ಮುಖದ ಸೌಂದರ್ಯಕ್ಕೆ ಹರಳೆಣ್ಣೆ ಬಳಸುವುದು ಹೇಗೆ?

Castor Oil Benefits: ಹರಳು ಬೀಜ ಹೆಚ್ಚಿನ ಮಟ್ಟದ ರಿಸಿನ್ ಅನ್ನು ಹೊಂದಿರುತ್ತದೆ. ಇದು ಒಂದು ರೀತಿಯ ವಿಷಕಾರಿ ಕಿಣ್ವ. ಆದರೆ, ತೈಲವನ್ನು ಸಂಸ್ಕರಿಸಿದಾಗ ರಿಸಿನ್ ಅಂಶವನ್ನು ತೆಗೆದುಹಾಕಲಾಗುತ್ತದೆ. ಹೀಗಾಗಿ, ಸಂಸ್ಕರಿಸಿದ ಕ್ಯಾಸ್ಟರ್ ಆಯಿಲ್ ಮಾತ್ರ ಬಳಕೆಗೆ ಸುರಕ್ಷಿತವಾಗಿದೆ. ಹರಳೆಣ್ಣೆಯಿಂದ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ಎಂಬ ಮಾಹಿತಿ ಇಲ್ಲಿದೆ.

ಮುಖದ ಸೌಂದರ್ಯಕ್ಕೆ ಹರಳೆಣ್ಣೆ ಬಳಸುವುದು ಹೇಗೆ?
ಹರಳೆಣ್ಣೆImage Credit source: iStock
Follow us
ಸುಷ್ಮಾ ಚಕ್ರೆ
|

Updated on:Sep 30, 2023 | 3:09 PM

ಹರಳೆಣ್ಣೆಯನ್ನು ನಮ್ಮ ಅಜ್ಜಿಯರ ಮುತ್ತಜ್ಜಿಯರ ಕಾಲದಿಂದಲೂ ಮುಖ, ಕೂದಲಿನ ಆರೋಗ್ಯ ಮತ್ತು ಸೌಂದರ್ಯದಲ್ಲಿ ಬಳಸಲಾಗುತ್ತಿದೆ. ಕೂದಲು ಸೊಂಪಾಗಿ ಬೆಳೆಯಲು, ನೆತ್ತಿ ತಂಪಾಗಿರಲು, ಒಡೆದ ಚರ್ಮ ಸುಧಾರಿಸಲು ಹೀಗೆ ನಾನಾ ಕಾರಣಗಳಿಗೆ ಹರಳೆಣ್ಣೆಯನ್ನು ಬಳಸಲಾಗುತ್ತದೆ. ಈ ಹರಳೆಣ್ಣೆಯನ್ನು ಮಸಾಜ್ ಮಾಡಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಇಂದಿನ ಆಧುನಿಕ ಜನರೂ ಈಗೀಗ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಮುಖದ ಕಾಂತಿ ಹೆಚ್ಚಿಸಿಕೊಳ್ಳಲು, ಕೂದಲ ಆರೋಗ್ಯಕ್ಕೆ ಹರಳೆಣ್ಣೆಯ ಬಳಕೆಯ ಪ್ರಮಾಣ ಹೆಚ್ಚಾಗುತ್ತಿದೆ.

ಹರಳೆಣ್ಣೆಯಿಂದ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ಎಂಬ ಕಿರು ಮಾಹಿತಿ ಇಲ್ಲಿದೆ. ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ ರಿಕಿನಸ್ ಕಮ್ಯುನಿಸ್ ಸಸ್ಯದ ಬೀಜಗಳಿಂದ ಹೊರತೆಗೆಯಲಾದ ಒಂದು ರೀತಿಯ ಎಣ್ಣೆಯಾಗಿದೆ. ಇದು ಹಳ್ಳಿಗಳಲ್ಲಿ ನಮ್ಮೆಲ್ಲರ ಮನೆಗಳ ಆಸುಪಾಸಿನಲ್ಲಿ ಇರುವ ಗಿಡವಾಗಿದೆ. ಇದರ ಬೀಜಗಳನ್ನು ಕ್ಯಾಸ್ಟರ್ ಬೀನ್ಸ್ ಎಂದೂ ಕರೆಯುತ್ತಾರೆ. ಈ ಬೀಜಗಳನ್ನು ಒಣಗಿಸಿ, ಅದರಿಂದ ಎಣ್ಣೆ ತಯಾರಿಸಲಾಗುತ್ತದೆ. ಹರಳೆಣ್ಣೆಯ ಬೇರುಗಳನ್ನು ಕೂಡ ಹಳ್ಳಿಗಳಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಬಳಸಲಾಗುತ್ತದೆ.

ಇದನ್ನೂ ಓದಿ: ಫುಡ್ ಪಾಯ್ಸನ್ ಆದಾಗ ಯಾವ ರೀತಿಯ ಆಹಾರ ಸೇವಿಸಬೇಕು?

ಹರಳು ಬೀಜ ಹೆಚ್ಚಿನ ಮಟ್ಟದ ರಿಸಿನ್ ಅನ್ನು ಹೊಂದಿರುತ್ತದೆ. ಇದು ಒಂದು ರೀತಿಯ ವಿಷಕಾರಿ ಕಿಣ್ವ. ಆದರೆ, ತೈಲವನ್ನು ಸಂಸ್ಕರಿಸಿದಾಗ ರಿಸಿನ್ ಅಂಶವನ್ನು ತೆಗೆದುಹಾಕಲಾಗುತ್ತದೆ. ಹೀಗಾಗಿ, ಸಂಸ್ಕರಿಸಿದ ಕ್ಯಾಸ್ಟರ್ ಆಯಿಲ್ ಮಾತ್ರ ಬಳಕೆಗೆ ಸುರಕ್ಷಿತವಾಗಿದೆ. ಈ ತೈಲವನ್ನು ಸಾಂಪ್ರದಾಯಿಕ ಚಿಕಿತ್ಸೆಗಳಲ್ಲಿ ಶತಮಾನಗಳಿಂದಲೂ ಬಳಸಲಾಗುತ್ತಿದೆ. ಪ್ರಾಚೀನ ಈಜಿಪ್ಟಿನವರು ಕಣ್ಣಿನ ಕಿರಿಕಿರಿಯನ್ನು ತಡೆಯಲು ಹರಳೆಣ್ಣೆಯನ್ನು ಬಳಸುತ್ತಿದ್ದರು.

ಮುಖದ ಆರೋಗ್ಯಕ್ಕೆ ಹರಳೆಣ್ಣೆಯ ಪ್ರಯೋಜನಗಳು:

1. ಚರ್ಮವನ್ನು ತೇವಗೊಳಿಸುತ್ತದೆ:

ಹರಳೆಣ್ಣೆಯಿಂದ ಚರ್ಮಕ್ಕೆ ಹಲವಾರು ಪ್ರಯೋಜನಗಳಿವೆ. ಹೆಚ್ಚಿನ ಕೊಬ್ಬಿನಾಮ್ಲದ ಅಂಶದಿಂದಾಗಿ ಕ್ಯಾಸ್ಟರ್ ಆಯಿಲ್ ಚರ್ಮದ ಮೃದುತ್ವವನ್ನು ಹೆಚ್ಚಿಸುತ್ತದೆ. ಒಣ ಚರ್ಮದವರು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಲು ನೈಸರ್ಗಿಕ ಮಾರ್ಗವನ್ನು ಹುಡುಕುತ್ತಿದ್ದರೆ ಹರಳೆಣ್ಣೆ ಅತ್ಯುತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: Lemon Water: ನಿಂಬೆ ಜ್ಯೂಸ್ ಸೇವನೆಯಿಂದ ಪ್ರಯೋಜನಗಳು ಹತ್ತು ಹಲವು!

2. ಬ್ಯಾಕ್ಟೀರಿಯಾ ವಿರೋಧಿ ಪ್ರಯೋಜನಗಳನ್ನು ಹೊಂದಿದೆ:

ಕ್ಯಾಸ್ಟರ್ ಬೀಜಗಳಿಂದ ಪ್ರೋಟೀನ್ ಸಾರಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆ್ಯಂಟಿ ಪ್ರೊಲಿಫೆರೇಟಿವ್ ಗುಣಲಕ್ಷಣಗಳನ್ನು ಹೊಂದಿವೆ. ಇದು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.

3. ಫಂಗಲ್ ಸೋಂಕನ್ನು ಕಡಿಮೆ ಮಾಡುತ್ತದೆ:

ಕ್ಯಾಸ್ಟರ್ ಆಯಿಲ್ ಹೊಂದಿರುವ ಜೆಲ್ ಕ್ಯಾಂಡಿಡಾ ಅಲ್ಬಿಕಾನ್ಸ್ ಬೆಳವಣಿಗೆಯನ್ನು ತಡೆಯುತ್ತದೆ. ಈ ಫಂಗಸ್ ಬಾಯಿಯ ಸೋಂಕು, ಉಗುರಿನ ಫಂಗಸ್, ಡೈಪರ್ ರ್ಯಾಶಸ್​ಗೆ ಕಾರಣವಾಗುತ್ತದೆ.

4. ಸನ್​ಬರ್ನ್ ಅನ್ನು ಶಮನ ಮಾಡುತ್ತದೆ:

ಉಷ್ಣದಿಂದ ಚರ್ಮ ಉರಿಯುವಿಕೆಯನ್ನು ಹರಳೆಣ್ಣೆ ಕಡಿಮೆ ಮಾಡುತ್ತದೆ. ಕ್ಯಾಸ್ಟರ್ ಆಯಿಲ್‌ ಸನ್‌ಬರ್ನ್‌ಗೆ ಸಂಬಂಧಿಸಿದ ಕಿರಿಕಿರಿ ಮತ್ತು ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಕ್ಯಾಸ್ಟರ್ ಆಯಿಲ್ ನೈಸರ್ಗಿಕವಾಗಿಯೇ ದಪ್ಪವಾಗಿರುತ್ತದೆ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಇದನ್ನು ನಮ್ಮ ಚರ್ಮಕ್ಕೆ ಲೇಪಿಸಿಕೊಳ್ಳಲು ಕಷ್ಟಪಡುತ್ತಾರೆ.

ಯಾವುದೇ ತೊಂದರೆಗಳಿಲ್ಲದೆ ನಿಮ್ಮ ಚರ್ಮಕ್ಕೆ ಕ್ಯಾಸ್ಟರ್ ಆಯಿಲ್ ಅನ್ನು ಹೇಗೆ ಅನ್ವಯಿಸಬಹುದು ಎಂಬ ಮಾಹಿತಿ ಇಲ್ಲಿದೆ.

ಹರಳೆಣ್ಣೆಯನ್ನು ಒಂದು ಬೌಲ್​ಗೆ ಹಾಕಿಕೊಂಡು, ಹತ್ತಿಯ ಉಂಡೆಯನ್ನು ಅದರಲ್ಲಿ ಅದ್ದಿರಿ. ಅದನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಮೇಲೆ ನಿಧಾನವಾಗಿ ಹಚ್ಚಿಕೊಳ್ಳಿ. ವೃತ್ತಾಕಾರವಾಗಿ 3-5 ನಿಮಿಷಗಳ ಕಾಲ ಮುಖದ ಮೇಲೆ ಎಣ್ಣೆಯನ್ನು ಮಸಾಜ್ ಮಾಡಿಕೊಳ್ಳಿ. ಬಳಿಕ ಫೇಸ್ ವಾಶ್‌ನಿಂದ ನಿಮ್ಮ ಮುಖವನ್ನು ತೊಳೆಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Sat, 30 September 23

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ