
ತೆಂಗಿನ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ತೆಂಗಿನ ನೀರಿಗೆ ವಯಸ್ಸನ್ನು ಕಡಿಮೆ ಮಾಡುವ ಗುಣವೂ ಇದೆ. ಹೌದು, ಇದು ಚರ್ಮದ ಹೊಳಪನ್ನು ಸುಧಾರಿಸುತ್ತದೆ ಮತ್ತು ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆಯಾಗಿದೆ.

ತೆಂಗಿನ ನೀರು ನೈಸರ್ಗಿಕ ಗುಣಗಳಿಂದ ಸಮೃದ್ಧವಾಗಿದೆ. ಚರ್ಮವನ್ನು ಹೈಡ್ರೇಟ್ ಮಾಡುವುದರೊಂದಿಗೆ ತೇವಗೊಳಿಸುತ್ತದೆ. ತೆಂಗಿನ ನೀರಿನಿಂದ ಮುಖ ತೊಳೆದರೆ ಕಲೆಗಳು ಕಡಿಮೆಯಾಗಿ ನೈಸರ್ಗಿಕವಾಗಿ ಮುಖವು ಕಾಂತಿಯುತವಾಗಿ ಕಾಣುತ್ತದೆ.

ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ತೆಂಗಿನ ನೀರು ಹೊಸ ಚರ್ಮದ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಎಳೆನೀರು ನೈಸರ್ಗಿಕ ವಯಸ್ಸಾಗುವಿಕೆ ವಿರುದ್ಧ ಕಾರ್ಯನಿರ್ವಹಿಸುವ ಗುಣವನ್ನು ಹೊಂದಿದೆ. ಮುಖದ ಮೇಲಿನ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ನಿಯಂತ್ರಿಸುತ್ತದೆ. ವಯಸ್ಸಿಗಿಂತ ಕಿರಿಯವಾಗಿ ಕಾಣುವಂತೆ ಮಾಡುತ್ತದೆ.

ಮೊಡವೆಗಳನ್ನು ಹೋಗಲಾಡಿಸುವಲ್ಲಿ ತೆಂಗಿನ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಈ ನೀರಿನಲ್ಲಿ ಹೆಚ್ಚಿನ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತ ನಿವಾರಕ ಗುಣಗಳಿರುವುದರಿಂದ ತ್ವಚೆಯ ಸಮಸ್ಯೆಗಳನ್ನು ತಡೆಯುತ್ತದೆ ಎನ್ನುತ್ತಾರೆ ತಜ್ಞರು.
Published On - 8:51 pm, Wed, 2 November 22