World Dream Day 2024 : ಕನಸುಗಳು ಕಪ್ಪು ಬಿಳುಪಿನ ಬಣ್ಣದಲ್ಲಿ ಇರುವುದು ಯಾಕೆ? ಇಲ್ಲಿದೆ ಅಸಲಿ ವಿಚಾರ

ಕನಸು ಯಾರಿಗೆ ತಾನೆ ಬೀಳೋದಿಲ್ಲ ಹೇಳಿ, ಮನುಷ್ಯ, ಪ್ರಾಣಿಗಳಲ್ಲಿ ನಡೆಯುವ ಸಹಜ ಪ್ರಕ್ರಿಯೆಯಾಗಿದ್ದು, ಆದರೆ ಕೆಲವು ಕನಸುಗಳು ನಿಜಕ್ಕೂ ಭಯ ಹುಟ್ಟಿಸುತ್ತವೆ. ಕೆಲವೊಮ್ಮೆ ಅರ್ಥವಿಲ್ಲದ ಕನಸು ಬೀಳುವ ಮೂಲಕ ಗೊಂದಲದಲ್ಲಿ ಸಿಲುಕುತ್ತಾರೆ. ಕೆಲವರಿಗೆ ಮಾತ್ರ ನೆನಪಾದರೆ ಇನ್ನು ಕೆಲವರು ಬೆಳಗ್ಗೆ ಎದ್ದ ನಂತರ ಕನಸನ್ನು ಮರೆತು ಬಿಡುತ್ತಾರೆ. ಈ ಕನಸಿಗೂ ಒಂದು ದಿನವನ್ನು ಮೀಸಲಿಡಲಾಗಿದ್ದು, ಪ್ರತಿ ವರ್ಷ ಸೆಪ್ಟೆಂಬರ್ 25 ರಂದು ವಿಶ್ವ ಕನಸಿನ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

World Dream Day 2024 : ಕನಸುಗಳು ಕಪ್ಪು ಬಿಳುಪಿನ ಬಣ್ಣದಲ್ಲಿ ಇರುವುದು ಯಾಕೆ? ಇಲ್ಲಿದೆ ಅಸಲಿ ವಿಚಾರ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 25, 2024 | 9:57 AM

ಪ್ರತಿಯೊಬ್ಬರೂ ಕನಸು ಕಾಣುತ್ತಾರೆ, ಆದರೆ ಹೆಚ್ಚಿನವರಿಗೆ ಈ ಕನಸುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಕನಸುಗಳು ಮನಸ್ಸಿನೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ. ಹೀಗಾಗಿ ಈ ಇಂದ್ರಿಯಗಳು ಎಚ್ಚರದ ಸ್ಥಿತಿಗಿಂತ ಕನಸಿನ ಸ್ಥಿತಿಯಲ್ಲಿ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಆದರೆ ಕೆಲವು ಸಲ ಚಿತ್ರ ವಿಚಿತ್ರ ಕನಸುಗಳಿಂದ ಕಂಗಾಲಾಗಿ ಬಿಡುವುದಿದೆ. ಕೆಲವೊಮ್ಮೆ ಕನಸಿನಲ್ಲಿ ಕಂಡ ದೃಶ್ಯಗಳೇ ಕಣ್ಣ ಮುಂದೆ ಬಂದಂತಾಗುತ್ತದೆ. ಹೆಚ್ಚಿನವರಿಗೆ ಎಷ್ಟು ಯೋಚಿಸಿದರೂ ಕನಸುಗಳು ನೆನಪಿನಲ್ಲಿ ಉಳಿಯುವುದೇ ಇಲ್ಲ. ಜನರಿಗೆ ಬೀಳುವ ಈ ಕನಸಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 25 ರಂದು ವಿಶ್ವ ಕನಸಿನ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಶ್ವ ಕನಸಿನ ದಿನದ ಇತಿಹಾಸ ಹಾಗೂ ಮಹತ್ವ

ವಿಶ್ವ ಕನಸಿನ ದಿನವನ್ನು 2012 ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದ ಶಿಕ್ಷಣತಜ್ಞ ಮತ್ತು ಪರಿವರ್ತನಾ ತಂತ್ರಜ್ಞ ಓಜಿಯೋಮಾ ಎಗ್ವುನ್ವು ಆಚರಿಸಲು ಮುಂದಾದರು. ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್ 25 ರಂದು ವಿಶ್ವ ಕನಸಿನ ದಿನವನ್ನಾಗಿ ಆಚರಿಸಲಾಗುತ್ತದೆ. ಜನರಲ್ಲಿ ಕನಸಿನ ಬಗ್ಗೆ ಜಾಗೃತಿ ಮೂಡಿಸುವುದು. ಅನೇಕ ಬಾರಿ, ಒಳ್ಳೆಯ ಮತ್ತು ಕೆಟ್ಟ ಕನಸುಗಳನ್ನು ನೋಡುವುದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ತಿಳಿಸುವ ಉದ್ದೇಶವನ್ನು ಹೊಂದಿದೆ. ಈ ನಿಟ್ಟಿನಲ್ಲಿ ವಿವಿಧೆಡೆ ಕಾರ್ಯಾಗಾರ ಹಾಗೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಕನಸಿನ ಕುರಿತಾದ ಕುತೂಹಲಕಾರಿ ಸಂಗತಿಗಳಿವು

  1. ಕಣ್ಣಿರುವವರು ತಮ್ಮ ಕನಸಿನಲ್ಲಿ ದೃಶ್ಯಗಳನ್ನು, ವ್ಯಕ್ತಿಗಳನ್ನು, ಸಂದರ್ಭಗಳನ್ನು ನೋಡುತ್ತಾರೆ ಆದರೆ ಕಣ್ಣಿಲ್ಲದ ವ್ಯಕ್ತಿಗಳು ಸುತ್ತ ಮುತ್ತ ನಡೆಯುವ ಶಬ್ದಗಳ ಗ್ರಹಿಕೆ ಹಾಗೂ ಯಾವುದಾದರೂ ವಸ್ತುವಿಗೆ ಸಂಬಂಧ ಪಟ್ಟಂತೆ ವಾಸನೆಯನ್ನು ತಿಳಿದುಕೊಂಡಿರುತ್ತಾರೆ. ಹೀಗಾಗಿ ಕನಸಿನಲ್ಲಿ ಈ ಗ್ರಹಿಕೆಯಿಂದಲೇ ಭಾವ ಚಿತ್ರಗಳನ್ನು ಅಥವಾ ಛಾಯಾಚಿತ್ರಗಳನ್ನು ಕಾಣುತ್ತಾರೆ ಎನ್ನಲಾಗಿದೆ.
  2. ಪ್ರಾಣಿಗಳು ಸಹ ತಮ್ಮ ಗಾಢವಾದ ನಿದ್ರೆಯಲ್ಲಿ ಕನಸು ಕಾಣುತ್ತವೆ ಎನ್ನುವುದು ಸಂಶೋಧನೆಯಿಂದ ಬಹಿರಂಗವಾಗಿದೆ. ಹಗಲು ಹೊತ್ತಿನಲ್ಲಿ ಮಲಗಿರುವ ಶ್ವಾನವು ನಿದ್ರಿಸುತ್ತಿದ್ದರೂ ಕೂಡ ತಾನು ಓಡುತ್ತಿರುವಂತೆ ಕಾಲುಗಳನ್ನು ಅಲ್ಲಾಡಿಸುತ್ತಿರುವುದನ್ನು ನೋಡಿರಬಹುದು. ಇದು ಶ್ವಾನವು ಕನಸಿನಲ್ಲಿ ಓಡುವುದಾಗಿದೆ.
  3. ಬಹುತೇಕರಿಗೆ ಕನಸುಗಳಲ್ಲಿ ಕಾಣುವ ವ್ಯಕ್ತಿಗಳು ಹಾಗೂ ಚಿತ್ರಗಳು ಕಪ್ಪು ಬಿಳುಪು ಬಣ್ಣದಲ್ಲೇ ಕೂಡಿರುತ್ತದೆ. ಕೆಲವರಿಗೆ ಮಸುಕಾದ ಕನಸು ಬೀಳುವುದರಿಂದ ಕನಸಿನಲ್ಲಿ ಬರುವ ಪಾತ್ರಧಾರಿಗಳು ಸಹ ಬಣ್ಣರಹಿತವಾಗಿರುತ್ತವೆ. ಇತ್ತೀಚೆಗಿನ ದಿನಗಳಲ್ಲಿ ಕೆಲವರಿಗೆ ಬಣ್ಣದಲ್ಲಿ ಕನಸುಗಳು ಬೀಳುತ್ತದೆ. ಇದಕ್ಕೆ ಮನೆಯಲ್ಲಿ ಬ್ಲಾಕ್ ಅಂಡ್ ವೈಟ್ ಟಿವಿ ಬದಲಿಗೆ ಕಲರ್ ಟಿವಿ ಬಂದಿರುವುದೇ ಕಾರಣ ಎನ್ನಲಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

ಯುವ ದಸರಾ ವೇದಿಕೆ ಮೇಲೆ ನಕ್ಕ ರುಕ್ಮಿಣಿ ವಸಂತ್; ವಿಡಿಯೋ ನೋಡಿ
ಯುವ ದಸರಾ ವೇದಿಕೆ ಮೇಲೆ ನಕ್ಕ ರುಕ್ಮಿಣಿ ವಸಂತ್; ವಿಡಿಯೋ ನೋಡಿ
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ, ನೌಕರರಿಗೆ ಬೋನಸ್
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ, ನೌಕರರಿಗೆ ಬೋನಸ್
ನಾನಿನ್ನೂ ಮಾತು ನಿಲ್ಲಿಸಿಲ್ಲ..ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ DCM ಶಾಕ್​
ನಾನಿನ್ನೂ ಮಾತು ನಿಲ್ಲಿಸಿಲ್ಲ..ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ DCM ಶಾಕ್​
ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ
‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ