ಸುಡು ಬಿಸಿಲಿನ ನಡುವೆ ತಣ್ಣನೆಯ ಪಾನೀಯವಂತೂ ಇದ್ದು ಬಿಟ್ಟರೆ ದೇಹಕ್ಕೆ ತಂಪು ಹಾಗೂ ಮನಸ್ಸಿಗೆ ಹಿತಕರ ಅನುಭವ. ಹೆಚ್ಚಿನವರು ಮನೆಯಲ್ಲೇ ಜ್ಯೂಸ್ ಮಾಡಿ ಸವಿಯುತ್ತಾರೆ. ಆದರೆ ಮನೆಯಲ್ಲೇ ಮಾಡುವ ಜ್ಯೂಸ್ ಗಳು ರೆಸ್ಟೋರೆಂಟ್‌ಗಳಲ್ಲಿ, ಜ್ಯೂಸ್ ಅಂಗಡಿಗಳಲ್ಲಿ ಸಿಗುವ ರುಚಿಯನ್ನು ಹೊಂದಿರುವುದಿಲ್ಲ. ತಾಜಾ ಜ್ಯೂಸ್ ತಯಾರಿಸುವಾಗ ಈ ಕೆಲವು ಟ್ರಿಕ್ಸ್ ಗಳನ್ನು ಬಳಸಿದರೆ ತಾಜಾ ಹಾಗೂ ರುಚಿಕರವಾದ ಹಣ್ಣಿನ ಜ್ಯೂಸ್ ಸವಿಯಲು ಸಿದ್ಧವಾಗುತ್ತದೆ.
ಹಣ್ಣಿನ ಜ್ಯೂಸ್ ಮಾಡುವಾಗ ಈ ವಿಷಯಗಳು ನೆನಪಿನಲ್ಲಿರಲಿ:
- ಮನೆಯಲ್ಲಿ ಜ್ಯೂಸ್ ಮಾಡುವಾಗ ಜ್ಯೂಸರ್ ಬಿಸಿ ಇರದಂತೆ ನೋಡಿಕೊಳ್ಳುವುದು ಒಳ್ಳೆಯದು. ಒಂದು ವೇಳೆ ಜ್ಯೂಸರ್ ತುಂಬಾ ಬಿಸಿಯಿದ್ದರೆ ಹಣ್ಣುಗಳ ರುಚಿಯು ಬರುವುದಿಲ್ಲ.
- ಹಣ್ಣುಗಳು ಹಾಳಾಗಬಾರದು ಎಂದು ಹೆಚ್ಚಿನವರು ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಡುತ್ತಾರೆ. ಹೀಗೆ ಇಡುವುದರಿಂದ ಹಣ್ಣಿನಲ್ಲಿರುವ ಪೋಷಕಾಂಶಗಳು ಹಾಳಾಗುತ್ತದೆ. ಅದಲ್ಲದೇ ಹೊರಗಿಟ್ಟ ಹಣ್ಣುಗಳ ಜ್ಯೂಸ್ ಮಾಡಿದರೆ ರುಚಿಯು ಹೆಚ್ಚಾಗಿರುತ್ತದೆ.
- ಹಣ್ಣುಗಳ ಜ್ಯೂಸ್ ಮಾಡಿ ಫ್ರಿಡ್ಜ್‌ನಲ್ಲಿಡುವ ಅಭ್ಯಾಸವಿರುತ್ತದೆ. ಆದರೆ ಫ್ರಿಡ್ಜ್ ನಲ್ಲಿಟ್ಟ ಜ್ಯೂಸ್ ಕುಡಿಯುವುದರಿಂದ ಪೋಷಕಾಂಶಗಳು ಹಾಳಾಗುತ್ತದೆ. ಅದಲ್ಲದೇ, ತಣ್ಣಗೆಯೆನಿಸಿದರೂ ರುಚಿಯು ತಾಜಾ ಹಣ್ಣಿನ ಜ್ಯೂಸ್ ನಂತೆ ಇರುವುದಿಲ್ಲ.
- ಹೆಚ್ಚಿನವರಿಗೆ ಜ್ಯೂಸ್ ತಯಾರಿಸುವಾಗ ಸಿಹಿ ಹೆಚ್ಚಾಗಲಿ ಎಂದು ಸಕ್ಕರೆ ಹಾಕುವ ಅಭ್ಯಾಸವಿರುತ್ತದೆ. ಆದರೆ ಸಕ್ಕರೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಣ್ಣಿನಲ್ಲಿ ಸಿಹಿಯ ಅಂಶವಿರುವುದರಿಂದ ಆದಷ್ಟು ಸಕ್ಕರೆ ಹಾಕುವುದನ್ನು ತಪ್ಪಿಸುವುದು ಒಳ್ಳೆಯದು.
- ಹಣ್ಣುಗಳ ಜ್ಯೂಸ್ ಮಾಡುವಾಗ, ಮೊದಲು ಮಾಡಬೇಕಾದ ಕೆಲಸವೆಂದರೆ ಅದರ ಬೀಜಗಳನ್ನು ತೆಗೆಯುವುದು. ಬೀಜಗಳ ಸಹಿತ ಜ್ಯೂಸ್ ಮಾಡಿದರೆ ಕಹಿ ರುಚಿಯಿಂದ ಹಣ್ಣಿನ ಜ್ಯೂಸ್ ಹಾಳಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ