ಒಡೆದ ಹಿಮ್ಮಡಿ(Cracked heels) ಗಳನ್ನು ಮರೆಮಾಡಲು ನೀವು ಪ್ರಯತ್ನಿಸುತ್ತೀರಾ? ಹಿಮ್ಮಡಿಯ ಅಂಚಿನಲ್ಲಿರುವ ಒಣ ಮತ್ತು ದಪ್ಪ ಚರ್ಮದಿಂದ ಉಂಟಾಗುವ ಒಡೆದ ಹಿಮ್ಮಡಿಗಳಿಗೆ ಚಿಕಿತ್ಸೆ ನೀಡಲು ಅಂಗಡಿಗಳಲ್ಲಿ ಲಭ್ಯವಿರುವ ಚರ್ಮದ ಆರೈಕೆಯ ಉತ್ಪನ್ನಗಳು ಏಕೈಕ ಆಯ್ಕೆಯಲ್ಲ. ಕೆಲವೊಮ್ಮೆ, ಹಿಮ್ಮಡಿಗಳಲ್ಲಿನ ಬಿರುಕುಗಳು ಆಳವಾಗಬಹುದು. ಇದು ರಕ್ತಸ್ರಾವ ಅಥವಾ ನೋವಿಗೆ ಕಾರಣವಾಗಬಹುದು. ಆದ್ದರಿಂದ, ಮನೆಯಲ್ಲಿ ಒಡೆದ ಹಿಮ್ಮಡಿಗಳನ್ನು ಗುಣಪಡಿಸುವ ಮಾರ್ಗಗಳನ್ನು ಕಂಡುಕೊಳ್ಳಿ.
ಬಿರುಕು ಹಿಮ್ಮಡಿಗಳು ಅನೇಕ ಕಾರಣಗಳಿಂದಾಗಿ ಸಂಭವಿಸಬಹುದು:
1. ಒಣ ಚರ್ಮ:
ಒಡೆದ ಹಿಮ್ಮಡಿಗಳು ಮುಖ್ಯವಾಗಿ ಒಣ ಚರ್ಮದಿಂದ ಉಂಟಾಗುತ್ತವೆ ಎಂದು ದೆಹಲಿ ಮೂಲದ ಕಾಸ್ಮೆಟಾಲಜಿಸ್ಟ್ ಮತ್ತು ಚರ್ಮ ತಜ್ಞ ಡಾ. ಜತಿನ್ ಮಿತ್ತಲ್ ಹೇಳುತ್ತಾರೆ. ಪಾದಗಳ ಚರ್ಮವು ತುಂಬಾ ಒಣಗಿದಾಗ ನಮ್ಯತೆಯನ್ನು ಕಳೆದುಕೊಳ್ಳುತ್ತದೆ, ಇದು ಅಂತಿಮವಾಗಿ ಹಿಮ್ಮಡಿಗಳು ಬಿರುಕುಗೊಳ್ಳಲು ಕಾರಣವಾಗುತ್ತದೆ.
2. ಅತಿಯಾದ ಒತ್ತಡ:
ಆಗಾಗ ಹೈ ಹೀಲ್ಸ್ ಧರಿಸುವ ಮಹಿಳೆಯರು ತಮ್ಮ ಪಾದಗಳ ಮೇಲೆ ಹೆಚ್ಚಿನ ಒತ್ತಡ ಅನುಭವಿಸಬಹುದು, ಜೊತೆಗೆ ಇದು ಬಿರುಕು ಮೂಡಲು ಕಾರಣವಾಗಬಹುದು. ಆದ್ದರಿಂದ, ನಿಮ್ಮ ನೆಚ್ಚಿನ ಸ್ಟಿಲೆಟ್ಟೊಗಳನ್ನು ಧರಿಸುವ ಮೊದಲು, ಎರಡು ಬಾರಿ ಯೋಚಿಸಿ.
3. ತೇವಾಂಶದ ಕೊರತೆ:
ಸ್ನಾನ ಅಥವಾ ಸ್ನಾನದ ನಂತರ ನಿಮ್ಮ ಪಾದಗಳು ಸಾಕಷ್ಟು ತೇವಗೊಳ್ಳದಿದ್ದಲ್ಲಿ ಒಣಗಿದ ಮತ್ತು ಬಿರುಕುಗೊಂಡ ಹಿಮ್ಮಡಿಗಳು ನಿಮ್ಮನ್ನು ಕಾಡಬಹುದು.
4. ವಯಸ್ಸಾಗುವಿಕೆ:
ವಯಸ್ಸಾದಂತೆ, ನಮ್ಮ ಚರ್ಮವು ತೇವಾಂಶ ಮತ್ತು ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಳ್ಳುತ್ತದೆ. ಇದು ನಿಮ್ಮ ಮುಖ ಅಥವಾ ಕುತ್ತಿಗೆಯ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ನಿಮ್ಮ ಹಿಮ್ಮಡಿಗಲ ಮೇಲೂ ಬಿರುಕುಗೊಳ್ಳಲು ಕಾರಣವಾಗಬಹುದು.
5. ದೀರ್ಘಕಾಲ ನಿಂತಿರುವುದು:
ಪಾದಗಳ ಮೇಲೆ ಹೆಚ್ಚಿದ ಒತ್ತಡದಿಂದಾಗಿ, ಅಂದರೆ ಮಹಿಳೆಯರು ದೀರ್ಘಕಾಲದವರೆಗೆ ನಿಲ್ಲುವುದು ಅಥವಾ ನಡೆಯುವುದನ್ನು ಒಳಗೊಂಡಿರುವ ಕೆಲವು ಉದ್ಯೋಗಗಳಲ್ಲಿ ಇರುವವರಲ್ಲಿಯೂ ಹಿಮ್ಮಡಿಗಳಲ್ಲಿ ಬಿರುಕು ಕಾಣಬಹುದು.
6. ಆರೋಗ್ಯ ಸಮಸ್ಯೆಗಳು:
ಮಧುಮೇಹ, ಥೈರಾಯ್ಡ್ ಸಮಸ್ಯೆಗಳು ಮತ್ತು ಸೋರಿಯಾಸಿಸ್ ಅಥವಾ ಎಸ್ಜಿಮಾದಂತಹ ಚರ್ಮದ ಪರಿಸ್ಥಿತಿಗಳು ಹಿಮ್ಮಡಿ ಒಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.
7. ಸರಿಯಾಗಿ ಹೊಂದಿಕೊಳ್ಳದ ಬೂಟು ಅಥವಾ ಚಪ್ಪಲಿಗಳು:
ನಿಮಗೆ ಸರಿಯಾಗಿ ಹೊಂದಿಕೊಳ್ಳದ ಬೂಟುಗಳು ಅಥವಾ ಚಪ್ಪಲಿಗಳನ್ನು ಧರಿಸುವುದು ಕೂಡ ಹಿಮ್ಮಡಿಯ ಬಿರುಕಿಗೆ ಕಾರಣವಾಗುತ್ತದೆ. ಏಕೆಂದರೆ ಇವು ಪಾದಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ನಿಮ್ಮ ಹಿಮ್ಮಡಿಗಳನ್ನು ಸಂಕುಚಿತಗೊಳಿಸುತ್ತದೆ, ಇದು ಚರ್ಮದ ಬಿರುಕುಗಳಿಗೆ ಕಾರಣವಾಗುತ್ತದೆ.
ಇದನ್ನೂ ಓದಿ: ಮುಖದ ಸೌಂದರ್ಯಕ್ಕೆ ಹರಳೆಣ್ಣೆ ಬಳಸುವುದು ಹೇಗೆ?
ಒಡೆದ ಹಿಮ್ಮಡಿಗಳು ಹೆಚ್ಚಾಗಿ ಒಣ ಚರ್ಮದಿಂದ ಉಂಟಾಗುತ್ತವೆ. ಆದ್ದರಿಂದ, ಪ್ರತಿದಿನ ನಿಮ್ಮ ಹಿಮ್ಮಡಿಗಳಿಗೆ ಉತ್ತಮ ಮಾಯಿಶ್ಚರೈಸರ್ ಹಚ್ಚಿ, ವಿಶೇಷವಾಗಿ ಸ್ನಾನದ ನಂತರ, ನಿಮ್ಮ ದೇಹಕ್ಕೆ ಹೊಂದುವ ಕ್ರೀಮ್ಗಳನ್ನು ಹಚ್ಚಿಕೊಳ್ಳಿ.
ನಿಮ್ಮ ಪಾದಗಳನ್ನು ನಿಯಮಿತವಾಗಿ ಮಾಯಿಶ್ಚರೈಸ್ ಮಾಡುವುದು ಮತ್ತು ಹೈ ಹೀಲ್ಸ್ ಕಡಿಮೆ ಧರಿಸುವುದರ ಹೊರತಾಗಿ, ಬಿರುಕುಗಳಿಗೆ ಕಾರಣವಾಗಬಹುದಾದ ಸತ್ತ ಚರ್ಮದ ಕೋಶಗಳನ್ನು ತೊಡೆದು ಹಾಕಲು ನೀವು ನಿಮ್ಮ ಹಿಮ್ಮಡಿಗಳನ್ನು ಆಗಾಗ ಎಕ್ಸ್ಫೋಲಿಯೇಟ್ ಮಾಡಬೇಕು. ಆದರೆ ಅದನ್ನು ಅತಿಯಾಗಿ ಮಾಡಬೇಡಿ ಏಕೆಂದರೆ ಅತಿಯಾದ ಎಕ್ಸ್ ಫೋಲಿಯೇಷನ್ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: