Mysore Dasara 2024 : ದಸರಾ ನೋಡಲು ಮೈಸೂರಿಗೆ ಹೋದ್ರೆ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ

ನಾಡ ಹಬ್ಬ ಮೈಸೂರು ದಸರಾಕ್ಕೆ ಸಿದ್ಧತೆಯೂ ಜೋರಾಗಿಯೇ ನಡೆಯುತ್ತಿದೆ. ಸಾಂಸ್ಕೃತಿಕ ನಗರಿಯ ದಸರಾ ವೈಭವವನ್ನು ಕಣ್ತುಂಬಿಸಿಕೊಳ್ಳಲು ದೇಶ ವಿದೇಶಗಳಿಂದಲೂ ಜನರು ಆಗಮಿಸುತ್ತಾರೆ. ಈ ಬಾರಿ ಅಕ್ಟೋಬರ್ 3 ರಿಂದ ಅಕ್ಟೋಬರ್ 12 ರವರೆಗೆ ದಸರಾವು ನಡೆಯಲಿದೆ. ಒಂದು ವೇಳೆ ನೀವೇನಾದ್ರೂ ದಸರಾ ಸಂದರ್ಭದಲ್ಲಿ ಮೈಸೂರಿಗೆ ಹೋಗಲು ಪ್ಲಾನ್ ಮಾಡಿಕೊಂಡಿದ್ರೆ ಈ ಕೆಲವು ತಾಣಗಳಿಗೂ ಭೇಟಿ ನೀಡಿ ಬರುವುದೇ ಒಳ್ಳೆಯದು.

Mysore Dasara 2024 : ದಸರಾ ನೋಡಲು ಮೈಸೂರಿಗೆ ಹೋದ್ರೆ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 25, 2024 | 5:09 PM

ಮಕ್ಕಳಿಗೆ ಹೇಗೂ ದಸರಾ ರಜೆಯಿದೆ, ಹೀಗಾಗಿ ಮೈಸೂರಿಗೆ ದಸರಾ ನೋಡಲು ನೀವು ಪ್ಲಾನ್ ಮಾಡಿಕೊಳ್ಳುತ್ತಿರಬಹುದು. ನಾಡಹಬ್ಬದ ವೈಭವವನ್ನು ಕಣ್ತುಂಬಿಸಿಕೊಳ್ಳಲು ಅರಮನೆ ನಗರಿಯತ್ತ ಹೋದರೆ ಇಲ್ಲಿ ಹಚ್ಚ ಹಸಿರಿನ ಗಿರಿಧಾಮಗಳು, ಕೆರೆ ಮೃಗಾಯಲಗಳು ಸೇರಿದಂತೆ ಹಳೆಯ ಕಾಲದ ವಸ್ತುಸಂಗ್ರಹಾಲಯ, ಇತಿಹಾಸ ಪ್ರಸಿದ್ಧ ದೇವಾಲಯಗಳು ಹೀಗೆ ಹತ್ತು ಹಲವಾರು ಪ್ರವಾಸಿ ತಾಣಗಳಿವೆ. ಕುಟುಂಬದವರೊಂದಿಗೆ ಈ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯವನ್ನು ಆಸ್ವಾದಿಸಬಹುದು.

  • ಮೈಸೂರು ಅರಮನೆ : ನಾಡಹಬ್ಬ ಮೈಸೂರು ದಸರಾ ಎಂದ ಕೂಡಲೇ ಕಣ್ಣೇದುರು ಬರುವುದೇ ಮೈಸೂರು ಅರಮನೆ. ಭಾರತದಲ್ಲಿಯೇ ಅತಿ ದೊಡ್ಡ ಪ್ರವಾಸಿ ಸ್ಥಳವೆಂದು ಕರೆಯಲಾಗುವ ಈ ಅರಮನೆಯು ಸಂಜೆಯ ವೇಳೆಯಲ್ಲಿ ದೀಪಾಲಂಕಾರಗಳಿಂದ ಕಂಗೊಳಿಸುತ್ತದೆ. ಅದಲ್ಲದೇ, ದಸರಾ ವೇಳೆ ಇಲ್ಲಿನ ಮೆಜೆಸ್ಟಿಕ್ ದರ್ಬಾರ್ ಹಾಲ್ ಆಕರ್ಷಕವಾಗಿದ್ದು ಪ್ರವಾಸಿಗರ ಗಮನ ಸೆಳೆಯುತ್ತದೆ.
  • ಚಾಮುಂಡಿ ಬೆಟ್ಟ : ಮೈಸೂರಿಗೆ ಬಂದವರು ಚಾಮುಂಡಿ ಬೆಟ್ಟಕ್ಕೆ ಹೋಗದೇ ವಾಪಸ್ಸು ಬರುವುದಿಲ್ಲ. ಬೆಟ್ಟಗಳ ಮೇಲೆ ಸುಂದರವಾದ ಶಿಲ್ಪಕಲೆ ಚಾಮುಂಡೇಶ್ವರಿ ದೇವಸ್ಥಾನವಿದೆ. ಹೀಗಾಗಿ ಬೆಟ್ಟ ಹತ್ತಿ ತಾಯಿಯ ದರ್ಶನವನ್ನು ಪಡೆಯಬಹುದು.
  • ಕಾರಂಜಿ ಕೆರೆ : ಕರ್ನಾಟಕದ ಅತಿ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಈ ಮೈಸೂರಿನ ಪ್ರವಾಸಿ ತಾಣವು 90 ಎಕರೆಯ ವ್ಯಾಪಿಸಿದೆ. ಆತ್ಯಕರ್ಷ ಕಾರಂಜಿ ಕೆರೆಯು ಚಾಮುಂಡಿ ಬೆಟ್ಟಗಳ ತಪ್ಪಲಿನಲ್ಲಿದ್ದು, ವಿವಿಧ ಜಾತಿಯ ಆಕರ್ಷಕ ಪಕ್ಷಿಗಳನ್ನು ಕಣ್ತುಂಬಿಸಿಕೊಳ್ಳಬಹುದು.
  • ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ : ಮೈಸೂರು ಮೃಗಾಲಯ ಎಂದೇ ಫೇಮಸ್ ಆಗಿರುವ ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಅನ್ನು 1892 ರಲ್ಲಿ ಸ್ಥಾಪಿಸಲಾಯಿತು. ಇಲ್ಲಿಗೆ ಬಂದರೆ ವಿವಿಧ ರೀತಿಯ ಪ್ರಾಣಿ ಹಾಗೂ ಪಕ್ಷಿ ಪ್ರಪಂಚಕ್ಕೆ ಹೋದಂತಹ ಅನುಭವವಾಗುತ್ತದೆ
  • ಕಿಷ್ಕಿಂಧಾ ಮೂಲಿಕಾ ಬೋನ್ಸಾಯ್ ಗಾರ್ಡನ್ : ಮೈಸೂರಿನ ಅತ್ಯಂತ ಪ್ರಸಿದ್ಧ ಉದ್ಯಾನವನಗಳಲ್ಲಿ ಒಂದು ಈ ಕಿಷ್ಕಿಂಧಾ ಮೂಲಿಕಾ ಬೋನ್ಸಾಯ್ ಗಾರ್ಡನ್. ಇಲ್ಲಿ ನೀವು ಅನೇಕ ಬಗೆಯ ಬೋನ್ಸಾಯ್ ಸಸ್ಯ ಸಾಮ್ರಾಜ್ಯವನ್ನು ನೋಡಬಹುದು. ಇದು ಪ್ರಶಾಂತವಾದ ಸ್ಥಳವಾಗಿದ್ದು, ಇಲ್ಲಿಗೆ ಹೋದರೆ ಕುಟುಂಬ ಹಾಗೂ ಮಕ್ಕಳ ಜೊತೆಗೆ ಸಮಯ ಕಳೆಯಬಹುದು.
  • ಮೈಸೂರು ಮರಳು ಶಿಲ್ಪ ಸಂಗ್ರಹಾಲಯ : ದೇಶದ ಮೊದಲ ಮರಳು ಶಿಲ್ಪ ಸಂಗ್ರಹಾಲಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 2014 ರಲ್ಲಿ ಉದ್ಘಾಟನೆಗೊಂಡ ಈ ವಸ್ತುಸಂಗ್ರಹಾಲಯದಲ್ಲಿ ಅದ್ಭುತವಾದ ಕೆತ್ತಿದ ಮರಳಿನ ಹಾಗೂ ನೀರಿನಿಂದ ಮಾಡಿದ ಶಿಲ್ಪಗಳನ್ನು ಕಣ್ಮನ ಸೆಳೆಯುತ್ತದೆ.
  • ಶ್ರೀಕಂಠೇಶ್ವರ ದೇವಾಲಯ : ನಂಜನಗೂಡು ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿದ್ದು, ಮೈಸೂರಿನಿಂದ ಸುಮಾರು 23 ಕಿ.ಮಿ. ದೂರದಲ್ಲಿದೆ. ನಂಜನಗೂಡಿನ ಕಪಿಲ ನದಿಯ ದಂಡೆಯಲ್ಲಿ ಪ್ರಮುಖ ಧಾರ್ಮಿಕ ಕೇಂದ್ರವಾದ ಶ್ರೀಕಂಠೇಶ್ವರ ದೇವಾಲಯವಿದೆ. ಮೈಸೂರಿಗೆ ಹೋದರೆ ಈ ಧಾರ್ಮಿಕ ಕೇಂದ್ರಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆಯಬಹುದು.
  • ಮೈಸೂರು ರೈಲ್ವೆ ಮ್ಯೂಸಿಯಂ : ಈ ಬಾರಿ ದಸರಾಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುವಿರಿಯಾದರೆ ಮೈಸೂರು ರೈಲ್ವೆ ಮ್ಯೂಸಿಯಂ ನತ್ತ ಪ್ರಯಾಣ ಬೆಳೆಸಿ. 32 ಎಕರೆ ವಿಶಾಲ ಪ್ರದೇಶದಲ್ಲಿರುವ ಈ ಮ್ಯೂಸಿಯಂನಲ್ಲಿ ಬ್ರಿಟಿಷರ ಕಾಲದ ರೈಲು ಎಂಜಿನ್‌ಗಳು ಹಾಗೂ ಸ್ಟೀಮ್ ಎಂಜಿನ್‌ ಗಳಿದ್ದು ಸಹಜವಾಗಿ ಮಕ್ಕಳಿಗೆ ಇಷ್ಟವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಕ್ಷಣಾರ್ಧದಲ್ಲೇ ಜಲ ಸಮಾಧಿಯಾದ ಎರಡಂತಸ್ತಿನ ಮನೆ
ಕ್ಷಣಾರ್ಧದಲ್ಲೇ ಜಲ ಸಮಾಧಿಯಾದ ಎರಡಂತಸ್ತಿನ ಮನೆ
ಕೋಲಾರದಲ್ಲಿ ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ, ಸ್ಥಳೀಯರಿಗೆ ಆತಂಕ
ಕೋಲಾರದಲ್ಲಿ ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ, ಸ್ಥಳೀಯರಿಗೆ ಆತಂಕ
ಯುವ ದಸರಾ ವೇದಿಕೆ ಮೇಲೆ ನಕ್ಕ ರುಕ್ಮಿಣಿ ವಸಂತ್; ವಿಡಿಯೋ ನೋಡಿ
ಯುವ ದಸರಾ ವೇದಿಕೆ ಮೇಲೆ ನಕ್ಕ ರುಕ್ಮಿಣಿ ವಸಂತ್; ವಿಡಿಯೋ ನೋಡಿ
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?