Dasara 2024: 500 ವರ್ಷಗಳ ಇತಿಹಾಸವಿರುವ ಹೊಸಪೇಟೆ ದಸರಾ ಹೇಗಿರುತ್ತೆ ಗೊತ್ತಾ?

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 24, 2024 | 9:44 AM

Excerpt - ಮೈಸೂರು ದಸರಾಕ್ಕೆ ಸಿಕ್ಕಿರುವ ಜನಮನ್ನಣೆ, ಸರ್ಕಾರದ ನೆರವು ಯಾವುದು ಕೂಡ ಹೊಸಪೇಟೆ ದಸರಾಕ್ಕೆ ಸಿಗದ ಕಾರಣ ಇದು ಅಷ್ಟು ಜನಪ್ರೀಯವಾಗಿಲ್ಲ ಎಂದರೆ ತಪ್ಪಾಗಲಾರದು. ವಿಜಯನಗರ ಸಾಮ್ರಾಜ್ಯದ ಮಹಾನ್‌ ದೊರೆ ಕೃಷ್ಣದೇವರಾಯನ ಕಾಲದಲ್ಲಿ ಇಲ್ಲಿ ದಸರಾ ಆಚರಣೆ ಆರಂಭವಾಯಿತು. ಅಂದಿನಿಂದ ನಡೆಯುತ್ತ ಬಂದಿರುವ ಈ ದಸರಾ, ವಿಜಯನಗರ ಸಾಮ್ರಾಜ್ಯದ ಪತನದ ನಂತರ ತನ್ನ ಮಹತ್ವ ಕಳೆದುಕೊಂಡರೂ, ಇಂದಿಗೂ ಸಾಂಪ್ರದಾಯಿಕ ರೀತಿಯಲ್ಲಿ ಆಚರಣೆಗೊಳ್ಳುತ್ತ ಬಂದಿದೆ. ನಾಗೇನಹಳ್ಳಿ ಎಂಬ ಪುಟ್ಟ ಊರಿನಲ್ಲಿ ಹಬ್ಬವನ್ನು ಉತ್ಸಾಹದಿಂದ ಆಚರಣೆ ಮಾಡಿ ಊರಿಗೆ ಊರೇ ಸಂಭ್ರಮಿಸುತ್ತದೆ. ಇಲ್ಲಿನ ಜನ ನವರಾತ್ರಿ ಹಬ್ಭದ ಸಂಭ್ರಮದಲ್ಲಿ ಮಿಂದೇಳುತ್ತಾರೆ.

Dasara 2024: 500 ವರ್ಷಗಳ ಇತಿಹಾಸವಿರುವ ಹೊಸಪೇಟೆ ದಸರಾ ಹೇಗಿರುತ್ತೆ ಗೊತ್ತಾ?
ಹೊಸಪೇಟೆ ದಸರಾ
Follow us on

500 ವರ್ಷಗಳ ಇತಿಹಾಸವಿರುವ ಹೊಸಪೇಟೆ ದಸರಾ ಬಗ್ಗೆ ನಿಮಗೆ ತಿಳಿದಿದೆಯೇ? ಮೈಸೂರು ದಸರಾಕ್ಕೆ ಸಿಕ್ಕಿರುವ ಜನಮನ್ನಣೆ, ಸರ್ಕಾರದ ನೆರವು ಯಾವುದು ಕೂಡ ಈ ದಸರಾಗೆ ಸಿಗದ ಕಾರಣ ಇದು ಅಷ್ಟು ಜನಪ್ರೀಯವಾಗಿಲ್ಲ ಎಂದರೆ ತಪ್ಪಾಗಲಾರದು. ವಿಜಯನಗರ ಸಾಮ್ರಾಜ್ಯದ ಮಹಾನ್‌ ದೊರೆ ಕೃಷ್ಣದೇವರಾಯನ ಕಾಲದಲ್ಲಿ ಇಲ್ಲಿ ದಸರಾ ಆಚರಣೆ ಆರಂಭವಾಯಿತು. ಅಂದಿನಿಂದ ನಡೆಯುತ್ತ ಬಂದಿರುವ ಈ ದಸರಾ, ವಿಜಯನಗರ ಸಾಮ್ರಾಜ್ಯದ ಪತನದ ನಂತರ ತನ್ನ ಮಹತ್ವ ಕಳೆದುಕೊಂಡರೂ, ಇಂದಿಗೂ ಸಾಂಪ್ರದಾಯಿಕ ರೀತಿಯಲ್ಲಿ ಆಚರಣೆಗೊಳ್ಳುತ್ತ ಬಂದಿದೆ. ನಾಗೇನಹಳ್ಳಿ ಎಂಬ ಪುಟ್ಟ ಊರಿನಲ್ಲಿ ಹಬ್ಬವನ್ನು ಉತ್ಸಾಹದಿಂದ ಆಚರಣೆ ಮಾಡಿ ಊರಿಗೆ ಊರೇ ಸಂಭ್ರಮಿಸುತ್ತದೆ. ಇಲ್ಲಿನ ಜನ ನವರಾತ್ರಿ ಹಬ್ಭದ ಸಂಭ್ರಮದಲ್ಲಿ ಮಿಂದೇಳುತ್ತಾರೆ.

ಹಿನ್ನೆಲೆಯೇನು?

‘ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕೃಷ್ಣದೇವರಾಯ ಏಳು ಸಾವಿರ ಬೇಡರ ಪಡೆಗಳನ್ನು ಹೊಸಪೇಟೆ ಕೋಟೆಯ ಹಿಂಭಾಗದಲ್ಲಿ ಇರಿಸಿದ್ದನಂತೆ. ಎಲ್ಲಿಯಾದರೂ ಶತ್ರು ಸೈನ್ಯ ದಾಳಿ ಮಾಡುವುದಾದರೆ ಈ ಬೇಡರ ಪಡೆಯನ್ನು ದಾಟಿಯೇ ಸಾಮ್ರಾಜ್ಯದೊಳಗೆ ಬರಬೇಕಿತ್ತು. 1565ರಲ್ಲಿ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಏಳು ಸಾವಿರ ಬೇಡರ ಪಡೆ ಏಳು ಕೇರಿಗಳಾಗಿ ಮಾರ್ಪಾಟಾದವು. ಬಳಿಕ ಅವರು ಪ್ರತಿಯೊಂದು ಕೇರಿಗಳಲ್ಲೂ ಶಕ್ತಿ ದೇವತೆಗಳನ್ನು ಸ್ಥಾಪನೆ ಮಾಡಿಕೊಂಡರು. ಹಾಗಾಗಿ ಮ್ಯಾಸಕೇರಿಯಲ್ಲಿ ಹುಲಿಗೆಮ್ಮ, ಉಕ್ಕಡಕೇರಿಯಲ್ಲಿ ಕೊಂಗಮ್ಮ, ಚಿತ್ರಕೇರಿಯಲ್ಲಿ ಜಲದುರ್ಗಮ್ಮ, ಬಾಣದಕೇರಿಯಲ್ಲಿ ಬಳ್ಳಾರಿ ದುರ್ಗಮ್ಮ, ತಳವಾರಕೇರಿಯಲ್ಲಿ ನಿಜಲಿಂಗಮ್ಮ, ಜಂಬಾನಹಳ್ಳಿ ಕೇರಿಯಲ್ಲಿ ರಾಂಪುರ ದುರ್ಗಮ್ಮ ಹಾಗೂ ಬಂಡಿಕೇರಿಯಲ್ಲಿ ತಾಯಮ್ಮ– ಮರಿಯಮ್ಮ ದೇವತೆ ನೆಲೆಸಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾದಲ್ಲಿ ಕಣ್ಮನ ಸೆಳೆಯುವ ಆಕರ್ಷಣೆಗಳಿವುವು

ಆಚರಣೆ ಹೇಗಿರುತ್ತದೆ?

ನಗರದಿಂದ ಹತ್ತು ಕಿ.ಮೀ ದೂರದಲ್ಲಿರುವ ತಾಲ್ಲೂಕಿನ ಧರ್ಮದಗುಡ್ಡದ ಬಳಿ ಇಡೀ ಕೇರಿ ಜನ ಸೇರುತ್ತಾರೆ. ಏಳು ಕೇರಿಗಳ ಆಚರಣೆ ಸಂಪೂರ್ಣ ಭಿನ್ನವಾಗಿರುತ್ತದೆ. ಇಲ್ಲಿ ದೇವಿಯೇ ಪ್ರತಿಯೊಬ್ಬರ ಮನೆಗೆ ಬಂದು ದರ್ಶನ ಕೊಡುತ್ತಾಳೆ. ಆಕೆಗೆ ಹೂ, ಕಾಯಿ, ನೈವೇದ್ಯ ಸಮರ್ಪಿಸುತ್ತಾರೆ. ಇದಕ್ಕೆ ಗ್ರಾಮ್ಯ ಭಾಷೆಯಲ್ಲಿ ‘ದೇವಿ ಊರು ಸುತ್ತುವುದು’ ಅಥವಾ ‘ದೇವಿ ಊರು ಆಡುವುದು’ ಎಂದು ಕರೆಯಲಾಗುತ್ತದೆ. ದಸರಾ ಆಯುಧ ಪೂಜೆಯ ದಿನ ಎಲ್ಲ ದೇವತೆಗಳನ್ನು ಒಟ್ಟಿಗೆ ಬೀಳ್ಕೊಡುವುದು ಮತ್ತೊಂದು ವಿಶೇಷ ಆಚರಣೆ. ಆ ದಿನ ರಾತ್ರಿಯಿಡೀ ಕಾರ್ಯಕ್ರಮಗಳು ಜರುಗುತ್ತವೆ. ವಿಜಯದಶಮಿಯಂದು ಸ್ಥಳೀಯ ದೇವರಾದ ಚನ್ನಬಸವೇಶ್ವರ, ನಿಜಲಿಂಗಮ್ಮ ಅವರ ಉತ್ಸವ ಮೂರ್ತಿಗಳ ಜತೆಯಲ್ಲಿ ಈ ಏಳು ಕೇರಿಗಳ ಶಕ್ತಿದೇವತೆಗಳ ಪಲ್ಲಕ್ಕಿಗಳು ಮೆರವಣಿಗೆಯಲ್ಲಿ ಬನ್ನಿ ಮರಕ್ಕೆ ಬಂದು ಐದು ಸುತ್ತು ಹಾಕಿ, ಚನ್ನಬಸವೇಶ್ವರನಿಗೆ ಬನ್ನಿ ಮುಡಿಸಿ ಮತ್ತೆ ತಮ್ಮ ಕೇರಿಗಳಿಗೆ ಹಿಂದಿರುಗುತ್ತವೆ.

ದಸರಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ