ಸಾಮಾನ್ಯವಾಗಿ ದಸರಾ ಆರಂಭವಾಗುವದಕ್ಕಿಂತ ಮೊದಲು ಅವುಗಳಿಗೆ ಅಂಬಾರಿ ಹೊರುವುದಕ್ಕೆ ತಾಲೀಮು ನೀಡಲಾಗುತ್ತದೆ. ಅಭಿಮನ್ಯು ಆ ಬಾರಿ ಅಂಬಾರಿ ಹೊರುವ ಆನೆಯಾದ್ದರಿಂದ ಅವನಿಗೆ ಮರಳು ಮೂಟೆ ಹೊರಿಸಿ ತರಬೇತಿ ನೀಡಲಾಗುತ್ತದೆ. ಒಂದೇ ಸಲ ಭಾರ ಹಾಕದೆಯೇ ಹಂತ ಹಂತವಾಗಿ ತೂಕ ಜಾಸ್ತಿ ಮಾಡಿಸಿ ತಾಲೀಮು ನೀಡಲಾಗುತ್ತದೆ.
ಮೊದಲ ಬಾರಿಗೆ ಸುಮಾರು 750 ಕೆಜಿ ತೂಕ ಹೊತ್ತು ತಾಲೀಮು ನಡೆಸಲಾಗುತ್ತದೆ ಬಳಿಕ ತೂಕ ಜಾಸ್ತಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಮರಳು ಮೂಟೆಯ ತಾಲೀಮು ನಡೆಸುವಾಗ ಗಾದಿ ಹಾಕಿ ಮರಳು ಮೂಟೆ ಹೊರಿಸಿ ಅದಕ್ಕೆ ಹಗ್ಗ ಕಟ್ಟಿ ತಾಲೀಮು ನಡೆಸಲಾಗುತ್ತದೆ. ಇದರಿಂದ ಅವುಗಳಿಗೆ ಆ ಭಾರ ಹೊರುವುದು ರೂಢಿಯಾಗಿರುತ್ತದೆ,
ಆನೆಗೆ ಆ ಭಾರ ಹೊತ್ತು, ಹಗ್ಗ ಕಟ್ಟಿ ಚರ್ಮಕ್ಕೆ ಯಾವುದೇ ರೀತಿಯ ಗಾಯಗಳು ಆಗದಿರಲಿ ಎಂದು ಅವುಗಳಿಗೆ ಮೊದಲೇ ಎಣ್ಣೆ ಹಚ್ಚಿ ಅದರ ಮೇಲೆ ಲೆದರ್ ನಿಂದ ತಯಾರಾದ ಗಾದಿಯನ್ನು ಹಾಕಲಾಗುತ್ತದೆ. ಆ ಬಳಿಕ ಮರಳು ತುಂಬಿದ ಮೂಟೆಯನ್ನು ಹೊರಿಸಲಾಗುತ್ತದೆ. ಮರಳು ಮೂಟೆ ಹೊತ್ತ ಅಭಿಮನ್ಯು ಮತ್ತು ಅವನ ಸಹಚರರು ಅರಮನೆಯಿಂದ ಬನ್ನಿ ಮಂಟಪದ ವರೆಗೆ ಮೆರವಣಿಗೆ ನಡೆಸುತ್ತಾರೆ.
ಈ ಮೆರವಣಿಗೆ ಪ್ರಾರಂಭವಾಗುವ ಮೊದಲು ಯಾವುದೇ ರೀತಿಯ ತೊಂದರೆ ಆಗದಿರಲಿ ಎಂದು ಸಣ್ಣ ಪೂಜೆ ಮಾಡಲಾಗುತ್ತದೆ. ಅಭಿಮನ್ಯು ಜೊತೆ ಅಕ್ಕ ಪಕ್ಕದಲ್ಲಿ ಲಕ್ಷ್ಮೀ ಮತ್ತು ವರಲಕ್ಷ್ಮೀ ಇಬ್ಬರೂ ಕೂಡ ಈ ತರಬೇತಿಯಲ್ಲಿ ಪಾಲ್ಗೊಳ್ಳುತ್ತಾರೆ. ಜೊತೆಗೆ ಉಳಿದ ಆನೆಗಳು ಸಹ ಇದರಲ್ಲಿ ಭಾಗವಹಿಸುತ್ತವೆ.
ಇದನ್ನೂ ಓದಿ: ದಸರಾ ನೋಡಲು ಮೈಸೂರಿಗೆ ಹೋದ್ರೆ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ
ಬೇರೆ ದಿನಗಳಲ್ಲಿ ಅಭಿಮನ್ಯುವಿಗೆ ನೀಡಿದ ತಾಲೀಮನ್ನು ಧನಂಜಯ ಮತ್ತು ಮಹೇಂದ್ರ ಮತ್ತು ಏಕಲವ್ಯ ಆನೆಗೂ ಕೂಡ ನೀಡಲಾಗುತ್ತದೆ. ಅವುಗಳಿಗೂ ಕೂಡ ಇದೇ ರೀತಿಯ ತಾಲೀಮನ್ನು ನೀಡಲಾಗುತ್ತದೆ. ತಾಲೀಮ ಮುಗಿಸಿ ಬನ್ನಿ ಮಂಟಪಕ್ಕೆ ಆನೆಗಳು ಬಂದ ನಂತರ ಅಭಿಮನ್ಯುವಿನ ಮೇಲೆ ಹೊರಿಸಿದಂತಹ ಭಾರ ತೆಗೆದು ಬಳಿಕ ಎಲ್ಲಾ ಆನೆಗಳ ದಣಿವನ್ನು ನೀಗಿಸಲಾಗುತ್ತದೆ. ಅವುಗಳಿಗೆ ಕುಡಿಯಲು ನೀರನ್ನು ಕೊಡಲಾಗುತ್ತದೆ.
ದಸರಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ