪ್ಪೆ ಸುಲಿದ ಬೆಳ್ಳುಳ್ಳಿ ಹಾಗೂ ಉಪ್ಪನ್ನು ಕವರ್ ನಲ್ಲಿಟ್ಟು ಅಕ್ಕಿಯ ಶೇಖರಣೆಯಲ್ಲಿಟ್ಟರೆ ಕೀಟಗಳು ಬರುವುದಿಲ್ಲ.
- ಅಕ್ಕಿ ಚೀಲದಲ್ಲಿ ತುಳಸಿ ಎಲೆಗಳನ್ನು ಇರಿಸಿದರೆ ಹುಳಗಳು ಬೇಗನೇ ಆಗುವುದಿಲ್ಲ.
- ಒಂದು ವೇಳೆ ಅಕ್ಕಿಯಲ್ಲಿ ಹುಳಗಳು ಆಗಿದ್ದರೆ ಆ ಅಕ್ಕಿಯನ್ನು ಗಾಳಿಯಾಡದ ಕವರ್‌ನಿಂದ ಹಾಕಿಟ್ಟು 3-4 ದಿನಗಳವರೆಗೆ ಫ್ರಿಜ್‌ನಲ್ಲಿ ಇಟ್ಟರೆ ಕೀಟಗಳು ಹಾಗೂ ಹುಳಗಳು ಸಾಯುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




