ಹಲ್ಲು ಹುಳುಕಾಗಲು ಈ ಆಹಾರಗಳು ಕಾರಣ, ದಂತವೈದ್ಯರು ಹೇಳುವುದೇನು?

ಮಕ್ಕಳಿಂದ ಹಿಡಿದು ದೊಡ್ಡವರನ್ನು ಕಾಡುವ ಸಮಸ್ಯೆಗಳಲ್ಲಿ ದಂತ ಕುಳಿ ಅಥವಾ ಹುಳುಕು ಹಲ್ಲು ಸಮಸ್ಯೆ ಕೂಡ ಒಂದು. ಹೀಗಾಗಿ ದೇಹದ ಆರೋಗ್ಯ ಕಾಪಾಡುವುದರ ಜೊತೆಗೆ ಬಾಯಿ ಸ್ವಚ್ಛತೆ ಕಡೆಗೂ ಅಷ್ಟೇ ಗಮನ ಕೊಡಬೇಕು. ಇತ್ತೀಚೆಗಿನ ದಿನಗಳಲ್ಲಿ ಹಲ್ಲಿನ ಸಮಸ್ಯೆಯು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ಈ ದಂತಕುಳಿಗೆ ಕಾರಣವಾಗುವ ಈ ಮೂರು ಆಹಾರಗಳ ಬಗ್ಗೆ ತಜ್ಞರು ತಿಳಿಸಿದ್ದಾರೆ. ಹಾಗಾದ್ರೆ ಹಲ್ಲಿನ ಆರೋಗ್ಯ ಹಾಳು ಮಾಡುವ ಆಹಾರಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಲ್ಲು ಹುಳುಕಾಗಲು ಈ ಆಹಾರಗಳು ಕಾರಣ, ದಂತವೈದ್ಯರು ಹೇಳುವುದೇನು?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 25, 2024 | 12:23 PM

ನಕ್ಕರೆ ಕಾಣಿಸುವುದೇ ಮುಖದ ಮೇಲೆ ಮುತ್ತಿನಂತೆ ಜೋಡಿಸಿಟ್ಟ ಹಲ್ಲುಗಳು. ಈ ದಾಳಿಂಬೆಯಂತಿರುವ ಹಲ್ಲುಗಳು ಹುಳುಕಾಗಿದ್ದರೆ ನಗಲು, ಮಾತನಾಡಲು ಮುಜುಗರ ಎನಿಸುತ್ತದೆ. ಇಂದಿನ ದಿನಗಳಲ್ಲಿ ದಂತ ಸಮಸ್ಯೆಗಳು ಬರಲು ವಯಸ್ಸಾಗಬೇಕು ಎನ್ನುವುದಿಲ್ಲ. ಸಣ್ಣ ವಯಸ್ಸಿನಲ್ಲಿಯೇ ಹಲ್ಲಿನ ಸಮಸ್ಯೆಗಳಾದ ದಂತ ಕುಳಿ, ವಸಡಿನ ನೋವುಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಆದರೆ ಈ ಆಹಾರಗಳ ನಿರಂತರ ಸೇವನೆಯಿಂದ ದಂತಕುಳಿ ಅಥವಾ ಹುಳುಕು ಹಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ತಿಳಿಸಿದ್ದಾರೆ. ಪೌಷ್ಟಿಕತಜ್ಞ ನೇಹಾ ಸಹಾಯ ಮತ್ತು ದಂತವೈದ್ಯೆ ಡಾ ರೇಷ್ಮಾ ಶಾಹ್ ಅವರು ಹಲ್ಲಿನ ಆರೋಗ್ಯಕ್ಕೆ ಹಾನಿಕಾರಕವಾದ ಮೂರು ಆಹಾರಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ.

ತಜ್ಞರ ಪ್ರಕಾರ ಹುಳುಕು ಹಲ್ಲಿನ ಸಮಸ್ಯೆಗೆ ಕಾರಣವಾಗುವ ಆಹಾರಗಳಿವು

  • ಜಿಗುಟಾದ ಮಿಠಾಯಿಗಳು : ಈ ಸಿಹಿ ಪದಾರ್ಥಗಳು ಆರೋಗ್ಯಕರ ಹಲ್ಲಿಗೆ ಅಪಾಯಕಾರಿಯಾಗಿದೆ. ಈ ಮಿಠಾಯಿಗಳನ್ನು ನಿಮ್ಮ ಹಲ್ಲುಗಳಿಗೆ ಅಂಟಿಕೊಂಡಿರುತ್ತವೆ. ಹಲ್ಲುಜ್ಜುವ ಮೂಲಕ ತೆಗೆದುಹಾಕುವುದು ಕಷ್ಟಕರವಾಗಿದೆ. ಹೀಗಾಗಿ ಇದು ದಂತಕುಳಿಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾದ ಸಂತಾನೋತ್ಪತ್ನಿಗೆ ಕಾರಣವಾಗುತ್ತದೆ.
  • ಎಣ್ಣೆಯಲ್ಲಿ ಕರಿದ ತಿಂಡಿಗಳು : ಬಾಯಿಗೆ ರುಚಿ ನೀಡುವ ಈ ಕರಿದ ತಿಂಡಿಗಳು ಹಲ್ಲಿನ ಆರೋಗ್ಯಕ್ಕೆ ಹಾನಿಕಾರಕ. ಈ ತಿಂಡಿಗಳನ್ನು ತಯಾರಿಸಲು ಕಡಿಮೆ ಬೆಲೆಯ ಹಾಗೂ ಕಲಬೆರಕೆಯ ಎಣ್ಣೆಯನ್ನು ಬಳಸುವುದರಿಂದ ಹಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
  • ತಂಪು ಪಾನೀಯ : ಹಣ್ಣಿನ ರಸ ಹಾಗೂ ತಂಪು ಪಾನೀಯಗಳ ಸೇವನೆಯು ಆರೋಗ್ಯಕ್ಕೆ ಒಳ್ಳೆಯದೆಂದು ಭಾವಿಸುತ್ತೇವೆ. ಈ ಪಾನೀಯಗಳಲ್ಲಿ ಕೃತಕ ಸಕ್ಕರೆ ಹಾಗೂ ಆಮ್ಲಗಳಿರುತ್ತದೆ. ಇದು ದಂತಕವಚವನ್ನು ದುರ್ಬಲಗೊಳಿಸಿ, ಹಲ್ಲುಗಳಲ್ಲಿ ಹುಳುಕು ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ: ಮಡದಿಯನ್ನು ಸಂತೋಷಪಡಿಸಲು ಪುರುಷನಲ್ಲಿ ಒಂಟೆಯ ಈ ಗುಣಗಳಿರಲೇಬೇಕಂತೆ

ಆರೋಗ್ಯಕರ ಹಲ್ಲುಗಳನ್ನು ಕಾಪಾಡಿಕೊಳ್ಳಲು ಸಲಹೆಗಳು

  • ಫ್ಲೋರೈಡ್ ಟೂತ್ ಪೇಸ್ಟ್ ನಿಂದ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದರಿಂದ ಹಲ್ಲಿನ ಸಂಧಿಯಲ್ಲಿ ಸಿಲುಕಿಕೊಳ್ಳುವ ಆಹಾರಗಳನ್ನು ತೆಗೆದುಹಾಕಬಹುದು.
  • ಆಹಾರವನ್ನು ಸೇವಿಸಿದ ಬಳಿಕ ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ, ಇದರಿಂದ ಹಲ್ಲುಗಳ ಸಂಧಿಯಲ್ಲಿ ಸಿಲುಕಿದ ಆಹಾರಗಳು ಹೋಗುತ್ತದೆ.
  • ಆಹಾರ ಸೇವನೆಯ ಬಳಿಕ ಬಾಯಿ ಮುಕ್ಕಳಿಸುವುದನ್ನು ಮರೆಯದಿರಿ.
  • ಸಕ್ಕರೆ ಮತ್ತು ಆಮ್ಲೀಯ ಪಾನೀಯಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.
  • ಸಕ್ಕರೆ ಅಥವಾ ಆಮ್ಲೀಯ ಪಾನೀಯಗಳನ್ನು ಕುಡಿದ ಬಳಿಕ ಬಾಯಿಯನ್ನು ನೀರಿನಿಂದ ಮುಕುಳಿಸುವ ಮೂಲಕ ಸ್ವಚ್ಛಗೊಳಿಸಿ.
  • ಹಲ್ಲಿನ ಆರೋಗ್ಯ ಹಾಗೂ ನಿಯಮಿತ ತಪಾಸಣೆಗಾಗಿ ದಂತವೈದ್ಯರನ್ನು ಭೇಟಿ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್