ಮನೆಗೆಲಸದ ಮಹಿಳೆ (House Maid) ಒಂದು ದಿನ ಚಕ್ಕರ್ ಹೊಡೆದರೆ ಚಿಂತಿಸಬೇಡಿ. ಮನೆ ಶುಚಿಗೊಳಿಸುವುದರಿಂದ ಹಿಡಿದು ಬಟ್ಟೆ ಒಗೆಯುವುದು, ಅಡುಗೆ ಮಾಡುವುದು ಹೀಗೆ ಹಲವು ಕೆಲಸಗಳನ್ನು ನಾನೊಬ್ಬಳೇ ಮಾಡುವುದು ಹೇಗಪ್ಪಾ ಎಂದು ರೇಗಬೇಡಿ. ಇದೆಲ್ಲವನ್ನೂ ನೀವೇ ಮಾಡುವುದರಿಂದ ಆಗುವ ಲಾಭಗಳು ನಿಮಗೆ ತಿಳಿದರೆ ನೀವು ಪ್ರತಿದಿನ ಎಲ್ಲಾ ಕೆಲಸಗಳನ್ನು ನಾನೇ ಮಾಡುವೆ ಎಂದು ಸಜ್ಜಾಗುತ್ತೀರಿ. ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ತಮ್ಮ ದೇಹದ ಆಕಾರವನ್ನು ಕಾಪಾಡಿಕೊಳ್ಳಲು ಮತ್ತು ತಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಜಿಮ್‌ಗೆ ಹೋಗುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಯೋಗ ಮತ್ತು ವ್ಯಾಯಾಮ ಮಾಡುತ್ತಾರೆ. ಆದರೆ ಮನೆಗೆಲಸವನ್ನು ಮಾಡುವುದರಿಂದ ಕ್ಯಾಲೊರಿಗಳನ್ನು ದಹಿಸಬಹುದು ಮತ್ತು ಜಿಮ್‌ಗಿಂತ (Gym, health) ಉತ್ತಮ ಫಲಿತಾಂಶವನ್ನು ಪಡೆಯಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ.
ಮನೆ ಗುಡಿಸುವುದು, ನೆಲ ಗುಡಿಸುವುದು, ಪಾತ್ರೆ ತೊಳೆಯುವುದು, ಮೆಟ್ಟಿಲುಗಳನ್ನು ತೊಳೆಯುವುದು ಮುಂತಾದ ಶ್ರಮದಾಯಕ ಕೆಲಸಗಳು ಮಾಡುವುದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಅಂದರೆ ಜಿಮ್‌ಗೆ ಹೋಗದೆ ಮನೆಗೆಲಸ ಮಾಡುವ ಮೂಲಕ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ತಜ್ಞರ ಪ್ರಕಾರ, ನೀವು ಮನೆಯಲ್ಲಿ ಒಂದು ಗಂಟೆ ಕೆಲಸ ಮಾಡಿದರೆ, ಅದು ಜಿಮ್‌ನಲ್ಲಿ 20 ನಿಮಿಷಗಳ ತಾಲೀಮು ಮಾಡುವುದಕ್ಕೆ ಸಮಾನವಾಗಿರುತ್ತದೆ.
ಇದನ್ನೂ ಓದಿ: ಊಟದ ನಂತರ ಕಾಫಿ ಕುಡಿಯುವ ಅಭ್ಯಾಸವಿದೆಯೇ? ಇದು ಆರೋಗ್ಯಕ್ಕೆ ಹಾನಿಕಾರಕ
ಮನೆಯ ಶುಚಿಗೊಳಿಸುವುದನ್ನು ವ್ಯಾಕ್ಯೂಮ್ ಕ್ಲೀನರ್ ಅಥವಾ ಮಾಪ್ ಮೂಲಕ ಮಾಡಬಹುದು. ಆದರೆ ಸ್ವಚಲ್ಪವೇ ಶ್ರಮ ಹಾಕಲು ನೀವು ಸಿದ್ಧವಾದರೆ ಅಂದರೆ ನಿಮ್ಮ ಮೊಣಕಾಲುಗಳ ಮೇಲೆ ಕುಳಿತುಕೊಂಡು ಬಾಗಿ ದೈಹಿಕ ಶ್ರಮವನ್ನು ಮಾಡಿದರೆ ಸಾಕು… ಅಂದರೆ ಮನೆ ಸಾರಿಸಿದರೆ ಸಾಕು. ಈ ರೀತಿ ಮಾಡುವುದರಿಂದ ಹೊಟ್ಟೆಯ ಕೆಳಭಾಗದಲ್ಲಿ ಒತ್ತಡ ಹೆಚ್ಚುತ್ತದೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ಪದೇ ಪದೆ ಮನೆಯಲ್ಲಿ ಕುಳಿತು-ಏಳುವ ಕೆಲಸಗಳು (ಸಿಟ್-ಅಪ್‌ಗಳು) ಮಾಡುವುದರಿಂದ ಕೀಲುಗಳ ಸಮಸ್ಯೆ ಸುಧಾರಿಸುತ್ತದೆ. ಇನ್ನು ಆಗಾಗ ಕಿಟಕಿಗಳ ಒರೆಸುವುದನ್ನು ವಾಡಿಕೆ ಮಾಡಿಕೊಳ್ಳಿ. ಇನ್ನು ನಿಮ್ಮ ದೈನಂದಿನ ಜೀವನದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ಅಳವಡಿಸಿಕೊಳ್ಳುವುದು… ಹೀಗೆ ಮಾಡುವುದರಿಂದ ನಿಮ್ಮ ತೂಕವನ್ನು ಕಳೆದುಕೊಳ್ಳಲು ಮತ್ತು ಹಣವನ್ನು ಉಳಿಸಲು ಸಹಾಯ ಮಾಡುತ್ತದೆ.