Chanakya Niti: ಈ ಸಂದರ್ಭಗಳಲ್ಲಿ ಮಾತನಾಡುವುದಕ್ಕಿಂತ ನೀವು ಮೌನವಾಗಿದ್ದಷ್ಟು ಒಳ್ಳೆಯದು

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತೊಂದಿದೆ. ಈ ಗಾದೆ ಮಾತಿಗೆ ಅನುಸಾರವಾಗಿ ನಾವು ಆಡುವ ಮಾತಿನ ಬಗ್ಗೆ ಅರಿವಿರಬೇಕು. ನಾಲಗೆ ನಿಯಂತ್ರಣದಲ್ಲಿರಬೇಕು. ಅದರಲ್ಲೂ ಈ ಒಂದಷ್ಟು ಸಂದರ್ಭಗಳಲ್ಲಿ ಮಾತನಾಡುವುದಕ್ಕಿಂತ ಮೌನವಾಗಿರುವುದೇ ತುಂಬಾ ಒಳ್ಳೆಯದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹಾಗಿದ್ರೆ ಇವರು ಹೇಳುವಂತೆ ಯಾವೆಲ್ಲಾ ಸಂದರ್ಭದಲ್ಲಿ ಮನುಷ್ಯನಾದವನು ಮೌನವಾಗಿರಬೇಕು ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಸಂದರ್ಭಗಳಲ್ಲಿ ಮಾತನಾಡುವುದಕ್ಕಿಂತ ನೀವು ಮೌನವಾಗಿದ್ದಷ್ಟು ಒಳ್ಳೆಯದು
ಚಾಣಕ್ಯ ನೀತಿ
Image Credit source: vecteezy

Updated on: Oct 01, 2025 | 5:24 PM

ಮಾತು ಬೆಳ್ಳಿ, ಮೌನ  ಬಂಗಾರ ಎಂಬ ಗಾದೆ ಮಾತು ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಅಂದ್ರೆ ಇದರರ್ಥ ಮಾತಿಗಿಂತ ಮೌನ (Silence) ಅತ್ಯಂತ ಶಕ್ತಿಶಾಲಿ ಎಂಬುದು. ಕೆಲವು ಬಾರಿ ನಮ್ಮ ಮಾತು ನಮ್ಮ ವ್ಯಕ್ತಿತ್ವವನ್ನು ಇತರರೊಂದಿಗಿನ ಸಂಬಂಧವನ್ನೇ ಕೆಡಿಸಿಬಿಡುತ್ತದೆ. ಹಾಗಾಗಿ ಕೆಲವೊಂದು ಸಂದರ್ಭಗಳಲ್ಲಿ ಮಾತನಾಡುವುದಕ್ಕಿಂತ ಮೌನ ವಹಿಸಿದಷ್ಟು ತುಂಬಾನೇ ಒಳ್ಳೆಯದು ಎಂದು ಚಾಣಕ್ಯರು ಹೇಳುತ್ತಾರೆ. ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿ ಶಾಸ್ತ್ರದಲ್ಲಿ ಯಶಸ್ಸು, ದಾಂಪತ್ಯ, ಸ್ನೇಹ, ವೃತ್ತಿ, ಉದ್ಯೋಗ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಈ ಒಂದಷ್ಟು ಸಮಯದಲ್ಲಿ ಮನುಷ್ಯನಾದವನು ಮಾತನಾಡುವುದಕ್ಕಿಂತ ಮೌನವಾಗಿರುವುದು ಉತ್ತಮ ಎಂಬುದನ್ನು ಹೇಳಿದ್ದಾರೆ. ಹಾಗಿದ್ರೆ ಅವರು ಹೇಳಿರುವಂತೆ ಯಾವ ಸಮಯದಲ್ಲಿ ಮೌನವಾಗಿದ್ದಷ್ಟು ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.

ಯಾವ ಸಂದರ್ಭಗಳಲ್ಲಿ ಮೌನವಾಗಿರಬೇಕು ಗೊತ್ತಾ?

ಮೂರ್ಖ ಜನರೊಂದಿಗೆ ವ್ಯವಹರಿಸುವಾಗ: ಮೂರ್ಖ ಜನರೊಂದಿಗೆ ವಾದ ಮಾಡುವುದು ವ್ಯರ್ಥ ಎನ್ನುತ್ತಾರೆ ಚಾಣಕ್ಯ. ಮೂರ್ಖರೊಂದಿಗೆ ನೀವು ಮಾತನಾಡುವುದಕ್ಕಿಂತ ಮೌನವಾಗಿರಿ. ಇದರಿಂದ ನೀವು ನಿಮ್ಮ ಗೌರವವನ್ನು ಕಾಪಾಡಿಕೊಳ್ಳಬಹುದು. ಜೊತೆಗೆ ಅನಗತ್ಯ ಜಗಳಗಳನ್ನು ಸಹ ತಪ್ಪಿಸಬಹುದು.

ಕೋಪದಲ್ಲಿರುವಾಗ: ಕೋಪವೇ ಮನುಷ್ಯನ ಅತಿದೊಡ್ಡ ಶತ್ರು ಎಂದು ಚಾಣಕ್ಯ ಹೇಳುತ್ತಾರೆ. ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ತಪ್ಪಾಗಿರುವಂತೆ, ಕೋಪದಲ್ಲಿರುವಾಗ ಮಾತನಾಡುವುದು ಕೂಡ ದೊಡ್ಡ ತಪ್ಪು. ಏಕೆಂದರೆ ಕೋಪದಲ್ಲಿ ಮಾತನಾಡಿದಾಗ ಪರಿಸ್ಥಿತಿ ಮತ್ತಷ್ಟು ಹಾಳಾಗುತ್ತದೆ. ಮಾತುಗಳು ಸಹ ಕಠೋರವಾಗಿತ್ತದೆ. ಆದ ಕಾರಣ ಸಾಧ್ಯವಾದಷ್ಟು ಮೌನವಾಗಿರಿ.

ಇದನ್ನೂ ಓದಿ
ಈ ವಿಚಾರಗಳನ್ನು ಅಪ್ಪಿತಪ್ಪಿಯೂ ಯಾರೊಂದಿಗೂ ಹಂಚಿಕೊಳ್ಳಬೇಡಿ
ಇಂತಹ ಸ್ಥಳಗಳಲ್ಲಿ ವಾಸಿಸುವ ಜನರು ಎಂದಿಗೂ ಪ್ರಗತಿ ಹೊಂದುವುದಿಲ್ಲ
ಈ ನಾಲ್ಕು ವಿಚಾರಗಳ ಬಗ್ಗೆ ಸಂಕೋಚ, ನಾಚಿಕೆ ಪಡಬಾರದು
ವಿವಾಹಿತ ಪುರುಷರು ಈ ಕೆಲಸಗಳನ್ನು ಎಂದಿಗೂ ಮಾಡಬಾರದು

ಹಠಮಾರಿ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ: ಹಠಮಾರಿ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಅನಗತ್ಯ ಮಾತುಗಳನ್ನಾಡುವುದನ್ನು ತಪ್ಪಿಸುವುದು ಉತ್ತಮ ಎನ್ನುತ್ತಾರೆ ಚಾಣಕ್ಯ. ಏಕೆಂದರೆ ಹಠಮಾರಿಗಳು ತಾವು ಮಾಡಿದ್ದು ತಪ್ಪಾಗಿದ್ದರೂ, ತಾವು ಮಾಡಿದ್ದೇ ಸರಿ ಎಂದು ವಾದಿಸುತ್ತಾರೆ. ಇಂತಹ ಜನರೊಂದಿಗಿದೆ ವಾದ ಮಾಡುವುದು ಕೂಡ ವ್ಯರ್ಥ.

ಸರ್ವಾಧಿಕಾರಿಗಳ ಮುಂದೆ: ಕಚೇರಿಯಲ್ಲಾಗಿರಲಿ ಅಥವಾ ವೈಯಕ್ತಿಕ ಜೀವನದಲ್ಲಾಗಿರಲಿ ಅಧಿಕಾರ ಚಲಾಯಿಸುವವರೊಂದಿಗೆ, ಸರ್ವಾಧಿಕಾರವನ್ನು ತೋರುವವರೊಂದಿಗೆ ಮಾತನಾಡುವುದನ್ನು ತಪ್ಪಿಸಿ. ಇಂತಹ ಜನರೊಂದಿಗೆ ಮಾತನಾಡುವುದರಿಂದ ಅನಗತ್ಯ ಜಗಳ ಸೃಷ್ಟಿಯಾಗುವುದಲ್ಲದೆ, ನಿಮ್ಮ ನೆಮ್ಮದಿ ಸಹ ಹಾಳಾಗುತ್ತದೆ.

ಮಾದಕ ವ್ಯಸನಿಗಳೊಂದಿಗೆ: ಮದ್ಯಪಾನ ಅಥವಾ ಮಾದಕ ವ್ಯಸನಿಗಳೊಂದಿಗೆ ಮಾತನಾಡುವುದು ಅರ್ಥಹೀನ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಅಂತಹ ಜನರೊಂದಿಗೆ ಮಾತನಾಡುವುದರಿಂದ ಸಮಯವೂ ವ್ಯರ್ಥ, ಜಗಳಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಅಂತಹ ಜನರೊಂದಿಗೆ ಮಾತನಾಡದೆ ಮೌನವಾಗಿರುವುದು ಒಳ್ಳೆಯದು.

ಇದನ್ನೂ ಓದಿ: ನಿಮ್ಮ ವಿಚಾರಗಳನ್ನು ಅಪ್ಪಿತಪ್ಪಿಯೂ ಯಾರೊಂದಿಗೂ ಹಂಚಿಕೊಳ್ಳಬಾರದು ಎನ್ನುತ್ತಾರೆ ಚಾಣಕ್ಯ

ಕಠಿಣ ಪರಿಸ್ಥಿತಿಯಲ್ಲಿ: ಜೀವನದಲ್ಲಿ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದಾಗ ನೀವು ಸಾಧ್ಯವಾದಷ್ಟು ಮೌನವಾಗಿರುವುದು ಒಳ್ಳೆಯದು. ಇಂತಹ ಪರಿಸ್ಥಿತಿಯಲ್ಲಿ ಮೌನವನ್ನು ವಹಿಸಿದರೆ ಸ್ಪಷ್ಟತೆಯನ್ನು ಕಂಡುಕೊಳ್ಳಲು ಮತ್ತು ಉತ್ತಮವಾಗಿ ಯೋಚಿಸಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಇತರರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ: ಮಾತು ಬೆಳ್ಳಿ, ಮೌನ ಬಂಗಾರ ಎಂಬ ಮಾತಿನಂತೆ ಇತರರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವಾಗ ಮಾತನಾಡದೆ, ಎಚ್ಚರಿಕೆಯಿಂದ ಅವರ ಮಾತುಗಳನ್ನು ಕೇಳುವ ಮೂಲಕ ನೀವು ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಬಹುದು. ಅವರು ಎಂತಹ ಜನರೆಂಬುದನ್ನು ಅರ್ಥಮಾಡಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ