ಕಾಶ್ಮೀರಕ್ಕೆ ಹೋಗಲು ಪ್ಲಾನ್ ಮಾಡುತ್ತಿರುವವರಿಗೆ ಸಿಹಿ ಸುದ್ದಿ; IRCTC ವತಿಯಿಂದ 6 ದಿನದ ಜನ್ನತ್-ಎ-ಕಾಶ್ಮೀರ ಟೂರ್ ಪ್ಯಾಕೇಜ್ ಘೋಷಣೆ

ಕಾಶ್ಮೀರಕ್ಕೆ ಹೋಗಬೇಕು ಎಂದುಕೊಂಡವರಿಗೆ IRCTC ಸಿಹಿ ಸುದ್ದಿ ನೀಡಿದ್ದು 6 ದಿನಗಳ ಕಾಶ್ಮೀರ ಟೂರ್ ಪ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್​ನಲ್ಲಿ ಊಟ, ವಸತಿ ಸೇರಿದಂತೆ ಎಲ್ಲಾ ರೀತಿಯ ವೆಚ್ಚ ಒಳಗೊಂಡಿದೆ.

ಕಾಶ್ಮೀರಕ್ಕೆ ಹೋಗಲು ಪ್ಲಾನ್ ಮಾಡುತ್ತಿರುವವರಿಗೆ ಸಿಹಿ ಸುದ್ದಿ; IRCTC ವತಿಯಿಂದ 6 ದಿನದ ಜನ್ನತ್-ಎ-ಕಾಶ್ಮೀರ ಟೂರ್ ಪ್ಯಾಕೇಜ್ ಘೋಷಣೆ
ಕಾಶ್ಮೀರ
Follow us
ಆಯೇಷಾ ಬಾನು
|

Updated on: Mar 17, 2023 | 8:00 AM

ಭೂಮಿ ಮೇಲಿನ ಸ್ವರ್ಗ ಎಂದೆ ಕರೆಸಿಕೊಳ್ಳುವ ಜಮ್ಮು ಕಾಶ್ಮೀರ(Jammu Kashmir) ನೋಡಬೇಕೆಂಬುವುದು ಅನೇಕ ಜನರ ಆಸೆ. ಸದ್ಯ ಕಾಶ್ಮೀರದಲ್ಲಿ ಬೇಸಿಗೆಯ ರಜೆಯನ್ನು ಕಳೆಯಲು ಇಷ್ಟ ಪಡುವವರಿಗೆ ಐಆರ್​ಸಿಟಿಸಿ(IRCTC )ಶುಭ ಸುದ್ದಿ ನೀಡಿದೆ. ಭಾರತೀಯ ರೈಲ್ವೆ ಕಾಶ್ಮೀರ ಟೂರ್ ಪ್ಯಾಕೇಜ್(Jannat-e-Kashmir Tour Package) ಅನ್ನು ಘೋಷಿಸಿದೆ. 6-ದಿನಗಳ ಈ ಕಾಶ್ಮೀರ ಪ್ರವಾಸದ ಪ್ಯಾಕೇಜ್‌ನಲ್ಲಿ ಊಟ, ವಸತಿ ಮತ್ತು ವಿಮಾನ ದರ ಸೇರಿದಂತೆ ಎಲ್ಲಾ ಪ್ರಯಾಣ ವೆಚ್ಚಗಳು ಒಳಗೊಂಡಿವೆ.

ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಭಾರತೀಯ ರೈಲ್ವೆಯ ಒಂದು ವಿಭಾಗವಾಗಿದ್ದು, ಈ ಕಾಶ್ಮೀರ ಪ್ರವಾಸದ ಪ್ಯಾಕೇಜ್​ಗೆ ಜನ್ನತ್-ಎ-ಕಾಶ್ಮೀರ್ ಎಂಬ ಹೆಸರು ನೀಡಲಾಗಿದೆ. ಈ ಪ್ಯಾಕೇಜ್ ಏಪ್ರಿಲ್ 9 ರಿಂದ ಪ್ರಾರಂಭವಾಗುತ್ತೆ.

ಕಾಶ್ಮೀರ ಟೂರ್ ಪ್ಯಾಕೇಜ್​ನಲ್ಲಿ ಏನೇನು ಸವಲತ್ತುಗಳಿವೆ?

ಈ ಪ್ಯಾಕೇಜ್​ನಲ್ಲಿ ನಿಮ್ಮ ರೌಂಡ್-ಟ್ರಿಪ್ ಎಕಾನಮಿ ಫ್ಲೈಟ್ ಟಿಕೆಟ್‌ಗಳನ್ನು ಕವರ್ ಮಾಡಲಾಗುವುದು. ಮತ್ತು ಶ್ರೀನಗರದಲ್ಲಿ ಬೋಟ್‌ ಹೌಸ್​ನಲ್ಲಿ ಒಂದು ರಾತ್ರಿ ಕಳೆಯಲು ಜೊತೆಗೆ ಹೋಟೆಲ್‌ನಲ್ಲಿ ನಾಲ್ಕು ರಾತ್ರಿ ತಂಗುವ ವೆಚ್ಚ ಭರಿಸಲಾಗುತ್ತೆ. ಅಲ್ಲದೆ, ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ನಾನ್-ಎಸಿ ವಾಹನದಲ್ಲಿ ಕರೆದುಕೊಂಡು ಹೋಗಿ ತೋರಿಸಲಾಗುತ್ತೆ. ಸೋನ್ಮಾರ್ಗ್, ಗುಲ್ಮಾರ್ಗ್, ಪಹಲ್ಗಾಮ್, ದಾಲ್ ಸರೋವರ ಮತ್ತು ಹಲವಾರು ಇತರ ರಮಣೀಯ ಸ್ಥಳಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ.

ಇದನ್ನೂ ಓದಿ: Bharat Nepal Ashtha Yatra: ಮಾರ್ಚ್​ 31 ರಿಂದ ಭಾರತ ನೇಪಾಳ ಆಸ್ತಾ ಯಾತ್ರೆ ಆರಂಭಿಸಲಿದೆ ಭಾರತೀಯ ರೈಲ್ವೆ, ವಿವರಗಳು ಇಲ್ಲಿವೆ

IRCTC ಕಾಶ್ಮೀರ ಪ್ರವಾಸ ಪ್ಯಾಕೇಜ್ ದರ ಎಷ್ಟು?

ಕಾಶ್ಮೀರ ಪ್ರವಾಸದ ಪ್ಯಾಕೇಜ್‌ನ ವೆಚ್ಚವು 41,300 ರೂ ರಿಂದ ಪ್ರಾರಂಭವಾಗಿ 61,000 ವರೆಗೆ ಇರುತ್ತದೆ. ಒಬ್ಬ ವ್ಯಕ್ತಿಯ ಟಿಕೆಟ್‌ ದರ ಸುಮಾರು 60,100ರೂ ವರೆಗೂ ಹೋಗಬಹುದು. ಆದರೆ ಇಬ್ಬರು ಒಟ್ಟಿಗೆ ಪ್ರಯಾಣಿಸಿದರೆ ವೆಚ್ಚವು ಪ್ರತಿ ವ್ಯಕ್ತಿಗೆ 44,900ರೂಗೆ ಇಳಿಯುತ್ತದೆ. ಮೂರು ಜನರು ಒಟ್ಟಿಗೆ ಪ್ರಯಾಣಿಸುತ್ತಿದ್ದರೆ, ಪ್ರತಿ ವ್ಯಕ್ತಿಗೆ 44,000 ಗೆ ಇಳಿಯುತ್ತದೆ. ಹಾಸಿಗೆ ಇಲ್ಲದ ಮಕ್ಕಳ ಟಿಕೆಟ್ ದರ 41,300ರೂ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್