Mental Health: ವ್ಯಕ್ತಿಯು ಈ 4 ಮಾನಸಿಕ ಸ್ಥಿತಿಯಲ್ಲಿದ್ದಾಗ, ತನಗೆ ತಾನೇ ಹಾನಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು

ಕೇವಲ ದೈಹಿಕವಾಗಿ ಬಲಶಾಲಿಯಾಗಿರುವುದರಿಂದ ನಮ್ಮ ಆರೋಗ್ಯವು ಉತ್ತಮವಾಗಿರುವುದಿಲ್ಲ, ಮಾನಸಿಕವಾಗಿಯೂ ಸದೃಢರಾಗಿರಬೇಕು. ನಾವು ಮಾನಸಿಕವಾಗಿ ದುರ್ಬಲರಾದಾಗ, ಅದು ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಪರಿಣಾಮ ಬೀರುತ್ತದೆ.

Mental Health: ವ್ಯಕ್ತಿಯು ಈ 4 ಮಾನಸಿಕ ಸ್ಥಿತಿಯಲ್ಲಿದ್ದಾಗ, ತನಗೆ ತಾನೇ ಹಾನಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು
Mental Health
Follow us
TV9 Web
| Updated By: ನಯನಾ ರಾಜೀವ್

Updated on: Sep 25, 2022 | 12:27 PM

ಕೇವಲ ದೈಹಿಕವಾಗಿ ಬಲಶಾಲಿಯಾಗಿರುವುದರಿಂದ ನಮ್ಮ ಆರೋಗ್ಯವು ಉತ್ತಮವಾಗಿರುವುದಿಲ್ಲ, ಮಾನಸಿಕವಾಗಿಯೂ ಸದೃಢರಾಗಿರಬೇಕು. ನಾವು ಮಾನಸಿಕವಾಗಿ ದುರ್ಬಲರಾದಾಗ, ಅದು ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಮಾನಸಿಕ ಸಮಸ್ಯೆಗಳು ತುಂಬಾ ಹೆಚ್ಚಾಗುತ್ತವೆ, ಜನರು ತಮ್ಮನ್ನು ತಾವು ಹಾನಿ ಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ.

ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ತನಗೆ ತಾನೇ ಹಾನಿ ಮಾಡಿಕೊಳ್ಳುವುದು ಸಾಮಾನ್ಯ ಸಮಸ್ಯೆಯಲ್ಲ, ಸ್ವಯಂ ಹಾನಿಯು ಮಾನಸಿಕ ನೋವು ಅಥವಾ ಮಾನಸಿಕ ದೌರ್ಬಲ್ಯದ ದೊಡ್ಡ ಲಕ್ಷಣಗಳಲ್ಲಿ ಒಂದಾಗಿದೆ.

ಮಾನಸಿಕವಾಗಿ ದುರ್ಬಲ ಜನರು ಕೆಲವೊಮ್ಮೆ ತಮ್ಮನ್ನು ತಾವು ಗಂಭೀರ ರೀತಿಯಲ್ಲಿ ಹಾನಿಗೊಳಿಸಿಕೊಳ್ಳುತ್ತಾರೆ, ಇದರ ಹಿಂದಿನ ದೊಡ್ಡ ಕಾರಣವೆಂದರೆ ಅವರು ಎದುರಿಸಿದ ಸನ್ನಿವೇಶಗಳು.

ಸ್ವಯಂ ಹಾನಿ ಮಾಡುವ ಮಾನಸಿಕ ಪರಿಸ್ಥಿತಿಗಳು ಬಾರ್ಡರ್‌ಲೈನ್ ಪರ್ಸನಾಲಿಟಿ ಡಿಸಾರ್ಡರ್ (BPD): ಭಾವನೆಗಳನ್ನು ನಿಯಂತ್ರಿಸುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ನಿರ್ದಿಷ್ಟವಾಗಿ ಪರಿಣಾಮ ಬೀರುವ ಬಾರ್ಡರ್ ಲೈನ್ ಮಾನಸಿಕ ಅಸ್ವಸ್ಥತೆ. ಈ ಕಾರಣದಿಂದಾಗಿ, ಈ ಜನರ ನಡವಳಿಕೆ ಬದಲಾಗುತ್ತದೆ, ಈ ಸಮಸ್ಯೆಯಿಂದಾಗಿ ನಾಲ್ಕು ಜನರ ಜತೆಗೆ ಬೆರೆಯುವುದಿಲ್ಲ.

ಅವರಲ್ಲಿ ಸಾರ್ವಕಾಲಿಕ ಅನಿಶ್ಚಿತತೆಯ ಭಾವನೆ ಇರುತ್ತದೆ. ಅಂತಹ ಜನರು ಯಾವಾಗಲೂ ಅಜಾಗರೂಕತೆಯಿಂದ ವರ್ತಿಸುತ್ತಾರೆ. ಹೆಚ್ಚಿನ ಜನರು ಭಾವನಾತ್ಮಕ, ದೈಹಿಕ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿ ಇಂತಹ ಮನಸ್ಥಿತಿ ಹೊಂದುತ್ತಾರೆ. ಅಂತಹ ಜನರು ಯಾವಾಗ ಬೇಕಾದರೂ ಸ್ವಯಂ ಹಾನಿ ಮಾಡಿಕೊಳ್ಳಬಹುದು.

ಖಿನ್ನತೆ: ಇಂದು ಖಿನ್ನತೆ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಇದು ಅತ್ಯಂತ ಸಾಮಾನ್ಯ ಮಾನಸಿಕ ಕಾಯಿಲೆಯಾಗಿ ಮಾರ್ಪಟ್ಟಿದೆ. ಇದರಿಂದ ನರಳುತ್ತಿರುವ ಇಂತಹ ಅನೇಕ ಜನರನ್ನು ನಿಮ್ಮ ಸುತ್ತ ನೋಡುತ್ತಿರುತ್ತೀರಿ. ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯು ಆಗಾಗ ತನಗೆ ತಾನೇ ಹಾನಿ ಮಾಡಿಕೊಳ್ಳಲು ಪ್ರಾರಂಭಿಸುತ್ತಾನೆ. ಖಿನ್ನತೆಯು ಕೆಲವೊಮ್ಮೆ ಇತರ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ನಡವಳಿಕೆಯಲ್ಲಿ ಕಿರಿಕಿರಿ, ಸದಾ ದುಃಖ, ಚಡಪಡಿಕೆ, ಸದಾ ಹತಾಶೆ, ಸುಸ್ತು, ಯಾವುದೇ ಕೆಲಸದಲ್ಲಿ ಆಸಕ್ತಿ ಇಲ್ಲದಿರುವುದು, ನಿದ್ರಾಹೀನತೆ, ಈ ಎಲ್ಲಾ ಲಕ್ಷಣಗಳು ಖಿನ್ನತೆಯನ್ನು ತೋರಿಸುತ್ತವೆ.

ಒತ್ತಡ: ಯಾವುದೇ ರೀತಿಯ ಒತ್ತಡವು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ, ಅದು ನಿಮ್ಮ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕಿರಿಕಿರಿ, ಚಡಪಡಿಕೆ, ಏಕಾಗ್ರತೆಯ ಕೊರತೆ, ನಿರಂತರ ಆಲೋಚನೆ, ಕೆಟ್ಟ ಆಲೋಚನೆಗಳು, ನಿದ್ರಾಹೀನತೆ ಒತ್ತಡದಲ್ಲಿರುವ ಲಕ್ಷಣಗಳಾಗಿವೆ.

ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್: ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ (ಪಿಟಿಎಸ್ ಡಿ) ಒಂದು ಮಾನಸಿಕ ಅಸ್ವಸ್ಥತೆಯಾಗಿದೆ. ಇದರಿಂದ ಬಳಲುತ್ತಿರುವ ವ್ಯಕ್ತಿಯು ವರ್ತಮಾನದಲ್ಲಿ ತನಗೆ ಹಿಂದೆ ಸಂಭವಿಸಿದ ಘಟನೆಗಳಿಂದ ವಿಚಲಿತನಾಗಿ ಪ್ರತಿಕ್ರಿಯಿಸುತ್ತಾನೆ. ಅಂತಹ ಮಾನಸಿಕ ಅಸ್ವಸ್ಥತೆಯಿಂದಾಗಿ, ವ್ಯಕ್ತಿಯು ತನ್ನ ಹಳೆಯ ವಿಷಯಗಳನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾನೆ ಮತ್ತು ಅವರೊದಿಗೆ ಅಸಮಾಧಾನಗೊಳ್ಳುವ ಮೂಲಕ ತನಗೆ ತಾನೇ ಹಾನಿ ಮಾಡಿಕೊಳ್ಳುತ್ತಾನೆ. ಅಂತಹ ಜನರ ನಡವಳಿಕೆಯು ಕಿರಿಕಿರಿಯುಂಟುಮಾಡುತ್ತದೆ. ಅವರು ವಿಷಯಗಳನ್ನು ನೆನಪಿಟ್ಟುಕೊಳ್ಳಲು ಸಮಸ್ಯೆ ಅನುಭವಿಸುತ್ತಾರೆ, ಪದೇ ಪದೇ ಕಾಣುವ ಕೆಟ್ಟ ಕನಸುಗಳು ಅವರನ್ನು ಮತ್ತಷ್ಟು ದುರ್ಬಲವಾಗಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ