Kitchen Hacks : ಈ ಟ್ರಿಕ್ಸ್ ಬಳಸಿದ್ರೆ ಬಾಳೆಹಣ್ಣು ಫ್ರೆಶ್ ಆಗಿರುತ್ತೆ, ಬೇಕಾದ್ರೆ ಟ್ರೈ ಮಾಡಿ

ಎಲ್ಲರೂ ಇಷ್ಟಪಟ್ಟು ತಿನ್ನುವ ಬಾಳೆಹಣ್ಣನ್ನು ಹಳದಿ ಬಣ್ಣಕ್ಕೆ ತಿರುಗಿದರೆ ಅದನ್ನು ತಾಜಾವಾಗಿರಿಸುವುದು ಸ್ವಲ್ಪ ಕಷ್ಟಕರ. ಮಾರುಕಟ್ಟೆಯಲ್ಲಿ ತಾಜಾವಾಗಿರುವ ಈ ಬಾಳೆಹಣ್ಣನ್ನು ಮನೆಗೆ ತಂದ ಮರುದಿನವೇ ಅದರ ಬಣ್ಣ ಬದಲಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಎರಡು ಮೂರು ದಿನಕ್ಕಿಂತ ಹೆಚ್ಚು ಕಾಲ ಹಾಗೆಯೇ ಇಟ್ಟರೆ ಕೊಳೆತು ಹೋಗುತ್ತದೆ. ಹಾಗಾದ್ರೆ ಈ ಬಾಳೆಹಣ್ಣು ತಾಜಾವಾಗಿರಿಸುವುದು ಹೇಗೆ ಎನ್ನುವ ಮಾಹಿತಿಯು ಈ ಕೆಳಗಿದೆ.

Kitchen Hacks : ಈ ಟ್ರಿಕ್ಸ್ ಬಳಸಿದ್ರೆ ಬಾಳೆಹಣ್ಣು ಫ್ರೆಶ್ ಆಗಿರುತ್ತೆ, ಬೇಕಾದ್ರೆ ಟ್ರೈ ಮಾಡಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 24, 2024 | 12:07 PM

ಸಾಮಾನ್ಯವಾಗಿ ಎಲ್ಲಾ ಋತುವಿನಲ್ಲಿ ಲಭ್ಯವಿರುವ ಬಾಳೆಹಣ್ಣು ಎಲ್ಲರ ನೆಚ್ಚಿನ ಹಣ್ಣುಗಳಲ್ಲಿ ಒಂದು. ಇದರಲ್ಲಿ ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನಲಾಗಿದೆ. ಮಾಗಿದ ಬಾಳೆಹಣ್ಣು ಹೆಚ್ಚು ದಿನ ಇಡಲು ಆಗುವುದಿಲ್ಲ, ಬಹುಬೇಗನೇ ಕೊಳೆತುಹೋಗುತ್ತದೆ. ಹೀಗಾಗಿ ಹೆಚ್ಚಿನವರು ಬಾಳೆಹಣ್ಣನ್ನು ಸ್ವಲ್ಪವೇ ಖರೀದಿ ಮಾಡುತ್ತಾರೆ. ಒಂದು ವೇಳೆ ಅಗ್ಗಕ್ಕೆ ಈ ಹಣ್ಣು ಸಿಕ್ಕಿತು ಎಂದಾದರೆ, ಮನೆಗೆ ತಂದ ಈ ಹಣ್ಣನ್ನು ದೀರ್ಘಕಾಲ ಶೇಖರಿಸಿಡಲು ಈ ವಿಧಾನಗಳನ್ನು ಅನುಸರಿಸಬಹುದು.

ಬಾಳೆಹಣ್ಣು ತಾಜಾವಾಗಿರಿಸಲು ಇಲ್ಲಿದೆ ಸಲಹೆಗಳು:

  1.  ಬಾಳೆಹಣ್ಣು ಖರೀದಿಸುವಾಗ ಹೆಚ್ಚು ಮಾಗಿದ ಹಾಗೂ ಕಪ್ಪು ಕಲೆಗಳಿರುವ ಹಣ್ಣನ್ನು ಖರೀದಿ ಮಾಡಬೇಡಿ. ಯಾವುದೇ ಕಲೆಗಳಿಲ್ಲದ ಹಸಿರು ಅಥವಾ ಸ್ವಲ್ಪ ಗಟ್ಟಿಯಾಗಿರುವ ಹಣ್ಣುಗಳನ್ನು ಖರೀದಿಸುವುದರಿಂದ ಹಣ್ಣು ಕೊಳೆಯದಂತೆ ತಡೆಯಬಹುದು.
  2. ಬಾಳೆಹಣ್ಣುಗಳು ಹಣ್ಣಾದಾಗ, ಅವುಗಳ ಕಾಂಡಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಈ ಅನಿಲವು ಉಳಿದ ಹಣ್ಣುಗಳಿಗೆ ಹರಡಿ ಬೇಗನೆ ಹಣ್ಣುಗಳನ್ನು ಕೊಳೆಯುವಂತೆ ಮಾಡುತ್ತದೆ. ಹೀಗಾಗಿ ಬಾಳೆಗೊನೆಯ ಮೇಲಿನ ಭಾಗಕ್ಕೆ ಮನೆಯಲ್ಲಿ ಆಹಾರವನ್ನು ಕಟ್ಟಲು ಬಳಸುವ ಪ್ಲಾಸ್ಟಿಕ್‌ನಿಂದ ಸುತ್ತಿ ಇಡುವುದರಿಂದ ಬಾಳೆಹಣ್ಣು ಹಣ್ಣು ಕೊಳೆತು ಹೋಗುವುದಿಲ್ಲ.
  3. ಇತರ ಹಣ್ಣುಗಳು ಹಾಗೂ ತರಕಾರಿಯ ಜೊತೆಯಲ್ಲಿ ಈ ಬಾಳೆಹಣ್ಣನ್ನು ಇಡಬೇಡಿ. ಸೇಬು, ಟೊಮೊಟೊ ಸೇರಿದಂತೆ ಇತರ ಹಣ್ಣುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಬಾಳೆಹಣ್ಣು ಬೇಗನೇ ಮಾಗಿ ಕೊಳೆತು ಹೋಗಬಹುದು. ಹೀಗಾಗಿ ಬಾಳೆಹಣ್ಣನ್ನು ಇತರ ಹಣ್ಣುಗಳಿಂದ ಪ್ರತ್ಯೇಕವಾಗಿ ಇರಿಸುವುದು ಒಳ್ಳೆಯದು.
  4. ವಿಟಮಿನ್ ಸಿ ಟ್ಯಾಬ್ಲೆಟ್ ಅನ್ನು ನೀರಿನಲ್ಲಿ ಕರಗಿಸಿ ಅದರಲ್ಲಿ ಬಾಳೆಹಣ್ಣನ್ನು ಅದ್ದಿ ಹೊರತೆಗೆಯುವ ಮೂಲಕ ಹಣ್ಣು ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ.
  5. ಬಾಳೆಹಣ್ಣನ್ನು ನೆಲ ಸೇರಿದಂತೆ ಮೇಲೆ ಇರಿಸಿದರೆ ಕೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಬಾಳೆಗೊನೆಯನ್ನು ನೇತುಹಾಕುವುದರಿಂದ ಹಣ್ಣು ಬೇಗನೇ ಹಾಳಾಗದಂತೆ ತಡೆಯಬಹುದು.
  6. ಹಣ್ಣುಗಳನ್ನು ದೀರ್ಘಕಾಲ ತಾಜಾವಾಗಿಡಲು ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವವರು ಹೆಚ್ಚು. ಈ ಕೆಲಸವನ್ನು ಆದಷ್ಟು ತಪ್ಪಿಸಿ ತಂಪಾದ ವಾತಾವರಣವು ಬಾಳೆಹಣ್ಣು ಕೊಳೆಯುವಂತೆ ಮಾಡುತ್ತದೆ. ಹೀಗಾಗಿ ಬಾಳೆಹಣ್ಣನ್ನು ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸುವುದು ಒಳ್ಳೆಯ ವಿಧಾನವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ
ಸಿಎಂ ಪ್ರಾಸಿಕ್ಯೂಷನ್​ಗೆ ಹೈಕೋರ್ಟ್ ಅನುಮತಿ: ಹೆಚ್​ಡಿಕೆ ಅಚ್ಚರಿಯ ಹೇಳಿಕೆ
ಸಿಎಂ ಪ್ರಾಸಿಕ್ಯೂಷನ್​ಗೆ ಹೈಕೋರ್ಟ್ ಅನುಮತಿ: ಹೆಚ್​ಡಿಕೆ ಅಚ್ಚರಿಯ ಹೇಳಿಕೆ
ಅಮೆರಿಕ ಪ್ರವಾಸ ಫಲಪ್ರದವಾಗಿದೆ; ಯುಎಸ್​ ಭೇಟಿಯ ನೆನಪುಗಳ ಹಂಚಿಕೊಂಡ ಮೋದಿ
ಅಮೆರಿಕ ಪ್ರವಾಸ ಫಲಪ್ರದವಾಗಿದೆ; ಯುಎಸ್​ ಭೇಟಿಯ ನೆನಪುಗಳ ಹಂಚಿಕೊಂಡ ಮೋದಿ
ಮಹಿಳಾ ಟಿ20 ವಿಶ್ವಕಪ್ 2024ರ ಆ್ಯಂಥಮ್ ಸಾಂಗ್ ಬಿಡುಗಡೆ
ಮಹಿಳಾ ಟಿ20 ವಿಶ್ವಕಪ್ 2024ರ ಆ್ಯಂಥಮ್ ಸಾಂಗ್ ಬಿಡುಗಡೆ
ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ ₹49,999ಕ್ಕೆ ಆ್ಯಪಲ್ ಐಫೋನ್ 15
ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ ₹49,999ಕ್ಕೆ ಆ್ಯಪಲ್ ಐಫೋನ್ 15
ಸ್ಪರ್ಧಿಗಳ ಪಟ್ಟಿ ಸುದೀಪ್​ಗೆ ಸಿಗೋದು ಯಾವಾಗ? ಉತ್ತರಿಸಿದ ಕಿಚ್ಚ
ಸ್ಪರ್ಧಿಗಳ ಪಟ್ಟಿ ಸುದೀಪ್​ಗೆ ಸಿಗೋದು ಯಾವಾಗ? ಉತ್ತರಿಸಿದ ಕಿಚ್ಚ
ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು
ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು