Chanakya Niti: ಚಾಣಕ್ಯರ ಈ ಮಾತುಗಳನ್ನು ಅನುಸರಿಸಿದರೆ ಜೀವನದಲ್ಲಿ ಎಂದಿಗೂ ಹಣದ ಕೊರತೆ ಬಾರದು

ಇಂದಿನ ದುಬಾರಿ ದುನಿಯಾದಲ್ಲಿ ದುಡಿಮೆಯಿದ್ದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ, ಎಷ್ಟೇ ದುಡಿದರೂ ಹಣ ನೀರಿನಂತೆ ಖರ್ಚಾಗಿ ಹೋಗುತ್ತದೆ ಎಂಬುದು ಹಲವರ ಗೋಳು. ಹೀಗೆ ಆಗ್ಬಾರ್ದು ಎಂದರೆ ಒಂದಷ್ಟು ತತ್ವಗಳನ್ನು ಪಾಲಿಸಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ನಿಮ್ಮ ಕೈಯಲ್ಲೂ ಹಣ ನಿಲ್ಲುತ್ತಿಲ್ಲವೇ? ಹಾಗಿದ್ರೆ ದುಡ್ಡಿನ ಕೊರತೆ ಬಾರದಿರಲು ಚಾಣಕ್ಯರ ಈ ಮಾತುಗಳನ್ನು ಅನುಸರಿಸಿ.

Chanakya Niti: ಚಾಣಕ್ಯರ ಈ ಮಾತುಗಳನ್ನು ಅನುಸರಿಸಿದರೆ ಜೀವನದಲ್ಲಿ ಎಂದಿಗೂ ಹಣದ ಕೊರತೆ ಬಾರದು
ಚಾಣಕ್ಯ ನೀತಿ
Image Credit source: Pinterest

Updated on: Oct 21, 2025 | 4:09 PM

ಕೆಲವೊಮ್ಮೆ ಎಷ್ಟೇ ಸಂಪಾದಿಸಿದರೂ ಹಣ (money) ಇದ್ದಕ್ಕಿದ್ದಂತೆ ಮಾಯವಾಗಿಬಿಡುತ್ತದೆ. ಜೇಬು ಖಾಲಿ ಖಾಲಿಯಾಗಿಬಿಡುತ್ತದೆ. ಅದರಲ್ಲೂ ಇಂದಿನ ಈ ದುಬಾರಿ ದುನಿಯಾದಲ್ಲಿ ಎಷ್ಟೇ ದುಡಿದರೂ ಹಣ ನೀರಿನಂತೆ ಖರ್ಚಾಗುತ್ತದೆ. ಎಷ್ಟೇ ದುಡಿದರೂ ಹಣ ಉಳಿತಾಯ ಮಾಡಲು ಆಗ್ತಿಲ್ಲ, ಕೈಯಲ್ಲಿ ದುಡ್ಡೇ ನಿಲ್ಲುತ್ತಿಲ್ಲ ಎಂದು ಹಲವರು ಗೊಣಗಾಡುತ್ತಿರುತ್ತಾರೆ. ನೀವು ಕೂಡ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದೀರಾ? ಹಾಗಿದ್ರೆ ಹಣಕ್ಕೆ ಸಂಬಂಧಿಸಿದ ಚಾಣಕ್ಯರ ಈ ಒಂದಷ್ಟು ಸಲಹೆಯನ್ನು ಪಾಲಿಸಿ. ಶ್ರೀಮಂತರಾಗಲು ಬಯಸುವವರು, ಹಣವನ್ನು ಉಳಿತಾಯ ಮಾಡಲು ಬಯಸುವವರು ಖಂಡಿತವಾಗಿಯೂ ಈ ಸಲಹೆಯನ್ನು ಪಾಲಿಸಲೇಬೇಕು ಎನ್ನುತ್ತಾರೆ ಚಾಣಕ್ಯರು. ಹಾಗಿದ್ರೆ ದುಡ್ಡಿನ ಕೊರತೆ ಬಾರದಿರಲು ಯಾವ ನೀತಿಯನ್ನು ಅನುಸರಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿದರೆ ಹಣದ ಕೊರತೆ ಬಾರದು:

ಪ್ರಾಮಾಣಿಕವಾಗಿ ಹಣ ಸಂಪಾದಿಸಲು ಪ್ರಾರಂಭಿಸಿ: ನೀವು ಜೀವನದುದ್ದಕ್ಕೂ ಶ್ರೀಮಂತರಾಗಿ ಉಳಿಯಲು ಬಯಸಿದರೆ, ನಿಮಗೆ ಹಣದ ಕೊರತೆ ಬರಬಾರದು ಎಂದಾದರೆ ನೀವು ಯಾವಾಗಲೂ ಪ್ರಾಮಾಣಿಕವಾಗಿ ಹಣವನ್ನು ಗಳಿಸಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ನೀವು ಅನ್ಯಾಯದ ವಿಧಾನಗಳ ಮೂಲಕ ಹಣವನ್ನು ಗಳಿಸಿದಾಗ, ಅದು ಹೆಚ್ಚು ಕಾಲ ಉಳಿಯುವುದಿಲ್ಲ. ನೀವು ಅನ್ಯಾಯದ ವಿಧಾನಗಳ ಮೂಲಕ ಹಣವನ್ನು ಗಳಿಸಿದ್ದರೆ, ಅದು ಹೇಗಾದರೂ ನಿಮ್ಮ ಕೈ ತಪ್ಪಿಹೋಗುತ್ತದೆ. ಹಾಗಾಗಿ ಒಳ್ಳೆಯ ದಾರಿಯಲ್ಲಿ ಪ್ರಾಮಾಣಿಕವಾಗಿ ಹಣ ಸಂಪಾದಿಸಿ.

ಅನುಪಯುಕ್ತ ವಸ್ತುಗಳಿಗೆ ಹಣ ಖರ್ಚು ಮಾಡಬೇಡಿ: ನಿಮ್ಮ ಬಳಿ ಹಣವಿದ್ದರೆ, ಅದನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನಿಷ್ಪ್ರಯೋಜಕ ವಸ್ತುಗಳಿಗೆ ಖರ್ಚು ಮಾಡಿದರೆ ಅಥವಾ ಅದನ್ನು ವ್ಯರ್ಥ ಮಾಡಿದರೆ, ಹಣ ಸುಮ್ನೆ ವೇಸ್ಟ್‌ ಆಗುತ್ತದೆ. ಮತ್ತು ಈ ಒಂದು ತಪ್ಪಿನಿಂದ ಸಾಕಷ್ಟು ಪಶ್ಚಾತಾಪ ಪಡಬೇಕಾಗುತ್ತದೆ. ಹಾಗಾಗಿ ಹಣವನ್ನು ನೋಡಿಕೊಂಡು ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಮತ್ತು ಗಳಿಸಿದ ದುಡ್ಡಿನಲ್ಲಿ ಹೆಚ್ಚು ಪಾಲು ಭವಿಷ್ಯಕ್ಕಾಗಿ ಹೂಡಿಕೆ ಮಾಡಿ, ಕೂಡಿಡಿ. ಹೀಗೆ ಮಾಡುವುದರಿಂದ ನಿಮಗೆ ಹಣದ ಸಮಸ್ಯೆ ಎಂದಿಗೂ ಬಾರದು ಬದಲಾಗಿ ನಿಮ್ಮ ಖಜಾನೆ ತುಂಬುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು.

ಇದನ್ನೂ ಓದಿ
ಮಹಿಳೆಯರು ಅಡುಗೆ ಮಾಡುವ ಸಂದರ್ಭದಲ್ಲಿ ಈ ತಪ್ಪುಗಳನ್ನು ಮಾಡಬಾರದು
ವಿದ್ಯಾರ್ಥಿಗಳು ಈ ಅಭ್ಯಾಸಗಳನ್ನು ತ್ಯಜಿಸಲೇಬೇಕು ಎನ್ನುತ್ತಾರೆ ಚಾಣಕ್ಯ
ಚಾಣಕ್ಯರ ಪ್ರಕಾರ ಈ ಅಭ್ಯಾಸಗಳಿರುವ ಜನ ಮಾತ್ರ ಶ್ರೀಮಂತರಾಗುತ್ತಾರಂತೆ
ಇಂತಹ ಸ್ನೇಹಿತರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ

ಇದನ್ನೂ ಓದಿ: ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಮುಖ್ಯವಾಗಿ ವಿಷಯಗಳನ್ನು ಗಮನಿಸಬೇಕು ಎನ್ನುತ್ತಾರೆ ಚಾಣಕ್ಯ

ಕಷ್ಟಪಟ್ಟು ದುಡಿಯಿರಿ: ಕಠಿಣ ಪರಿಶ್ರಮವೇ ವ್ಯಕ್ತಿಯನ್ನು ಆತನ ಗುರಿಯೆಡೆಗೆ ಕೊಂಡೊಯ್ಯುತ್ತದೆ ಎನ್ನುತ್ತಾರೆ ಚಾಣಕ್ಯ.  ಇವರು ಹೇಳುವಂತೆ ಸೋಮಾರಿತನವನ್ನು ಬದಿಗಿಟ್ಟು ಕಷ್ಟಪಟ್ಟು ದುಡಿಯುವ ವ್ಯಕ್ತಿಗೆ ಎಂದಿಗೂ ಹಣದ ಕೊರತೆ ಬರುವುದಿಲ್ಲ. ಆತ  ಕಠಿಣ ಪರಿಶ್ರಮದ ಮೂಲಕ ತನಗೆ ಬೇಕಾದ  ಎಲ್ಲವನ್ನೂ ಸಾಧಿಸಲು ಸಾಧ್ಯವಾಗುತ್ತದೆ.

ಯೋಜನೆ ರೂಪಿಸಿ: ನೀವು ಜೀವನದಲ್ಲಿ ಶ್ರೀಮಂತರಾಗಲು ಬಯಸಿದರೆ, ಹಣ ಉಳಿತಾಯ ಮಾಡಲು ಬಯಸಿದರೆ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಯೋಜನೆಗಳನ್ನು ರೂಪಿಸಿ.  ಆ ಯೋಜನೆ ಪ್ರಕಾರವೇ ಹಣ ಉಳಿತಾಯ, ಖರ್ಚು ಮಾಡಿ ಮತ್ತು ಆದರಷ್ಟು ವ್ಯರ್ಥ ಖರ್ಚುಗಳನ್ನು ತಪ್ಪಿಸಿ, ಹಣವನ್ನು ಉಳಿತಾಯ ಮಾಡುವತ್ತ ಗಮನ ಹರಿಸಿ. ಹೀಗೆ ಹಣವನ್ನು ಭವಿಷ್ಯಕ್ಕಾಗಿ ಎತ್ತಿಡುವ ವ್ಯಕ್ತಿಗೆ ಹಣದ ಸಮಸ್ಯೆ ಬರುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ