AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Best Breads In The World: ಜಗತ್ತಿನ 50 ಬೆಸ್ಟ್ ಬ್ರೆಡ್​ಗಳಲ್ಲಿ ಭಾರತದ ನಾನ್, ಕುಲ್ಚಾ, ರೋಟಿಗೂ ಸ್ಥಾನ

ಜಗತ್ತಿನ ಬೆಸ್ಟ್​ ಬ್ರೆಡ್​ಗಳ ಪಟ್ಟಿಯನ್ನು ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ಬಿಡುಗಡೆ ಮಾಡಿದೆ. ಬೇರೆ ದೇಶಗಳ ರೋಟಿಗಳಿಗಿಂತ ಭಾರತದ ರೋಟಿಗಳು ವಿವಿಧ ರೂಪ, ಗಾತ್ರ, ರುಚಿಯನ್ನು ಹೊಂದಿರುತ್ತವೆ. ವಿಶ್ವದ 50 ಅತ್ಯುತ್ತಮ ಬ್ರೆಡ್‌ಗಳ ಪೈಕಿ 5 ಭಾರತೀಯ ಬ್ರೆಡ್‌ಗಳು ಕಾಣಿಸಿಕೊಂಡಿರುವುದು ಹೆಮ್ಮೆಯ ಸಂಗತಿ.

Best Breads In The World: ಜಗತ್ತಿನ 50 ಬೆಸ್ಟ್ ಬ್ರೆಡ್​ಗಳಲ್ಲಿ ಭಾರತದ ನಾನ್, ಕುಲ್ಚಾ, ರೋಟಿಗೂ ಸ್ಥಾನ
ರೋಟಿImage Credit source: pexels.com
ಸುಷ್ಮಾ ಚಕ್ರೆ
|

Updated on: Sep 11, 2023 | 11:26 AM

Share

ಉತ್ತರ ಭಾರತೀಯ ಆಹಾರದಲ್ಲಿ ಬ್ರೆಡ್​ಗಳು ಮುಖ್ಯ ಪಾತ್ರ ವಹಿಸಿವೆ. ನಾರ್ತ್​ ಇಂಡಿಯನ್ ರೆಸ್ಟೋರೆಂಟ್​ಗೆ ಹೋದರೆ ರೋಟಿ, ನಾನ್, ಕುಲ್ಚಾ ಬ್ರೆಡ್‌ಗಳನ್ನು ತಿನ್ನದೇ ಬರುವವರು ಬಹಳ ಕಡಿಮೆ. ಈ ಬ್ರೆಡ್​ಗಳಿಗೆ ಸರಿಯಾದ ಕಾಂಬಿನೇಷನ್ ಇದ್ದರೆ ಅದರ ರುಚಿಯೇ ಬೇರೆ. ಭಾರತದ ಈ ರೋಟಿಗಳು ಜಗತ್ತಿನುದ್ದಕ್ಕೂ ತನ್ನ ರುಚಿಯನ್ನು ಪಸರಿಸಿದೆ. ಏಕೆಂದರೆ ಬೇರೆ ದೇಶಗಳ ರೋಟಿಗಳಿಗಿಂತ ಭಾರತದ ರೋಟಿಗಳು ವಿವಿಧ ರೂಪ, ಗಾತ್ರ, ರುಚಿಯನ್ನು ಹೊಂದಿರುತ್ತವೆ.

ಜಗತ್ತಿನ ಬೆಸ್ಟ್​ ಬ್ರೆಡ್​ಗಳ ಪಟ್ಟಿಯನ್ನು ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್ ಬಿಡುಗಡೆ ಮಾಡಿದೆ. ವಿಶ್ವದ 50 ಅತ್ಯುತ್ತಮ ಬ್ರೆಡ್‌ಗಳ ಪೈಕಿ 5 ಭಾರತೀಯ ಬ್ರೆಡ್‌ಗಳು ಕಾಣಿಸಿಕೊಂಡಿರುವುದು ಹೆಮ್ಮೆಯ ಸಂಗತಿ.

View this post on Instagram

A post shared by TasteAtlas (@tasteatlas)

ಇದನ್ನೂ ಓದಿ: ನೀವು ಈ ಅನಾರೋಗ್ಯದಿಂದ ಬಳಲುತ್ತಿದ್ದರೆ ರೋಟಿ ಬದಲು ಬಿಳಿ ಅನ್ನ ಸೇವಿಸಿ

ಬಟರ್ ಗಾರ್ಲಿಕ್ ನಾನ್ ಈ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಬಟರ್ ಗಾರ್ಲಿಕ್ ನಾನ್ ಅನ್ನು ಟೇಸ್ಟ್ ಅಟ್ಲಾಸ್ ಈ ಹಿಂದೆ ವಿಶ್ವದ 50 ಅತ್ಯುತ್ತಮ ಫ್ಲಾಟ್‌ಬ್ರೆಡ್‌ಗಳಲ್ಲಿ ಆಯ್ಕೆ ಮಾಡಿತ್ತು. ಆ ಪಟ್ಟಿಯಲ್ಲಿ ಇದು ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಈ ಹಿಂದಿನ ಪಟ್ಟಿಯಲ್ಲಿ 4ನೇ ಅತ್ಯುತ್ತಮ ಫ್ಲಾಟ್‌ಬ್ರೆಡ್ ಎಂದು ಹೆಸರಿಸಲಾಗಿದ್ದ ಪ್ಲೇನ್ ನಾನ್ ಈ ಬಾರಿ 8ನೇ ಸ್ಥಾನ ಪಡೆದಿದೆ.

ಪರಾಟ ಕೂಡ ಈ ಎರಡೂ ಪಟ್ಟಿಗಳಲ್ಲಿ ಸ್ಥಾನವನ್ನು ಪಡೆದಿದೆ. ಉತ್ತರ ಭಾರತದ ಬಹುತೇಕ ಕಡೆ ಬೆಳಗಿನ ಉಪಾಹಾರಕ್ಕೆ ಪರಾಟ, ಆಲೂ ಪರಾಟವನ್ನು ಬಳಸಲಾಗುತ್ತದೆ. ಅಮೃತಸರಿ ಕುಲ್ಚಾ ಈ ಬಾರಿಯ ಪಟ್ಟಿಯಲ್ಲಿ 27ನೇ ಸ್ಥಾನದಲ್ಲಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ