Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಟದ ನಂತರ ಮಾನಸಿಕ ತೃಪ್ತಿಯನ್ನು ಪಡೆಯಲು ಈ ಸಲಹೆಗಳನ್ನು ಪಾಲಿಸಿ

ಊಟ ಮಾಡಿದ ನಂತರ ಪಡೆಯುವ ಹೆಚ್ಚಿನ ಪ್ರಮಾಣದ ಮಾನಸಿಕ ತೃಪ್ತಿಯು ಅದು ನಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ. ಊಟದ ನಂತರ ನಮ್ಮ ಮಾನಸಿಕ ತೃಪ್ತಿಯನ್ನು ಹೆಚ್ಚಿಸಲು ಕೆಲವೊಂದು ಮಾರ್ಗಗಳಿವೆ. ಈ ಮಾರ್ಗಗಳನ್ನು ಅನುಸರಿಸುವ ಮೂಲಕ ದೇಹ ಮತ್ತು ಮನಸ್ಸು ಎರಡನ್ನು ಸಮಾನವಾಗಿ ನೀವು ಪೋಷಿಸಬಹುದು.

ಊಟದ ನಂತರ ಮಾನಸಿಕ ತೃಪ್ತಿಯನ್ನು ಪಡೆಯಲು ಈ ಸಲಹೆಗಳನ್ನು ಪಾಲಿಸಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 21, 2023 | 5:57 PM

ನಮ್ಮ ಹಿರಿಯರು ಯಾವಾಗಲೂ ಒಂದು ಮಾತನ್ನು ಹೇಳುತ್ತಾರೆ, ಊಟದ ಪ್ರತಿ ತುತ್ತನ್ನು ಸಂತೋಷದಿಂದ ಅನುಭವಿಸಿಕೊಂಡು ತಿಂದಾಗ ಮಾತ್ರ ಅದು ನಮ್ಮ ದೇಹಕ್ಕೆ ಸೇರುತ್ತದೆ ಮತ್ತು ಅದು ಮಾನಸಿಕ ತೃಪ್ತಿಯ ಭಾವನೆಯನ್ನು ನೀಡುತ್ತದೆ ಎಂದು. ರುಚಿಕರವಾದ ಊಟವು ಎಷ್ಟು ತೃಪ್ತಿಯನ್ನು ನೀಡುತ್ತದೆ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ನಾವು ಸೇವಿಸುವ ಆಹಾರಗಳು ನಮ್ಮ ದೇಹವನ್ನು ಪೋಷಿಸಲು ಎಷ್ಟು ಮುಖ್ಯವೋ, ಅದೇ ರೀತಿ ಮಾನಸಿಕ ಯೋಗಕ್ಷೇಮಕ್ಕೂ ಆಹಾರಗಳು ಅಷ್ಟೇ ಮುಖ್ಯ. ಹಾಗಾಗಿ ತೃಪ್ತಿದಾಯಕ ಊಟವನ್ನು ಸೇವನೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ನೀವು ಎಂದಾದರೂ ಊಟವನ್ನು ಸೇವಿಸಿದ ನಂತರ ಅತೃಪ್ತಿಯ ಭಾವನೆಯನ್ನು ಅನುಭವಿಸಿದ್ದೀರಾ?, ಊಟದ ನಂತರ ನಮ್ಮ ಮಾನಸಿಕ ತೃಪ್ತಿಯನ್ನು ಹೆಚ್ಚಿಸಲು ಕೆಲವೊಂದು ಮಾರ್ಗಗಳಿವೆ. ಈ ಮಾರ್ಗಗಳನ್ನು ಅನುಸರಿಸುವ ಮೂಲಕ ದೇಹ ಮತ್ತು ಮನಸ್ಸು ಎರಡನ್ನು ಸಮಾನವಾಗಿ ನೀವು ಪೋಷಿಸಬಹುದು.

ನಾವು ಸೇವಿಸುವ ಆಹಾರವು ನಿಜವಾದ ಸಂತೋಷದ ಅಡಿಪಾಯವಾಗಿದೆ, ಕೆಲವೊಮ್ಮೆ ಊಟದ ನಂತರ ನಾವು ಇನ್ನೂ ಹೆಚ್ಚಿನದ್ದನ್ನು ಬಯಸುತ್ತೇವೆ. ಹಾಗಾಗಿ ಪೂರ್ಣತೆಯ ಭಾವನೆ ಮತ್ತು ತೃಪ್ತಿಯ ಭಾವನೆಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ನೀವು ಊಟ ಮಾಡಿದ ನಂತರ ನಿಮಗೆ ನಿಮಗೆ ಹೊಟ್ಟೆ ತುಂಬಿದ ಅನುಭವವಾದರೆ ಅದು ದೈಹಿಕ ಸಂವೇದನೆಯಾಗಿದೆ. ಆದರೆ ತೃಪ್ತಿಯ ಭಾವನೆಯು ಅದೊಂದು ಮಾನಸಿಕ ಭಾವನೆಯಾಗಿದೆ. ನೀವು ನಿಮ್ಮ ಕಡು ಬಯಕೆಯ ಆಹಾರವನ್ನು ಸವಿದಾಗ ಈ ತೃಪ್ತಿಯ ಭಾವನೆಯು ಸಂಭವಿಸುತ್ತದೆ ಎಂದು ಇಂಟಿಗ್ರೇಟಿವ್ ನ್ಯೂಟ್ರಿಷನ್ ಹೆಲ್ತ್ ಕೋಚ್ ಮಲ್ಲಿಕಾ ಸಿಂಗ್ ಹೇಳುತ್ತಾರೆ. ಜೊತೆಗೆ ಊಟದ ನಂತರ ಮಾನಸಿಕವಾಗಿ ಹೆಚ್ಚು ತೃಪ್ತರಾಗಿರಲು ಕೆಲವೊಂದು ಮಾರ್ಗಗಳನ್ನು ಅವರು ಹೇಳಿದ್ದಾರೆ.

ಇದನ್ನೂ ಓದಿ:Fatty Liver Disease: ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಹೋಗಲಾಡಿಸಲು 5 ಆಹಾರ ಮತ್ತು ಜೀವನಶೈಲಿ ಸಲಹೆ

ಊಟದ ನಂತರ ಮಾನಸಿಕವಾಗಿ ಹೆಚ್ಚು ತೃಪ್ತಿಯನ್ನು ಅನುಭವಿಸುವ ಮಾರ್ಗಗಳು:

ನಿಧಾನವಾಗಿ ತಿನ್ನಿರಿ: ನೀವು ತಿನ್ನುವ ಆಹಾರಕ್ಕೆ ಅರ್ಹವಾದ ಸಮಯ ಮತ್ತು ಗಮನವನ್ನು ನೀಡಿ. ಒಂದಷ್ಟು ಗುಂಪಿನ ಜನರೊಂದಿಗೆ ಕುಳಿತು ಊಟ ಮಾಡಿದಾಗ ಅಥವಾ ಫೋನ್ ನೋಡಿಕೊಂಡು ಊಟ ಮಾಡಿದಾಗ, ಅದು ನಾವು ಕುಳಿತುಕೊಂಡು ನಿಧಾನವಾಗಿ ತಿನ್ನುತ್ತಾ ಊಟದ ಸಾರವನ್ನು ಅನುಭವಿಸುವ ಸಂತೋಷವನ್ನು ಕಸಿದುಕೊಳ್ಳುತ್ತದೆ. ಆದ್ದರಿಂದ ನೀವು ನಿಧಾನವಾಗಿ ಶಾಂತ ರೀತಿಯಲ್ಲಿ ಊಟದ ರುಚಿ, ಸುವಾಸನೆಯನ್ನು ಅನುಭವಿಸುತ್ತಾ ಪ್ರತಿಯೊಂದು ಊಟದ ತುತ್ತನ್ನು ಸೇವಿಸಿ. ಇದು ನಿಮಗೆ ಖಂಡಿತವಾಗಿಯೂ ತೃಪ್ತಿಯ ಭಾವನೆಯನ್ನು ನೀಡುತ್ತದೆ.

ಅರ್ಥಗರ್ಭಿತ ಆಹಾರವನ್ನು ಸೇವಿಸಿ: ಅರ್ಥಗರ್ಭಿತ ಆಹಾರಗಳು ನಿಮ್ಮ ದೇಹವನ್ನು ಪೋಷಿಸುವುದು ಮಾತ್ರವಲ್ಲದೆ, ಅದು ಪರಿಪೂರ್ಣತೆಯ ಭಾವನೆಯನ್ನು ಸಹ ಅನುಭವಿಸಲು ಸಹಾಯ ಮಾಡುತ್ತದೆ. ಒಂದು ವೇಳೆ ನೀವು ಇಷ್ಟದ ಆಹಾರವನ್ನು ಸೇವಿಸಲು ಬಯಸಿದರೆ, ಆದರೆ ನೀವು ತೂಕ ನಷ್ಟದ ಗುರಿಯನ್ನು ಹೊಂದಿದ್ದರೆ, ಪೋಷಕಾಂಶಗಳ ಲೆಕ್ಕಾಚಾರ ಮಾಡಿ ಸಣ್ಣ ಪ್ರಮಾಣದಲ್ಲಿ ಆಹಾರಗಳನ್ನು ಸೇವಿಸಿ.

ಸಾಕಷ್ಟು ಪ್ರೋಟೀನ್ ಸೇವಿಸಿ: ಪ್ರೋಟೀನ್ ಭರಿತ ಆಹಾರಗಳು ನಮಗೆ ತೃಪ್ತಿಯ ಭಾವನೆಯನ್ನು ನೀಡುತ್ತದೆ. ಅದು ಊಟದ ನಂತರ ಸಂತೋಷವನ್ನು ಕೂಡಾ ನೀಡುತ್ತದೆ. ಊಟದಲ್ಲಿ ಪ್ರೋಟೀನ್ ಮತ್ತು ಫೈಬರ್ ಅಂಶಗಳನ್ನು ಸೇರಿಸುವುದರಿಂದ ಅದು ನಾವು ಹೆಚ್ಚು ತೃಪ್ತಿಯನ್ನು ಹೊಂದಲು ಸಹಾಯ ಮಾಡುತ್ತದೆ. ಬರೀ ಸೇಬನ್ನು ಸೇವಿಸುವುದಕ್ಕಿಂತ ಕಡಲೆಕಾಯಿ ಬೆಣ್ಣೆಯ ಜೊತೆಗೆ ಸೇಬನ್ನು ಸೇವಿಸುವುದು ಹೆಚ್ಚು ತೃಪ್ತಿದಾಯಕವಾಗಿರುತ್ತದೆ.

ನಿರ್ಬಂಧಿತ ಆಹಾರಗಳಿಂದ ದೂರವಿರಿ: ನಮ್ಮ ಒಲವಿನ ಆಹಾರಗಳು ನಿರ್ಬಂಧಿತ ಆಹಾರಗಳಾಗಿರುತ್ತವೆ. ಅವುಗಳು ಆರೋಗ್ಯಕ್ಕೆ ಉತ್ತಮವಾಗಿರುವುದಿಲ್ಲ. ಆದ್ದರಿಂದ ನಿರ್ಬಂಧಿತ ಆಹಾರಗಳಿಂದ ದೂರವಿದ್ದು, ಆರೋಗ್ಯಕರ ಆಹಾರವನ್ನು ಸೇವಿಸಿದಾಗ ಅದು ನಮ್ಮ ಮನಸ್ಸಿಗೆ ಮಾತ್ರವಲ್ಲದೇ ದೇಹಕ್ಕೂ ತೃಪ್ತಿಯನ್ನು ನೀಡುತ್ತದೆ.

80/20 ನಿಯಮವನ್ನು ಅನುಸರಿಸಿ: ಕಾರ್ಬೋಹೈಡ್ರೇಟ್ ಗಳು ಮತ್ತು ನಿಮ್ಮ ನೆಚ್ಚಿನ ಆಹಾರಗಳನ್ನು ತೆಗೆದುಹಾಕುವ ಬದಲು, 80/20 ನಿಯಮವನ್ನು ಅನುಸರಿಸಿ. ಈ ನಿಯಮವು 20% ಪ್ರೀತಿ ಮತ್ತು 80% ಪೋಷಕಾಂಶಗಳನ್ನು ಒಳಗೊಂಡಿದೆ. ನಿಮ್ಮ ಪೋಷಕಾಂಶಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಜಂಕ್ ಫುಡ್ ಸೇವಿಸುವುದನ್ನು ತಪ್ಪಿಸಲು ಇದು ಒಂದು ಉತ್ತಮ ವಿಧಾನವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:56 pm, Fri, 21 April 23

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್