
ಆಚಾರ್ಯ ಚಾಣಕ್ಯರು (Chanakya) ತಮ್ಮ ನೀತಿಶಾಸ್ತ್ರದಲ್ಲಿ ಯಾರೊಂದಿಗೆ ಸ್ನೇಹ ಬೆಳೆಸಬೇಕು, ವೈವಾಹಿಕ ಜೀವನ ಸಂತೋಷದಿಂದ ಕೂಡಿರಲು ಏನು ಮಾಡಬೇಕು, ನಮ್ಮ ಶತ್ರು ಯಾರು, ನಮ್ಮ ಮಿತ್ರ ಯಾರು, ಯಶಸ್ಸಿನ ಹಾದಿ ಹೀಗೆ ಜೀವನಕ್ಕೆ (Life) ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಹೇಳಿದ್ದಾರೆ. ಇದು ಇಂದಿಗೂ ನಮಗೆಲ್ಲರಿಗೂ ಸರಿಯಾದ ದಾರಿಯಲ್ಲಿ ನಡೆಯಲು ಮಾರ್ಗದರ್ಶನದಂತಿದೆ. ಅದೇ ರೀತಿ ಚಾಣಕ್ಯರು ಯಾರೇ ಆದರೂ ಸರಿ ಮದುವೆಯಾದ ಬಳಿಕ ಈ ಕೆಲವೊಂದಿಷ್ಟು ತಪ್ಪುಗಳನ್ನು ಮಾಡಲೇಬಾರದು ಎಂಬುದನ್ನು ಹೇಳಿದ್ದಾರೆ. ಹೌದು ದಾಂಪತ್ಯ ಜೀವನ (married life) ಸುಖಕರವಾಗಿ ಸಾಗಲು, ಸಂಬಂಧ ಇನ್ನಷ್ಟು ಬಲಗೊಳ್ಳಲು ವಿವಾಹಿತರು ಕೆಲವೊಂದು ತಪ್ಪುಗಳನ್ನು ಮಾಡಬಾರದು ಎಂದಿದ್ದಾರೆ. ಅದು ಏನು ಎಂಬುದನ್ನು ನೋಡೋಣ ಬನ್ನಿ.
ವಿವಾಹಿತ ಮಹಿಳೆಯಾಗಿರಲಿ ಅಥವಾ ವಿವಾಹಿತ ಪುರುಷನಾಗಿರಲಿ ಬೇರೊಬ್ಬ ಮಹಿಳೆ, ಪರ ಪುರುಷನ ಆಕರ್ಷಣೆಗೆ ಒಳಗಾಗಬಾರದು ಅಥವಾ ಪ್ರೀತಿಯಲ್ಲಿ ಬೀಳಬಾರದು. ಇದು ಖಂಡಿತವಾಗಿಯೂ ಸುಂದರ ಸಂಸಾರವನ್ನು ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯರು.
ಗಂಡ ಹೆಂಡತಿಯ ಸಂಬಂಧ ಎನ್ನುವಂತಹದ್ದು, ನಂಬಿಕೆ ಪ್ರೀತಿ-ವಿಶ್ವಾಸದ ಮೇಲೆ ನಿಂತಿರುವಂತಹದ್ದು. ಹೀಗಿರುವಾಗ ಸುಳ್ಳುಗಳನ್ನು ಹೇಳುತ್ತಾ ಹೋದರೆ ಕೊನೆಗೊಂದು ದಿನ ಇದೇ ಸುಳ್ಳಿನ ಕಾರಣದಿಂದ ಸಂಸಾರ ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು.
ಆಚಾರ್ಯ ಚಾಣಕ್ಯರ ಪ್ರಕಾರ ಅತಿಯಾದ ಕೋಪವು ಒಂದು ಸಂಬಂಧವನ್ನು ದುರ್ಬಲಗೊಳಿಸುತ್ತದೆ. ದಾಂಪತ್ಯದಲ್ಲಿ ಗಂಡ ಹೆಂಡತಿ ಯಾವಾಗಲೂ ತಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಬೇಕು. ಕೋಪದಲ್ಲಿ ದುಡುಕಿ ತೆಗೆದುಕೊಂಡ ನಿರ್ಧಾರವು ಇಬ್ಬರ ಭವಿಷ್ಯವನ್ನು ಹಾಳು ಮಾಡುತ್ತದೆ. ಆದ್ದರಿಂದ ಗಂಡ ಹೆಂಡತಿ ನಡುವೆ ಪ್ರೀತಿ ಇರಬೇಕೇ ವಿನಃ ಅತಿಯಾದ ಕೋಪ ಇರಬಾರದು.
ಇದನ್ನೂ ಓದಿ: ನದಿಗಳಿಗೆ ನಾಣ್ಯ ಎಸೆಯುವುದರಿಂದ ಇಷ್ಟಾರ್ಥಗಳು ಈಡೇರುತ್ತಾ? ಪ್ರೇಮಾನಂದ ಮಹಾರಾಜ್ ಹೇಳಿದ್ದೇನು?
ಗಂಡನಾದವನು ಹೆಂಡತಿಯನ್ನಾಗಿರಲಿ ಅಥವಾ ಪತ್ನಿಯಾದವಳು ತನ್ನ ಪತಿಯನ್ನು ಯಾವುದೇ ಕಾರಣಕ್ಕೂ ಕೀಳಾಗಿ ನೋಡಬಾರದು. ಹೌದು ನಾನೇ ಶ್ರೇಷ್ಠ ನನ್ನಿಂದಲೇ ನೀನು ಎಂಬ ದುರಹಂಕಾರವನ್ನು ತೋರಬಾರದು. ಬದಲಿಗೆ ಒಬ್ಬರನ್ನೊಬ್ಬರು ಸಮಾನವಾಗಿ ಕಾಣಬೇಕು. ಪರಸ್ಪರ ಗೌರವವನ್ನೂ ಕೊಡಬೇಕು.
ಕೆಲ ಪುರುಷರು ಅಥವಾ ಮಹಿಳೆಯರು ಮದುವೆಯ ಬಳಿಕ ತಮ್ಮ ಸಂಗಾತಿಗೆ ಮೋಸ ಮಾಡುತ್ತಾರೆ. ಈ ರೀತಿ ಯಾವತ್ತೂ ಮೋಸ ಮಾಡಬಾರದು ಇದರಿಂದ ಸುಂದರ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರಬೇಕು ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ