ಮೌನ ಒಳ್ಳೆಯದು ಆದರೆ ಈ ವಿಷಯಗಳಲ್ಲಿ, ಇದು ಅಪಾಯಕಾರಿ ಎನ್ನುತ್ತಾರೆ ಚಾಣಕ್ಯರು
ಎಲ್ಲಾ ಸಂದರ್ಭಗಳಲ್ಲಿ ಮೌನವಾಗಿರಲು ಸಾಧ್ಯವಿಲ್ಲ. ವಿಶೇಷವಾಗಿ ಚಾಣಕ್ಯ ನೀತಿಯಲ್ಲಿ, ಈ ವಿಷಯವಾಗಿ ಕೆಲವು ನಿಯಮಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅವರು ಹೇಳಿರುವ ಪ್ರಕಾರ ಕೆಲವು ಸಂದರ್ಭಗಳಲ್ಲಿ ಮೌನವಾಗಿರುವುದು ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ ವ್ಯಕ್ತಿ ಯಾವ ಸಮಯದಲ್ಲಿ ಮೌನವಾಗಿರಬಾರದು? ಈ ಬಗ್ಗೆ ಚಾಣಕ್ಯ ನೀತಿ ಹೇಳಿರುವುದನ್ನು ತಿಳಿಯಲು ಇಲ್ಲಿ ನೀಡಿರುವ ಸರಳ ಕ್ರಮಗಳನ್ನು ಅನುಸರಿಸಿ.
ಜೀವನದಲ್ಲಿ ತಾಳ್ಮೆ ವಹಿಸಿ, ಮೌನವಾಗಿದ್ದರೆ ಎಂತಹ ಸಮಸ್ಯೆಯನ್ನಾದರೂ ಬಗೆಹರಿಸಿಕೊಳ್ಳಬಹುದು ಎನ್ನುವ ಮಾತಿದೆ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಬಹಳಷ್ಟು ಸಲ ಅತಿಯಾದ ಮಾತು ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ಸಾಧ್ಯವಾದಷ್ಟು ಶಾಂತವಾಗಿದ್ದು ಪದಗಳನ್ನು ಮಿತವಾಗಿ ಬಳಸುವುದು ಉತ್ತಮ ಲಕ್ಷಣವಾಗಿದೆ. ಆದರೆ ಎಲ್ಲಾ ಸಂದರ್ಭಗಳಲ್ಲಿ ಮೌನವಾಗಿರಲು ಸಾಧ್ಯವಿಲ್ಲ. ವಿಶೇಷವಾಗಿ ಚಾಣಕ್ಯ ನೀತಿಯಲ್ಲಿ, ಈ ವಿಷಯವಾಗಿ ಕೆಲವು ನಿಯಮಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅವರು ಹೇಳಿರುವ ಪ್ರಕಾರ ಕೆಲವು ಸಂದರ್ಭಗಳಲ್ಲಿ ಮೌನವಾಗಿರುವುದು ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ ವ್ಯಕ್ತಿ ಯಾವ ಸಮಯದಲ್ಲಿ ಮೌನವಾಗಿರಬಾರದು? ಈ ಬಗ್ಗೆ ಚಾಣಕ್ಯ ನೀತಿ ಹೇಳಿರುವುದನ್ನು ತಿಳಿಯಲು ಇಲ್ಲಿ ನೀಡಿರುವ ಸರಳ ಕ್ರಮಗಳನ್ನು ಅನುಸರಿಸಿ.
- ಅನ್ಯಾಯವಾಗುತ್ತಿರುವ ಸಮಯದಲ್ಲಿ ಮೌನವಾಗಿರುವುದು ತಪ್ಪು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಇದು ನಿಮಗೆ ಮಾತ್ರ ಅನ್ವಯವಾಗುವುದಿಲ್ಲ, ಬದಲಾಗಿ ನಿಮ್ಮ ಸುತ್ತಮುತ್ತಲಿರುವವರಿಗೆ ಆಗುತ್ತಿರುವ ಅನ್ಯಾಯಕ್ಕೆ ಪ್ರತಿಕ್ರಿಯಿಸದಿರುವುದು ಕೂಡ ಉತ್ತಮ ಅಭ್ಯಾಸವಲ್ಲ. ಚಾಣಕ್ಯನ ಪ್ರಕಾರ, ಅನ್ಯಾಯದ ಎದುರು ಧ್ವನಿ ಎತ್ತದಿರುವುದು ಅಪರಾಧ.
- ನಿಮ್ಮ ಹಕ್ಕುಗಳನ್ನು ನಿಮ್ಮಿಂದ ಕಸಿದುಕೊಳ್ಳುತ್ತಿರುವ ಸಂದರ್ಭದಲ್ಲಿ ಎಂದಿಗೂ ಮೌನವಾಗಿರಬಾರದು. ನಮ್ಮ ಹಕ್ಕುಗಳಿಗಾಗಿ ನಾವು ನಿರ್ಭೀತಿಯಿಂದ ಹೋರಾಡಬೇಕು. ಹಕ್ಕನ್ನು ಕಸಿದುಕೊಂಡರೂ ಮೌನವಾಗಿರಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
- ಮೌನವಾಗಿರುವುದು ಎಂದರೆ ನಿಮ್ಮ ಮುಂದೆಯೇ ತಪ್ಪಾಗುತ್ತಿದ್ದರೂ ಏನು ಎಂದು ಪ್ರಶ್ನಿಸದಿರುವುದು ಎಂದರ್ಥವಲ್ಲ. ಆತ ಎಲ್ಲಾ ಸಂದರ್ಭಗಳಲ್ಲಿಯೂ ಸತ್ಯದ ಪರವಾಗಿ ನಿಲ್ಲಬೇಕು ಮತ್ತು ಅದಕ್ಕಾಗಿ ಧ್ವನಿ ಎತ್ತಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಸತ್ಯ ಮಾತನಾಡುವುದು ಮನುಷ್ಯನ ಜವಾಬ್ದಾರಿಯಾಗಿದೆ.
- ನಿಮಗೆ ಅವಮಾನವಾಗುತ್ತಿದ್ದಾಗಲೂ ಸುಮ್ಮನಿರಲು ಸಾಧ್ಯವಿಲ್ಲ. ನಿಮ್ಮ ತಪ್ಪಿಲ್ಲದಿದ್ದಾಗ ನಿಮ್ಮನ್ನು ದೂಷಿಸಿದರೆ, ಅದನ್ನು ನೀವು ಖಂಡಿಸಬೇಕು. ಆತ್ಮಗೌರವವಿದ್ದರೆ ಮಾತ್ರ ನಮ್ಮ ಜೀವನಕ್ಕೆ ಅರ್ಥವಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
- ನೀವು ಮೌನವಾಗಿದ್ದಾಗ ಸಂಬಂಧಗಳು ಮುರಿದು ಹೋಗುತ್ತದೆ ಎಂದಾಗ ನೀವು ಮೌನ ವಹಿಸುವುದು ತಪ್ಪು ಎಂದು ಚಾಣಕ್ಯರು ಹೇಳುತ್ತಾರೆ. ಏಕೆಂದರೆ ನಿಮ್ಮ ಮೌನ ಬಂಧಗಳನ್ನು ಬಲಪಡಿಸಬೇಕೇ ಹೊರತು ಸಂಬಂಧ ಮುರಿಯಬಾರದು ಎಂದು ಅವರು ಹೇಳುತ್ತಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ