Deepavali 2023: ದೀಪಾವಳಿಯಂದು ದೇವರಿಗೆ ಅರ್ಪಿಸುವ ಸಿಹಿ ಖಾದ್ಯಗಳಿವು
ನವರಾತ್ರಿ ಮುಗಿದು ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಆರಂಭವಾಗಲಿದೆ. ಪ್ರತೀ ಮನೆಯಲ್ಲಿ ಹಬ್ಬದ ತಯಾರಿ ಪ್ರಾರಂಭವಾಗಿದೆ. ಆದ್ದರಿಂದ ದೀಪಾವಳಿಯಂದು ದೇವರಿಗೆ ಅರ್ಪಿಸುವ ಸಿಹಿ ಖಾದ್ಯಗಳ ಕುರಿತು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
1 / 6
ನವರಾತ್ರಿ ಮುಗಿದು ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಆರಂಭವಾಗಲಿದೆ. ಪ್ರತೀ ಮನೆಯಲ್ಲಿ ಹಬ್ಬದ ತಯಾರಿ ಪ್ರಾರಂಭವಾಗಿದೆ. ಆದ್ದರಿಂದ ದೀಪಾವಳಿಯಂದು ದೇವರಿಗೆ ಅರ್ಪಿಸುವ ಸಿಹಿ ಖಾದ್ಯಗಳ ಕುರಿತು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
2 / 6
ಮೋತಿಚೂರು ಲಡ್ಡು: ದೇಸಿ ತುಪ್ಪ, ಕಡಲೆ ಹಿಟ್ಟು, ಸಕ್ಕರೆ ಪಾಕ ಮತ್ತು ಕಲ್ಲಂಗಡಿ ಬೀಜ, ಪಿಸ್ತಾ, ಗೋಡಂಬಿ ಗಳಿಂದ ತಯಾರಿಸಲಾಗುತ್ತದೆ. ಈ ಸಿಹಿ ಖಾದ್ಯವನ್ನು ದೀಪಾವಳಿ ಹಬ್ಬದ ಸಮಯದಲ್ಲಿ ಗಣೇಶನಿಗೆ ಪೂಜೆ ಸಲ್ಲಿಸುವಾಗ ನೈವೇದ್ಯ ರೂಪದಲ್ಲಿ ಇಡಲಾಗುತ್ತದೆ.
3 / 6
ಗೋಧಿ ಹಲ್ವಾ: ಗೋಧಿ ಹಿಟ್ಟು, ತುಪ್ಪ, ಸಕ್ಕರೆ, ನೀರು, ಏಲಕ್ಕಿ ಪುಡಿ ಮತ್ತು ಡ್ರೈ ಫ್ರೂಟ್ಸ್ಗಳನ್ನು ಬಳಸಿ ಗೋಧಿ ಹಲ್ವಾ ತಯಾರಿಸಲಾಗುತ್ತದೆ. ಲಕ್ಷ್ಮಿ ದೇವಿಗೆ ಅಚ್ಚು ಮೆಚ್ಚಾಗಿರುವ ಈ ಸಿಹಿ ಖಾದ್ಯವನ್ನು ಪೂಜೆಯ ವೇಳೆ ನೈವೇದ್ಯ ರೂಪದಲ್ಲಿ ಇಡಲಾಗುತ್ತದೆ.
4 / 6
ಕಾಜು ಬರ್ಫಿ: ಸಕ್ಕರೆ, ತುಪ್ಪ, ಗೋಂಡಬಿ, ತುಪ್ಪ ಮತ್ತು ಏಲಕ್ಕಿ ಪುಡಿ ಸೇರಿಸಿ ಕಾಜು ಬರ್ಫಿ ತಯಾರಿಸಲಾಗುತ್ತದೆ. ದೀಪಾವಳಿಯ ಸಾಂಪ್ರದಾಯಿಕ ಸಿಹಿ ಖಾದ್ಯಗಳಲ್ಲಿ ಇದು ಕೂಡ ಒಂದಾಗಿದೆ.
5 / 6
ಗುಲಾಬ್ ಜಾಮೂನ್:ಅತ್ಯಂತ ಮೃದುವಾದ, ಬಾಯಿಗಿಟ್ಟರೆ ಕರಗುವಂತಹ ರುಚಿಕರವಾದ ಗುಲಾಬ್ ಜಾಮೂನ್ ಅನ್ನು ದೀಪಾವಳಿಯ ಹಬ್ಬದ ಸಮಯದಲ್ಲಿ ಪ್ರತೀ ಮನೆಯಲ್ಲಿ ತಯಾರಿಸಲಾಗುತ್ತದೆ. ಮೈದಾ, ಖೋವಾ, ತುಪ್ಪ, ಏಲಕ್ಕಿ ಪುಡಿ ಹಾಗೂ ಕೊನೆಯದಾಗಿ ಸಕ್ಕರೆ ಪಾಕದಲ್ಲಿ ಅದ್ದಿ ತಯಾರಿಸಲಾಗುತ್ತದೆ.
6 / 6
ಅಕ್ಕಿ ಪಾಯಸ: ಅಕ್ಕಿ, ಹಾಲು, ಸಕ್ಕರೆ, ಏಲಕ್ಕಿ ಮತ್ತು ಡ್ರೈ ಫ್ರೂಟ್ಸ್ ಸೇರಿಸಿ ತಯಾರಿಸಲಾಗುತ್ತದೆ. ಈ ಸಿಹಿ ಖಾದ್ಯವನ್ನು ದೀಪಾವಳಿ ಹಬ್ಬದ ಪೂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಲಾಗುತ್ತದೆ.