Ghee Purity Test: ನೀವು ಬಳಸುವ ತುಪ್ಪ ಅಸಲಿಯೋ, ನಕಲಿಯೋ, ಪತ್ತೆ ಹಚ್ಚುವುದು ಹೇಗೆ?

ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳು ಗುಣಮಟ್ಟದ್ದು ಎಂದುಕೊಂಡು ಹಣಕೊಟ್ಟು ಖರೀದಿ ಮಾಡುತ್ತೇವೆ. ಆದರೆ ಎಷ್ಟೋ ವಸ್ತುಗಳು ಕಲಬೆರಕೆಯಿಂದ ಕೂಡಿದ ಆಹಾರಗಳಾಗಿರುತ್ತವೆ. ಈ ಸಾಲಿಗೆ ಶುದ್ಧ ತುಪ್ಪ ಎಂದು ಹೇಳುವ ಈ ವಸ್ತು ಸೇರಿದೆ. ಹೌದು, ಮಾರುಕಟ್ಟೆಯಿಂದ ತರುವ ತುಪ್ಪವು ಶುದ್ಧವಾಗಿರಲ್ಲ. ಹೀಗಾದಾಗ ಮನೆಯಲ್ಲಿ ಇದು ದೇಸಿ ತುಪ್ಪವೋ ಅಥವಾ ಕಲಬೆರಕೆಯಾಗಿದೆಯೋ ಎಂದು ಸುಲಭವಾಗಿ ಪತ್ತೆ ಹಚ್ಚಬಹುದು.

Ghee Purity Test: ನೀವು ಬಳಸುವ ತುಪ್ಪ ಅಸಲಿಯೋ, ನಕಲಿಯೋ, ಪತ್ತೆ ಹಚ್ಚುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 24, 2024 | 3:07 PM

ಬಹುತೇಕರು ತುಪ್ಪವನ್ನು ವಿವಿಧ ರೀತಿಯಲ್ಲಿ ಬಳಸುತ್ತಾರೆ. ಘಮಘಮಿಸುವ ತುಪ್ಪಕ್ಕೆ ವೆಜಿಟೆಬಲ್‌ ಆಯಿಲ್, ಪ್ರಾಣಿಗಳ ಕೊಬ್ಬು, ಖನಿಜಗಳ ಕೊಬ್ಬು, ಹಾಗೂ ಸ್ಟಾರ್ಚ್ ಸೇರಿದಂತೆ ಇನ್ನಿತ್ತರ ಕಲಬೆರಕೆ ವಸ್ತುಗಳನ್ನು ಸೇರಿಸಲಾಗುತ್ತದೆ. ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ಶುದ್ಧ ತುಪ್ಪ ಯಾವುದು ನಕಲಿ ತುಪ್ಪ ಯಾವುದೆಂದು ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಆದರೆ ಈ ಕಲಬೆರಕೆಯ ತುಪ್ಪದ ಸೇವನೆಯಿಂದ ಆರೋಗ್ಯದ ಮೇಲೆ ನಾನಾ ರೀತಿಯ ಪರಿಣಾಮಗಳಾಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ತಂದ ತುಪ್ಪವು ಶುದ್ಧವಾಗಿದೆಯೇ ಎಂದು ಈ ಕೆಲವು ವಿಧಾನದ ಮೂಲಕ ಪತ್ತೆ ಹಚ್ಚಬಹುದು.

ಶುದ್ಧ ತುಪ್ಪವನ್ನು ಪತ್ತೆಹಚ್ಚಲು ಇಲ್ಲಿದೆ ಸರಳ ವಿಧಾನಗಳು

  • ಒಂದು ಚಮಚ ತುಪ್ಪವನ್ನು ನಿಮ್ಮ ಅಂಗೈಯಲ್ಲಿ ತೆಗೆದುಕೊಂಡು ಹದವಾಗಿ ಉಜ್ಜಿಕೊಳ್ಳಬೇಕು. ತುಪ್ಪ ಅಂಗೈಯಲ್ಲಿ ಕರಗಿದರೆ ಅದು ಶುದ್ಧ ತುಪ್ಪವಾಗಿದೆ ಎಂದರ್ಥ. ಒಂದು ವೇಳೆ ಅಂಗೈಯಲ್ಲಿ ಕರಗದೇ ಗಟ್ಟಿ ಗಟ್ಟಿ ವಸ್ತು ಹಾಗೆಯೇ ಉಳಿದಿದೆ ಎಂದರೆ ಅದರಲ್ಲಿ ಕಲಬೆರಕೆಯ ವಸ್ತುಯಿದೆ ಎಂದು ತಿಳಿಯಿರಿ.
  • ಸ್ವಲ್ಪ ಪ್ರಮಾಣದಲ್ಲಿ ತುಪ್ಪವನ್ನು ತೆಗೆದುಕೊಂಡು ಒಂದು ಪಾರದರ್ಶಕವಾದ ಬಾಟಲಿಗೆ ಹಾಕಿ, ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಬೇಕು. ನಂತರದಲ್ಲಿ ಆ ಬಾಟಲಿಯ ಮುಚ್ಚಳ ಮುಚ್ಚಿ ಚೆನ್ನಾಗಿ ಕುಲುಕಬೇಕು. ಸ್ವಲ್ಪ ಹೊತ್ತು ಬಿಟ್ಟು ನೋಡಿದಾಗ ಕೆಂಪು ಬಣ್ಣದ ಗೆರೆಗಳು ಬಾಟಲಿಯ ತಳದಲ್ಲಿ ಕಂಡು ಬಂದರೆ ಈ ತುಪ್ಪವು ಶುದ್ಧವಾಗಿಲ್ಲ ಎನ್ನುವುದು ಖಚಿತವಾಗುತ್ತದೆ.
  • ಮಾರುಕಟ್ಟೆಯಿಂದ ತಂದ ತುಪ್ಪದಲ್ಲಿ ಕಲಬೆರಕೆಯನ್ನು ಗುರುತಿಸಲು ಅದಕ್ಕೆ ನಾಲ್ಕೈದು ಹನಿ ಅಯೋಡಿನ್ ಸೇರಿಸಬೇಕು. ಒಂದು ವೇಳೆ ತುಪ್ಪವು ನೀಲಿ ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎಂದರ್ಥ.
  • ತುಪ್ಪದ ಗುಣಮಟ್ಟವನ್ನು ನಿರ್ಧರಿಸಲು ಕೈಗೆ ಸ್ವಲ್ಪ ತುಪ್ಪವನ್ನು ಹಾಕಿ ಎರಡೂ ಕೈಗಳಿಂದ ಚೆನ್ನಾಗಿ ಉಜ್ಜಿಕೊಳ್ಳಿ. ಪರಿಮಳಯುಕ್ತವಾಗಿದ್ದರೆ ಅದು ಶುದ್ಧ ತುಪ್ಪ, ಸ್ವಲ್ಪ ಸಮಯದ ನಂತರ ತುಪ್ಪದ ವಾಸನೆಯು ಹೋದರೆ ಕಲಬೆರಕೆಯ ತುಪ್ಪವಾಗಿರುತ್ತದೆ.
  • ಶುದ್ಧ ತುಪ್ಪವಾಗಿದ್ದರೆ ಮಣಿ ಮಣಿಯಂತೆ ಇದ್ದು, ಬಿಸಿ ಮಾಡಿದಾಗ ಎಣ್ಣೆಯಂತೆ ಕಾಣುತ್ತದೆ. ಅದಲ್ಲದೆ ಮೇಲ್ಮೈಯಲ್ಲಿ ವ್ಯತ್ಯಾಸವಾಗಿ ಅದು ಹೊಂಬಣ್ಣದಲ್ಲಿ ಕರಗಿದರೆ ಕಲಬೆರಕೆಯಾಗಿಲ್ಲ. ಒಂದು ವೇಳೆ ತಿಳಿ ಹಳದಿ, ಬಿಳಿ ಬಣ್ಣದಲ್ಲಿದ್ದರೆ ಅದು ನಕಲಿ ತುಪ್ಪವೆಂದು ಖಚಿತವಾಗುತ್ತದೆ. ಕಲಬೆರಕೆಯ ತುಪ್ಪವು ನೋಡಲು ದಪ್ಪವಾಗಿರುತ್ತದೆ.
  • ತುಪ್ಪಕ್ಕೆ ಎಣ್ಣೆಯನ್ನು ಕಲಬೆರಕೆ ಮಾಡಲಾಗುತ್ತದೆ. ಈ ತುಪ್ಪದಲ್ಲಿ ಎಣ್ಣೆಯನ್ನು ಬೆರೆಸಲಾಗಿದೆಯೇ ಎಂದು ತಿಳಿಯಲು ತುಪ್ಪವನ್ನು ಕಾಯಿಸಿ ಅದನ್ನು ಫ್ರಿಡ್ಜ್‌ನಲ್ಲಿಟ್ಟರೆ ಎರಡು ಪದರಗಳು ಕಾಣಿಸಿಕೊಳ್ಳುತ್ತದೆ. ತುಪ್ಪ ಹಾಗೂ ತೆಂಗಿನೆಣ್ಣೆಯ ಪ್ರತ್ಯೇಕವಾದ ಪದರಗಳು ಇದ್ದರೆ ಕಲಬೆರಕೆಯಾಗಿದೆ ಎನ್ನಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ ₹49,999ಕ್ಕೆ ಆ್ಯಪಲ್ ಐಫೋನ್ 15
ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ ₹49,999ಕ್ಕೆ ಆ್ಯಪಲ್ ಐಫೋನ್ 15
ಸ್ಪರ್ಧಿಗಳ ಪಟ್ಟಿ ಸುದೀಪ್​ಗೆ ಸಿಗೋದು ಯಾವಾಗ? ಉತ್ತರಿಸಿದ ಕಿಚ್ಚ
ಸ್ಪರ್ಧಿಗಳ ಪಟ್ಟಿ ಸುದೀಪ್​ಗೆ ಸಿಗೋದು ಯಾವಾಗ? ಉತ್ತರಿಸಿದ ಕಿಚ್ಚ
ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು
ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು
ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ ಹೋಗುತ್ತೇವೆಂದ ಸ್ನೇಹಮಯಿ ಕೃಷ್ಣ
ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ ಹೋಗುತ್ತೇವೆಂದ ಸ್ನೇಹಮಯಿ ಕೃಷ್ಣ
Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು
Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು
ಕೆಸರಿನ ಗುಂಡಿಯಲ್ಲಿ ಸಿಲುಕಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ ಕಾರು
ಕೆಸರಿನ ಗುಂಡಿಯಲ್ಲಿ ಸಿಲುಕಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ ಕಾರು
‘ಬಿಗ್ ಬಾಸ್ ಶೋನ ಈ ಹೀರೋ ನಡೆಸಿಕೊಡಲಿ ಎಂದು ನಾನೇಕೆ ಕೇಳಲಿ’; ಸುದೀಪ್
‘ಬಿಗ್ ಬಾಸ್ ಶೋನ ಈ ಹೀರೋ ನಡೆಸಿಕೊಡಲಿ ಎಂದು ನಾನೇಕೆ ಕೇಳಲಿ’; ಸುದೀಪ್