AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಚಾಣಕ್ಯರ ಈ ಮಾತುಗಳನ್ನು ಅನುಸರಿಸಿದವರು ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸು ಕಾಣುತ್ತಾರಂತೆ

ಜೀವನದಲ್ಲಿ ಎಲ್ಲರೂ ಯಶಸ್ಸನ್ನು ಬಯಸುತ್ತಾರೆ, ಆದರೆ ಯಶಸ್ಸನ್ನು ಗಳಿಸುವ ಸರಿಯಾದ ಮಾರ್ಗವನ್ನು ತಿಳಿದಿರುವವರು ಬಹಳ ಕಡಿಮೆ. ಹೀಗಿರುವಾಗ ನೀವು ಆಚಾರ್ಯ ಚಾಣಕ್ಯರ ಈ ಯಶಸ್ಸಿನ ಸಲಹೆಗಳನ್ನು ಅನುಸರಿಸಬಹುದು. ಚಾಣಕ್ಯರು ಒಬ್ಬ ವ್ಯಕ್ತಿಯು ಯಶಸ್ಸನ್ನು ಗಳಿಸಲು ಬೇಕಾಗಿರುವಂತಹ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಇವುಗಳನ್ನು ಅನುಸಿದರೆ ನೀವು ಸಹ ಖಂಡಿತವಾಗಿಯೂ ಲೈಫಲ್ಲಿ ಸಕ್ಸಸ್‌ ಆಗ್ತೀರಿ.

Chanakya Niti: ಚಾಣಕ್ಯರ ಈ ಮಾತುಗಳನ್ನು ಅನುಸರಿಸಿದವರು ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸು ಕಾಣುತ್ತಾರಂತೆ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Jun 10, 2026 | 8:46 PM

Share

ಜೀವನದಲ್ಲಿ ಯಶಸ್ಸನ್ನು (success) ಸಾಧಿಸುವ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಇದನ್ನು ಸಾಧಿಸುವುದೆಂದರೆ ಅಷ್ಟೇನೂ ಸುಲಭದ ಕೆಲಸವಲ್ಲ. ಯಶಸ್ಸಿನ ಪ್ರತಿಯೊಂದು ಮೆಟ್ಟಿಲು ಕಷ್ಟಕರವೆನಿಸುತ್ತದೆ. ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ, ಆತ್ಮವಿಶ್ವಾಸ, ದೃಢ ನಿರ್ಧಾರ ಎಲ್ಲವೂ ಬೇಕಾಗುತ್ತದೆ.  ಇದರ ಜೊತೆಗೆ ಆಚಾರ್ಯ ಚಾಣಕ್ಯರ ಈ ಕೆಲವೊಂದು ಮಾತುಗಳನ್ನು ಪಾಲಿಸುವ ಮೂಲಕ ಯಶಸ್ಸಿನ ಹಾದಿಯಲ್ಲಿ ಸಾಗಬಹುದು. ಚಾಣಕ್ಯರು ಜೀವನದಲ್ಲಿ ಯಶಸ್ಸನ್ನು ಗಳಿಸಲು ಬೇಕಾಗಿರುವಂತಹ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳನ್ನು ತಪ್ಪದೇ ಅನುಸರಿದರೆ ನೀವು ಸಹ ಜೀವನದಲ್ಲಿ ಸಕ್ಸಕ್‌ ಕಾಣ್ತೀರಿ.

ಚಾಣಕ್ಯರು ತಿಳಿಸಿರುವ ಯಶಸ್ಸಿನ ಮೂಲ ರಹಸ್ಯಗಳಿವು:

ಬಲವಾದ ಉದ್ದೇಶ ಅತ್ಯಗತ್ಯ: ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ, ಯಾವುದೇ ಕೆಲಸವನ್ನು ಸಾಧಿಸಲು ವ್ಯಕ್ತಿಯು ಬಲವಾದ ದೃಢಸಂಕಲ್ಪವನ್ನು ಹೊಂದಿರಬೇಕು ಎಂದು ಹೇಳುತ್ತಾರೆ. ಬಲವಾದ ಉದ್ದೇಶವನ್ನು ಹೊಂದಿರುವ ವ್ಯಕ್ತಿ ಬೇರೆ ವಿಚಾರಗಳ ಬಗ್ಗೆ ಯೋಚಿಸುವುದಿಲ್ಲ ಬದಲಾಗಿ ಆತನ ಗಮನವು ಗುರಿಯ ಕಡೆಗೆ ಇರುತ್ತದೆ. ಇದು ಆತನನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.

ವೈಫಲ್ಯಕ್ಕೆ ಹೆದರಬೇಡಿ: ಅನೇಕ ಜನರು ವೈಫಲ್ಯಕ್ಕೆ ಹೆದರಿ ಬಿಟ್ಟುಬಿಡುತ್ತಾರೆ. ಆಚಾರ್ಯ ಚಾಣಕ್ಯರು  ವೈಫಲ್ಯಗಳಿಗೆ ಹೆದರಬಾರದು, ಮರಳಿ ಪ್ರಯತ್ನವನ್ನು ಮಾಡುತ್ತಲೇ ಇರಬೇಕು. ಈ ರೀತಿ ಮರಳಿ ಮರಳಿ ಪ್ರಯತ್ನವನ್ನು ಮಾಡಿದರೆ ಖಂಡಿತವಾಗಿ ಯಶಸ್ಸನ್ನು ಸಾಧಿಸಬಹುದು ಎನ್ನುತ್ತಾರೆ.

ರಹಸ್ಯಗಳನ್ನು ಸುರಕ್ಷಿತವಾಗಿಡಬೇಕು: ಚಾಣಕ್ಯ ನೀತಿಯ ಪ್ರಕಾರ, ಜೀವನದಲ್ಲಿ ಯಶಸ್ವಿಯಾಗಲು ಬಯಸುವವರು ತಮ್ಮ ಯೋಜನೆಗಳು ಮತ್ತು ವೈಯಕ್ತಿಕ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ರಹಸ್ಯಗಳನ್ನು ಬಹಿರಂಗಪಡಿಸುವವರು ಹೆಚ್ಚಾಗಿ ತೊಂದರೆಗೆ ಸಿಲುಕುತ್ತಾರೆ. ಹಾಗಾಗಿ ನಿಮ್ಮ ಯಾವುದೇ ರಹಸ್ಯಗಳನ್ನು ಯಾರೊಂದಿಗೂ ಬಹಿರಂಗಪಡಿಸಬೇಡಿ.

ಸಮಯಕ್ಕೆ ಮಹತ್ವ ನೀಡಬೇಕು: ಸಮಯ ಅತ್ಯಂತ ಅಮೂಲ್ಯವಾದದದ್ದು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಸಮಯವನ್ನು ಗೌರವಿಸುವವರು, ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳುವವರು ಮಾತ್ರ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ನೀವು ಜೀವನದಲ್ಲಿ ಮುನ್ನಡೆಯಲು ಬಯಸಿದರೆ  ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಿ, ಸಮಯವನ್ನು ಎಂದಿಗೂ ವ್ಯರ್ಥ ಮಾಡಬೇಡಿ.

ಇದನ್ನೂ ಓದಿ: ಬುದ್ಧಿವಂತ ಮಹಿಳೆ ಮಾತ್ರ ವಿಶೇಷ ಗುಣಗಳನ್ನು ಹೊಂದಿರುವುದಂತೆ

ಕೆಟ್ಟ ಸಹವಾಸದಿಂದ ದೂರವಿರಬೇಕು: ಒಬ್ಬ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಅವನ ಸ್ನೇಹಿತರು ಮತ್ತು ಸುತ್ತಮುತ್ತಲಿನವರು ಪ್ರಮುಖ ಪಾತ್ರ ವಹಿಸುತ್ತಾರೆ. ಕೆಟ್ಟ ಸಹವಾಸವು ಅವನನ್ನು ತಪ್ಪು ದಾರಿಗೆ ಕೊಂಡೊಯ್ಯಬಹುದು ಅದೇ ಒಳ್ಳೆಯವರ  ಸಹವಾಸವು ವ್ಯಕ್ತಿಯ ಆಲೋಚನೆಗಳು ಮತ್ತು ಕಾರ್ಯಗಳನ್ನು ಸುಧಾರಿಸುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.  ಆದ್ದರಿಂದ, ಸ್ನೇಹಿತರನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಬೇಕು, ಒಳ್ಳೆಯವರ ಸಹವಾಸವನ್ನೇ ಮಾಡಬೇಕು. ಇದು ನಿಮ್ಮ ಯಶಸ್ಸಿಗೆ ಅಡ್ಡಿಯಾಗುವುದಿಲ್ಲ.

ಆತ್ಮವಿಶ್ವಾಸ ಅತ್ಯಗತ್ಯ: ಆತ್ಮವಿಶ್ವಾಸವೇ ಯಶಸ್ಸಿಗೆ ಆಧಾರ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ನಿಮ್ಮಲ್ಲಿ ಆತ್ಮವಿಶ್ವಾಸವಿದ್ದರೆ, ಯಾವುದೇ ಅಡೆತಡೆಗಳು ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ನೀವು ನಿಮ್ಮ ನಿರ್ಧಾರಗಳಲ್ಲಿ ದೃಢವಾಗಿರಬೇಕು. ನೀವು ಇತರರ ಅಭಿಪ್ರಾಯಗಳಿಗೆ ಹೆದರಬಾರದು. ಇದು ನಿಮ್ಮನ್ನು ಒಳಗೆ ಬಲಶಾಲಿಯಾಗಿಸುತ್ತದೆ, ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.

ಅವಕಾಶವನ್ನು ಕಳೆದುಕೊಳ್ಳಬೇಡಿ: ಚಾಣಕ್ಯ ನೀತಿಯ ಪ್ರಕಾರ, ಅವಕಾಶ ಸಿಕ್ಕಾಗಲೆಲ್ಲಾ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಯಾರೂ ಕಳೆದುಕೊಳ್ಳಬಾರದು. ಅವಕಾಶಗಳು ಸಿಕ್ಕಾಗ ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳದಿದ್ದರೆ ಮುಂದೊಂದು ದಿನ ವಿಷಾದ ಪಡಬೇಕಾಗುತ್ತದೆ. ಅದೇ ಸಿಕ್ಕಂತಹ ಪ್ರತಿಯೊಂದು ಅವಕಾಶಗಳನ್ನು ಬಳಸಿಕೊಳ್ಳುವವರು ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More