AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ವರ ಬಂದಾಗ ಸ್ನಾನ ಮಾಡುವುದು ಸರಿಯೇ? ಏನು ಮಾಡಬೇಕು ಮತ್ತು ಏನು ಮಾಡಬಾರದು?

ಜ್ವರ ಬಂದಾಗ ಸ್ನಾನ ಮಾಡಬಾರದು ಎಂಬ ಮಾತನ್ನು ಹಲವರು ಕೇಳಿರುತ್ತಾರೆ. ಆದರೆ ವೈದ್ಯರ ಪ್ರಕಾರ, ಸೌಮ್ಯ ಜ್ವರ ಇದ್ದು ದೇಹದ ಸ್ಥಿತಿ ಸಾಮಾನ್ಯವಾಗಿದ್ದರೆ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಬಹುದು. ತಣ್ಣೀರು ಅಥವಾ ಅತಿಯಾಗಿ ಬಿಸಿನೀರನ್ನು ಬಳಸುವುದನ್ನು ತಪ್ಪಿಸುವುದು ಉತ್ತಮ. ಜ್ವರದ ಸಂದರ್ಭದಲ್ಲಿ ಸ್ನಾನ ಮಾಡುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯಿರಿ.

ಜ್ವರ ಬಂದಾಗ ಸ್ನಾನ ಮಾಡುವುದು ಸರಿಯೇ? ಏನು ಮಾಡಬೇಕು ಮತ್ತು ಏನು ಮಾಡಬಾರದು?
Fever
ಮಾಲಾಶ್ರೀ ಅಂಚನ್​
| Edited By: |

Updated on: Sep 10, 2026 | 4:17 PM

Share

ಮುಖ್ಯಾಂಶಗಳು

  • ಜ್ವರ ಬಂದಾಗ ತಣ್ಣೀರಿನಿಂದ ಸ್ನಾನ ಮಾಡಿದರೆ ಏನಾಗುತ್ತದೆ ಗೊತ್ತಾ?
  • ಜ್ವರದಲ್ಲಿ ಸ್ನಾನ ಮಾಡಿದರೆ ಅಪಾಯವೇ?
  • ಸ್ನಾನಕ್ಕೂ ಮುನ್ನ ಈ ವಿಷಯ ತಿಳಿಯಿರಿ!

ಮಳೆಗಾಲದಲ್ಲಿ ವೈರಲ್ ಜ್ವರದ (Viral Fever) ಪ್ರಕರಣಗಳು ಹೆಚ್ಚಾಗುತ್ತವೆ. ಜ್ವರ ಬಂದಾಗ ಕೆಲವರಿಗೆ ಚಳಿ, ನಡುಕ ಕಾಣಿಸಿಕೊಂಡರೆ, ಇನ್ನೂ ಕೆಲವರಿಗೆ ದೇಹದಲ್ಲಿ ಹೆಚ್ಚು ಬಿಸಿಯಾಗುತ್ತಿರುವ ಅನುಭವವಾಗುತ್ತದೆ. ಈ ಸಂದರ್ಭದಲ್ಲಿ ಸ್ನಾನ ಮಾಡಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಮತ್ತು ಸ್ವಲ್ಪ ಆರಾಮ ಸಿಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಜ್ವರ ಬಂದಾಗ ನಿಜವಾಗಿಯೂ ಸ್ನಾನ ಮಾಡಬಹುದೇ? ಮಾಡಿದರೆ ಯಾವ ರೀತಿಯ ನೀರನ್ನು ಬಳಸಬೇಕು?.

ವೈದ್ಯರ ಪ್ರಕಾರ, ಜ್ವರ ಬಂದಾಗ ಸ್ನಾನ ಮಾಡುವುದು ಸಂಪೂರ್ಣವಾಗಿ ನಿಷೇಧವಲ್ಲ. ಆದರೆ ವ್ಯಕ್ತಿಯ ದೈಹಿಕ ಸ್ಥಿತಿ ಮತ್ತು ನೀರಿನ ತಾಪಮಾನವನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಸೌಮ್ಯ ಜ್ವರ ಇದ್ದು, ತಲೆ ಸುತ್ತುವಿಕೆ, ತೀವ್ರ ನಡುಕ ಅಥವಾ ಹೆಚ್ಚಿನ ದುರ್ಬಲತೆ ಇಲ್ಲದಿದ್ದರೆ ಸ್ವಲ್ಪ ಸಮಯ ಸ್ನಾನ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ.

ಉಗುರುಬೆಚ್ಚಗಿನ ನೀರು ಉತ್ತಮ

ಜ್ವರದ ಸಂದರ್ಭದಲ್ಲಿ ಸ್ನಾನ ಮಾಡಬೇಕಾದರೆ ಉಗುರುಬೆಚ್ಚಗಿನ ನೀರನ್ನು ಬಳಸುವುದು ಉತ್ತಮ. ಇದರಿಂದ ದೇಹಕ್ಕೆ ಆರಾಮ ಸಿಗಬಹುದು. ಆದರೆ ತುಂಬಾ ತಣ್ಣನೆಯ ಅಥವಾ ತುಂಬಾ ಬಿಸಿಯಾದ ನೀರಿನಿಂದ ಸ್ನಾನ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು.

ತಣ್ಣೀರಿನಿಂದ ಸ್ನಾನ ಮಾಡಿದಾಗ ದೇಹದ ಉಷ್ಣತೆಯಲ್ಲಿ ಏಕಾಏಕಿ ಬದಲಾವಣೆ ಉಂಟಾಗಿ ನಡುಕ ಹೆಚ್ಚಾಗಬಹುದು. ಅದೇ ರೀತಿ ಅತಿಯಾಗಿ ಬಿಸಿಯಾದ ನೀರು ದೇಹಕ್ಕೆ ಮತ್ತಷ್ಟು ಅಸ್ವಸ್ಥತೆಯನ್ನು ಉಂಟುಮಾಡಬಹುದು. ಹೀಗಾಗಿ ಸಾಮಾನ್ಯವಾಗಿ ಆರಾಮದಾಯಕವಾಗಿರುವ ಉಗುರುಬೆಚ್ಚಗಿನ ನೀರು ಸೂಕ್ತ ಆಯ್ಕೆ.

Afternoon Sleep: ಮಧ್ಯಾಹ್ನ ಹೆಚ್ಚು ಹೊತ್ತು ನಿದ್ರೆ ಮಾಡಿದರೆ ರಾತ್ರಿ ನಿದ್ದೆ ಏಕೆ ಬರುವುದಿಲ್ಲ?

ಹೆಚ್ಚು ಹೊತ್ತು ಬಾತ್‌ರೂಮ್‌ನಲ್ಲಿ ಇರಬೇಡಿ

ಜ್ವರ ಬಂದಾಗ ದೇಹಕ್ಕೆ ಸಾಕಷ್ಟು ವಿಶ್ರಾಂತಿ ಮತ್ತು ದ್ರವಾಂಶದ ಅಗತ್ಯವಿರುತ್ತದೆ. ಹೀಗಾಗಿ ಸ್ನಾನ ಮಾಡುತ್ತಿದ್ದರೆ ಹೆಚ್ಚು ಸಮಯ ಬಾತ್‌ರೂಮ್‌ನಲ್ಲಿ ಇರುವ ಬದಲು ಬೇಗನೆ ಸ್ನಾನ ಮುಗಿಸಿ ಹೊರಬರುವುದು ಉತ್ತಮ. ಸ್ನಾನದ ನಂತರ ದೇಹವನ್ನು ಚೆನ್ನಾಗಿ ಒರೆಸಿಕೊಂಡು ವಿಶ್ರಾಂತಿ ಪಡೆಯಬೇಕು.

ಜ್ವರದ ಸಮಯದಲ್ಲಿ ದೇಹ ದುರ್ಬಲವಾಗಿರುವುದರಿಂದ ಬಾತ್‌ರೂಮ್‌ನಲ್ಲಿ ಜಾರಿ ಬೀಳುವ ಸಾಧ್ಯತೆಯ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ತಲೆ ಸುತ್ತುತ್ತಿದ್ದರೆ ಅಥವಾ ತುಂಬಾ ದುರ್ಬಲವಾಗಿದ್ದರೆ ಒಬ್ಬರೇ ಸ್ನಾನ ಮಾಡಲು ಹೋಗದಿರುವುದು ಉತ್ತಮ.

ಈ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ

ಜ್ವರದ ಜೊತೆಗೆ ಉಸಿರಾಟದ ತೊಂದರೆ, ನಿರಂತರ ವಾಂತಿ, ಗೊಂದಲದ ಅನುಭವ, ತೀವ್ರ ತಲೆನೋವು ಅಥವಾ ಕುತ್ತಿಗೆ ಬಿಗಿಯಾಗುವುದು ಮುಂತಾದ ಲಕ್ಷಣಗಳು ಕಂಡುಬಂದರೆ ಕೇವಲ ಸ್ನಾನ ಮಾಡುವುದರ ಮೇಲೆ ಅವಲಂಬಿಸಬಾರದು. ಇಂತಹ ಸಂದರ್ಭಗಳಲ್ಲಿ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!