Silver Anklets Health Benefits: ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳೇನು?
ಬೆಳ್ಳಿ ಕಾಲ್ಗೆಜ್ಜೆಯನ್ನು ಧರಿಸುವುದು ಸಂಪ್ರದಾಯವಾಗಿದೆ. ಹಿಂದಿನ ಕಾಲದಿಂದಲೂ ಪ್ರತಿಯೊಬ್ಬ ಭಾರತೀಯ ನಾರಿಯು ತನ್ನ ಕಾಲುಗಳಿಗೆ ಬೆಳ್ಳಿ ಕಾಲ್ಗೆಜ್ಜೆಯನ್ನು ಧರಿಸುತ್ತಿದ್ದಳು. ಇದು ನಮ್ಮ ಕಾಲಿಗೆ ಸುಂದರ ನೋಟವನ್ನು ನೀಡುವುದು ಮಾತ್ರವಲ್ಲದೆ, ಇದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ಲಭಿಸುತ್ತದೆ. ಹಾಗಾಗರೆ ಬೆಳ್ಳಿ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ದೊರೆಯುವ ಆರೋಗ್ಯ ಪ್ರಯೋಜನಗಳಾವುವು ಎಂಬುದನ್ನು ನೋಡೋಣ.
ಭಾರತೀಯ ಸಂಸ್ಕೃತಿಯಲ್ಲಿ ಕಾಲ್ಗೆಜ್ಜೆಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಮಹಿಳೆಯರು ಬೆಳ್ಳಿ ಕಾಲ್ಗೆಜ್ಜೆಯನ್ನು ಧರಿಸುವುದು ಸಂಪ್ರದಾಯದ ಒಂದು ಭಾಗವಾಗಿದೆ. ಹಿಂದಿನ ಕಾಲದಿಂದಲೂ ಮಹಿಳೆಯರು ಬೆಳ್ಳಿ ಕಾಲ್ಗೆಜ್ಜೆಗಳನ್ನು ಧರಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಯುವತಿಯರು ಪಾಶ್ಚಿಮಾತ್ಯ ಫ್ಯಾಶನ್ಗೆ ಮರುಳಾಗಿ ಕಾಲ್ಗೆಜ್ಜೆಗಳನ್ನು ಧರಿಸಲು ಹಿಂದೇಟು ಹಾಕುತ್ತಿದ್ದಾರೆ. ಕಾಲ್ಗೆಜ್ಜೆ ಧರಿಸುವುದು ಕೇವಲ ಸಂಪ್ರದಾಯವಲ್ಲ.ಇದನ್ನು ಧರಿಸುವುದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಹೌದು ಕಾಲ್ಗೆಜ್ಜೆ ಕೇವಲ ನಮ್ಮ ಕಾಲಿನ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಅಲ್ಲದೆ ಕಾಲ್ಗೆಜ್ಜೆಯನ್ನು ಧರಿಸಿ ಮಹಿಳೆಯರು ಓಡಾಡುವಾಗ ಆ ಗೆಜ್ಜೆಯಿಂದ ಹೊರಹೊಮ್ಮುವ ಶಬ್ಧವು ಸುತ್ತಮುತ್ತ ಧನಾತ್ಮಕ ಶಕ್ತಿಯನ್ನು ರೂಪಿಸುತ್ತದೆ.
ತಜ್ಞರ ಪ್ರಕಾರ ಕಾಲ್ಗೆಜ್ಜೆ ಧರಿಸುವುದರಿಂದ ಅದು ಆಕ್ಯುಪ್ರೆಶರ್ ಪಾಯಿಂಟ್ಗಳನ್ನು ಕುಗ್ಗಿಸುತ್ತದೆ. ಇದರಿಂದ ಆರೋಗ್ಯಕ್ಕೂ ಹಲವಾರು ಪ್ರಯೋಜನಗಳು ಲಭಿಸುತ್ತದೆ. ಹಾಗೂ ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರುತ್ತಾರೆ. ಹಾಗಾದರೆ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ.
ಬೆಳ್ಳಿ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳು:
ಹಾರ್ಮೋನು ಸಮತೋಲನದಲ್ಲಿರುತ್ತದೆ:
ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿಯ ಕಾರಣ, ಹೆಚ್ಚಿನ ಮಹಿಳೆಯರು ಹಾರ್ಮೋನು ಅಸಮತೋಲನ ಸಮಸ್ಯೆಗಳಿಂದ ತೊಂದರೆಗೊಳಗಾಗುತ್ತಿದ್ದಾರೆ. ಈ ಕಾರಣದಿಂದ ಬಂಜೆತನ ಮತ್ತು ಮುಟ್ಟಿನ ಸಮಸ್ಯೆಗಳು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಮಹಿಳೆಯರನ್ನು ಕಾಡುತ್ತಿದೆ. ಬೆಳ್ಳಿ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಹೌದು ಬೆಳ್ಳಿ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಹಾರ್ಮೋನು ಸಮತೋಲನದಲ್ಲಿರುತ್ತದೆ ಮತ್ತು ನೀವು ಆರೋಗ್ಯಕರವಾಗಿರುತ್ತೀರಿ.
ಕಾಲು ನೋವಿಗೆ ಪರಿಹಾರ ನೀಡುತ್ತದೆ:
ಬಿಡುವಿಲ್ಲದ ಕೆಲಸದ ಕಾರಣದಿಂದಾಗಿ ಮಹಿಳೆಯರು ಸಾಮಾನ್ಯವಾಗಿ ಕಾಲುನೋವಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಈ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು. ಅಲ್ಲದೆ ಇದು ದೈಹಿಕ ದೌರ್ಬಲ್ಯವನ್ನು ದೂರ ಮಾಡುತ್ತದೆ.
ಮೂಳೆಗಳನ್ನು ಬಲಗೊಳಿಸುತ್ತದೆ:
ಬೆಳ್ಳಿ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ನಿಮ್ಮ ಮೂಳೆಗಳು ಬಲಗೊಳ್ಳುತ್ತದೆ. ಹೌದು ಕಾಲ್ಗೆಜ್ಜೆಗಳು ಪಾದದೊಂದಿಗೆ ಸಂಪರ್ಕಕ್ಕೆ ಬಂದಾಗ ಈ ಲೋಹದ ಅಂಶವು ಚರ್ಮಕ್ಕೆ ಉಜ್ಜಿಕೊಳ್ಳುತ್ತದೆ, ಮತ್ತು ಇದು ದೇಹವನ್ನು ಪ್ರವೇಶಿಸಿ ಮೂಳೆಗಳನ್ನು ಬಲಗೊಳಿಸುತ್ತದೆ.
ಹಿಮ್ಮಡಿಯ ಊತವನ್ನು ಕಡಿಮೆಗೊಳಿಸುತ್ತದೆ:
ಹೈ ಹೀಲ್ಸ್ ಧರಿಸಿದಾಗ ಸಾಮಾನ್ಯವಾಗಿ ಹಿಮ್ಮಡಿ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಕಾಲ್ಬೆರಳುಗಳಲ್ಲಿಯೂ ನೋವು ಕಾಣಿಸಿಕೊಳ್ಳುತ್ತದೆ. ಹೀಗಿರುವಾಗ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ದೇಹದ ರಕ್ತ ಪರಿಚಲನೆ ಸುಧಾರಣೆಯಾಗುತ್ತದೆ ಮತ್ತು ಪಾದ ಮತ್ತು ಹಿಮ್ಮಡಿಯ ಊತವೂ ಕಡಿಮೆಯಾಗುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಪೌಷ್ಟಿದಾಯಕ ಆಹಾರವನ್ನು ತಿನ್ನುವ ಮೂಲಕ ಮಾತ್ರವಲ್ಲದೆ ಬೆಳ್ಳಿ ಕಾಲ್ಗೆಜ್ಜೆಯನ್ನು ಧರಿಸುವುದರಿಂದಲೂ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಬೆಳ್ಳಿ ಕಾಲ್ಗೆಜ್ಜೆಗಳನ್ನು ಧರಿಸುವುದರಿಂದ ದುಗ್ಧರಸ ಗ್ರಂಥಿಗಳು ಕ್ರಿಯಾಶೀಲವಾಗುತ್ತದೆ. ಇದರಿಂದ ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಹಾಗೂ ಇದು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ದೇಹದ ಉಷ್ಣತೆಯನ್ನು ಸರಿದೂಗಿಸಲು ಸಹಕಾರಿ:
ಬೆಳ್ಳಿ ದೇಹವವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ ಮತ್ತು ಇದರಿಂದ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡಬಹುದು. ಅಲ್ಲದೆ ಬೆಳ್ಳಿಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದನ್ನು ಧರಿಸುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ.
ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ:
ಬೆಳ್ಳಿ ಕಾಲ್ಗೆಜ್ಜೆಯನ್ನು ಧರಿಸುವ ಮೂಲಕ ರಕ್ತ ಪರಿಚಲನೆಯನ್ನು ಸುಧಾರಿಸಬಹುದು. ಹಾಗೂ ಇದು ಪಾದಗಳಲ್ಲಿ ಊತ ಅಥವಾ ಜುಮ್ಮೆನಿಸುವಿಕೆಯಿಂದ ಪರಿಹಾರವನ್ನು ನೀಡುತ್ತದೆ. ಇಷ್ಟು ಮಾತ್ರವಲ್ಲದೆ ಇದು ಮುಟ್ಟಿನ ನೋವು, ಜಂಜೆತನ ಮುಂತಾದ ಸ್ತ್ರೀರೋಗ ಸಮಸ್ಯೆಗಳಿಂದ ಪರಿಹಾರವನ್ನು ಒದಗಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯು ಬೆಳ್ಳಿ ಕಾಲ್ಗೆಜ್ಜೆಯನ್ನು ಧರಿಸಬೇಕು.