Healthy Lifestyle Tips: ಬೇಸಿಗೆಯಲ್ಲಿ ತ್ವರಿತ ತೂಕ ನಷ್ಟಕ್ಕೆ ಈ ಜೀವನಶೈಲಿ ರೂಢಿಸಿಕೊಳ್ಳಿ

ಬೇಸಿಗೆಯಲ್ಲಿಯೂ ತೂಕ ನಷ್ಟಕ್ಕೆ ಯೋಗ್ಯವಾದ ಕೆಲವೊಂದು ವ್ಯಾಯಾಮ ಹಾಗೂ ಇನ್ನಿತರ ಚಟುವಟಿಕೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಇದು ಸುಡು ಬಿಸಿಲಿನಿಂದಲೂ ನಿಮ್ಮ ದೇಹವನ್ನು ತಂಪಾಗಿರಿಸುತ್ತದೆ ಮತ್ತು ತೂಕ ನಷ್ಟಕ್ಕೂ ಸಹಾಯಕವಾಗಿದೆ. ಆದ್ದರಿಂದ ಬೇಸಿಗೆಯಲ್ಲಿ ತ್ವರಿತ ತೂಕ ನಷ್ಟಕ್ಕೆ ಈ ಜೀವನಶೈಲಿ ರೂಢಿಸಿಕೊಳ್ಳಿ. 

Healthy Lifestyle Tips: ಬೇಸಿಗೆಯಲ್ಲಿ ತ್ವರಿತ ತೂಕ ನಷ್ಟಕ್ಕೆ ಈ ಜೀವನಶೈಲಿ ರೂಢಿಸಿಕೊಳ್ಳಿ
Follow us
ಅಕ್ಷತಾ ವರ್ಕಾಡಿ
|

Updated on: Apr 22, 2023 | 6:45 AM

ಬೇಸಿಗೆಯಲ್ಲಿ ಸುಡು ಬಿಸಿಲು, ಬೆವರಿನಿಂದ ಸಾಕಷ್ಟು ಜನರು ಮನೆಯಿಂದ ಹೊರಗೆ ಕಾಲಿಡಲಿ ಹಿಂಜರಿತ್ತಾರೆ. ಆದರೆ ಬೇಸಿಗೆಯಲ್ಲಿಯೂ ತೂಕ ನಷ್ಟಕ್ಕೆ ಯೋಗ್ಯವಾದ ಕೆಲವೊಂದು ವ್ಯಾಯಾಮ ಹಾಗೂ ಇನ್ನಿತರ ಚಟುವಟಿಕೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಇದು ಸುಡು ಬಿಸಿಲಿನಿಂದಲೂ ನಿಮ್ಮ ದೇಹವನ್ನು ತಂಪಾಗಿರಿಸುತ್ತದೆ ಮತ್ತು ತೂಕ ನಷ್ಟಕ್ಕೂ ಸಹಾಯಕವಾಗಿದೆ. ಆದ್ದರಿಂದ ಬೇಸಿಗೆಯಲ್ಲಿ ತ್ವರಿತ ತೂಕ ನಷ್ಟಕ್ಕೆ ಈ ಜೀವನಶೈಲಿ ರೂಢಿಸಿಕೊಳ್ಳಿ.

ಈಜುವಿಕೆ:

ಬೇಸಿಗೆಯಲ್ಲೂ ತೂಕ ಇಳಿಸಲು ಸಹಾಯಕವಾಗುವ ಒಂದು ಉತ್ತಮ ಚಟುವಟಿಕೆಯೆಂದರೆ ಈಜುಗಾರಿಕೆ. ಈಜುವಿಕೆ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಇಡೀ ದೇಹಕ್ಕೆ ವ್ಯಾಯಾಮವನ್ನು ನೀಡುವುದರಿಂದ ಸರಿಸುಮಾರು 1 ಗಂಟೆಗೆ 400 ಕ್ಯಾಲೋರಿಯನ್ನು ಸುಡುವಲ್ಲಿ ಈಜುವಿಕೆ ಸಹಾಯಕವಾಗಿದೆ.

ಇದನ್ನೂ ಓದಿ: ನಿಮ್ಮ ಸಂಬಂಧದಲ್ಲಿ ಗೌರವ ಕ್ರಮೇಣವಾಗಿ ಕಡಿಮೆಯಾಗುತ್ತಿರುವಂತೆ ಅನ್ನಿಸುತ್ತಿದೆಯೇ? ಈ ವಿಷಯಗಳನ್ನು ಗಮನಿಸಿ

ತೋಟಗಾರಿಕೆ:

ನಿಮ್ಮ ಮನೆಯ ಉದ್ಯಾನವನ್ನು ಸ್ವಚ್ಚಗೊಳಿಸುವುದು, ಗಿಡ ನೆಡುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ವಿಶೇಷವಾಗಿ ಬೇಸಿಗೆಯಲ್ಲಿ ತೋಟಗಾರಿಗೆ ಕೆಲಸವೂ ನಿಮ್ಮ ದೇಹಕ್ಕೆ ತಂಪಿನ ವಾತಾವರಣವನ್ನು ನೀಡುತ್ತದೆ. ಈ ಚಟುವಟಿಕೆಗಳು ಬೇಸಿಗೆಯಲ್ಲಿ ತೂಕ ನಷ್ಟಕ್ಕೂ ಉತ್ತಮ ಆಯ್ಕೆಯಾಗಿದೆ.

ಸೈಕ್ಲಿಂಗ್​​:

ಬೆಳಗ್ಗಿನ ಜಾವ ಅಥವಾ ಸಂಜೆಯ ಹೊತ್ತು ಕೆಲವು ದೂರದಷ್ಟು ಸೈಕ್ಲಿಂಗ್ ಮಾಡುವುದು ಉತ್ತಮ ಆಯ್ಕೆಯಾಗಿದೆ. ಸೈಕ್ಲಿಂಗ್​ ಮಾಡುವುದರಿಂದ ನಿಮ್ಮ ದೇಹ ದಣಿಯುತ್ತದೆ ಮತ್ತು ಬೆವರು ಬರುತ್ತದೆ. ನೀವು ಹೆಚ್ಚು ಬೆವರುವುದರಿಂದ ನಿಮ್ಮ ಅತಿಯಾದ ಬೊಜ್ಜು ಕರಗುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ತ್ವರಿತ ತೂಕ ನಷ್ಟಕ್ಕೆ ಸೂಕ್ತವಾದ ಚಟುವಟಿಕೆಗಳಲ್ಲೊಂದು ಸೈಕ್ಲಿಂಗ್​

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: