Mysore Dasara 2024 : ಮೈಸೂರು ದಸರಾದಲ್ಲಿ ಕಣ್ಮನ ಸೆಳೆಯುವ ಆಕರ್ಷಣೆಗಳಿವುವು

ಮೈಸೂರು ದಸರಾ ಎಷ್ಟೊಂದು ಸುಂದರ ಈ ಹಾಡು ನಿಜಕ್ಕೂ ಅರ್ಥಪೂರ್ಣವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ದಸರಾಗೆ ವಿಜಯನಗರದ ಕಾಲದಿಂದಲೂ ಇತಿಹಾಸವಿದ್ದು, ಎಂದೆಂದಿಗೂ ಜನರನ್ನು ಸೆಳೆಯುವ ನಾಡಹಬ್ಬ ಆಗಿದೆ. ಹತ್ತು ದಿನಗಳ ಕಾಲ ನಡೆಯುವ ಈ ದಸರಾ ಆಚರಣೆಗೆ ಸಾಕ್ಷಿಯಾಗಲು ಪ್ರತಿವರ್ಷ ಲಕ್ಷಗಟ್ಟಲೆ ಪ್ರವಾಸಿಗರು ದೇಶ ವಿದೇಶಗಳಿಂದಲು ಇಲ್ಲಿಗೆ ಬರುತ್ತಾರೆ. ನೀವೇನಾದ್ರೂ ದಸರಾ ನೋಡಲು ಮೈಸೂರಿಗೆ ಹೋದರೆ ಈ ಕೆಲವು ಪ್ರದರ್ಶನಗಳನ್ನು ಮಿಸ್ ಮಾಡದೇ ಕಣ್ತುಂಬಿಸಿಕೊಳ್ಳಿ.

ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 23, 2024 | 5:50 PM

ಜಂಬೂ ಸವಾರಿ : ಮೈಸೂರು ದಸರಾದ ಪ್ರಮುಖ ಆಕರ್ಷಣೆಯೇ ಭವ್ಯವಾದ ಜಂಬೂ ಸವಾರಿ. ನವರಾತ್ರಿಯ ಹತ್ತನೆ ದಿನದಂದು ಪ್ರಮುಖ ಆನೆಯು 750 ಕಿಲೋಗ್ರಾಂ ಗಳಷ್ಟು ತೂಕವಿರುವ ದೇವಿ ಶ್ರೀಚಾಮುಂಡೇಶ್ವರಿ ದೇವಿಯನ್ನು ಕುಳ್ಳಿರಿಸಿದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುತ್ತದೆ. ನೂರಾರು ಆನೆಗಳನ್ನು ಚಿನ್ನ ಲೇಪಿತ ವಸ್ತ್ರಗಳನ್ನು ಹೊದಿಸಿ, ಮೈಸೂರಿನ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ದಸರಾ ಹಬ್ಬಕ್ಕೆ ಈ ಮೆರವಣಿಗೆಯು ಮತ್ತಷ್ಟು ಮೆರುಗು ನೀಡುತ್ತದೆ.

1 / 5
ಮೈಸೂರು ಅರಮನೆ : ಸಾಂಸ್ಕೃತಿಕ ರಾಜಧಾನಿ ಮೈಸೂರು ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಅರಮನೆ. ದಸರಾದ ಸಮಯದಲ್ಲಿ ಅರಮನೆಯು ದೀಪಾಂಲಕಾರಗಳಿಂದ ಕಂಗೊಳಿಸುತ್ತದೆ. ಹತ್ತುಸಾವಿರ ಬಲ್ಬುಗಳಿಂದ ಅಲಂಕಾರ ಮಾಡಲಾಗುತ್ತದೆ. ರಾತ್ರಿಯ ವೇಳೆ ಈ ದೀಪಗಳಿಂದ ಕೂಡಿದ ಅಲಂಕಾರವನ್ನು ಕಣ್ತುಂಬಿಸಿಕೊಳ್ಳುವ ಖುಷಿಯೇ ಬೇರೆ

2 / 5
ಆಹಾರ ಮೇಳಗಳು  ಹಾಗೂ ಗೊಂಬೆಗಳ ಹಬ್ಬ : ದಸರಾ ಸಮಯದಲ್ಲಿ ಆಹಾರಪ್ರಿಯರಂತೂ ಮೈಸೂರು ಭೇಟಿ ನೀಡಿದರೆ  ಸ್ವಾದಿಷ್ಟವಾದ ಸ್ಥಳೀಯ ಆಹಾರಗಳು, ಸಿಹಿ ತಿಂಡಿಗಳು ಸೇರಿದಂತೆ ವಿವಿಧ ರುಚಿಕರ ಆಹಾರಗಳನ್ನು ಸವಿಯಬಹುದು.  ಅದಲ್ಲದೇ, ಮೈಸೂರಿನಲ್ಲಿ ನಡೆಯುವ ಗೊಂಬೆಗಳ ಹಬ್ಬವು ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ವಿವಿಧ ಸ್ಥಳೀಯ ಕಲಾವಿದರು ರಚಿಸಿದ ವಿವಿಧ ಚಿಕಣಿ ಬೊಂಬೆಗಳು ಮತ್ತು ಪ್ರತಿಮೆಗಳನ್ನು ಪ್ರದರ್ಶನಗಳನ್ನು  ಇಡಲಾಗುತ್ತದೆ.

3 / 5
ಕುಸ್ತಿಗಳು ಹಾಗೂ ಗೊಂಬೆಗಳ ಪ್ರದರ್ಶನ : ಕರ್ನಾಟಕದ ಸಂಸ್ಕೃತಿಯ ಭಾಗವಾದ ಜಟ್ಟಿ ಕಾಳಗವನ್ನು ಮೈಸೂರಿನಲ್ಲಿ ಕಣ್ತುಂಬಿಸಿಕೊಳ್ಳಬಹುದು. ವಿಜಯನಗರ ಕಾಲದಲ್ಲಿ ರಾಜರು ಮತ್ತು ಸ್ಥಳೀಯರಿಗೆ ಒಂದು ಪ್ರಮುಖ ಪ್ರದರ್ಶನವಾಗಿದ್ದ ಇವತ್ತಿಗೂ ಇದನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ. ಕುಸ್ತಿ ಪಟುಗಳ ಕುಸ್ತಿಯನ್ನು ಕಣ್ತುಂಬಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯವಾಗಿದೆ.

4 / 5
ಸಾಂಸ್ಕೃತಿಕ ಕಾರ್ಯಕ್ರಮಗಳು : ದಸರಾದ ಪ್ರಯುಕ್ತ ಹತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ಈ ಮೈಸೂರಿಗೆ ದಸರಾ  ಸಮಯದಲ್ಲಿ ಬಂದರೆ ಸಿನಿಮಾ ಕಲಾವಿದರು ಸೇರಿದಂತೆ ವಿವಿಧ ಕ್ಷೇತ್ರದ ಕಲಾವಿದರು ಆಗಮಿಸಿ  ಸಂಗೀತ, ನೃತ್ಯ ಹಾಗೂ ವಿಧದ ಕಲೆಗಳಿಗೆ ಸಂಬಂಧ ಪಟ್ಟಂತೆ ಕಾರ್ಯಕ್ರಮಗಳು ನೀಡುತ್ತಾರೆ.

5 / 5

Published On - 5:27 pm, Mon, 23 September 24

Follow us