Christmas 2022: ಕ್ರಿಸ್ಮಸ್ ಹಬ್ಬದ ಸಂತೋಷ ಹೆಚ್ಚಿಸಲು ಸಾಂಪ್ರದಾಯಿಕ ಗಿಫ್ಟ್ ಐಡಿಯಾ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 22, 2022 | 12:53 PM

ಕ್ರಿಸ್ಮಸ್ ಹಬ್ಬವನ್ನು ಕುಟುಂಬದವರು, ಸ್ನೇಹಿತರು ಒಬ್ಬರನ್ನೊಬ್ಬರು ಭೇಟಿಯಾಗಿ ತಿಂಡಿ ತಿನಿಸುಗಳನ್ನು ಪರಸ್ಪರ ವಿನಿಮಯ ಮಾಡುವ ಮೂಲಕ ಮತ್ತು ಗಿಫ್ಟ್​ಗಳನ್ನು ಕೊಡುವ ಮೂಲಕ ಆಚರಣೆಯನ್ನು ಮಾಡಲಾಗುತ್ತದೆ. ಈ ವರ್ಷದ ಕ್ರಿಸ್ಮಸ್ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಲು ನಾವು ಕೆಲವೊಂದು ಸಾಂಪ್ರದಾಯಿಕ ಗಿಫ್ಟ್ ಐಡಿಯಾಗಳ ಬಗ್ಗೆ ತಿಳಿಸಿಕೊಡುತ್ತೇವೆ.

Christmas 2022: ಕ್ರಿಸ್ಮಸ್ ಹಬ್ಬದ ಸಂತೋಷ ಹೆಚ್ಚಿಸಲು ಸಾಂಪ್ರದಾಯಿಕ ಗಿಫ್ಟ್ ಐಡಿಯಾ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಇನ್ನೇನು ಕ್ರಿಸ್ಮಸ್ ಹಬ್ಬಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಮನುಕುಲಕ್ಕೆ ಸಹಾನೂಭೂತಿ ಮತ್ತು ಸೋದರತ್ವವನ್ನು ಬೋಧಿಸಿದ ಯೇಸುಕ್ರಿಸ್ತನ ಜನ್ಮದಿನವನ್ನು ನೆನಪಿಸಿಕೊಳ್ಳುವ ಹಾಗೂ ಆಚರಿಸುವ ಸುದಿನ ಕ್ರಿಸ್ಮಸ್ ಆಗಿದೆ. ಈ ಹಬ್ಬವನ್ನು ಕುಟುಂಬದವರು, ಸ್ನೇಹಿತರು ಒಬ್ಬರನ್ನೊಬ್ಬರು ಭೇಟಿಯಾಗಿ ತಿಂಡಿ ತಿನಿಸುಗಳನ್ನು ಪರಸ್ಪರ ವಿನಿಮಯ ಮಾಡುವ ಮೂಲಕ ಮತ್ತು ಗಿಫ್ಟ್​ಗಳನ್ನು ಕೊಡುವ ಮೂಲಕ ಆಚರಣೆಯನ್ನು ಮಾಡಲಾಗುತ್ತದೆ. ಈ ವರ್ಷದ ಕ್ರಿಸ್ಮಸ್ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಲು ನಾವು ಕೆಲವೊಂದು ಸಾಂಪ್ರದಾಯಿಕ ಗಿಫ್ಟ್ ಐಡಿಯಾಗಳ ಬಗ್ಗೆ ತಿಳಿಸಿಕೊಡುತ್ತೇವೆ.

ಬೇಯಿಸಿದ (ಬೇಕಿಂಗ್) ತಿಂಡಿ

ಇಂದಿನ ಬ್ಯುಸಿ ಲೈಫ್‌ಸ್ಟೆಲ್‌ನಲ್ಲಿ ಅನೇಕರು ಕ್ರಿಸ್‌ಮಸ್ ಸಮಯದಲ್ಲಿ ರೆಡಿಮೆಡ್ ಸ್ವೀಟ್ಸ್ ಮತ್ತು ತಿಂಡಿಗಳನ್ನು ಖರೀದಿಸುತ್ತಾರೆ, ಆದರೆ ಇದು ಹಿಂದಿನ ಕಾಲದಿಂದಲೂ ತಾಯಿಯಂದಿರು ಹಾಗೂ ಅಜ್ಜಿಯರು ಪ್ರೀತಿಯಿಂದ ತಯಾರಿಸುತ್ತಿದ್ದ ತಿಂಡಿಗಳಿಗೆ ಸರಿಸಮಾನವಾದೂದಲ್ಲವಾಗಿದೆ. ಆದ್ದರಿಂದ ಸ್ವಲ್ಪ ಸಮಯವನ್ನು ತೆಗೆದುಕೊಂಡು ಪ್ರೀತಿಯಿಂದ ಕೇಕ್‌ಗಳು ಮತ್ತು ತಿಂಡಿಗಳನ್ನು ನೀವೆ ತಯಾರಿಸಿ ನಿಮ್ಮ ಪ್ರೀತಿ ಪಾತ್ರರಿಗೆ ಹಂಚುವ ಮೂಲಕ ಹಬ್ಬವನ್ನು ಇನ್ನಷ್ಟು ಸ್ಪೆಷಲ್ ಮಾಡಬಹುದು. ಪ್ರೀತಿಯ ಜೊತೆ ರುಚಿಯೂ ಹೆಚ್ಚಾಗಿರುತ್ತದೆ.

ಗ್ರೀಟಿಂಗ್ ಕಾರ್ಡ್

ಸರಳವಾದ ಉಡುಗೊರೆ ಐಟಂಗಳಲ್ಲಿ ಒಂದಾದ ಗ್ರೀಟಿಂಗ್ ಕಾರ್ಡ್​ಗಳು ಹೆಚ್ಚಿನ ಸ್ಥಳೀಯ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿದೆ. ಮತ್ತು ಆ ಕಾರ್ಡ್​ಗಳಲ್ಲಿ ಹೃದಯಕ್ಕೆ ಹತ್ತಿರವಾಗುವಂತೆ ಮಾಡುವ ಕೋಟ್ಸ್​ಗಳನ್ನು ಬರೆದಿರುತ್ತಾರೆ. ಮತ್ತು ಕಾರ್ಡ್​ಗಳಲ್ಲಿ ವಿವಿಧ ವಿನ್ಯಾಸಗಳ ಆಯ್ಕೆಗಳು ಇವೆ. ಆದರೆ ಕೈಯಿಂದ ತಯಾರಿಸಲಾದಂತಹ ಚಿತ್ತಾರದಿಂದ ಕೂಡಿದ ಸಣ್ಣ ಸಂದೇಶಗಳನ್ನು ಒಳಗೊಂಡ ಕಾರ್ಡ್​ಗಳು ಬಹಳ ಉತ್ತಮವಾಗಿರುತ್ತದೆ. ಮತ್ತು ಅದರಲ್ಲಿ ಹೆಚ್ಚಿನ ಪ್ರೀತಿಯನ್ನು ಕಾಣಬಹುದು. ಕಡಿಮೆ ಖರ್ಚಿನಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಉತ್ತಮ ಸಂದೇಶವನ್ನು ನೀಡಲು ಈ ಉಡುಗೊರೆ ವಿಧಾನವು ಒಂದು ಉತ್ತಮ ಮಾರ್ಗವಾಗಿದೆ.

ಸ್ವೆಟರ್ ಮತ್ತು ಚಳಿಗಾಲದ ಉಡುಗೆ

ಅನೇಕ ತಾಯಂದಿರು ಹಾಗೂ ಅಜ್ಜಿಯಂದಿರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಉಡುಗೊರೆಯನ್ನು ನೀಡುವ ಸಲುವಾಗಿ ಸ್ವೆಟರ್‌ಗಳನ್ನು ನೇಯ್ಗೆ ಮಾಡುತ್ತಾರೆ. ಇದು ಚಲಿಗಾಲದಲ್ಲಿ ಶೀತ ವಾತವರಣದಿಂದ ನಮ್ಮನ್ನು ಬೆಚ್ಚಗಿಡುವಂತೆ ಮಾಡುತ್ತದೆ. ಈ ಸ್ವೆಟರ್ ಉಡುಗೊರೆಯು ಕ್ರಿಸ್ಮಸ್‌ಗೆ ಪರಿಪೂರ್ಣ ಉಡುಗೊರೆಯಾಗಿದೆ. ಇದಲ್ಲದೆ ನಿಮ್ಮ ಪ್ರೀತಿಪಾತ್ರರನ್ನು ಚಳಿಯಿಂದ ಬೆಚ್ಚಗಿಡಲು ವಿವಿಧ ರೀತಿಯ ಜಾಕೆಟ್ಸ್​ಗಳನ್ನು ಕೂಡಾ ಉಡುಗೊರೆ ರೂಪದಲ್ಲಿ ನೀಡಬಹುದು.

ಇದನ್ನು ಓದಿ:ಕಡಿಮೆ ಬಜೆಟ್‌ನಲ್ಲಿ ಕ್ರಿಸ್ಮಸ್ ಉಡುಗೊರೆ ಹುಡುಕುತ್ತಿರುವಿರಾ, ಅಮೆಜಾನ್, ಫ್ಲಿಪ್‌ಕಾರ್ಟ್, ಮಿಂತ್ರಾನಲ್ಲಿ ನಡೆಯುತ್ತಿದೆ ಟಾಪ್ ಡೀಲ್‌

ಕಂಬಳಿಗಳು ಮತ್ತು ಹಾಸಿಗೆಗಳು

ಇದು ಜನರಿಗೆ ಅಗತ್ಯವಿರುವಂತಹ ಉಡುಗೊರೆಯ ಆಯ್ಕೆಯಾಗಿದೆ. ಭಾರತ ಸೇರಿದಂತೆ ಅನೇಕ ಕಡೆ ಕೆಲವು ಜನರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿರುತ್ತಾರೆ. ಮತ್ತು ಚಳಿಗಾಲದ ಸಮಯದಲ್ಲಿ ಸರಿಯಾದ ಸೂರು ಇರದೆ ಚಳಿಯಿಂದ ಬಳಲುತ್ತಾರೆ. ಇಂತಹವರಿಗೆ ಹೊದಿಕೆಗಳು ಮತ್ತು ಹಾಸಿಗೆಯನ್ನು ನೀಡುವುದರ ಮೂಲಕ ನಿಮ್ಮ ಹಬ್ಬವನ್ನು ಇನ್ನಷ್ಟು ಸ್ಪೆಷಲ್ ಮಾಡಿಕೊಳ್ಳಬಹುದು.

ಆಮೆ ಮತ್ತು ಪಾರಿವಾಳ

1992ರ ಚಲನಚಿತ್ರ, ಹೋಮ್ ಅಲೋನ್ 2ನಲ್ಲಿ ಪಾರಿವಾಳ ಲೇಡಿ ಮತ್ತು ಕೆವಿನ್ ಮೆಕ್‌ಕಲಿಸ್ಟರ್ ನಡುವಿನ ಸುಂದರವಾದ ಸ್ನೇಹವನ್ನು ಯಾರು ಮರೆಯಲು ಸಾಧ್ಯವಿಲ್ಲ. ಈ ಚಲನಚಿತ್ರವು ಎರಡು ಅಲಂಕಾರಿಕ ಆಮೆ ಮತ್ತು ಪಾರಿವಾಳವನ್ನು ಇಳಗೊಂಡಿತ್ತು. ಈ ಆಮೆ ಪಾರಿವಾಳವು ಮುಗ್ಧತೆ, ಶುದ್ಧತೆ ಮತ್ತು ಶಾಶ್ವತ ಪ್ರೀತಿಯ ಸಂಕೇತಗಳಾಗಿವೆ. ಈ ಶಾಶ್ವತ ಪ್ರೀತಿಯ ಸಂಕೇತವಾಗಿರುವ ಆಮೆ ಮತ್ತು ಪಾರಿವಾಳವನ್ನು ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯನ್ನಾಗಿ ನೀಡುವ ಮೂಲಕ ಕ್ರಿಸ್ಮಸ್ ಹಬ್ಬವನ್ನು ಸ್ಪೆಷಲ್ ಆಗಿ ಸೆಲೆಬ್ರೆಟ್ ಮಾಡಬಹುದು.

ಜೀವನಶೈಲಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Thu, 22 December 22