ಸಾಂದರ್ಭಿಕ ಚಿತ್ರ
ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ ತಾವು ಏನು ತಿನ್ನುತ್ತೇವೆ, ಈ ಆಹಾರವು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎನ್ನುವ ಬಗ್ಗೆ ಯೋಚಿಸಲು ಸಮಯವಿಲ್ಲ. ಹೀಗಿರುವಾಗಲೇ ತಿರುಪತಿಯ ಲಡ್ದುವಿನಲ್ಲಿ ಪ್ರಾಣಿ ಕೊಬ್ಬು ಇದೆ ಎನ್ನುವ ವಿಚಾರವು ಚರ್ಚೆಗೆ ಕಾರಣವಾಗಿದೆ. ಆದರೆ ಪ್ರಾಣಿಗಳ ಕೊಬ್ಬನ್ನು ವಿವಿಧ ಆಹಾರಗಳು ಮತ್ತು ಉತ್ಪನ್ನಗಳಿಗೆ ಸೇರಿಸಲಾಗುತ್ತದೆ. ಹೀಗಾಗಿ ಈ ಪ್ರಾಣಿಗಳ ಕೊಬ್ಬನ್ನು ಹೊಂದಿರುವ ಕೆಲವು ಸಾಮಾನ್ಯ ಉತ್ಪನ್ನಗಳ ಬಗೆಗೆ ನಿಮಗೆ ತಿಳಿದಿದ್ದರೆ ಉತ್ತಮ.
ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗುವ ಆಹಾರ ಪದಾರ್ಥಗಳು:
- ಮಾರ್ಗರೀನ್: ಕೆಲವು ವಿವಿಧ ಮಾರ್ಗರೀನ್ ಪ್ರಾಣಿಗಳ ಕೊಬ್ಬನ್ನು ಹೊಂದಿರುತ್ತದೆ. ಇವುಗಳನ್ನು ‘ಸುವಾಸನೆ’ ಅಥವಾ ‘ನೈಸರ್ಗಿಕ ಕೊಬ್ಬು’ಎನ್ನಲಾಗುತ್ತದೆ.
- ಬಿಸ್ಕತ್ತುಗಳು ಮತ್ತು ಕುಕೀಗಳು: ನಾವು ಸೇವಿಸುವ ಬಿಸ್ಕತ್ತುಗಳು ಮತ್ತು ಕುಕೀಗಳು ಪ್ರಾಣಿಗಳ ಕೊಬ್ಬನ್ನು ಒಳಗೊಂಡಿರುತ್ತವೆ. ಹೀಗಾಗಿ ನೀವು ಬೆಣ್ಣೆ ರುಚಿಯ ಬಿಸ್ಕತ್ತುಗಳು ಮತ್ತು ಕುಕೀಗಳನ್ನು ಸೇವಿಸುತ್ತಿದ್ದರೆ ಹೆಚ್ಚು ಜಾಗರೂಕರಾಗಿರುವುದು ಉತ್ತಮ.
- ಪ್ಯಾಟೀಸ್ ಮತ್ತು ಸಾಸೇಜ್‌ಗಳು: ಸಾಸೇಜ್‌ಗಳು, ಪ್ಯಾಟೀಸ್ ಮತ್ತು ಮಾಂಸದ ಚೆಂಡುಗಳಂತಹ ಮಾಂಸ ಆಧಾರಿತ ಉತ್ಪನ್ನಗಳಲ್ಲಿ ಈ ಪ್ರಾಣಿಗಳ ಕೊಬ್ಬು ಇರುತ್ತದೆ.
- ತ್ವರಿತ ಆಹಾರ: ಪ್ರಾಣಿಗಳ ಕೊಬ್ಬನ್ನು ಫ್ರೆಂಚ್ ಫ್ರೈಸ್ ಮತ್ತು ಬರ್ಗರ್‌ಗಳಂತಹ ಅನೇಕ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ.
- ಸೂಪ್‌ಗಳು ಮತ್ತು ಸ್ಟಾಕ್‌ಗಳು: ಪ್ರಾಣಿಗಳ ಕೊಬ್ಬನ್ನು ಕೆಲವು ಸೂಪ್‌ಗಳು ಮತ್ತು ಸ್ಟಾಕ್ ಗಳಂತಹ ಪದಾರ್ಥಗಳ ಪರಿಮಳವನ್ನು ಹೆಚ್ಚಿಸಲು ಬಳಸಲಾಗುತ್ತದೆ.
- ಚೀಸ್ ಮತ್ತು ಡೈರಿ ಉತ್ಪನ್ನಗಳು: ಪ್ರಾಣಿಗಳ ಕೊಬ್ಬನ್ನು ಕೆಲವು ಸಂಸ್ಕರಿಸಿದ ಚೀಸ್‌ನಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ
- ಚಾಕೊಲೇಟ್ ಹಾಗೂ ಘನೀಕೃತ ಆಹಾರಗಳು: ಕೆಲವು ಚಾಕೊಲೇಟ್ ರುಚಿ ಹಾಗೂ ವಿನ್ಯಾಸವನ್ನು ಒದಗಿಸಲು ಪ್ರಾಣಿಗಳ ಕೊಬ್ಬನ್ನು ಸೇರಿಸಬಹುದು. ಅದಲ್ಲದೇ ಸಿದ್ಧಪಡಿಸಿದ ಹೆಪ್ಪುಗಟ್ಟಿದ ಆಹಾರಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಹೆಚ್ಚು ಬಳಸಲಾಗುತ್ತದೆ.
(ಕೆಲವೊಂದು ವರದಿಗಳು ಈ ಬಗ್ಗೆ ಹೇಳುತ್ತಾದೆ. ಇದು ಟಿವಿ9 ಕನ್ನಡದ ಅಧಿಕೃತ ಮಾಹಿತಿ ಅಲ್ಲ)
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ