Relationship: ಮದುವೆಯಾಗುವ ಹುಡುಗ ಮತ್ತು ಹುಡುಗಿಯ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು? ಈ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ

ಸಂಬಂಧದಲ್ಲಿ ವಯಸ್ಸು ಮುಖ್ಯವಲ್ಲ, ಬದಲಾಗಿ ಪರಸ್ಪರ ಪ್ರೀತಿ ಮತ್ತು ಗೌರವದ ಭಾವನೆ ಮುಖ್ಯವೆಂದು ಹೇಳಲಾಗುತ್ತದೆ. ಆದರೆ ತಜ್ಞರು ಮತ್ತು ವಿಜ್ಞಾನದ ದೃಷ್ಟಿಕೋನದಿಂದ ಮದುವೆಗೆ ಹುಡುಗ ಮತ್ತು ಹುಡುಗಿಯ ನಡುವೆ ಸರಿಯಾದ ವಯಸ್ಸಿನ ಅಂತರವೂ ಮುಖ್ಯವಾಗಿರುತ್ತದೆ. ಹಾಗಿದ್ದರೆ ಮದುವೆಯಾಗುವ ಹುಡುಗ ಮತ್ತು ಹುಡುಗಿನ ನಡುವೆ ವಯಸ್ಸಿನ ಅಂತರ ಎಷ್ಟಿದ್ದರೆ ಸೂಕ್ತ ಎಂಬ ಮಾಹಿತಿ ಇಲ್ಲಿದೆ.

Relationship: ಮದುವೆಯಾಗುವ  ಹುಡುಗ ಮತ್ತು ಹುಡುಗಿಯ ನಡುವಿನ ವಯಸ್ಸಿನ ಅಂತರ ಎಷ್ಟಿರಬೇಕು? ಈ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ
Relationship TipsImage Credit source: Pinterest
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Sep 30, 2023 | 6:39 PM

ಪ್ರೀತಿಯಲ್ಲಿ ಬೀಳುವ ಮೊದಲು ಜನರು ವಯಸ್ಸು ಮತ್ತು ಇತರ ವಿಯಗಳ ಬಗ್ಗೆ ಗಮನಹರಿಸುವುದಿಲ್ಲ. ಆದರೆ ಮದುವೆಯ ವಿಷಯಕ್ಕೆ ಬಂದಾಗ, ಪ್ರತಿಯೊಬ್ಬರೂ ತಮ್ಮ ಸಂಗಾತಿಯನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದರಿಂದ ಮದುವೆಯ ನಂತರದ ಜೀವನವು ಸುಖಮಯವಾಗಿರುತ್ತದೆ ಎಂಬ ಭಾವನೆಯಿದೆ. ಅದರಂತೆ ಮದುವೆಗೆ ಹುಡುಗ ಮತ್ತು ಹುಡುಗಿ ನಡುವಿನ ವಯಸ್ಸಿನ ಅಂತರವನ್ನು ಕೂಡಾ ಪ್ರಮುಖ ಅಂಶವೆಂದು ಪರಿಗಣಿಸಲಾಗುತ್ತದೆ. ದಂಪತಿಗಳ ನಡುವಿನ ಸರಿಯಾದ ವಯಸ್ಸಿನ ಅಂತರವು ಅವರ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ. ಹಾಗಾದರೆ ದಂಪತಿಗಳ ನಡುವಿನ ಪರಿಪೂರ್ಣ ವಯಸ್ಸಿನ ಅಂತರ ಎಷ್ಟಿರಬೇಕು ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತದೆ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ನೋಡೋಣ.

ಸಂಬಂಧದಲ್ಲಿ ನಿಜವಾಗಿಯೂ ವಯಸ್ಸಿನ ಅಂತರ ಮುಖ್ಯವೇ?

ಬಲವಾದ ಸಂಬಂಧಕ್ಕೆ ವಯಸ್ಸು ಮುಖ್ಯವಲ್ಲ ಪ್ರೀತಿ ಮತ್ತು ನಂಬಿಕೆ ಮುಖ್ಯವೆಂದು ಹೇಳಲಾಗುತ್ತದೆ. ಅಧುನಿಕತೆ ಮತ್ತು ಮುಕ್ತ ಮನಸ್ಸಿನ ಈ ಯುಗದಲ್ಲಿ ಸಂಬಂಧದಲ್ಲಿನ ವಯಸ್ಸಿನ ಅಂತರವು ಅಷ್ಟೇನೂ ಸಮಸ್ಯೆಯಾವುದಿಲ್ಲವಾದರೂ ವಿಜ್ಞಾನ ಮತ್ತು ತಜ್ಞರ ದೃಷ್ಟಿಕೋನದಿಂದ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇರಬೇಕಾದರೆ ವಯಸ್ಸಿನ ಅಂತರವು ತುಂಬಾ ಮುಖ್ಯವಾಗುತ್ತದೆ. ಅದು ಹೇಗೆ ಎಂಬುದನ್ನು ನೋಡೋಣ.

ಇದನ್ನೂ ಓದಿ: ಸಂಸ್ಕೃತಿಯೇ ಗೊತ್ತಿಲ್ಲ!; ಮಗುವಿಗೆ ಜೇನುತುಪ್ಪ ಕೊಡಲ್ಲ ಎಂದಿದ್ದಕ್ಕೆ ಟ್ರೋಲ್ ಆದ ಸೋನಂ ಕಪೂರ್

ಅಟ್ಲಾಂಟಾದ ಎಮೋರಿ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವಿನ ಆದರ್ಶ ವಯಸ್ಸಿನ ಅಂತರವನ್ನು 3 ರಿಂದ 5 ವರ್ಷಗಳು ಎಂದು ಪರಿಗಣಿಸಲಾಗಿದೆ. ಈ ಸಂಶೋಧನೆಯ ಪ್ರಕಾರ, ಐದು ವರ್ಷ ವಯಸ್ಸಿನ ವ್ಯತ್ಯಾಸವಿರುವ ದಂಪತಿಗಳ ವಿಚ್ಛೇದನ ಸಾಧ್ಯತೆ ಶೇಕಡಾ 18 ಮಾತ್ರ.

ಗಂಡ ಮತ್ತು ಹೆಂಡತಿಯ ನಡುವೆ 10 ವರ್ಷ ವಯಸ್ಸಿನ ಅಂತರವಿದ್ದರೆ, ವಿಚ್ಛೇದನದ ಸಾಧ್ಯತೆಯು ಶೇಕಡಾ 39 ವರೆಗೆ ಇರುತ್ತದೆ. ದಂಪತಿಗಳ ನಡುವೆ 20 ವರ್ಷಗಳ ವಯಸ್ಸಿನ ಅಂತರವಿದ್ದರೆ, ವಿಚ್ಛೇದನದ ಸಾಧ್ಯತೆಯು ಶೇಕಡಾ 95 ಕ್ಕಿಂತ ಹೆಚ್ಚಿರುತ್ತದೆ. ಹಾಗಾಗಿ ಯಶಸ್ವಿ ದಾಂಪತ್ಯಕ್ಕೆ ಪತಿ ಮತ್ತು ಪತ್ನಿಯ ನಡುವೆ ಸರಿಯಾದ ವಯಸ್ಸಿನ ಅಂತರವಿರಬೇಕು. ವಯಸ್ಸಿನ ಅಂತರ ಹೆಚ್ಚಾದರೆ, ಇಬ್ಬರ ನಡುವಿನ ಮನಸ್ಥಿತಿಯ ಹೊಂದಾಣಿಕೆಯ ಕೊರತೆಯಿಂದಾಗಿ ಸಂಬಂಧ ಮುರಿಯುವ ಅಪಾಯ ಹೆಚ್ಚಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್