Updated on: Nov 04, 2022 | 8:00 AM
ಚಳಿಗಾಲ ಬಹುತೇಕ ಆರಂಭವಾಗಿದೆ. ಈ ಋತುವಿನಲ್ಲಿ ತಲೆಹೊಟ್ಟು ಎಲ್ಲರಿಗೂ ಸಾಮಾನ್ಯವಾಗಿದೆ. ಆಪಲ್ ಸೈಡರ್ ವಿನೆಗರ್ನ್ನು ಸುಲಭವಾಗಿ ತಲೆಹೊಟ್ಟು ತೊಡೆದುಹಾಕಲು ಬಳಸಬಹುದು. ತಲೆಹೊಟ್ಟು ಸೇರಿದಂತೆ ಹಲವು ಕೂದಲಿನ ಸಮಸ್ಯೆಗಳಿಗೂ ಇದು ಪ್ರಯೋಜನಕಾರಿಯಾಗಿದೆ.
ಒಂದು ಕಪ್ ನೀರಿಗೆ ಕೆಲವು ಹನಿ ಆಪಲ್ ಸೈಡರ್ ವಿನೆಗರ್ ಸೇರಿಸಿ. ಕೂದಲಿಗೆ ಶಾಂಪೂ ಹಾಕಿದ ನಂತರ ಈ ನೀರಿನಿಂದ ತಲೆಯನ್ನು ಮಸಾಜ್ ಮಾಡಿ. 20 ನಿಮಿಷಗಳ ನಂತರ ನಿಮ್ಮ ಕೂದಲನ್ನು ತೊಳೆಯಿರಿ.
ಆಪಲ್ ಸೈಡರ್ ವಿನೆಗರ್ ಮತ್ತು ಬೆಳ್ಳುಳ್ಳಿ ಪ್ಯಾಕ್: ಮೊದಲು ಬೆಳ್ಳುಳ್ಳಿಯನ್ನು ನುಣ್ಣಗೆ ತುರಿದು ರಸವನ್ನು ಬೇರ್ಪಡಿಸಿ. ನಂತರ ಬೆಳ್ಳುಳ್ಳಿ ರಸಕ್ಕೆ 2 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ. ಇದನ್ನು ನೆತ್ತಿಯ ಮೇಲೆ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ನಂತರ ನಿಮ್ಮ ತಲೆಯನ್ನು ಶಾಂಪೂ ಬಳಸಿ ತೊಳೆಯಿರಿ. ವಾರದಲ್ಲಿ 1 ರಿಂದ 2 ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಆಪಲ್ ಸೈಡರ್ ವಿನೆಗರ್-ಮೊಸರು ಪ್ಯಾಕ್: ಅರ್ಧ ಕಪ್ ಮೊಸರಿನಲ್ಲಿ 1 ಚಮಚ ಆಪಲ್ ಸೈಡರ್ನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನೆತ್ತಿಯ ಮೇಲೆ ಹಚ್ಚಿ ಮಸಾಜ್ ಮಾಡಿ. 30 ರಿಂದ 40 ನಿಮಿಷಗಳ ನಂತರ, ನಿಮ್ಮ ತಲೆಯನ್ನು ಶಾಂಪೂ ಬಳಸಿ ತೊಳೆಯಿರಿ.
ಆಪಲ್ ಸೈಡರ್ ವಿನೆಗರ್-ಕ್ಯಾಸ್ಟರ್ ಆಯಿಲ್: ಒಂದು ಕಪ್ ನೀರಿಗೆ ಕೆಲವು ಹನಿ ಆಪಲ್ ಸೈಡರ್ ವಿನೆಗರ್ ಹಾಕಿ. ಈ ಮಿಶ್ರಣಕ್ಕೆ 2-3 ಚಮಚ ಕ್ಯಾಸ್ಟರ್ ಆಯಿಲ್ ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡಿ. ನಂತರ ತಲೆ ಸ್ನಾನ ಮಾಡಿ.