AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health benefits of apple: ಪ್ರತಿದಿನ ಸೇಬು ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?

ಸೇಬುಗಳು ಅನೇಕರಿಗೆ ಅಚ್ಚುಮೆಚ್ಚು. ಇವು ಅತ್ಯಂತ ಪೌಷ್ಟಿಕವಾಗಿರುವುದರಿಂದ, ತಿನ್ನುವುದು ಒಳ್ಳೆಯದು. ಅಲ್ಲದೇ ಸೇಬು ಅತ್ಯಂತ ಸುಲಭವಾಗಿ ಲಭ್ಯವಿರುವ ಮತ್ತು ಅತ್ಯಂತ ರುಚಿಕರ ಹಣ್ಣುಗಳಲ್ಲಿ ಒಂದಾಗಿದೆ. ಹಾಗಾಗಿ ಸೇಬುಗಳ ಆರೋಗ್ಯ ಪ್ರಯೋಜನಗಳ ಬಗ್ಗೆಯೂ ತಿಳಿದು ಕೊಳ್ಳುವುದು ಮುಖ್ಯ. ಏನೆಲ್ಲಾ ಪ್ರಯೋಜನಗಳಿವೆ? ಇಲ್ಲಿದೆ ಮಾಹಿತಿ.

Health benefits of apple: ಪ್ರತಿದಿನ ಸೇಬು ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 11, 2023 | 4:36 PM

ದಿನವೂ ಒಂದು ಸೇಬು ತಿನ್ನಿ, ಇದು ವೈದ್ಯರನ್ನು ದೂರವಿರಿಸುತ್ತದೆ’ ಎಂಬ ಮಾತನ್ನು ನೀವು ಕೇಳಿರಬಹುದು. ಈ ಮಾತು ಜನಪ್ರಿಯವಾಗಲು ಹಲವಾರು ಕಾರಣಗಳಿವೆ. ಈ ರುಚಿಕರವಾದ ಹಣ್ಣು ಪೋಷಕಾಂಶಗಳಿಂದ ತುಂಬಿದೆ. ಜೀರ್ಣಕ್ರಿಯೆಯಿಂದ ಹಿಡಿದು ಚರ್ಮದ ಆರೋಗ್ಯದವರೆಗೆ ಸೇಬಿನ ಅನೇಕ ಆರೋಗ್ಯ ಪ್ರಯೋಜನಗಳಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೇಬು ತಿನ್ನುವುದರಿಂದ ಆಗುವ ಪ್ರಯೋಜನಗಳು ಯಾವುವು?

ಸೇಬು ಅತ್ಯಂತ ಸುಲಭವಾಗಿ ಲಭ್ಯವಿರುವ ಮತ್ತು ಅತ್ಯಂತ ಪೌಷ್ಟಿಕವಾದ ಹಣ್ಣುಗಳಲ್ಲಿ ಒಂದಾಗಿದೆ. ನೀವು ಸೇಬು ಮಾತ್ರ ಸೇವಿಸಬಹುದು ಅಥವಾ ಅದನ್ನು ತುಂಡು ತುಂಡಾಗಿ ಕತ್ತರಿಸಿ ಇತರ ಹಣ್ಣುಗಳೊಂದಿಗೆ ಸಲಾಡ್ ಮಾಡಿಯೂ ತಿನ್ನಬಹುದು ಅಥವಾ ಸೇಬುಗಳನ್ನು ಬಳಸಿ ಸಿಹಿ ತಿಂಡಿ ಮಾಡಬಹುದು. ಸೇಬುಗಳನ್ನು ತಿನ್ನುವ ವಿಧಾನಗಳು ಅನೇಕ. ಹಾಗೆಯೇ ಸೇಬುಗಳ ಆರೋಗ್ಯ ಪ್ರಯೋಜನಗಳು ಇದೆ.

1. ಸೇಬುಗಳು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತವೆ;

ಸೇಬು ಹಣ್ಣು, ಕರಗುವ ಮತ್ತು ಕರಗದ ನಾರಿನ ಉತ್ತಮ ಮೂಲವಾಗಿದೆ, ಇದು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಮಲಬದ್ಧತೆ ಮತ್ತು ಸಂಬಂಧಿತ ಪರಿಸ್ಥಿತಿಗಳನ್ನು ತಡೆಯುತ್ತದೆ ಎಂದು ಮುಂಬೈನ ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಹಾರ ತಜ್ಞ ಮತ್ತು ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಡಾ. ಉಷಾಕಿರಣ್ ಸಿಸೋಡಿಯಾ ಹೇಳುತ್ತಾರೆ.

2. ಉತ್ತಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ;

ಅಧಿಕ ಕೊಲೆಸ್ಟ್ರಾಲ್ ಮಟ್ಟವು ಯಾರಿಗೂ ಸಂತೋಷ ತರುವುದಿಲ್ಲ. ಆದರೆ ಸೇಬಿನ ಒಂದು ಆರೋಗ್ಯ ಪ್ರಯೋಜನವೆಂದರೆ, ವಿಶೇಷವಾಗಿ ಕೆಂಪು ಸೇಬು, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ. ಅಂದರೆ ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಸೇಬುಗಳು ಫ್ರೀ ರಾಡಿಕಲ್​​ಗಳ ವಿರುದ್ಧ ಹೋರಾಡುತ್ತವೆ;

ಪೋಷಕಾಂಶ ಭರಿತ ಸೇಬುಗಳಲ್ಲಿ ಕ್ವೆರ್ಸೆಟಿನ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿನ ಫ್ರೀ ರಾಡಿಕಲ್​ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4. ತೂಕ ನಿರ್ವಹಣೆ;

ಸೇಬುಗಳ ಹೆಚ್ಚಿನ ಫೈಬರ್ ಅಂಶವು ಆಹಾರ ಸೇವನೆಯ ಬಳಿಕ ಸಂತೃಪ್ತಿ ಮೂಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇದು ಬೊಜ್ಜಿನ ಸಾಧ್ಯತೆಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

5. ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ;

ನಾವು ಮೂಳೆಯ ಆರೋಗ್ಯದ ಬಗ್ಗೆ ಮಾತನಾಡಿದರೆ, ಹೆಚ್ಚಾಗಿ ಹಾಲು ಮತ್ತು ಡೈರಿ ಉತ್ಪನ್ನಗಳ ಬಗ್ಗೆ ಯೋಚಿಸುತ್ತೇವೆ. ಆದರೆ ಸೇಬುಗಳಲ್ಲಿ ಕಂಡುಬರುವ ಬೋರಾನ್ ನಂತಹ ಕೆಲವು ಸಂಯುಕ್ತಗಳು ಮೂಳೆಗಳನ್ನು ಬಲಪಡಿಸುತ್ತವೆ ಎಂದು ನಂಬಲಾಗಿದೆ.

6. ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ;

ಮಧುಮೇಹವು ನಿಧಾನವಾಗಿ ಅನೇಕರ ಜೀವನ ಹಿಂಡುತ್ತಿದೆ. ಹಾಗಾಗಿ ಸೇಬುಗಳನ್ನು ಸೇವಿಸುವುದರಿಂದ ಟೈಪ್ 2 ಮಧುಮೇಹದ ಕಡಿಮೆ ಅಪಾಯದೊಂದಿಗೆ ಸಂಬಂಧ ಹೊಂದಿರಬಹುದು. ಇದು ಬಹುಶಃ ಅವುಗಳ ಫೈಬರ್ ಮತ್ತು ಉತ್ಕರ್ಷಣ ನಿರೋಧಕ ಅಂಶದಿಂದಾಗಿರಬಹುದು ಎಂದು ತಜ್ಞರು ಹೇಳುತ್ತಾರೆ.

7. ಚರ್ಮದ ಆರೋಗ್ಯ;

ಸೇಬುಗಳಲ್ಲಿ ಕಂಡುಬರುವ ವಿಟಮಿನ್ ಸಿ ಆರೋಗ್ಯಕರ ಕಾಲಜನ್ ಉತ್ಪಾದನೆಗೆ ಕೊಡುಗೆ ನೀಡುತ್ತದೆ, ಇದು ಚರ್ಮದ ಸ್ಥಿತಿಸ್ಥಾಪಕತ್ವ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ಆದ್ದರಿಂದ ಸೇಬುಗಳು ನಿಮಗೆ ಕೆಲವು ರೀತಿಯಲ್ಲಿ ಯೌವನದ ನೋಟವನ್ನು ನೀಡಲು ಸಹಾಯ ಮಾಡುತ್ತದೆ. ಜೊತೆಗೆ ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ.

ಇದನ್ನೂ ಓದಿ:ಊಟಕ್ಕೆ ಮುಂಚೆ ಬಾದಾಮಿ ತಿಂದರೆ ಆಗುವ ಅರೋಗ್ಯ ಪ್ರಯೋಜನಗಳು ಇಲ್ಲಿವೆ

8. ಉಸಿರಾಟದ ಸಮಸ್ಯೆಯನ್ನು ಪರಿಹರಿಸುತ್ತದೆ;

ಉಸಿರಾಟದ ಸಮಸ್ಯೆಗಳಿಗೆ ಮಾಲಿನ್ಯ ಅಥವಾ ಇತರ ಅಂಶಗಳನ್ನು ನೀವು ದೂಷಿಸಬಹುದು. ಹಾಗಾಗಿ ಸೇಬು ಸೇವನೆಯು ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಉಸಿರಾಟದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

9. ದೇಹವನ್ನು ಹೈಡ್ರೇಟ್ ಮಾಡುತ್ತದೆ;

ಹಣ್ಣುಗಳು ಅಥವಾ ತರಕಾರಿಗಳನ್ನು ಹೈಡ್ರೇಟ್ ಮಾಡುವುದು ಕಲ್ಲಂಗಡಿ ಅಥವಾ ಸೌತೆಕಾಯಿ ಮಾತ್ರವಲ್ಲ. ಸೇಬುಗಳಲ್ಲಿ ಹೆಚ್ಚಿನ ನೀರಿನ ಅಂಶವಿದೆ, ಇದು ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ ಎಂದು ಡಾ. ಸಿಸೋಡಿಯಾ ಹೇಳುತ್ತಾರೆ.

ದಿನಕ್ಕೆ ಎಷ್ಟು ಸೇಬು ಹಣ್ಣನ್ನು ತಿನ್ನುವುದು ಉತ್ತಮ?

ಒಂದು ದಿನದಲ್ಲಿ ಎಷ್ಟು ಸೇಬುಗಳನ್ನು ತಿನ್ನಬಹುದು ಎಂಬುದಕ್ಕೆ ಯಾವುದೇ ಕಟ್ಟುನಿಟ್ಟಾದ ಮಿತಿಯಿಲ್ಲ ಎಂದು ತಜ್ಞರು ಹೇಳುತ್ತಾರೆ. ಜೊತೆಗೆ ಆರೋಗ್ಯಕರ ಆಹಾರದಂತೆ, ಅವುಗಳನ್ನು ಸಮತೋಲಿತ ಆಹಾರದ ಭಾಗವಾಗಿ ತಿನ್ನಬೇಕು. ಸರಾಸರಿ, ದಿನಕ್ಕೆ ಒಂದು ಅಥವಾ ಎರಡು ಸೇಬುಗಳನ್ನು ಸೇವಿಸುವುದು ಸಾಮಾನ್ಯ ಮತ್ತು ಹೆಚ್ಚಿನ ಜನರಿಗೆ ಪ್ರಯೋಜನಕಾರಿಯೂ ಆಗಿದೆ. ಸೇಬುಗಳು ಶಕ್ತಿಯ ತ್ವರಿತ ಮೂಲವಾಗಿದೆ, ಏಕೆಂದರೆ ಅವು ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತವೆ, ಅದು ನಿಮ್ಮ ದಿನವನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಬೆಳಿಗ್ಗೆ ಒಂದು ಸೇಬು ತಿನ್ನುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ದಿನವಿಡೀ ಉತ್ತೇಜಿಸುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಸೇಬು ಸೇವಿಸಿದರೆ ಕೆಲವರು ಅಸ್ವಸ್ಥತೆ ಅಥವಾ ಆಮ್ಲೀಯತೆಯನ್ನು ಅನುಭವಿಸಬಹುದು. ಆದ್ದರಿಂದ, ನಿಮಗೆ ಹೊಟ್ಟೆಯ ಸಮಸ್ಯೆ ಇದ್ದರೆ, ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿನ್ನದಿರಲು ಪ್ರಯತ್ನಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:28 pm, Mon, 11 September 23

ಶಿವರಾಜ್​ ಕುಮಾರ್​ ಬಗ್ಗೆ ಹಗುರ ಮಾತುಗಳ ಸಹಿಸಲ್ಲ: ಬೇಳೂರು ಗೋಪಾಲಕೃಷ್ಣ
ಶಿವರಾಜ್​ ಕುಮಾರ್​ ಬಗ್ಗೆ ಹಗುರ ಮಾತುಗಳ ಸಹಿಸಲ್ಲ: ಬೇಳೂರು ಗೋಪಾಲಕೃಷ್ಣ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಕ್ರಿಮಿನಲ್​ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಕಮಲ್ ಹೇಳಿಕೆಯನ್ನು ಭಾವುಕವಾಗಿ ನೋಡುವ ಅಗತ್ಯವಿಲ್ಲ: ಕಿಶೋರ್
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್