ಊಟದ ನಂತರ ಕಾಫಿ ಕುಡಿಯುವ ಅಭ್ಯಾಸವಿದೆಯೇ? ಇದು ಆರೋಗ್ಯಕ್ಕೆ ಹಾನಿಕಾರಕ

ಊಟವಾದ ಬಳಿಕ ಒಂದು ಲೋಟ ಬಿಸಿ ಬಿಸಿ ಕಾಫಿಯನ್ನು ಕುಡಿಯುವ ಅಭ್ಯಾಸವನ್ನು ಅನೇಕರು ರೂಢಿಸಿಕೊಂಡಿರುತ್ತಾರೆ. ಇದು ಜೀರ್ಣಕ್ರಿಯೆಗೆ ಹಾಗೂ ನಮ್ಮನ್ನು ಚುರುಕಾಗಿಡಲು ಸಹಾಯ ಮಾಡುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಊಟವಾದ ಬಳಿಕ ಕಾಫಿ ಕುಡಿಯುವ ಅಭ್ಯಾಸವನ್ನು ಬಿಟ್ಟುಬಿಡುವುದು ಒಳ್ಳೆಯದು.

ಊಟದ ನಂತರ ಕಾಫಿ ಕುಡಿಯುವ ಅಭ್ಯಾಸವಿದೆಯೇ? ಇದು ಆರೋಗ್ಯಕ್ಕೆ ಹಾನಿಕಾರಕ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 11, 2023 | 3:59 PM

ತೃಪ್ತಿಕರ ಭೋಜನದ ನಂತರ ನಮ್ಮಲ್ಲಿ ಅನೇಕರು ಒಂದು ಕಪ್ ಬಿಸಿ ಬಿಸಿ ಕಾಫಿ ಅಥವಾ ಚಹಾವನ್ನು ಕುಡಿಯುತ್ತಾರೆ.  ಇದು ಜೀರ್ಣಕ್ರಿಯೆಗೆ ಹಾಗೂ ನಮ್ಮನ್ನು ಕ್ರಿಯಾಶೀಲರನ್ನಾಗಿಡಲು ಸಹಾಯ ಮಾಡುತ್ತದೆ ಎಂಬ ಕಾರಣದಿಂದ ಹಲವರು ಊಟದ ನಂತರ ಕಾಫಿ ಸೇವನೆ ಮಾಡುತ್ತಾರೆ. ಆದರೆ ಕೆಫಿನ್ ನಮ್ಮ ನಿದ್ರೆಯನ್ನು ಅಡ್ಡಿಪಡಿಸುವುದಲ್ಲದೆ, ದೇಹ ತೂಕವನ್ನು ಹೆಚ್ಚಿಸುತ್ತದೆ. ಕಾಫಿಯಲ್ಲಿ ಕೆಫಿನ್ ಅಂಶ ಇರುವುದರಿಂದ ಅದರ ಅತಿಯಾದ ಸೇವನೆಯೂ ಅಷ್ಟೇನೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ  ಕೆಲವರು  ಊಟವಾದ ತಕ್ಷಣ ಕಾಫಿಯನ್ನು ಕುಡಿಯುವ ಅಭ್ಯಾಸವನ್ನು ರೂಡಿಸಿಕೊಂಡಿರುತ್ತಾರೆ. ಖಂಡಿತವಾಗಿಯೂ ಈ ಒಂದು ಅಭ್ಯಾಸವು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.  ಊಟದ ನಂತರ ಒಂದು ಕಪ್ ಬಿಸಿ ಕಾಫಿ ಕುಡಿಯುವ ಅಭ್ಯಾಸವು  ನಿಮ್ಮ ಆರೋಗ್ಯದ ಜೊತೆಗೆ ಸೌಂದರ್ಯದ ಮೇಲೂ ಋಣಾತ್ಮಕ ಪರಿಣಾಮವನ್ನು ಬೀರಬಹುದು.

ಊಟದ ನಂತರ ಕಾಫಿ ಕುಡಿಯುವುದರಿಂದ ಆಗುವ ಅಡ್ಡಪರಿಣಾಮಗಳು:

ಚರ್ಮವು ಶುಷ್ಕವಾಗಬಹುದು: ಒಂದು ಕಪ್  ಕಾಫಿ ಕುಡಿಯುವುದರಿಂದ ನಿಮ್ಮನ್ನು ಅದು ದಿನವಿಡೀ ಕ್ರೀಯಾಶೀಲರನ್ನಾಗಿಡಲು ಸಹಾಯ ಮಾಡಬಹುದು. ಅದರೆ ಊಟವಾದ ತಕ್ಷಣ ಕಾಫಿ ಕುಡಿಯುವುದರಿಂದ ನಿಮ್ಮ ದೇಹವು ನೀವು ತಿಂದ ಆಹಾರದಿಂದ ಎಲ್ಲಾ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ ಮತ್ತು ಕಬ್ಬಿಣಾಂಶದ ಹೀರಿಕೊಳ್ಳುವಿಕೆಯನ್ನು 80% ರಷ್ಟು ಕಡಿಮೆ ಮಾಡುತ್ತದೆ. ನಿಮ್ಮ ದೇಹವು ಸಾಕಷ್ಟು ಕಬ್ಬಿಣಾಂಶವನ್ನು ಪಡೆಯದಿದ್ದಾಗ, ಅದು ನಿಮ್ಮ ಆರೋಗ್ಯದ ಮೇಲೆ ಹಲವಾರು  ರೀತಿಯಲ್ಲಿ ಪರಿಣಾಮ ಬೀರಬಹುದು  ಮತ್ತು ನಿಮ್ಮ ಚರ್ಮದ ಮೇಲೆ ಅದರ ಪರಿಣಾಮ ನೇರವಾಗಿ ಗೋಚರಿಸುತ್ತದೆ. ಇದರಿಂದ ನಿಮ್ಮ ಚರ್ಮ ಶುಷ್ಕವಾಗುವುದು ಮಾತ್ರವಲ್ಲದೆ ಸುಕ್ಕುಗಳು ಕೂಡಾ ಕಾಣಿಸಿಕೊಳ್ಳುತ್ತದೆ.
ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ಹೆಚ್ಚಿನ ಜನರು ಊಟದ ಬಳಿಕ ಕಾಫಿ ಕುಡಿಯುತ್ತಾರೆ. ಇದರಿಂದ ಜೀರ್ಣಕ್ರಿಯೆಯು ವೇಗೊಳ್ಳುತ್ತದೆ ಎಂದು ಭಾವಿಸುತ್ತಾರೆ. ಆದರೆ ನಿಮಗೆ ಗೊತ್ತಾ? ಊಟವಾದ ತಕ್ಷಣ ಕಾಫಿ ಕುಡಿಯುವುದರಿಂದ ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮತ್ತು ಜೀರ್ಣಕ್ರಿಯೆಯು ದುರ್ಬಲವಾಗುತ್ತದೆ. ಇದಲ್ಲದೆ ಚಹಾ ಅಥವಾ ಕಾಫಿಯಲ್ಲಿರುವ ಟ್ಯಾನಿನ್ ಮತ್ತು ಕೆಫೀನ್ ಅಂಶ ಆಮ್ಲೀಯತೆ ಮತ್ತು ವಾಯು ಸಮಸ್ಯೆಯನ್ನು ಉಂಟುಮಾಡುತ್ತದೆ.
ಊಟದ ನಂತರ ಕಾಫಿ ಕುಡಿಯುವು ಅಭ್ಯಾಸವು ಹಲ್ಲುಗಳಿಗೆ ಹಾನಿಯುಂಟುಮಾಡಬಹುದು: ಕ್ಯಾಲ್ಸಿಯಂ ಸೇರಿದಂತೆ ಅಗತ್ಯ ಖನಿಜ ಹಾಗೂ ಪೋಷಕಾಂಶಗಳನ್ನು ಹೀರಿಕೊಳ್ಳುವ ನಿಮ್ಮ ದೇಹದ ಸಾಮರ್ಥ್ಯವು ಉಟವಾದ  ತಕ್ಷಣ ಕಾಫಿ ಕುಡಿಯುವ ಅಭ್ಯಾಸದಿಂದ ನಿಧಾನಗೊಳ್ಳಬಹುದು.  ಕಾಫಿ ಕುಡಿಯುವುದರಿಂದ ನಿಮ್ಮ ದೇಹವು ಕ್ಯಾಲ್ಸಿಯಂ ನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ಮತ್ತು ನಿಮ್ಮ ಆಹಾರವು ಅದನ್ನು ಸರಿದೂಗಿಸದಿದ್ದರೆ, ನಿಮ್ಮ ದೇಹವು ನಿಮ್ಮ ಮೂಳೆಗಳು ಮತ್ತು ಹಲ್ಲುಗಳಿಂದ ಕ್ಯಾಲ್ಸಿಯಂ ನ್ನು ಹೀರಿಕೊಳ್ಳಲು ಪ್ರಾರಂಭಿಸುತ್ತದೆ  ಮತ್ತು ಈ ಕಾರಣದಿಂದಾಗಿ ನಿಮ್ಮ ಹಲ್ಲುಗಳು ದುರ್ಬಲಗೊಳ್ಳುತ್ತದೆ.
ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ: ಊಟದ ಬಳಿಕ ಕಾಫಿ ಕುಡಿಯುವ ಅಭ್ಯಾಸವು ನಿಮ್ಮ ದೇಹದಲ್ಲಿನ ಕೊಲಸ್ಟ್ರಾಲ್ ಮಟ್ಟ ಹೆಚ್ಚಾಗಲು ಕಾರಣವಾಗಬಹುದು. ಕಾಫಿಯಲ್ಲಿ ಕಂಡುಬರುವ ತೈಲಾಂಶಗಳು  ಕೊಲೆಸ್ಟ್ರಾಲ್ ನಿಯಂತ್ರಿಸುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.  ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಾಘಾತ, ಪಾರ್ಶ್ವವಾಯುಗಳಂತಹ ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಊಟದ ಬಳಿಕ ಕಾಫಿ ಕುಡಿಯುವುದನ್ನು ನಿಲ್ಲಿಸಿ.
ಕೂದಲಿನ ಆರೋಗ್ಯ ಹದಗೆಡುತ್ತದೆ: ನಿಮ್ಮ ಆಹಾರವು ಸಮತೋಲಿತ ಮತ್ತು ಎಲ್ಲಾ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದರೂ ಸಹ, ಊಟ ಮಾಡಿದ  ತಕ್ಷಣವೇ ಕಾಫಿ ಕುಡಿಯುವ ಅಭ್ಯಾಸವು ನಿಮ್ಮ ಆರೋಗ್ಯವನ್ನು ಹದಗೆಡಿಸಬಹುದು. ಊಟವಾದ ತಕ್ಷಣ  ಕಾಫಿ ಕುಡಿಯುವುದರಿಂದ ಅನೇಕ ಪ್ರಮುಖ ಪೋಷಕಾಂಶಗಳನ್ನು  ಹೀರಿಕೊಳ್ಳುವ ನಿಮ್ಮ ದೇಹದ ಸಾಮರ್ಥ್ಯವು ಕಡಿಮೆಯಾಗುತ್ತದೆ. ಮುಖ್ಯವಾಗಿ ಇದರಿಂದ ಕಬ್ಬಿಣಾಂಶದ ಕೊರತೆ ಕಾಣಿಸಿಕೊಳ್ಳುತ್ತದೆ.  ಕಬ್ಬಿಣಾಂಶದ ಕೊರತೆಯುಂಟಾದಾಗ, ದೇಹದಲ್ಲಿನ ರಕ್ತಕ್ಕೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ, ಹಾಗೂ ದೇಹದಲ್ಲಿನ  ಜೀವಕೋಶಗಳನ್ನು ಸರಿಪಡಿಸುವ ಆಮ್ಲಜನಕಗಳನ್ನು ಸಾಗಿಸಲು   ಕಷ್ಟಕರವಾಗಬಹುದು.ಈ ಕಾರಣದಿಂದಾಗಿ ನಿಮ್ಮ ಕೂದಲಿನ ಆರೋಗ್ಯ ಹದಗೆಡಬಹುದು. ಇದರ ಪರಿಣಾಮವಾಗಿ ಕೂದಲು ಉದುರುವಿಕೆ ಸಮಸ್ಯೆಯು ಉಂಟಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ