Shreyas Iyer: ದುಲೀಪ್ ಟ್ರೋಫಿಯಲ್ಲಿ ಫೇಲ್; ಮತ್ತೊಂದು ದೇಶೀ ಟೂರ್ನಿಯತ್ತ ಶ್ರೇಯಸ್ ಅಯ್ಯರ್

Shreyas Iyer: ಟೀಂ ಇಂಡಿಯಾದಲ್ಲಿ ಶತಾಯಗತಾಯ ಸ್ಥಾನಗಿಟ್ಟಿಸಿಕೊಳ್ಳುವ ಸಂಕಲ್ಪ ತೊಟ್ಟಿರುವ ಶ್ರೇಯಸ್ ಅಯ್ಯರ್, ಇದೀಗ ಮತ್ತೊಂದು ದೇಶೀ ಟೂರ್ನಿಯನ್ನು ಆಡುವುದುಕ್ಕೆ ಸಜ್ಜಾಗಿದ್ದಾರೆ. ಇದೇ ಅಕ್ಟೋಬರ್ 1 ರಿಂದ ಇರಾನಿ ಕಪ್ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಅಯ್ಯರ್, ಮುಂಬೈ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

|

Updated on: Sep 23, 2024 | 7:55 PM

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಲುವಾಗಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ದೇಶೀ ಟೂರ್ನಿ ದುಲೀಪ್ ಟ್ರೋಫಿಯಲ್ಲಿ ಆಡಿದ್ದ ಶ್ರೇಯಸ್ ಅಯ್ಯರ್, ಇಡೀ ಟೂರ್ನಿಯಲ್ಲಿ ವಿಶೇಷವಾದದ್ದೇನು ಮಾಡಲಿಲ್ಲ. ಟೂರ್ನಿಯಲ್ಲಿ ಅರ್ಧಶತಕದ ಇನ್ನಿಂಗ್ಸ್ ಬಿಟ್ಟರೆ, ಅಯ್ಯರ್ ಬ್ಯಾಟ್​ನಿಂದ ಯಾವುದೇ ಬಿಗ್ ಇನ್ನಿಂಗ್ಸ್ ಕಂಡುಬರಲಿಲ್ಲ. ಇತ್ತ ಅವರ ನಾಯಕತ್ವದ ತಂಡ ಕೂಡ ಚಾಂಪಿಯನ್ ಪಟ್ಟ ಅಲಂಕರಿಸಲಿಲ್ಲ.

1 / 7
ದುಲೀಪ್ ಟ್ರೋಫಿಯಲ್ಲಿ ಎಲ್ಲಾ ಮೂರು ಸುತ್ತುಗಳನ್ನು ಆಡಿದ್ದ ಶ್ರೇಯಸ್ ಅಯ್ಯರ್ ಈ ಮೂರು ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 25.66 ರ ಕಳಪೆ ಸರಾಸರಿಯಲ್ಲಿ 154 ರನ್ ಗಳಿಸಿದರು. ಇದರಲ್ಲಿ 2 ಅರ್ಧ ಶತಕಗಳು ಸೇರಿದ್ದರೆ, ಎರಡು ಬಾರಿ ಅವರು ಖಾತೆ ತೆರೆಯದೆ ಔಟಾಗಿದ್ದರು.

2 / 7
ಇದರ ಫಲವಾಗಿ ಶ್ರೇಯಸ್ ಅಯ್ಯರ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಸ್ಥಾನವನ್ನು ಪಡೆಯಲಿಲ್ಲ. ಇದೀಗ ಟೀಂ ಇಂಡಿಯಾದಿಂದ ದೀರ್ಘ ಕಾಲ ಹೊರಗುಳಿಯುವ ಆತಂಕದಲ್ಲಿರುವ ಅಯ್ಯರ್​ಗೆ ಈ ವರ್ಷಾಂತ್ಯದಲ್ಲಿ ನಡೆಯಲ್ಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಅವಕಾಶ ಸಿಗುವುದು ಡೌಟ್ ಎನ್ನಲಾಗುತ್ತಿದೆ.

3 / 7
ಹೀಗಾಗಿ ಟೀಂ ಇಂಡಿಯಾದಲ್ಲಿ ಶತಾಯಗತಾಯ ಸ್ಥಾನಗಿಟ್ಟಿಸಿಕೊಳ್ಳುವ ಸಂಕಲ್ಪ ತೊಟ್ಟಿರುವ ಶ್ರೇಯಸ್ ಅಯ್ಯರ್, ಇದೀಗ ಮತ್ತೊಂದು ದೇಶೀ ಟೂರ್ನಿಯನ್ನು ಆಡುವುದುಕ್ಕೆ ಸಜ್ಜಾಗಿದ್ದಾರೆ. ಇದೇ ಅಕ್ಟೋಬರ್ 1 ರಿಂದ ಇರಾನಿ ಕಪ್ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಅಯ್ಯರ್, ಮುಂಬೈ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

4 / 7
ವಾಸ್ತವವಾಗಿ ಈ ಇರಾನಿ ಕಪ್ ಪಂದ್ಯವು ಹಾಲಿ ರಣಜಿ ಚಾಂಪಿಯನ್ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡದ ನಡುವೆ ನಡೆಯಲ್ಲಿದೆ. ಅದರಂತೆ ಈ ಬಾರಿಯ ರಣಜಿ ಚಾಂಪಿಯನ್ ಆಗಿರುವ ಮುಂಬೈ ತಂಡದ ಪರ ಅಯ್ಯರ್ ಆಡಲಿದ್ದಾರೆ.  ಈ ವರ್ಷ ಮಾರ್ಚ್ 2024 ರಲ್ಲಿ ನಡೆದಿದ್ದ ರಣಜಿ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಮುಂಬೈ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು.

5 / 7
ಕ್ರಿಕ್‌ಬಝ್‌ನ ವರದಿ ಪ್ರಕಾರ ಇರಾನಿ ಕಪ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮುಂಬೈ ತಂಡದ ನಾಯಕತ್ವ ವಹಿಸಲಿದ್ದಾರೆ. ಇವರಲ್ಲದೇ ಶ್ರೇಯಸ್ ಅಯ್ಯರ್ ಮತ್ತು ಶಾರ್ದೂಲ್ ಠಾಕೂರ್ ಕೂಡ ತಂಡದ ಭಾಗವಾಗಲು ಸಿದ್ಧರಾಗಿದ್ದಾರೆ. ಶಾರ್ದೂಲ್ ಠಾಕೂರ್ ಅವರು ಈ ಪಂದ್ಯಕ್ಕೆ ತಮ್ಮ ಲಭ್ಯತೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

6 / 7
ಕಳೆದ ಜೂನ್ 12 ರಂದು ಲಂಡನ್‌ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಾರ್ದೂಲ್ ಠಾಕೂರ್ ಕೂಡ ಅಂದಿನಿಂದ ಕ್ರಿಕೆಟ್​ನಿಂದ ಹೊರಗಿದ್ದರು. ಹೀಗಿರುವಾಗ ಶಾರ್ದೂಲ್ ಠಾಕೂರ್ ವಾಪಸಾಗಿರುವುದು ಟೀಂ ಇಂಡಿಯಾ ಪಾಲಿಗೆ ಶುಭ ಸೂಚನೆಯಾಗಿದೆ. ವಾಸ್ತವವಾಗಿ, ವರ್ಷಾಂತ್ಯದಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಮಾಡಬೇಕಾಗಿದೆ. ಅಲ್ಲದೆ ವಿದೇಶಿ ನೆಲದಲ್ಲಿ ಶಾರ್ದೂಲ್ ಠಾಕೂರ್ ಅವರ ಪ್ರದರ್ಶನ ಅದ್ಭುತವಾಗಿರುವುದರಿಂದ, ಇರಾನಿ ಕಪ್​ನಲ್ಲಿ ಅವರ ಪ್ರದರ್ಶನದ ಮೇಲೆ ಎಲ್ಲರ ಗಮನವಿರಲಿದೆ.

7 / 7
Follow us