Talking Style : ನೀವು ಮಾತನಾಡುವ ರೀತಿಯಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ
ಒಬ್ಬ ವ್ಯಕ್ತಿಯು ಗುಣಸ್ವಭಾವ, ಮಾತು ನಡವಳಿಕೆಗಳು ಇನ್ನೊಬ್ಬ ವ್ಯಕ್ತಿಗೆ ಹೋಲಿಕೆ ಮಾಡಿದರೆ ಭಿನ್ನವಾಗಿರುತ್ತದೆ. ಹೀಗಾಗಿ ಈ ಪ್ರಪಂಚದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಒಂದೊಂದು ರೀತಿಯ ಗುಣಸ್ವಭಾವವನ್ನು ಹೊಂದಿರುತ್ತಾರೆ. ವ್ಯಕ್ತಿಯ ಮಾತನಾಡುವ ದಾಟಿಯಿಂದಲೇ ವ್ಯಕ್ತಿಯ ಗುಣ ಸ್ವಭಾವ ಏನೆಂದು ಹೇಳಬಹುದು. ಹಾಗಾದ್ರೆನೀವು ಯಾವ ರೀತಿ ಮಾತನಾಡುತ್ತೀರಿ ಆದರಿಂದ ನೀವು ಈ ಗುಣಗಳನ್ನು ಹೊಂದಿದ್ದೀರಿ ಎಂದು ಹೇಳಬಹುದು.
ಮನುಷ್ಯ ಅಂದ ಮೇಲೆ ಆತನಲ್ಲಿ ಒಂದಲ್ಲ ಒಂದು ನೂನ್ಯತೆಯಿರುವುದು ಸಹಜ. ಒಬ್ಬರಿಗಿಂತ ಒಬ್ಬರಲ್ಲಿ ಭಿನ್ನವಾದ ಗುಣಗಳು ಇರುತ್ತದೆ. ಕೆಲವರು ಪ್ರೀತಿ, ಸಿಟ್ಟು, ಸಹನೆ, ಶಿಸ್ತು, ಸೋಮಾರಿ, ಅಸಡ್ಡೆ ಹೀಗೆ ಎಲ್ಲಾ ಗುಣಗಳನ್ನು ಹೊಂದಿರುತ್ತಾರೆ. ಇನ್ನು ಕೆಲವರು ಈ ಕೆಟ್ಟ ಗುಣವನ್ನು ನಿಯಂತ್ರಿಸುವ ಮೂಲಕ ಶಾಂತತೆಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದರೆ ಒಬ್ಬ ವ್ಯಕ್ತಿಯ ಮಾತನಾಡುವ ರೀತಿಯಿಂದಲೇ ಆತನ ವ್ಯಕ್ತಿತ್ವವು ಹೇಗೆ ಎಂದು ಅಳೆಯಬಹುದು.
* ವೇಗವಾಗಿ ಮಾತನಾಡುವವರು : ಒಬ್ಬ ವ್ಯಕ್ತಿಯು ನೇರವಾಗಿ ಮತ್ತು ತ್ವರಿತವಾಗಿ ಮಾತನಾಡುತ್ತಿದ್ದರೆ ದೈಹಿಕವಾಗಿ ಸದೃಢನಾಗಿದ್ದು ಉಲ್ಲಾಸಭರಿತ ಸ್ವಭಾವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಸಂತೋಷವಾಗಿ ಇರುವುದಲ್ಲದೆ, ಯಾವುದೇ ವಿವಾದಕ್ಕೆ ಸಿಲುಕಿಕೊಳ್ಳಲು ಇಷ್ಟ ಪಡುವುದಿಲ್ಲ.
* ಜೋರಾಗಿ ಮಾತನಾಡುವವರು : ಕೆಲವರು ಏರುಧ್ವನಿಯಲ್ಲಿ ಮಾತನಾಡುವುದನ್ನು ನೋಡಿರಬಹುದು. ಈ ವ್ಯಕ್ತಿಗಳಲ್ಲಿ ನಾಯಕತ್ವ ಗುಣವಿರುತ್ತದೆ. ಇತರರನ್ನು ಸೋಲಿಸಲು ಇಷ್ಟಪಡುವುದಲ್ಲದೇ, ತಾವು ಮಾತನಾಡುವಾಗ ಯಾರದರೂ ಮಾತನಾಡಿದರೆ ಇವರಿಗೆ ಇಷ್ಟವಾಗುವುದಿಲ್ಲ. ಈ ರೀತಿಯ ಜನರು ಇತರರ ಮೇಲೆ ಹೆಚ್ಚು ಪ್ರಭಾವ ಬೀರುತ್ತಾರೆ.
* ತೊದಲುತ್ತ ಮಾತನಾಡುವವರು : ನಿಮ್ಮ ಸುತ್ತಮುತ್ತಲಿನ ಜನರಲ್ಲಿ ತೊದಲುತ್ತ ಮಾತನಾಡುವವರು ಇದ್ದರೆ ಅಂತಹವರು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತಾರೆ. ಸಣ್ಣ ವಿಷಯಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ. ತೊದಲುವ ವ್ಯಕ್ತಿಗಳು ಕೀಳರಿಮೆ ಭಾವವನ್ನು ಬೆಳೆಸಿಕೊಂಡಿದ್ದು, ಇವರಲ್ಲಿ ಭಯ, ಆತಂಕವು ಹೆಚ್ಚಿರುತ್ತದೆ.
* ಇತರರು ಮಾತನಾಡುವಾಗ ಅಡ್ಡ ಬಾಯಿ ಹಾಕುವವರು : ಕೆಲವರಿಗೆ ಒಬ್ಬರು ಮಾತನಾಡುವಾಗ ಮಧ್ಯದಲ್ಲಿ ಮಾತನಾಡುವ ಸ್ವಭಾವವಿರುತ್ತದೆ. ಈ ವ್ಯಕ್ತಿಗಳು ತಮಗೆ ಏನು ಹೇಳಬೇಕು ಅದನ್ನು ಮೊದಲೇ ಹೇಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಈ ಜನರಲ್ಲಿ ಹಠಮಾರಿತನವು ಹೆಚ್ಚಾಗಿದ್ದು, ಆದರೆ ಉತ್ತಮ ಆಲೋಚನೆಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಇವರ ಮಾತಿಗೆ ಪ್ರತಿಕ್ರಿಯೆಯನ್ನು ನೀಡದೇ ಇದ್ದಲ್ಲಿ ಬೇಗನೇ ಕೋಪಗೊಳ್ಳುವ ಸ್ವಭಾವವು ಇವರದ್ದಾಗಿರುತ್ತದೆ.
* ಅಸ್ಪಷ್ಟವಾಗಿ ಮಾತನಾಡುವವರು : ಕೆಲವು ವ್ಯಕ್ತಿಗಳು ತಮ್ಮ ಅಸ್ಪಷ್ಟ ಪದಗಳಲ್ಲಿ ಮಾತನಾಡುತ್ತಾರೆ. ಈ ವ್ಯಕ್ತಿಗಳಿಗೆ ತಮ್ಮ ಕೆಲಸದ ಮೇಲೆ ಅಸಡ್ಡೆಯನ್ನು ಹೊಂದಿದ್ದು, ಆದರೆ ಇವರು ಸತ್ಯವಂತರು ಮತ್ತು ಪ್ರಾಮಾಣಿಕರರಾಗಿರುತ್ತಾರೆ. ಎದುರುಗಿರುವ ವ್ಯಕ್ತಿಗಳ ಮಾತನ್ನು ಕೇಳಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಅದಲ್ಲದೇ ಕೆಲವು ವಿಷಯಗಳನ್ನು ಬೇಗನೇ ಗ್ರಹಿಸಿಕೊಳ್ಳದ ಕಾರಣ ಗೊಂದಲಕ್ಕೆ ಒಳಗಾಗುವುದೇ ಹೆಚ್ಚು.
ಇದನ್ನೂ ಓದಿ: ಪ್ರತಿ ಹೆಣ್ಣು ಮಗಳಿಗೆ ತಾಯಿಯು ಈ ವಿಷಯ ಕಲಿಸಿಕೊಟ್ರೆ ಜೀವನ ಸುಖಕರವಾಗಿರುವುದು ಗ್ಯಾರಂಟಿ
* ನಿಧಾನವಾಗಿ ಮಾತನಾಡುವವರು : ಈ ರೀತಿ ಮಾತನಾಡುವ ವ್ಯಕ್ತಿಗಳು ಅಂತರ್ಮುಖಿ ಅಥವಾ ದ್ವಂದ್ವಾರ್ಥದ ವ್ಯಕ್ತಿತ್ವವುಳ್ಳರಾಗಿರುತ್ತಾರೆ. ಈ ಜನರು ವಿಷಯಗಳನ್ನು ಎಚ್ಚರಿಕೆಯಿಂದ ಕೇಳಿಸಿಕೊಳ್ಳುವ ಮೂಲಕ ಉತ್ತಮ ಕೇಳುಗರೂ ಆಗಿರುತ್ತಾರೆ. ಎದುರಿಗಿರುವ ವ್ಯಕ್ತಿಗಳಿಗೂ ಮಾತನಾಡಲು ಅವಕಾಶ ನೀಡುತ್ತಾರೆ. ಈ ಜನರು ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚು ಗಮನ ವಹಿಸುತ್ತಾರೆ.
* ಕಿರುಚುವ ರೀತಿ ಮಾತನಾಡುವವರು : ಈ ವ್ಯಕ್ತಿಗಳು ಮಾತನಾಡುವುದೇ ಕಿರುಚುವಂತೆ ಇರುತ್ತದೆ. ಈ ಜನರು ಎದುರಿಗಿರುವವರನ್ನು ಮೆಚ್ಚಿಸಲು ವಿಫಲರಾಗುವ ಸಾಧ್ಯತೆಯೇ ಹೆಚ್ಚು. ಈ ವ್ಯಕ್ತಿಗಳ ನಡುಗುವ ಧ್ವನಿಯು ಕಡಿಮೆ ಆತ್ಮ ವಿಶ್ವಾಸ ಮತ್ತು ಹೆದರಿಕೆ ಸ್ವಭಾವವನ್ನು ಸೂಚಿಸುತ್ತದೆ. ಅಭದ್ರತೆ, ಅವಲಂಬನೆ ಮತ್ತು ಚಡಪಡಿಕೆಯ ಭಾವನೆಗಳನ್ನು ಹೊಂದಿರುತ್ತಾರೆ.
* ಮೆಲು ಧ್ವನಿಯಲ್ಲಿ ಮಾತನಾಡುವವರು : ಮೆಲು ಧ್ವನಿಯನ್ನು ಹೊಂದಿರುವ ವ್ಯಕ್ತಿಗಳು ಪ್ರಬಲರು, ಆತ್ಮವಿಶ್ವಾಸ, ಸಮರ್ಥನೆ, ಬಹಿರ್ಮುಖಿಗಳಾಗಿದ್ದು ಆಕರ್ಷಕ, ಮುಕ್ತ ಮನೋಭಾವದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಹೆಚ್ಚು ವಿಶ್ವಾಸ ಹೊಂದಿರುವ ಈ ವ್ಯಕ್ತಿಗಳು ಇತರರನ್ನು ತನ್ನತ್ತ ಆಕರ್ಷಿಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ