ಹಚ್ಚೆ ಹಾಕಿಕೊಳ್ಳುವುದು ಎಂದರೆ ಹಳ್ಳಿಗಾಡಿನ ಗುಗ್ಗುಗಳು ಎಂದು ಒಂದಾನೊಂದು ಕಾಲದಲ್ಲಿ ಎಲ್ಲರ ಕಲ್ಪನೆಯಾಗಿತ್ತು. ಆದರೆ ಈಗ ಕಾಲೇಜು ಮೆಟ್ಟಲು ಏರಿದ 10 ಹುಡುಗ ಹುಡುಗಿಯರಲ್ಲಿ ಒಂದು ಅಂದಾಜಿನಂತೆ ಆರು ಜನರ ರಲ್ಲಿ ಹಚ್ಚೆಗಳು ಕಾಣಸಿಗುತ್ತದೆ. ಹಚ್ಚೆ ಕಲಾವಿದರ ಕಲೆಯ ಬಗ್ಗೆ ಎರಡು ಮಾತಿಲ್ಲ ಒಂದಕ್ಕಿಂತ ಒಂದು ಕಲಾತ್ಮಕ ಹಚ್ಚೆಗಳು. ಶಿವಾಜಿಯ ಕಲಾಕೃತಿಗಳನ್ನು ಯುವಜನರಲ್ಲಿ ಅತ್ಯಂತ ಜನಪ್ರಿಯ. ಒಂದು ಎರಡು ನೂರಾರು ವಿಧವಾದ ಅಂತಹ ಅತ್ಯಂತ ಕಾಣಲು ಸುಂದರವಾಗಿರುವಂಥ ಹಚ್ಚೆಗಳು ಯುವಜನರ ದೇಹದ ಮೇಲೆ ಕಾಣಲು ಈಗ ಸಾಧ್ಯ. ಹಚ್ಚೆಗಳನ್ನ ರಚಿಸಿಕೊಳ್ಳುವಾಗ ನಾಲ್ಕು ಬಾರಿ ಯೋಚನೆ ಮಾಡಿಕೊಳ್ಳಿ ನನ್ನ ದೇಹದ ಮೇಲೆ ಹಚ್ಚೆ ಹಾಕುವುದರಿಂದ ನನಗಾಗುವ ದೊಡ್ಡ ನಷ್ಟ ಯಾವುದು ಎಂದು. ಒಂದು ಮಾಹಿತಿಯಂತೆ ದೇಹದ ಯಾವುದೇ ಭಾಗದಲ್ಲಿ ಹಚ್ಚೆಗಳು ಇದ್ದರೆ ಭಾರತೀಯ ಸೇನಾ ಪಡೆಗಳಲ್ಲಿ ಅವರನ್ನ ನೇಮಕಾತಿ ಮಾಡಿಕೊಳ್ಳುವುದು ಸ್ವಲ್ಪ ಅನುಮಾನ, ಇದೇ ನೀತಿ ಅಗ್ನಿವೀರರ ನೇಮಕಾತಿಯಲ್ಲೂ ಇದೆ ಎಂದು ಕೇಳಿದ್ದೇನೆ. ಹಚ್ಚೆ ಹಾಕಿಕೊಂಡ ನಂತರ ಒಂದು ವರ್ಷದವರೆಗೆ ಆ ವ್ಯಕ್ತಿ ರಕ್ತದಾನ ಮಾಡಲು ಸಾಧ್ಯವಿಲ್ಲ ಎನ್ನುವುದು ಅಷ್ಟೇ ಸತ್ಯ.
ಕೆಲವೇ ಕೆಲವು ಗಂಟೆಗಳಲ್ಲಿ ಹೊಸ ಟ್ಯಾಟೂ(ಹಚ್ಚೆಯ) ಕಲಾಕೃತಿ ದೇಹದ ಮೇಲೆ ರಾರಾಜಿಸಬಹುದು. ಹೆಮ್ಮೆಯಿಂದ ನಾಲ್ಕು ಇಷ್ಟ ಮಿತ್ರರಲ್ಲಿಯೇ ಇದನ್ನ ತೋರಿಸಿ ಹೆಮ್ಮೆ ಪಡಬಹುದು ಆದರೆ ಪ್ರಕ್ರಿಯೆಯಿಂದ ಶಾಶ್ವತ ದೇಹ ಕಲೆಯ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವ ಅತ್ಯಂತ ಗಂಭೀರ ಅವಶ್ಯಕತೆ ಇದೆ. ಹಚ್ಚೆ ಹಾಕಿಸಿಕೊಳ್ಳುವ ಮೊದಲು ಹಚ್ಚೆಯ ಒಂದಿಷ್ಟು ಹೆಜ್ಜೆಗಳನ್ನ ಅತ್ಯಂತ ಗಂಭೀರವಾಗಿ ಗಮನಿಸುವ, ಯೋಚಿಸುವ, ನಿಶ್ಚಿಸುವ, ಅವಶ್ಯಕತೆ ಇಂದು ಪ್ರೌಢಶಾಲೆ ಶಿಕ್ಷಣ ಮಟ್ಟದಲ್ಲಿಯೇ ವಿದ್ಯಾರ್ಥಿಗಳಿಗೆ ಗೊತ್ತಿರಬೇಕು ಎನ್ನುವುದು ನನ್ನ ಅಪೇಕ್ಷೆ.
ಹಚ್ಚೆ ಎನ್ನುವುದು ಚರ್ಮದ ಮೇಲಿನ ಪದರಕ್ಕೆ ಸೇರಿಸಲಾದ ವರ್ಣದ್ರವ್ಯಗಳೊಂದಿಗೆ ಚರ್ಮದ ಮೇಲೆ ಮಾಡಿದ ಶಾಶ್ವತ ಗುರುತು ಅಥವಾ ವಿನ್ಯಾಸವಾಗಿದೆ , ಕಲಾಕೃತಿ. ವಿಶಿಷ್ಟವಾಗಿ, ಹಚ್ಚೆ ಕಲಾವಿದರು ಹೊಲಿಗೆ ಯಂತ್ರದಂತೆ ಕಾರ್ಯನಿರ್ವಹಿಸುವ ಕೈಯಲ್ಲಿ ಹಿಡಿಯುವ ಯಂತ್ರವನ್ನು ಬಳಸುತ್ತಾರೆ, ಒಂದು ಅಥವಾ ಹೆಚ್ಚಿನ ಸೂಜಿಗಳು ಚರ್ಮವನ್ನು ಪದೇ ಪದೇ ಚುಚ್ಚುತ್ತವೆ. ಪ್ರತಿ ಚುಚ್ಚುವಿಕೆಯೊಂದಿಗೆ ಸೂಜಿಗಳು ಸಣ್ಣ ಶಾಯಿ ಹನಿಗಳನ್ನು ಸೇರಿಸುತ್ತವೆ..
ಇದಕ್ಕೆ ಬಳಸುವ ಸೂಜಿ ನಮ್ಮ ಚರ್ಮದ ಮೇಲ್ಪದರದ ಒಳಕ್ಕೆ ತಲುಪುತ್ತದೆ,ಇದರಿಂದ ಚರ್ಮದ ಸೋಂಕುಗಳು ಮತ್ತು ಇತರ ತೊಡಕುಗಳು ಸಾಧ್ಯ. ಹಚ್ಚೆಗೆ ಬಳಸುವ ಬಣ್ಣಗಳು – ವಿಶೇಷವಾಗಿ ಕೆಂಪು, ಹಸಿರು, ಹಳದಿ ಮತ್ತು ನೀಲಿ ಬಣ್ಣಗಳು – ಹಚ್ಚೆಯ ಭಾಗದಲ್ಲಿ ತುರಿಕೆ, ಕೆಂಪಗಾಗಬಹುದು. ಹಚ್ಚೆ ಹಾಕಿದ ಹಲವು ವರ್ಷಗಳ ನಂತರವೂ ಇದು ಸಾಧ್ಯ.
ಹಚ್ಚೆ ಹಾಕಿದ ನಂತರ ಚರ್ಮದ ಸೋಂಕು ಸಾಧ್ಯ.ಇತರ ಚರ್ಮದ ಸಮಸ್ಯೆಗಳು. ಕೆಲವೊಮ್ಮೆ ಗ್ರ್ಯಾನುಲೋಮಾ ಎಂದು ಕರೆಯಲ್ಪಡುವ ಹಚ್ಚೆ ಶಾಯಿಯ ಸುತ್ತಲೂ ರೂಪುಗೊಳ್ಳುತ್ತದೆ. ಹಚ್ಚೆ ಹಾಕುವಿಕೆಯು ಕೆಲೋಯಿಡ್‌ಗಳಿಗೆ ಕಾರಣವಾಗಬಹುದು .
ರಕ್ತದಿಂದ ಹರಡುವ ರೋಗಗಳು. ನಿಮ್ಮ ಹಚ್ಚೆ ರಚಿಸಲು ಬಳಸುವ ಉಪಕರಣವು ಸೋಂಕಿತ ರಕ್ತದಿಂದ ಕಲುಷಿತವಾಗಿದ್ದರೆ, ಎಚ್ ಆಯ ವಿ, ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಸೇರಿದಂತೆ ವಿವಿಧ ರಕ್ತಸಂಬಂಧಿ ಕಾಯಿಲೆಗಳಿಗೆ ಒಳಗಾಗಬಹುದು. ಎಂಆರ್ಐ ತೊಡಕುಗಳು. ಅಪರೂಪವಾಗಿ, ಹಚ್ಚೆ ಅಥವಾ ಶಾಶ್ವತ ಮೇಕ್ಅಪ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ಪರೀಕ್ಷೆಗಳ ಸಮಯದಲ್ಲಿ ಪೀಡಿತ ಪ್ರದೇಶಗಳಲ್ಲಿ ಊತ ಅಥವಾ ಸುಡುವಿಕೆಗೆ ಕಾರಣವಾಗಬಹುದು. ಹಚ್ಚೆ ಹಾಕುವ ಮೊದಲು, ಅದರ ಬಗ್ಗೆ ಎಚ್ಚರಿಕೆಯಿಂದ ಗಂಭೀರವಾಗಿ ಯೋಚಿಸಿ. ಮದ್ಯಪಾನ ಅಥವಾ ಮಾದಕ ದ್ರವ್ಯಗಳ ಪ್ರಭಾವದಲ್ಲಿದ್ದರೆ ಹಚ್ಚೆ ಹಾಕಿಸಿಕೊಳ್ಳಬೇಡಿ. ಹಚ್ಚೆ ಸ್ಥಳವನ್ನು ಎಚ್ಚರಿಕೆಯಿಂದ ಆರಿಸಿ. ಬಟ್ಟೆಯ ಅಡಿಯಲ್ಲಿ ನಿಮ್ಮ ಹಚ್ಚೆ ಮರೆಮಾಡಲು ನೀವು ಆಯ್ಕೆಯನ್ನು ಬಯಸುತ್ತೀರಾ ಎಂದು ಪರಿಗಣಿಸಿ. ತೂಕ ಹೆಚ್ಚಾಗುವುದರಿಂದ, ಗರ್ಭಾವಸ್ಥೆಯ ತೂಕ ಹೆಚ್ಚಾಗುವುದು ಸೇರಿದಂತೆ – ಹಚ್ಚೆ ವಿರೂಪ ಆಗಬಹುದು ಅಥವಾ ಅದರ ನೋಟವನ್ನು ಪರಿಣಾಮ ಬೀರಬಹುದು ಎಂಬುದನ್ನು ನೆನಪಿಡಿ.
ಇದನ್ನೂ ಓದಿ: ಒಂದು ಕಪ್ ಹಾಲಿನಿಂದ ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಗುಡ್ ಬೈ ಹೇಳಿ
ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: