ನಿಮ್ಮ ವಯಸ್ಸಿನ ಆಧಾರದ ಮೇಲೆ ಬಾಯಿಯ ಆರೋಗ್ಯ ಕಾಪಾಡಲು ತಜ್ಞರು ನೀಡಿರುವ ಸಲಹೆ ಇಲ್ಲಿದೆ

|

Updated on: Mar 16, 2023 | 2:32 PM

ಪ್ರತಿನಿತ್ಯ ಬಾಯಿಯ ಹಾಗೂ ಹಲ್ಲುಗಳ ಆರೈಕೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಎಲ್ಲಾ ವಯೋಮಾನದವರು ತೆಗೆದುಕೊಳ್ಳಬೇಕಾದ ಬಾಯಿಯ ಆರೈಕೆಯ ಕುರಿತು ಮಾಹಿತಿ ಇಲ್ಲಿದೆ.

ನಿಮ್ಮ ವಯಸ್ಸಿನ ಆಧಾರದ ಮೇಲೆ ಬಾಯಿಯ ಆರೋಗ್ಯ ಕಾಪಾಡಲು ತಜ್ಞರು ನೀಡಿರುವ ಸಲಹೆ ಇಲ್ಲಿದೆ
ಬಾಯಿಯ ಹಾಗೂ ಹಲ್ಲುಗಳ ಆರೈಕೆ
Follow us on

ಪ್ರತಿಯೊಬ್ಬರೂ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಆರೋಗ್ಯಕರ ಹಲ್ಲುಗಳನ್ನು ಮತ್ತು ಒಸಡುಗಳನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಇದು ದೀರ್ಘಕಾಲದವರೆಗೆ ಹಲ್ಲುಗಳನ್ನು ಸದೃಢವಾಗಿರುವಂತೆ ಮಾಡುತ್ತದೆ. ಎಲ್ಲಾ ವಯೋಮಾನದವರೂ ಕೂಡಾ ಪ್ರತಿನಿತ್ಯ ತಪ್ಪದೆ ಬಾಯಿಯ ಆರೈಕೆಯನ್ನು ಮಾಡಬೇಕಾಗುತ್ತದೆ. ಎಸ್‌ಟಿಐಎಂ ಓರಲ್ ಕೇರ್‌ನ ನಿರ್ದೇಶಕ ವಿರೇನ್ ಖುಲ್ಲರ್ ಅವರು ವಿವಿಧ ವಯೋಮಾನದವರಿಗೆ ಉತ್ತಮ ಬಾಯಿಯ ಆರೈಕೆಯ ಅಭ್ಯಾಸಗಳು ಮತ್ತು ಆರೋಗ್ಯಕರ ಹಲ್ಲು ಮತ್ತು ಒಸಡುಗಳನ್ನು ಕಾಪಾಡಿಕೊಳ್ಳುವ ವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ವಯಸ್ಸಿನ ಆಧಾರದ ಮೇಲೆ ತಜ್ಞರು ನೀಡಿರುವ ಸಲಹೆ ಇಲ್ಲಿದೆ: 

0-12 ತಿಂಗಳ ಶಿಶುವಿನ ಬಾಯಿಯ ಆರೋಗ್ಯ:

  • ಚಿಕ್ಕ ಮಗುವಿಗೆ ಪ್ರತಿಬಾರಿ ಆಹಾರ ನೀಡಿದ ನಂತರ ಮಗುವಿನ ಒಸಡುಗಳನ್ನು ಸ್ವಚ್ಛವಾದ, ಒದ್ದೆ ಮಾಡಿದ ಮಸ್ಲಿನ್ ಬಟ್ಟೆಯಿಂದ ಸ್ವಚ್ಛಗೊಳಿಸಿ.
  • ಮಗುವನ್ನು ಹಾಲಿನ ಬಾಟಲಿ ಬಾಯಲ್ಲಿಟ್ಟು ಮಲಗಿಸುವುದನ್ನು ತಪ್ಪಿಸಿ, ಏಕೆಂದರೆ ಇದು ಹಲ್ಲಿನ ಕೊಳೆತಕ್ಕೆ ಕಾರಣವಾಗಬಹುದು.
  • ಶಿಶುಗಳಿಗೆ ಪುಟ್ಟ ಹಲ್ಲು ಬೆಳೆದಿರಲಿ ಅಥವಾ ಹಲ್ಲು ಇಲ್ಲದಿರಲಿ ಆದರೂ ಪ್ರತಿನಿತ್ಯ ಬ್ರಶ್ ಅಥವಾ ಫಿಂಗರ್ ಬ್ರಶ್‌ನಿಂದ ಮಗುವಿನ ಒಸಡುಗಳು ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸಬೇಕು.

3ರಿಂದ 10 ವರ್ಷದ ಮಕ್ಕಳ ಬಾಯಿಯ ಆರೋಗ್ಯ:

ಆರೋಗ್ಯಕರ ಹಲ್ಲು ಮತ್ತು ಒಸಡುಗಳನ್ನು ಬೆಂಬಲಿಸಲು ಸಹಾಯ ಮಾಡುವ ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಡೈರಿ ಉತ್ಪನ್ನಗಳು ಸೇರಿದಂತೆ ಸಮತೋಲಿತ ಆಹಾರಗಳನ್ನು ಮಕ್ಕಳಿಗೆ ನೀಡಿ. ಹಲ್ಲುಗಳ ನಡುವೆ ಆಹಾರಗಳು ಸಿಕ್ಕಿಕೊಂಡಿದ್ದರೆ, ಅವುಗಳನ್ನು ಸ್ವಚ್ಛಗೊಳಿಸುತ್ತಿರಿ. ಮಕ್ಕಳ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳನ್ನು ನಿಯಮಿತವಾಗಿ ದಂತವೈದ್ಯರನ್ನು ಭೇಟಿಯಾಗಿ.

ಇದನ್ನೂ ಓದಿ: ನಿಮ್ಮ ಮಗು ಹೊಸಬರ ಜೊತೆ ಮಾತನಾಡಲು ಕಷ್ಟ ಪಡುತ್ತಿದ್ದಾರೆ? ಇಲ್ಲಿವೆ ಪೋಷಕರಿಗೆ ಕೆಲವು ಸಲಹೆಗಳು

10 ರಿಂದ 15 ವರ್ಷ ಹದಿಹರೆಯದವರು:

ನಿಯಮಿತವಾಗಿ ಹಲ್ಲುಜ್ಜುವುದು ಮತ್ತು ಹಲ್ಲುಗಳು ಸ್ವಚ್ಛಗೊಳಿಸುತ್ತಿರಬೇಕು. ಹದಿಹರೆಯದ ವಯಸ್ಸಿನ ಮಕ್ಕಳು ಆದಷ್ಟು ಸಕ್ಕರೆ ಮತ್ತು ಆಮ್ಲೀಯ ಆಹಾರಗಳು ಮತ್ತು ಪಾನೀಯಗಳನ್ನು ಸೇವಿಸಿದಂತೆ ನೋಡಿಕೊಳ್ಳಿ. ಏಕೆಂದರೆ ಅವುಗಳು ಹಲ್ಲುಗಳಿಗೆ ಹೆಚ್ಚು ಹಾನಿಯನ್ನುಂಟುಮಾಡುತ್ತದೆ. ಫ್ಲೋರೈಡ್ ಟೂತ್ ಪೇಸ್ಟ್​​​ ನಿಯಮಿತವಾಗಿ ಬಳಸುವ ಮೂಲಕ ಹಲ್ಲಿನ ಕವಚ ಅಥವಾ ಮೇಲ್ಮೈ ಪದರವನ್ನು ಬಲಪಡಿಸಬಹುದು.

ವಯಸ್ಕರರು (18-64 ವರ್ಷ):

ದಿನಕ್ಕೆ ಎರಡು ಬಾರಿಯಾದರೂ ಬ್ರಶ್ ಮಾಡುವ ಮೂಲಕ ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
ನಿಮ್ಮ ಹಲ್ಲಿನ ಕೊಳೆತ ಮತ್ತು ಸವೆತಕ್ಕೆ ಕಾರಣವಾಗುವ ಸಕ್ಕರೆ ಮತ್ತು ಆಮ್ಲೀಯ ಆಹಾರ ಹಾಗೂ ಪಾನೀಯಗಳ ಸೇವನೆಯನ್ನು ಕಡಿತಗೊಳಿಸಬೇಕು. ಹಲ್ಲುಗಳ ನಿಯಮಿತ ತಪಾಸಣೆ ಮತ್ತು ಶುಚಿಗೊಳಿಸುವಿಕೆಗಾಗಿ ದಂತವೈದ್ಯರನ್ನು ಭೇಟಿ ಮಾಡಿ

ಹಿರಿಯರು (65 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು):

ಫ್ಲೋರೈಡ್ ಟೂತ್ ಪೇಸ್ಟ್ ಮತ್ತು ಇಂಟರ್‌ಡೆಂಟಲ್ ಕ್ಲೀನಿಂಗ್‌ನೊಂದಿಗೆ ದಿನಕ್ಕೆ ಎರಡು ಬಾರಿ ಹಲ್ಲುಜ್ಜಬೇಕು.
ಬಾಯಿಯನ್ನು ಒಣಗದಂತೆ ಯಾವಾಗಲೂ ತೇವವಾಗಿರುವಂತೆ ನೋಡಿಕೊಳ್ಳಬೇಕು. ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಗಾಗ್ಗೆ ದಂತವೈದ್ಯರನ್ನು ಭೇಟಿಯಾಗುತ್ತಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:32 pm, Thu, 16 March 23