Guava Leaves: ಪೇರಳೆ ಎಲೆಗಳಿಂದ ನಿಜವಾಗಿಯೂ ತೂಕ ಕಳೆದುಕೊಳ್ಳಬಹುದೇ? ಇಲ್ಲಿದೆ ಮಾಹಿತಿ

| Updated By: ನಯನಾ ರಾಜೀವ್

Updated on: Sep 25, 2022 | 9:51 AM

ಪೇರಳೆ( Guava)ಯನ್ನು ವೈಜ್ಞಾನಿಕ ಭಾಷೆಯಲ್ಲಿ ಪಿಸಿಡಿಯಮ್ ಗುಜವಾ ಎಂದು ಕರೆಯಲಾಗುತ್ತದೆ. ಇದು ಮೂಲತಃ ಮಧ್ಯ ಅಮೇರಿಕ, ದಕ್ಷಿಣ ಅಮೇರಿಕ, ಕೆರಿಬಿಯನ್ ಮತ್ತು ಮೆಕ್ಸಿಕೊದ ಸಸ್ಯವಾಗಿದೆ

Guava Leaves: ಪೇರಳೆ ಎಲೆಗಳಿಂದ ನಿಜವಾಗಿಯೂ ತೂಕ ಕಳೆದುಕೊಳ್ಳಬಹುದೇ? ಇಲ್ಲಿದೆ ಮಾಹಿತಿ
Guava
Follow us on

ಪೇರಳೆ( Guava)ಯನ್ನು ವೈಜ್ಞಾನಿಕ ಭಾಷೆಯಲ್ಲಿ ಪಿಸಿಡಿಯಮ್ ಗುಜವಾ ಎಂದು ಕರೆಯಲಾಗುತ್ತದೆ. ಇದು ಮೂಲತಃ ಮಧ್ಯ ಅಮೇರಿಕ, ದಕ್ಷಿಣ ಅಮೇರಿಕ, ಕೆರಿಬಿಯನ್ ಮತ್ತು ಮೆಕ್ಸಿಕೊದ ಸಸ್ಯವಾಗಿದೆ. ಇದರ ಹಣ್ಣುಗಳು ಅಂಡಾಕಾರದ ಮತ್ತು ಹಳದಿ-ಹಸಿರು ಬಣ್ಣದಲ್ಲಿರುತ್ತವೆ, ಅದರ ಒಳಭಾಗ ಅಂದರೆ ತಿರುಳು ಕೆಂಪು ಮತ್ತು ಬಿಳಿಯಾಗಿರುತ್ತದೆ, ಅದರ ಎಲೆಗಳು ಉದ್ದ ಮತ್ತು ಪ್ರಕಾಶಮಾನವಾದ ಹಸಿರು ಬಣ್ಣವನ್ನು ಹೊಂದಿರುತ್ತವೆ.

ಈ ಹಣ್ಣು ಪ್ರಪಂಚದಾದ್ಯಂತ ಜನಪ್ರಿಯವಾಗಿದ್ದರೂ, ಇದರ ಎಲೆಗಳು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ.
ಪೇರಳೆ ಎಲೆಗಳನ್ನು ಅನೇಕ ಕಾಯಿಲೆಗಳಿಗೆ ಸಾಂಪ್ರದಾಯಿಕ ಔಷಧಿಯಾಗಿ ಬಳಸಲಾಗುತ್ತದೆ.

ಪೇರಳೆ ಎಲೆಗಳು ತೂಕವನ್ನು ಕಡಿಮೆ ಮಾಡುತ್ತವೆಯೇ?
ಪೇರಳೆ ಎಲೆಗಳು ತೂಕವನ್ನು ಕಡಿಮೆ ಮಾಡಲು ಉಪಯುಕ್ತವೆಂದು ನೀವು ಕೇಳಿರಬಹುದು, ಆದರೆ ಇದು ಯಾವುದಾದರೂ ವೈಜ್ಞಾನಿಕ ಆಧಾರವನ್ನು ಹೊಂದಿದೆಯೇ. ಪೇರಳೆ ಎಲೆಗಳು ತೂಕ ಇಳಿಸಲು ಸಹಾಯ ಮಾಡುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳೋಣ.

ಸಂಶೋಧನೆ ಏನು ಹೇಳುತ್ತದೆ?
ಇಲ್ಲಿಯವರೆಗೆ, ಯಾವುದೇ ಪ್ರಕಟಿತ ಅಧ್ಯಯನಗಳು ಪೇರಳೆ ಎಲೆಯ ಚಹಾವನ್ನು ಕುಡಿಯುವುದು ಅಥವಾ ಪೇರಳೆ ಎಲೆಗಳನ್ನು ಸೇವಿಸುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಸೂಚಿಸಿಲ್ಲ.
ಪೇರಳೆ ಎಲೆಗಳು ರಕ್ತದ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಇಲಿಗಳ ಮೇಲೆ ನಡೆಸಿದ ಕೆಲವು ಸಂಶೋಧನೆಗಳು ಸೂಚಿಸುತ್ತವೆಯಾದರೂ, ಈ ಫಲಿತಾಂಶಗಳನ್ನು ಮನುಷ್ಯರಿಗೆ ಅನ್ವಯಿಸಲಾಗುವುದಿಲ್ಲ ಎಂದು ಸಂಶೋಧನೆ ಹೇಳುತ್ತದೆ.

ತೂಕ ನಷ್ಟ ಎಷ್ಟು ನಿಜ?
ಕ್ಯಾಟೆಚಿನ್, ಕ್ವೆರ್ಸೆಟಿನ್ ಮತ್ತು ಗ್ಯಾಲಿಕ್ ಆಸಿಡ್ ಸೇರಿದಂತೆ ಪೇರಳೆ ಎಲೆಗಳ ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುತ್ತದೆ, ತೂಕ ನಷ್ಟವೂ ಆಗುತ್ತದೆ ಎಂದು ಸಂಶೋಧನೆ ಹೇಳಿದೆ. ಆದಾಗ್ಯೂ, ಪೇರಳೆ ಎಲೆಯ ಚಹಾವು ಈ ಸಂಯುಕ್ತಗಳನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಒದಗಿಸುತ್ತದೆ.

ಇದರ ಜೊತೆಗೆ, ಈ ಎಲೆಗಳಲ್ಲಿರುವ ಉತ್ಕರ್ಷಣ ನಿರೋಧಕಗಳ ಸೇವನೆಯ ಮೂಲಕ ತೂಕ ನಷ್ಟವನ್ನು ಯಾವುದೇ ಸಂಶೋಧನೆ ಬೆಂಬಲಿಸುವುದಿಲ್ಲ.

ಗಿಡಮೂಲಿಕೆ ಚಹಾವು ಪ್ರಯೋಜನಕಾರಿಯಾಗಿದೆ
ಪೇರಳೆ ಎಲೆಗಳು ಯಾವಾಗಲೂ ತೂಕ ನಷ್ಟಕ್ಕೆ ಕೊಡುಗೆ ನೀಡುತ್ತವೆ ಎಂದು ಹೇಳಲಾಗುತ್ತದೆ, ಆದರೆ ಯಾವುದೇ ವೈಜ್ಞಾನಿಕ ಅಧ್ಯಯನವು ಇದು ಸತ್ಯ ಎಂದು ನಂಬಿಲ್ಲ, ಆದಾಗ್ಯೂ, ನೀವು ಸಕ್ಕರೆ ಪಾನೀಯಗಳ ಬದಲಿಗೆ ಗಿಡಮೂಲಿಕೆ ಚಹಾವನ್ನು ಸೇವಿಸಿದಾಗ ನೀವು ತೂಕವನ್ನು ಕಳೆದುಕೊಳ್ಳಬಹುದು.

ಈ ಸಂದರ್ಭದಲ್ಲಿ, ಪೇರಳೆ ಎಲೆಯ ಚಹಾವು ನಿಮಗೆ ಪರೋಕ್ಷವಾಗಿ ಸಹಾಯ ಮಾಡುತ್ತದೆ, ಆದರೆ ಇದನ್ನು ಪರಿಣಾಮಕಾರಿ ಪರಿಹಾರವೆಂದು ಪರಿಗಣಿಸಬೇಡಿ ಎಂದು ಹೇಳಿದೆ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:50 am, Sun, 25 September 22