ನಿಮ್ಮ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸಲು ಮಧ್ಯಾಹ್ನದ ಬಳಿಕ ಈ ರೀತಿ ಮಾಡಿ
ಇಡೀ ದಿನ ಚೇರ್ ಮೇಲೆ ಕುಳಿತುಕೊಳ್ಳುವುದು ನಮ್ಮ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದರೆ, ಕೆಲವು ವಿಷಯಗಳ ಬಗ್ಗೆ ಗಮನಹರಿಸುವುದರಿಂದ ಚಳಿಗಾಲದಲ್ಲಿ ತೂಕವನ್ನು ಇಳಿಸಿಕೊಳ್ಳಲು ಮತ್ತು ನಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ತೂಕ ಇಳಿಸಲು ಪ್ರಯತ್ನಿಸುತ್ತಿರುವವರು ಬೆಳಗ್ಗೆ ಅದಕ್ಕೆ ಪೂರಕವಾದ ಜ್ಯೂಸ್, ಸಲಾಡ್, ಟೀ ಸೇವಿಸುತ್ತಾರೆ. ಆದರೆ, ನಾವು ಮಧ್ಯಾಹ್ನದ ನಂತರ ಸೇವಿಸುವ ಆಹಾರ ಕೂಡ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತಾ? ತೂಕ ಇಳಿಸುವ ಪ್ರಕ್ರಿಯೆಯನ್ನು ನಿಯಂತ್ರಣದಲ್ಲಿಡಲು ನಾವು ಮಧ್ಯಾಹ್ನ ಏನು ಮಾಡಬೇಕು? ತೂಕವನ್ನು ಕಳೆದುಕೊಳ್ಳುವುದು ಮತ್ತು ಚಯಾಪಚಯವನ್ನು ಹೆಚ್ಚಿಸಲು ಸರಿಯಾದ ದೈಹಿಕ ಮತ್ತು ಮಾನಸಿಕ ಚಟುವಟಿಕೆಯ ಅಗತ್ಯವಿದೆ. ಬೆಳಿಗ್ಗೆ ಜೇನುತುಪ್ಪದ ಜೊತೆ ಬಿಸಿ ನೀರು, ವ್ಯಾಯಾಮ, ಬೆಳಗಿನ ಉಪಾಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದಷ್ಟೇ, ಕಚೇರಿಯಲ್ಲಿದ್ದಾಗ ನಾವು ತೂಕ ಇಳಿಸಲು ಹೇಗೆ ಪ್ರಯತ್ನಿಸುತ್ತೇವೆ ಎಂಬುದು ಕೂಡ ಮುಖ್ಯ.
ಇಡೀ ದಿನ ಚೇರ್ ಮೇಲೆ ಕುಳಿತುಕೊಳ್ಳುವುದು ನಮ್ಮ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದರೆ, ಕೆಲವು ವಿಷಯಗಳ ಬಗ್ಗೆ ಗಮನಹರಿಸುವುದರಿಂದ ಚಳಿಗಾಲದಲ್ಲಿ ತೂಕವನ್ನು ಇಳಿಸಿಕೊಳ್ಳಲು ಮತ್ತು ನಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕರುಳಿನ ಆರೋಗ್ಯ ಹೆಚ್ಚಿಸುವ 8 ಪಾನೀಯಗಳು ಇಲ್ಲಿವೆ
ಗ್ರೀನ್ ಟೀ ಸೇವಿಸಿ:
ಗ್ರೀನ್ ಟೀ ಕ್ಯಾಟೆಚಿನ್‌ಗಳು ಮತ್ತು ಕೆಫೀನ್‌ನಂತಹ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ಕೊಬ್ಬನ್ನು ಬರ್ನ್ ಮಾಡುತ್ತದೆ. ರಿಫ್ರೆಶ್ ಮತ್ತು ಮೆಟಾಬಾಲಿಸಮ್ ಉತ್ತೇಜಿಸುವ ಪಾನೀಯವಾಗಿ ಮಧ್ಯಾಹ್ನ ಒಂದು ಕಪ್ ಗ್ರೀನ್ ಚಹಾವನ್ನು ಆನಂದಿಸಿ.
ಆರೋಗ್ಯಕರ ಮಧ್ಯಾಹ್ನದ ತಿಂಡಿ ಸೇವಿಸಿ:
ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬನ್ನು ಸಂಯೋಜಿಸುವ ಸಮತೋಲಿತ ತಿಂಡಿಯನ್ನು ಸೇವಿಸಿ. ಬೆರಿ ಹಣ್ಣುಗಳೊಂದಿಗೆ ಗ್ರೀಕ್ ಮೊಸರು, ನಟ್ಸ್, ಬಾದಾಮಿ ಬೆಣ್ಣೆಯೊಂದಿಗೆ ಸಣ್ಣ ಸೇಬು ಅಥವಾ ಮಖಾನಾಗಳಂತಹ ಆಹಾರ ಸೇವಿಸಿ. ಸಕ್ಕರೆಯ ತಿಂಡಿಗಳು ಅಥವಾ ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸಿ. ಏಕೆಂದರೆ ಅವು ಶಕ್ತಿಯ ಕುಸಿತಕ್ಕೆ ಕಾರಣವಾಗಬಹುದು ಮತ್ತು ನಿಮ್ಮ ತೂಕ ಇಳಿಸುವ ಪ್ರಯತ್ನಗಳನ್ನು ಅಡ್ಡಿಪಡಿಸಬಹುದು.
ಹೈಡ್ರೇಟೆಡ್ ಆಗಿರಿ:
ಆರೋಗ್ಯಕರ ಚಯಾಪಚಯವನ್ನು ಕಾಪಾಡಿಕೊಳ್ಳಲು ದಿನವಿಡೀ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದು ಬಹಳ ಮುಖ್ಯ. ನಿರ್ಜಲೀಕರಣವು ಚಯಾಪಚಯ ಮತ್ತು ಶಕ್ತಿಯ ಮಟ್ಟದ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಹೈಡ್ರೇಟೆಡ್ ಆಗಿರಲು ಮತ್ತು ಅತ್ಯುತ್ತಮ ದೈಹಿಕ ಕಾರ್ಯಗಳನ್ನು ಬೆಂಬಲಿಸಲು ಮಧ್ಯಾಹ್ನ ಸಾಕಷ್ಟು ನೀರನ್ನು ಕುಡಿಯುವುದು ಅಗತ್ಯ.
ಗಮನವಿಟ್ಟು ತಿನ್ನಿರಿ:
ಮಧ್ಯಾಹ್ನ ನಿಮ್ಮ ಆಹಾರ ಪದ್ಧತಿಗೆ ಗಮನ ಕೊಡಿ. ಜಾಗರೂಕತೆಯಿಂದ ತಿನ್ನುವ ತಂತ್ರಗಳನ್ನು ಅಭ್ಯಾಸ ಮಾಡಿ. ನಿಧಾನವಾಗಿ, ಸುವಾಸನೆಯನ್ನು ಸವಿಯುತ್ತಾ ಆಹಾರ ತಿನ್ನಿ. ನಿಮ್ಮ ಹೊಟ್ಟೆ ತುಂಬುತ್ತಿದೆ ಎಂಬುದನ್ನು ಗಮನಿಸಿ.
ಇದನ್ನೂ ಓದಿ: ಚಳಿಗಾಲದಲ್ಲಿ ಬೆಚ್ಚಗೆ, ಆರೋಗ್ಯವಾಗಿರಲು ಏನು ಮಾಡಬೇಕು?
ಆಗಾಗ ಓಡಾಡಿ:
ಒಂದೇ ಕಡೆ ಕುಳಿತು ಕೆಲಸ ಮಾಡುವ ಬದಲು ಆಗಾಗ ಸಹೋದ್ಯೋಗಿಗಳೊಂದಿಗೆ ಮಾತನಾಡಲು ಓಡಾಡುತ್ತಿರಿ. ದೇಹವನ್ನು ಸ್ವಲ್ಪ ಹೆಚ್ಚು ಫಿಟ್ ಆಗಿ ಮತ್ತು ಚಲಿಸುವಂತೆ ಮಾಡಲು ಕಚೇರಿಯಲ್ಲಿ ಒಂದು ಅಥವಾ ಎರಡು ಸುತ್ತು ವಾಕ್ ಮಾಡಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ