AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weight Check : ಈ ಐದು ಸಂದರ್ಭದಲ್ಲಿ ಅಪ್ಪಿತಪ್ಪಿಯೂ ತೂಕ ಚೆಕ್ ಮಾಡಿಕೊಳ್ಳಬೇಡಿ

ಕೆಲವರಿಗೆ ಆಗಾಗ ತೂಕ ಎಷ್ಟಿದೆ ಪರೀಕ್ಷಿಸಿಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಎಷ್ಟೋ ಜನರಿಗೆ ಯಾವ ಸಮಯದಲ್ಲಿ ದೇಹದ ತೂಕ ನೋಡಬೇಕು ಎನ್ನುವುದು ತಿಳಿದಿರುವುದಿಲ್ಲ. ದೇಹದಲ್ಲಿ ಹಾರ್ಮೋನ್ ಬದಲಾವಣೆ ಸೇರಿದಂತೆ ನಾನಾ ಕಾರಣಗಳಿಂದ ದೇಹದ ತೂಕದಲ್ಲಿ ವ್ಯತ್ಯಾಸವಾಗಬಹುದು. ಹೀಗಾಗಿ ಈ ಕೆಲವು ಸಮಯದಲ್ಲಿ ತೂಕ ಎಷ್ಟಿದೆ ಎಂದು ಪರೀಕ್ಷೆ ಮಾಡಲು ಹೋಗುವುದು ಸರಿಯಲ್ಲ.

Weight Check : ಈ ಐದು ಸಂದರ್ಭದಲ್ಲಿ ಅಪ್ಪಿತಪ್ಪಿಯೂ ತೂಕ ಚೆಕ್ ಮಾಡಿಕೊಳ್ಳಬೇಡಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Sep 25, 2024 | 5:49 PM

Share

ಇತ್ತೀಚೆಗಿನ ದಿನಗಳಲ್ಲಿ ದಪ್ಪಯಿದ್ದವರು ಸಣ್ಣಗಾಗಲು, ಸಣ್ಣ ದಪ್ಪವಾಗಲು ನಾನಾ ರೀತಿ ಪ್ರಯತ್ನ ಮಾಡುತ್ತಿರುತ್ತಾರೆ. ಈ ವೇಳೆ ತಮ್ಮ ದೇಹದ ತೂಕ ಎಷ್ಟಿದೆ ಎಂದು ನೋಡಿಕೊಳ್ಳುತ್ತಾರೆ. ಆದರೆ ಕೆಲವು ಸನ್ನಿವೇಶಗಳಲ್ಲಿ ದೇಹದ ತೂಕವನ್ನು ಪರೀಕ್ಷಿಸುವುದರಿಂದ ನಿಮ್ಮ ತೂಕದ ಸರಿಯಾದ ಮಾಹಿತಿಯು ಸಿಗುವುದಿಲ್ಲ. ಹೀಗಾಗಿ ನಿಮ್ಮ ತೂಕವನ್ನು ನೋಡುವಾಗ ಈ ಕೆಲವು ತಪ್ಪುಗಳನ್ನು ಮಾಡಬೇಡಿ.

  • ವ್ಯಾಯಾಮ ಮಾಡಿದ ತಕ್ಷಣ ತೂಕ ಪರೀಕ್ಷಿಸಬೇಡಿ : ಕೆಲವರು ತೂಕ ಇಳಿಸಿಕೊಳ್ಳಲು ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಈ ವೇಳೆಯಲ್ಲಿ ತೂಕವನ್ನು ಪರಿಶೀಲಿಸಬಾರದು. ವ್ಯಾಯಾಮ ಮಾಡಿದ ಬಳಿಕ ಬೆವರು ಹಾಗೂ ದೇಹದಲ್ಲಿ ದ್ರವದ ಕೊರತೆ ಇರುವ ಕಾರಣ ತೂಕದಲ್ಲಿ ಸ್ವಲ್ಪ ಏರಿಳಿತ ಕಂಡು ಸರಿಯಾದ ಮಾಹಿತಿ ಸಿಗುವುದಿಲ್ಲ.
  • ಊಟ ಮಾಡಿದ ತಕ್ಷಣವೇ ತೂಕವನ್ನು ನೋಡಬೇಡಿ : ಊಟ ಮಾಡಿದಾಗ ವೇಳೆ ಸೇವಿಸಿರುವ ಆಹಾರ ಇನ್ನೂ ಜೀರ್ಣವಾಗುತ್ತಿರುತ್ತದೆ. ಈ ವೇಳೆಯಲ್ಲಿ ಆಹಾರ ಹಾಗೂ ನೀರನ್ನು ಸಾಕಷ್ಟು ಪ್ರಮಾಣ ಕುಡಿದಿರುವುದರಿಂದ ಸರಿಯಾದ ತೂಕ ಎಷ್ಟಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ.
  • ಋತುಚಕ್ರದ ಸಮಯದಲ್ಲಿ ತೂಕ ಪರೀಕ್ಷಿಸುವುದನ್ನು ತಪ್ಪಿಸಿ : ತಿಂಗಳ ಮುಟ್ಟಿನ ದಿನಾಂಕದ ಒಂದು ವಾರದ ಮೊದಲು ದೇಹದಲ್ಲಿ ಹಾರ್ಮೋನ್ ಬದಲಾವಣೆಯಾಗುತ್ತದೆ. ದೇಹವು ನೀರು ಹಿಡಿದಿಟ್ಟುಕೊಳ್ಳುವುದು, ಹೊಟ್ಟೆ ಉಬ್ಬುವುದು ಹೀಗೆ ನಾನಾ ಬದಲಾವಣೆಗಳಾಗುವುದು ಸಹಜ. ಈ ಸಮಯದಲ್ಲಿ ತೂಕ ನೋಡಿದರೆ ನಿಮ್ಮ ದೇಹದ ತೂಕವು ಹೆಚ್ಚಾದಂತೆ ಕಾಣುತ್ತದೆ, ಹೀಗಾಗಿ ಈ ಅವಧಿಯಲ್ಲಿ ತೂಕ ಪರೀಕ್ಷಿಸಿಕೊಳ್ಳಬೇಡಿ.
  • ಮಲಬದ್ಧತೆಯ ಸಮಸ್ಯೆಯಿದ್ದಲ್ಲಿ ತೂಕ ಪರೀಕ್ಷೆ ಬೇಡ : ಮಲಬದ್ಧತೆ ಸಮಸ್ಯೆಯಿದ್ದಲ್ಲಿ ಆಹಾರ ಜೀರ್ಣ ಆಗದೇ ಇದ್ದು ಕೆಲವು ದಿನದ ಆಹಾರ ನಿಮ್ಮ ಹೊಟ್ಟೆಯಲ್ಲಿ ಶೇಖರಣೆ ಆಗಿರುತ್ತದೆ. ಈ ವೇಳೆಯಲ್ಲಿ ತೂಕ ಪರೀಕ್ಷಿಸಿದರೆ ದೇಹದ ತೂಕವು ಹೆಚ್ಚಿರುವಂತೆ ತೋರಿಸುತ್ತದೆ. ಹೀಗಾಗಿ ಈ ಸಮಯದಲ್ಲಿ ತೂಕ ಪರೀಕ್ಷಿಸುವುದು ಸರಿಯಲ್ಲ.
  • ಎದ್ದ ತಕ್ಷಣ ತೂಕ ಪರೀಕ್ಷಿಸಿಕೊಳ್ಳಬೇಡಿ : ಕೆಲವರು ಎದ್ದ ತಕ್ಷಣ ತೂಕ ನೋಡಿಕೊಳ್ಳುತ್ತಾರೆ. ಆದರೆ ರಾತ್ರಿ ತಡವಾಗಿ ಊಟ ಮಾಡಿದ್ದರಿಂದ ಆಹಾರವು ಸಂಪೂರ್ಣವಾಗಿ ಜೀರ್ಣವಾಗಿರುವುದಿಲ್ಲ. ನಿದ್ದೆ ಮಾಡಿ ಎದ್ದ ದಿನ ಹಾಗೂ ಆಹಾರವು ಸಂಪೂರ್ಣವಾಗಿ ಜೀರ್ಣಗೊಂಡ ಸಮಯದಲ್ಲಿ ತೂಕ ನೋಡುವುದು ಒಳ್ಳೆಯದು. ಇಲ್ಲದ್ದಿದರೆ ಬೆಳಗ್ಗೆ ಎದ್ದು ನೀವು ತೂಕ ನೋಡಿಕೊಂಡಾಗ ಸಹಜವಾಗಿಯೇ ತೂಕ ಹೆಚ್ಚು ತೋರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ