ಅಯೋಧ್ಯೆಯ ಭವ್ಯವಾದ ರಾಮಮಂದಿರ ಜನವರಿ 22 ರಂದು ಉದ್ಘಾಟನೆಗೊಳ್ಳಲಿದೆ. ರಾಮ ಹುಟ್ಟಿದ ನೆಲದಲ್ಲಿ ರಾಮಮಂದಿರವನ್ನು ಕಣ್ತುಂಬಿಸಿಕೊಳ್ಳಬೇಕು ಎಂಬ ಸಾಕಷ್ಟು ಭಕ್ತರ ಕನಸು ಇದೀಗಾ ನನಸಾಗುತ್ತಿದೆ.ಈ ವಿಶೇಷ ಸಂದರ್ಭದಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ 7000 ಕೆಜಿ ಹಲ್ವಾವನ್ನು ಪ್ರಸಾದ ರೂಪದಲ್ಲಿ ತಯಾರಿಸಲಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಸಾದ ಸಿದ್ಧಪಡಿಸುವುದರ ಹಿಂದೆ ಯಾರ ಕೈವಾಡವಿದೆ ಎಂಬುದು ಭಕ್ತರಲ್ಲಿ ಕುತೂಹಲ ಮೂಡಿಸಿದೆ.ಈ ಪ್ರಸಾದದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ನಾಗ್ಪುರದ 12 ವಿಶ್ವ ದಾಖಲೆ ಮುಡಿಗೇರಿಸಿಕೊಂಡಿರುವ ಬಾಣಸಿಗ ವಿಷ್ಣು ಮನೋಹರ್.
ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಪ್ರಸಾದವಾಗಿ 7000 ಕೆಜಿ ಹಲ್ವಾವನ್ನು ತಯಾರಿಸಲಾಗುತ್ತದೆ. ಈ ಪ್ರಸಾದವನ್ನು 1.5 ಲಕ್ಷ ರಾಮ ಭಕ್ತರಿಗೆ ನೀಡಲಾಗುತ್ತದೆ. ನಾಗ್ಪುರದ ವಿಷ್ಣು ಮನೋಹರ್ ಅವರು ಈ ಭಾರಿ ಪ್ರಮಾಣದ ಹಲ್ವಾ ತಯಾರಿಸುವ ಹೊಣೆ ಹೊತ್ತಿದ್ದಾರೆ.ಇಷ್ಟು ದೊಡ್ಡ ಪ್ರಮಾಣದಲ್ಲಿ ಹಲ್ವಾ ತಯಾರಿಸಲು ನಾಗ್ಪುರದಿಂದ ಕಡಾಯಿಯನ್ನೂ ತರಿಸಲಾಗಿದ್ದು,ಸುಮಾರು 1400 ಕೆ.ಜಿ ತೂಕದ ಈ ಕಡಾಯಿಯಲ್ಲಿ ರಾಮನ ಪ್ರಸಾದವನ್ನು ತಯಾರಿಸಲಾಗುತ್ತದೆ.
ಈ ಹಲ್ವಾ ತಯಾರಿಸಲು 900 ಕೆಜಿ 900 ಕೆಜಿ ಸೂಜಿ ರವೆ, 1000 ಕೆಜಿ ಸಕ್ಕರೆ, 2500 ಲೀಟರ್ ಹಾಲು, 300 ಕೆಜಿ ಡ್ರೈ ಫ್ರೂಟ್ಸ್, 1000 ಕೆಜಿ ತುಪ್ಪ ಮತ್ತು 2500 ಲೀಟರ್ ನೀರನ್ನು ಬಳಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇಲ್ಲಿಯವರೆಗೆ ವಿಷ್ಣು ಮನೋಹರ್ ಅವರು 12 ವಿಶ್ವ ದಾಖಲೆಗಳನ್ನು ಮಾಡಿದ್ದಾರೆ. ಇತ್ತೀಚೆಗಷ್ಟೇ 285 ನಿಮಿಷದಲ್ಲಿ ಅನ್ನ ಸೇರಿದಂತೆ 75 ಬಗೆಯ ಖಾದ್ಯಗಳನ್ನು ತಯಾರಿಸಿ ವಿಶ್ವ ದಾಖಲೆಯನ್ನು ಬರೆದಿದ್ದರು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:46 pm, Fri, 12 January 24