Chanakya Niti : ಮಡದಿಯನ್ನು ಸಂತೋಷಪಡಿಸಲು ಪುರುಷನಲ್ಲಿ ಒಂಟೆಯ ಈ ಗುಣಗಳಿರಲೇಬೇಕಂತೆ

ಕಾಲ ಬದಲಾಗಿದೆ, ಈಗಿನ ಕಾಲದಲ್ಲಿ ದುಡ್ಡಿದರೆ ಮಾತ್ರ ಖುಷಿಯಾಗಿರಲು ಸಾಧ್ಯ ಎನ್ನುವ ಮನಸ್ಥಿತಿ ಬಂದೋದಗಿದೆ. ಹೀಗಾಗಿ ಪ್ರತಿಯೊಬ್ಬ ಪುರುಷನು ತನ್ನ ಕುಟುಂಬ ಹೆಂಡತಿ ಮಕ್ಕಳು ಖುಷಿಯಾಗಿರಿಸಲು ಕಷ್ಟ ಪಟ್ಟು ದುಡಿದು ಐಷಾರಾಮಿ ಬದುಕನ್ನು ಕಟ್ಟಿ ಕೊಳ್ಳಲು ಒದ್ದಾಡುತ್ತಾರೆ. ಆದರೆ ಚಾಣಕ್ಯ ಹೇಳುವ ಈ ಪ್ರಾಣಿಗಳು ಗಂಡಿಗೆ ಇರಲೇಬೇಕಂತೆ. ಹೌದು, ಒಂಟೆಯ ಈ ಗುಣಗಳು ಗಂಡಿನಲ್ಲಿದ್ದರೆ ಪತ್ನಿಯು ಸಂತೋಷವಾಗಿರುತ್ತಾಳಂತೆ.

Chanakya Niti : ಮಡದಿಯನ್ನು ಸಂತೋಷಪಡಿಸಲು ಪುರುಷನಲ್ಲಿ ಒಂಟೆಯ ಈ ಗುಣಗಳಿರಲೇಬೇಕಂತೆ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 24, 2024 | 3:57 PM

ಏನೇ ಮಾಡಿದರೂ ಎಷ್ಟೇ ಮಾಡಿದರೂ ಖುಷಿ ಪಡಿಸಲು ಸಾಧ್ಯವಿಲ್ಲದ ವ್ಯಕ್ತಿಯೆಂದರೆ ಅದುವೇ ಹೆಂಡತಿ ಮಾತ್ರ ಎನ್ನುವ ಮಾತನ್ನು ಗಂಡಸರ ಬಾಯಿಂದ ಕೇಳಿರಬಹುದು. ಆದರೆ ಆಚಾರ್ಯ ಚಾಣಕ್ಯನು ಒಬ್ಬ ಪುರುಷನಲ್ಲಿ ಒಂಟೆಯಲ್ಲಿರುವ ಈ ಕೆಲವು ಗುಣಗಳನ್ನು ಮೈಗೂಡಿಸಿಕೊಂಡರೆ ಪತ್ನಿ ಹಾಗೂ ಆತನ ಕುಟುಂಬದವರು ಸದಾ ಸಂತೋಷವಾಗಿರುತ್ತಾರೆ. ಅದಲ್ಲದೇ ಹೀಗಿದ್ದರೆ ಪತ್ನಿಯನ್ನು ಖುಷಿಯಾಗಿಟ್ಟುಕೊಳ್ಳುವುದು ಕಷ್ಟವೇನಲ್ಲವಂತೆ.

* ಶ್ರಮವಹಿಸಿ ಕೆಲಸ ಮಾಡುವ ಗುಣ : ಪ್ರತಿಯೊಬ್ಬ ಪುರುಷನು ಸಾಧ್ಯವಾದಷ್ಟು ಶ್ರಮವಹಿಸಿ ಕೆಲಸ ಮಾಡಬೇಕು. ಕಷ್ಟ ಪಟ್ಟು ಕೆಲಸ ಮಾಡಿದರೆ ತಕ್ಕ ಪ್ರತಿಫಲ ಸಿಗಲು ಸಾಧ್ಯ. ಆಗಿದ್ದಾಗ ಮಾತ್ರ ಆರ್ಥಿಕವಾಗಿ ಸದೃಢರಾಗಿರಲು ಸಾಧ್ಯ. ಕೈಯಯಲ್ಲಿ ಹಣವಿದ್ದರೆ ಮಾತ್ರ ಕುಟುಂಬದ ಸದಸ್ಯನ್ನು ಖುಷಿ ಪಡಿಸಬಹುದು. ಒಂಟೆಯ ಈ ಗುಣವನ್ನು ಪುರುಷನು ಅಗತ್ಯವಾಗಿ ಅಳವಡಿಸಿಕೊಳ್ಳಬೇಕು ಎನ್ನುತ್ತಾನೆ ಚಾಣಕ್ಯ.

* ಎಚ್ಚರಿಕೆಯಿಂದಿರುವ ಗುಣ : ಚಾಣಕ್ಯನು ಹೇಳುವಂತೆ ಒಂಟೆ ಗಾಢ ನಿದ್ದಯಲ್ಲಿದ್ದರೂ ಕೂಡ ಸದಾ ಅಲರ್ಟ್ ಆಗಿರುತ್ತದೆ. ಅದೇ ರೀತಿಯ ಪುರುಷನು ಕುಟುಂಬದ ಬಗ್ಗೆ ಸದಾ ಕಾಳಜಿ ವಹಿಸುವುದರ ಜೊತೆಗೆ ತನ್ನ ಕರ್ತವ್ಯವನ್ನು ನಿಭಾಯಿಸಿಕೊಂಡು ಹೋಗಬೇಕು. ಒಂದು ವೇಳೆ ಕುಟುಂಬದ ಸದಸ್ಯರಿಗೆ ತೊಂದರೆಯಾದಾಗ ಅವರನ್ನು ರಕ್ಷಣೆ ಮಾಡಬೇಕು. ಹೀಗಾಗಿ ಸದಾ ಎಚ್ಚರಿಕೆಯಿಂದ ಇದ್ದರೆ ಮಾತ್ರ ಆ ವ್ಯಕ್ತಿಯನ್ನು ಮದುವೆಯಾಗಿರುವ ಹೆಣ್ಣು ಸುರಕ್ಷಿತ ಹಾಗೂ ಖುಷಿಯಿಂದ ಇರಲು ಸಾಧ್ಯ.

* ಸಮಯ ಮೀಸಲಿಡುವುದು : ಪುರುಷನು ಕುಟುಂಬಕ್ಕಾಗಿ ಸಮಯ ನೀಡುವ ಗುಣವನ್ನು ಹೊಂದಿರುವುದು ಬಹಳ ಮುಖ್ಯ. ಆಗಿದ್ದಾಗ ಮಾತ್ರ ಪತ್ನಿಗೆ ದೈಹಿಕ ಮತ್ತು ಮಾನಸಿಕವಾಗಿ ಸಂತೋಷವನ್ನು ನೀಡಲು ಸಾಧ್ಯ. ಹೀಗಾಗಿ ಸಂಗಾತಿಯನ್ನು ಹೊಂದಿರುವ ಪುರುಷನ ಮೊದಲ ಜವಾಬ್ದಾರಿಯಾಗಿದ್ದು, ಹೀಗಿದ್ದರೆ ಮಾತ್ರ ಮಡದಿ ಹಾಗೂ ಕುಟುಂಬದ ಸದಸ್ಯರು ನೆಮ್ಮದಿ ಹಾಗೂ ಸಂತೋಷದಿಂದರಲು ಸಾಧ್ಯ.

ಇದನ್ನೂ ಓದಿ: ನೀವು ಮಾತನಾಡುವ ರೀತಿಯಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ

* ಪ್ರಾಮಾಣಿಕತೆ : ಒಂಟೆಯೂ ತನ್ನ ಮಾಲೀಕನಿಗೆ ಪ್ರಾಮಾಣಿಕವಾಗಿರುವಂತೆ ಪ್ರತಿಯೊಬ್ಬ ಪುರುಷನಲ್ಲಿ ಪ್ರಾಮಾಣಿಕತೆ ಗುಣವಿರಬೇಕು. ಪರ ಮಹಿಳೆಯರ ಸಹವಾಸ ಮಾಡಿ ಪತ್ನಿಯಾದವಳಿಗೆ ಮೊದ ಮಾಡುವ ಗುಣವು ಆತನಲ್ಲಿ ಇರಬಾರದು. ಆತನು ಈ ಒಂಟೆಯ ಗುಣವನ್ನು ಅಳವಡಿಸಿಕೊಂಡರೆ ಪ್ರಾಮಾಣಿಕ ಪತಿಯಿಂದ ಸಂಗಾತಿಯು ಸಂತೋಷದಿಂದ ಜೀವನ ನಡೆಸುತ್ತಾಳೆ.

* ಶೌರ್ಯವಂತ : ಯಾವುದೇ ಪುರುಷರಲ್ಲಿ ಧೈರ್ಯವಿದ್ದರೆ ಆತನು ಜೀವನದಲ್ಲಿ ಏನೇ ಸಂಕಷ್ಟ ಸವಾಲುಗಳು ಎದುರಾದರೂ ನಿಭಾಯಿಸಿಕೊಂಡು ಹೋಗಬಲ್ಲನು. ಹೀಗಾಗಿ ಒಂಟೆಗೆ ಇರುವ ಧೈರ್ಯಶಾಲಿ ಗುಣವು ಗಂಡಸರಲ್ಲಿ ಇರಬೇಕು. ಈ ಮೂಲಕ ಪತ್ನಿ ಹಾಗೂ ಮಕ್ಕಳನ್ನು ಸಂಕಷ್ಟದ ಸನ್ನಿವೇಶದಲ್ಲಿಯು ರಕ್ಷಣೆ ಮಾಡಲು ಸಾಧ್ಯ ಎನ್ನುತ್ತಾನೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಮೆರಿಕ ಪ್ರವಾಸ ಫಲಪ್ರದವಾಗಿದೆ; ಯುಎಸ್​ ಭೇಟಿಯ ನೆನಪುಗಳ ಹಂಚಿಕೊಂಡ ಮೋದಿ
ಅಮೆರಿಕ ಪ್ರವಾಸ ಫಲಪ್ರದವಾಗಿದೆ; ಯುಎಸ್​ ಭೇಟಿಯ ನೆನಪುಗಳ ಹಂಚಿಕೊಂಡ ಮೋದಿ
ಮಹಿಳಾ ಟಿ20 ವಿಶ್ವಕಪ್ 2024ರ ಆ್ಯಂಥಮ್ ಸಾಂಗ್ ಬಿಡುಗಡೆ
ಮಹಿಳಾ ಟಿ20 ವಿಶ್ವಕಪ್ 2024ರ ಆ್ಯಂಥಮ್ ಸಾಂಗ್ ಬಿಡುಗಡೆ
ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ ₹49,999ಕ್ಕೆ ಆ್ಯಪಲ್ ಐಫೋನ್ 15
ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ ₹49,999ಕ್ಕೆ ಆ್ಯಪಲ್ ಐಫೋನ್ 15
ಸ್ಪರ್ಧಿಗಳ ಪಟ್ಟಿ ಸುದೀಪ್​ಗೆ ಸಿಗೋದು ಯಾವಾಗ? ಉತ್ತರಿಸಿದ ಕಿಚ್ಚ
ಸ್ಪರ್ಧಿಗಳ ಪಟ್ಟಿ ಸುದೀಪ್​ಗೆ ಸಿಗೋದು ಯಾವಾಗ? ಉತ್ತರಿಸಿದ ಕಿಚ್ಚ
ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು
ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು
ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ ಹೋಗುತ್ತೇವೆಂದ ಸ್ನೇಹಮಯಿ ಕೃಷ್ಣ
ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ ಹೋಗುತ್ತೇವೆಂದ ಸ್ನೇಹಮಯಿ ಕೃಷ್ಣ
Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು
Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು