Tea For Weight Loss: ನೀವು ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಪ್ರತಿದಿನ ಈ ಗಿಡಮೂಲಿಕೆ ಚಹಾ ಸೇವನೆ ಮಾಡಬಹುದು

ತೂಕವನ್ನು ಇಳಿಸಿಕೊಳ್ಳಲು ಹೆಚ್ಚಿನವರು ಸಾಮಾನ್ಯವಾಗಿ ಜಿಮ್ಗೆ ಹೋಗುತ್ತಾರೆ ಅಥವಾ ಡಯಟ್ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಜಿಮ್ನಲ್ಲಿ ವ್ಯಾಯಾಮ ಮಾಡಲು ಪರಿಶ್ರಮ ಮತ್ತು ಸಾಕಷ್ಟು ಸಮಯ ಮೀಸಲಿಡಬೇಕಾಗುತ್ತದೆ. ಆದರೆ ಬಿಡುವಿಲ್ಲದ ಜೀವನಶೈಲಿಯ ಕಾರಣ ಜಿಮ್ಗೆ ಹೋಗಲು, ವ್ಯಾಯಾಮ ಮಾಡಲು ಹಲವರಿಗೆ ಕಷ್ಟಕರವಾಗಬಹುದು. ಅಂತಹ ಸಂದರ್ಭದಲ್ಲಿ ನೀವು ನಿಯಮಿತವಾಗಿ ಈ ಕೆಲವೊಂದು ಗಿಡಮೂಲಿಕೆ ಚಹಾವನ್ನು ಸೇವನೆ ಮಾಡುವ ಮೂಲಕ ದೇಹ ತೂಕವನ್ನು ಕಡಿಮೆ ಮಾಡಬಹುದು.

Tea For Weight Loss: ನೀವು ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಪ್ರತಿದಿನ ಈ ಗಿಡಮೂಲಿಕೆ  ಚಹಾ ಸೇವನೆ ಮಾಡಬಹುದು
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Oct 29, 2023 | 2:09 PM

ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಾಗುವುದರಿಂದ ಹೆಚ್ಚಿನವರು ಚಿಂತೆಗೀಡಾಗಿದ್ದಾರೆ. ಜಡ ಜೀವನಶೈಲಿ, ಅನಾರೋಗ್ಯಕ ಆಹಾರ ಪದ್ಧತಿ ಇದ್ದಕ್ಕೆ ಮುಖ್ಯ ಕಾರಣ. ತೂಕವನ್ನು ಇಳಿಸಿಕೊಳ್ಳಲು ಅಥವಾ ಬೊಜ್ಜನ್ನು ಕರಗಿಸಲು ಹೆಚ್ಚಿನವರು ಸಾಮಾನ್ಯವಾಗಿ ಜಿಮ್ಗೆ ಹೋಗುತ್ತಾರೆ ಅಥವಾ ಡಯಟ್ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಜಿಮ್ನಲ್ಲಿ ವರ್ಕೌಟ್ ಮಾಡಲು ಪರಿಶ್ರಮ ಮತ್ತು ಸಾಕಷ್ಟು ಸಮಯ ಮೀಸಲಿಡಬೇಕಾಗುತ್ತದೆ. ಆದರೆ ಬಿಡುವಿಲ್ಲದ ಜೀವನಶೈಲಿ ಮತ್ತು ಕೆಲಸದ ಕಾರಣ ಜಿಮ್ಗೆ ಹೋಗಲು, ವ್ಯಾಯಾಮ ಮಾಡಲು ಹಲವರಿಗೆ ಕಷ್ಟಕರವಾಗಬಹುದು. ಹೀಗಿರುವಾಗ ನೀವು ಪ್ರತಿನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕಾಫಿ, ಟೀ ಸೇವನೆ ಮಾಡುವ ಬದಲು ಅಡುಗೆ ಮನೆಯಲ್ಲಿ ಲಭ್ಯವಿರುವ ಕೆಲವೊಂದು ಮಸಾಲೆ ಪದಾರ್ಥಗಳಿಂದ ಗಿಡಮೂಲಿಕೆ ಚಹಾವನ್ನು ಮಾಡಿ ಕುಡಿಯಬಹುದು. ಈ ಗಿಡಮೂಲಿಕೆ ಚಹಾ ದೇಹ ತೂಕವನ್ನು ಕಡಿಮೆ ಮಾಡಲು ಸಹಕಾರಿ ಮಾತ್ರವಲ್ಲದೆ ಈ ಚಹಾ ಮಧುಮೇಹಿಗಳಿಗೂ ತುಂಬಾ ಪ್ರಯೋಜನಕಾರಿಯಾಗಿದೆ.

ತೂಕ ಇಳಿಸಿಕೊಳ್ಳಲು ಸಹಕಾರಿ ಈ ಕೆಲವು ಗಿಡಮೂಲಿಕೆ ಚಹಾ:

ಶುಂಠಿ ಚಹಾ:

ಶುಂಠಿಯು ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಇದರಲ್ಲಿ ಹೇರಳವಾದ ಉತ್ಕರ್ಷಣ ನಿರೋಧಕ ಗುಣಗಳಿದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲದೆ ಇದು ಹೊಟ್ಟೆಯ ಕೊಬ್ಬನ್ನು ಕರಗಿಸಲು ಮತ್ತು ತೂಕ ನಷ್ಟಕ್ಕೂ ಸಹಕಾರಿ. ಬೊಜ್ಜು ಅಥವಾ ಅಧಿಕ ದೇಹತೂಕದಿಂದ ಚಿಂತಿತರಾಗಿದ್ದರೆ, ನೀವು ಪ್ರತಿದಿನ ಶುಂಠಿ ಚಹಾವನ್ನು ಸೇವನೆ ಮಾಡುವ ಮೂಲಕ ತೂಕವನ್ನು ಇಳಿಸಿಕೊಳ್ಳಬಹುದು. ಶುಂಠಿ ಟೀ ಮಾಡಲು ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನಿಟ್ಟು, ಸ್ವಲ್ಪ ಕುದಿ ಬಂದಾಗ ಅದಕ್ಕೆ ಶುಂಠಿ, ಅರಶಿನ, ಮತ್ತು ತುಳಸಿ ಎಳೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಈ ಚಹಾವನ್ನು ಸೋಸಿಕೊಂಡು ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ಇದು ತೂಕ ಇಳಿಸಿಕೊಳ್ಳಲು ಮಾತ್ರವಲ್ಲದೆ ಮಧುಮೇಹ ರೋಗಿಗಳಿಗೂ ತುಂಬಾ ಒಳ್ಳೆಯದು.

ಇದನ್ನೂ ಓದಿ:  ಸಂಜೆಯ ಸ್ಯ್ನಾಕ್ಸ್ ಸಮಯಕ್ಕೆ ಮನೆಯಲ್ಲಿಯೇ ತಯಾರಿಸಿ ಗರಿಗರಿಯಾದ ಆಲೂ ಟಿಕ್ಕಿ

ದಾಲ್ಚಿನ್ನಿ ಚಹಾ:

ದಾಲ್ಚಿನ್ನಿಯಲ್ಲಿ ಹೇರಳವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿದ್ದು, ಇದು ತೂಕ ನಷ್ಟಕ್ಕೆ ಮಾತ್ರವಲ್ಲದೆ ಆರೋಗ್ಯಕ್ಕೂ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅಲ್ಲದೆ ಇದರಲ್ಲಿ ಉರಿಯೂತ ನಿವಾರಕ ಗುಣಗಳಿದ್ದು, ಇದು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಕೂಡಾ ಸಹಕಾರಿಯಾಗಿದೆ. ದಾಲ್ಚಿನ್ನಿ ಚಹಾವನ್ನು ಮಾಡಲು, ಮೊದಲಿಗೆ ಒಂದು ಪಾತ್ರೆಯಲ್ಲಿ ನೀರನ್ನಿಟ್ಟು, ಅದಕ್ಕೆ ದಾಲ್ಚಿನ್ನಿ ಪುಡಿ ಅಥವಾ ದಾಲ್ಚಿನ್ನಿ ತುಂಡನ್ನು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ, ನಂತರ ಈ ಪಾನೀಯವನ್ನು ಸೋಸಿಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸ ಮತ್ತು ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿಯಿರಿ. ಈ ಒಂದು ಪಾನೀಯ ತೂಕ ನಷ್ಟಕ್ಕೆ ಬಹಳ ಸಹಕಾರಿಯಾಗಿದೆ.

ಜೀರಿಗೆ ಚಹಾ:

ಜೀರಿಗೆಯು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿ. ಜೀರಿಗೆ ಹೊಟ್ಟೆನೋವು, ಅಜೀರ್ಣ ಮುಂತಾದ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳಿವೆ ಪರಿಹಾರವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ತೂಕ ಇಳಿಸಿಕೊಳ್ಳಲು ಜೀರಿಗೆ ಚಹಾ ಉತ್ತಮ ಆಯ್ಕೆಯಾಗಿದೆ. ಜೀರಿಗೆ ಚಹಾವನ್ನು ತಯಾರಿಸಲು ಒಂದು ಪಾತ್ರೆಗೆ ಸ್ವಲ್ಪ ನೀರು ಸೇರಿಸಿ, ಅದಕ್ಕೆ ಹುರಿದಿಟ್ಟ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಈ ಚಹಾ ಚೆನ್ನಾಗಿ ಕುದಿದ ಬಳಿಕ ಅದನ್ನು ಸೋಸಿಕೊಂಡು ಕುಡಿಯಿರಿ. ನೀವು ಇದಕ್ಕೆ ಜೇನುತುಪ್ಪವನ್ನು ಕೂಡಾ ಸೇರಿಸಬಹುದು. ಈ ಪಾನೀಯವನ್ನು ಕುಡಿಯುವುದರಿಂದ ಚಯಾಪಚಯವು ಹೆಚ್ಚುತ್ತದೆ ಮತ್ತು ಇದು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ