AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಆದಾಯ, ಹಣಕಾಸಿಗೆ ಸಂಬಂಧಿಸಿದ ಈ ಸೀಕ್ರೆಟ್‌ಗಳನ್ನು ಯಾರೊಂದಿಗೂ ಶೇರ್‌ ಮಾಡಾರದು

ಕೆಲವರು ತಮ್ಮ ಆದಾಯದ ಮೂಲಗಳೇನು, ಎಷ್ಟು ಸಂಬಳ ದುಡಿಯುತ್ತಿದ್ದೇವೆ ಹೀಗೆ ತಮ್ಮ ಹಣಕಾಸು ಹಾಗೂ ಆರ್ಥಿಕ ಸ್ಥಿತಿಗತಿಯ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ. ಆದರೆ ಹಣಕಾಸಿಗೆ ಸಂಬಂಧಿಸಿದ ಈ ವಿಚಾರಗಳನ್ನು ಎಲ್ಲರೊಂದಿಗೂ ಶೇರ್‌ ಮಾಡುವುದು ಸರಿಯಲ್ಲ, ಇದರಿಂದ ಭವಿಷ್ಯದಲ್ಲಿ ತೊಂದರೆಗಳು ಎದುರಾಗಬಹುದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗಿದ್ದರೆ ಹಣಕಾಸಿಗೆ ಸಂಬಂಧಿಸಿದ ಯಾವ ವಿಚಾರಗಳನ್ನು ಇತರರ ಬಳಿ ಹಂಚಿಕೊಳ್ಳಬಾರದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಆದಾಯ, ಹಣಕಾಸಿಗೆ ಸಂಬಂಧಿಸಿದ ಈ ಸೀಕ್ರೆಟ್‌ಗಳನ್ನು ಯಾರೊಂದಿಗೂ ಶೇರ್‌ ಮಾಡಾರದು
ಸಾಂದರ್ಭಿಕ ಚಿತ್ರ Image Credit source: Unsplash
ಮಾಲಾಶ್ರೀ ಅಂಚನ್​
|

Updated on: Nov 15, 2026 | 9:59 PM

Share

ಪ್ರತಿಯೊಬ್ಬರೂ ಸಹ ತಮ್ಮ ಆದಾಯ ಮತ್ತು ಆರ್ಥಿಕ ವಿಷಯಗಳನ್ನು (financial matters) ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುತ್ತಾರೆ. ಸಂಬಳದಿಂದ ಹಿಡಿದು ತಮ್ಮ ಬ್ಯಾಂಕ್ ಬ್ಯಾಲೆನ್ಸ್‌ವರೆಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ ಆದರೆ ಹಣಕಾಸಿಗೆ ಸಂಬಂಧಿಸಿದ ಪ್ರತಿಯೊಂದು ವಿಚಾರಗಳನ್ನು ಬೇರೆವರೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಅವರ ಪ್ರಕಾರ ನಾವು ಹೀಗೆ ಹಣಕಾಸಿಗೆ ಪ್ರತಿಯೊಂದು ಸೀಕ್ರೆಟ್‌ಗಳನ್ನು ಇತರರ ಬಳಿ ಹಂಚಿಕೊಂಡಾಗ, ಇದರಿಂದ ಭವಿಷ್ಯದಲ್ಲಿ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇರುತ್ತದೆ. ಹಾಗಿದ್ರೆ ಹಣಕಾಸಿಗೆ ಸಂಬಂಧಿಸಿ ಯಾವೆಲ್ಲಾ ವಿಷಯಗಳನ್ನು ರಹಸ್ಯವಾಗಿಟ್ಟರೆ ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.

ನಿಮ್ಮ ನಿಖರ ಸಂಬಳದ ಬಗ್ಗೆ ಯಾರಿಗೂ  ಹೇಳಬೇಡಿ:

ಆಚಾರ್ಯ ಚಾಣಕ್ಯರ ಪ್ರಕಾರ, ಸಂಬಳದ ಬಗ್ಗೆ ಎಲ್ಲರೊಂದಿಗೂ ಹಂಚಿಕೊಳ್ಳುವುದು ಸರಿಯಲ್ಲ. ವಾಸ್ತವವಾಗಿ, ಜನರು ನಿಮ್ಮ ಸಂಬಳವನ್ನು ತಿಳಿದ ನಂತರ ತಮ್ಮನ್ನು ತಾವು ನಿಮ್ಮೊಂದಿಗೆ ಹೋಲಿಸಿಕೊಳ್ಳುತ್ತಾರೆ. ಮತ್ತು ನಿಮ್ಮ ಬಗ್ಗೆ ಅಸೂಯೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಲ್ಲದೆ ನೀವು ಇತರರಿಂತ ಕಡಿಮೆ ಸಂಬಳ ಪಡೆದರೆ ಅವರು ನಿಮ್ಮ ಕೀಳಾಗಿ ಕಾಣುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ಸಂಬಳದ ಬಗ್ಗೆ ಯಾರಿಗೂ ಹೇಳಬೇಡಿ.

ಇತರ ಮೂಲಗಳ ಆದಾಯವನ್ನು ಬಹಿರಂಗಪಡಿಸಬೇಡಿ:

ಅನೇಕರು ಸಂಬಳದ ಜೊತೆಗೆ ಇತರ ಮೂಲಗಳಿಂದಲೂ ಹಣವನ್ನು ಸಂಪಾದನೆ ಮಾಡುತ್ತಾರೆ, ಕಂಪೆನಿಯಿಂದ ಉತ್ತಮ ಬೋನಸ್‌ ಪಡೆಯುತ್ತಾರೆ. ಇನ್ನೂ ಕೆಲವರು ಹಳೆಯ ಹೂಡಿಕೆಯ ಲಾಭಗಳನ್ನು ಪಡೆಯುತ್ತಾರೆ. ಕೆಲವರು ತಮ್ಮ ಕೆಲಸದ ಜೊತೆಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡುವ ಮೂಲಕ ಹೆಚ್ಚುವರಿ ಹಣವನ್ನು ಗಳಿಸುತ್ತಾರೆ. ಇದನ್ನೆಲ್ಲಾ ಯಾರೊಂದಿಗೂ ಹಂಚಿಕೊಳ್ಳುವ ವಶ್ಯಕತೆ ಇಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಏಕೆಂದರೆ  ನಿಮ್ಮ ಬಳಿ ಹೆಚ್ಚು ಹಣ ಇದೆ ಎಂದು ತಿಳಿದರೆ ಕೆಲವರು ಅದನ್ನೇ ನೆಪವಾಗಿಟ್ಟುಕೊಂಡು ನಿಮ್ಮ ಬಳಿ ಸಾಲವನ್ನು ಪಡೆಯುತ್ತಾರೆ. ಕೆಲವರು ಸಾಲ ಪಡೆದು ಅದನ್ನು ಮರು ಪಾವತಿ ಮಾಡುವುದೇ ಇಲ್ಲ. ಇದು ನಿಮ್ಮ ಆರ್ಥಿಕ ಸ್ಥಿತಿಗತಿಯ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ.

ಇದನ್ನೂ ಓದಿ: ಹಣಕಾಸಿನ ವಿಚಾರದಲ್ಲಿ ಮಾಡುವ ಈ ತಪ್ಪುಗಳು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಬಹುದು… ಎಚ್ಚರ!

ಬ್ಯಾಂಕ್ ಠೇವಣಿಗಳ ಬಗ್ಗೆ ಮಾಹಿತಿಯನ್ನು ಯಾರಿಗೂ ಹೇಳಬೇಡಿ:

ಅನೇಕ ಜನರು ತಮ್ಮ ಸಂಬಳದ ಒಂದು ಸಣ್ಣ ಮೊತ್ತವನ್ನು ಪ್ರತಿ ತಿಂಗಳು ಬ್ಯಾಂಕಿಗೆ ಜಮಾ ಮಾಡುತ್ತಾರೆ. ಈ ಉಳಿತಾಯದ ಸಂಗತಿಯನ್ನು ಯಾರಿಗೂ ಹೇಳಬೇಡಿ. ಏಕೆಂದರೆ ನಿಮ್ಮ ಬಳಿ ಹೆಚ್ಚು ಹಣ ಇದೆ ಎಂದು ತಿಳಿದರೆ ಸ್ನೇಹಿತರು, ಸಂಬಂಧಿಕರು ನಿಮ್ಮಿಂದ ಸಾಲವನ್ನು ಕೇಳುತ್ತಾರೆ. ಇನ್ನೂ ಸಾಲ ಕೇಳಿ ನೀವು ಹಣ ಕೊಡದಿದ್ದರೆ ಇದು ನಿಮ್ಮ ಸಂಬಂಧದಲ್ಲೂ ಬಿರುಕನ್ನು ಮೂಡಿಸಬಹುದು. ಹಾಗಾಗಿ ನೀವೆಷ್ಟು ಹಣ ಉಳಿತಾಯ ಮಾಡಿದ್ದೀರಿ ಎಂಬುದನ್ನು ಯಾರಿಗೂ ಹೇಳಬೇಡಿ. ಅದನ್ನು ಆದಷ್ಟು ರಹಸ್ಯವಾಗಿಡಿ.

ಭವಿಷ್ಯದಲ್ಲಿನ ಹೂಡಿಕೆ ಬಗ್ಗೆ ಯಾರಿಗೂ ಹೇಳಬೇಡಿ:

ನೀವು ಮನೆ ಖರೀದಿಸುವ, ಹೊಸ ವ್ಯವಹಾರವನ್ನು ಪ್ರಾರಂಭಿಸುವ ಅಥವಾ ಹಣ ಹೂಡಿಕೆ ಮಾಡುವ ಯಾವುದೇ ವಿಚಾರಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ ಚಾಣಕ್ಯ. ಇಂತಹ ಯೋಜನೆಗಳನ್ನು ಇತರರ ಬಳಿ ಹಂಚಿಕೊಂಡಾಗ, ಅವರ ಸಲಹೆಗಳನ್ನು ನೀಡಲು ಆರಂಭಿಸುತ್ತಾರೆ. ಈ ಸಲಹೆಗಳಿಂದ ಗೊಂದಲಕ್ಕೊಳಗಾಗಿ ನಾವು ತಪ್ಪು ಹೆಜ್ಜೆ ಇಡುವ ಸಾಧ್ಯತೆ ಇರುತ್ತದೆ. ಇದು ಗಣನೀಯವಾಗಿ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇಂತಹ ಯಾವುದೇ ಸಂಗತಿಗಳನ್ನು ಯಾರೊಂದಿಗೂ ಶೇರ್‌ ಮಾಡಬೇಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ
ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು